ಕೂಡ್ಲಿಗಿ:ದಲಿತ ಸಂಘಟನೆಗಳಿಂದ ಮಹಾನಾಯಕ ರಿಗೆ ಅಭಿನಂದನೆಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಅಕ್ಟೋಬರ್ 17ರಂದು, ಅಂಬೇಡ್ಕರ್ ನಗರದ ಯುವಕರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ. ಅಂಬೇಡ್ಕರ್ ರವರ ಜೀವನ ಚರಿತ್ರೆ ಆಧಾರಿತವಾದ ಬಹು ಯಶಸ್ಸಿನಲ್ಲಿ ಮೂಡಿಬರುತ್ತಿರುವ, “ಮಹಾನಾಯಕ ” ಧಾರಾವಾಹಿಯ ಬ್ಯಾನರ್ ಗೆ ಮಾಲಾಪ೯ಣೆ ಮಾಡೋ ಮೂಲಕ ಅಭಿನಂದಿಸಿದರು.ಪಟ್ಟಣ ಪಂಚಾಯಿತಿ ಸದಸ್ಯ ಹಾಗೂ ಡಿಎಸ್ಎಸ್ ಜಿಲ್ಲಾ ಸಂಘಟನಾ ಸಂಚಾಲಕರಾದ ಎಸ್.ದುರುಗೇಶ್,ರೈತ ಸಂಘದ ಜಿಲ್ಲಾ ಅಧ್ಯಕ್ಷ ಹಾಗೂ ವಾಲ್ಮೀಕಿ ಮುಖಂಡ ಕೆ.ಕೆ.ಹಟ್ಟಿ ದೇವರ ಮನಿ ಮಹೇಶ ಮಾತನಾಡಿದರು.ದಲಿತ ಯುವ ಮುಖಂಡರಾದ ಸಾಲುಮನಿ ರಾಘವೇಂದ್ರ,ಬಿ.ಮಹೇಶ,ಎಸ್.ಚಾರೇಶ್, ನಿವೃತ್ತ ಸೈನಿಕ ರಮೇಶ, ಪೊಲೀಸ್ ಪೇದೆ ರಾಘವೇಂದ್ರ,ಸೇರಿದಂತೆ ಕೂಡ್ಲಿಗಿ ಪಟ್ಟಣ ಹಾಗೂ ತಾಲೂಕಿನ ವಿವಿದ ದಲಿತ ಮುಖಂಡರು ಯುವಕರು ಮತ್ತು ದಲಿತ ವಿದ್ಯಾಥಿ೯ಗಳು ಇದ್ದರು
