ದೇವಸ್ಥಾನದ ಬಳಿ ಬೃಹತ್ ಮರ ಬಿದ್ದು 7 ಜನ ಸಾವನ್ನಪ್ಪಿದ ದುರ್ಘಟನೆ ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಬಾಲಾಪುರ್ ತಾಲೂಕಿನ ಪರಾಸ್ ಸಂಸ್ಥಾನದಲ್ಲಿ ನಡೆದಿದೆ.
ಸಂಜೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಇದೇ ವೇಳೆ ಪಾರಸ್ ಗ್ರಾಮದ ಬಾಬೂಜಿ ಮಹಾರಾಜ ಸಂಸ್ಥಾನದಲ್ಲಿ ಸಂಜೆ ಆರತಿ ನಡೆಯುತ್ತಿದ್ದಾಗ ದೇವಸ್ಥಾನದ ಆವರಣದಲ್ಲಿರುವ ತಗಡಿನ ಶೆಡ್‌ನ ಕೆಳಗೆ ಆರತಿಗೆ ಹಲವರು ಸೇರಿದ್ದರು ಎಂದು ವರದಿಯಾಗಿದೆ.
ದೇವಸ್ಥಾನದ ಬಳಿ ಇದ್ದ ದೊಡ್ಡ ಬೇವಿನ ಮರವೊಂದು ಏಕಾಏಕಿ ಬುಡ ಸಮೇತ ಬುಡ ಸಮೇತ ಉರುಳಿ ಬಿದ್ದಿದೆ. ಆ ಸಮಯದಲ್ಲಿ ಶೆಡ್ ಅಡಿಯಲ್ಲಿದ್ದ 7 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಕೆಲವರು ಸುರಕ್ಷಿತವಾಗಿ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬಾಲಾಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಅನಿಲ್ ಜಂಬಲ್ ತಿಳಿಸಿದರು ಎಂದು ವರದಿಯಾಗಿದೆ.
ಬಾಬೂಜಿ ಮಹಾರಾಜ್ ಸಂಸ್ಥಾನದ ದೇವಸ್ಥಾನವಿದೆ. ಭಾನುವಾರವಾದ್ದರಿಂದ ಸಂಜೆಯ ಆರತಿಗೆ ಜನಸಾಗರವೇ ನೆರೆದಿತ್ತು. ಇದ್ದಕ್ಕಿದ್ದಂತೆ ಮಳೆ ಮತ್ತು ಬಿರುಗಾಳಿ ಪ್ರಾರಂಭವಾಯಿತು.
ಈ ವೇಳೆ ದೇವಸ್ಥಾನದ ಪಕ್ಕದಲ್ಲಿದ್ದ ದೊಡ್ಡ ಬೇವಿನ ಮರವೊಂದು ಏಕಾಏಕಿ ಉರುಳಿ ದೇವಸ್ಥಾನದ ತಗಡಿನ ಶೆಡ್ ಮೇಲೆ ಬಿದ್ದಿದೆ. ಈ ವೇಳೆ ನಲವತ್ತರಿಂದ ಐವತ್ತು ಮಂದಿ ಸಂಪೂರ್ಣ ಶೆಡ್ ಅಡಿಯಲ್ಲಿ ಸಿಲುಕಿದ್ದರು. ಅವರನ್ನು ರಕ್ಷಿಸಲಾಗಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಅನಿಲ್ ಜಂಬಲ್ ತಿಳಿಸಿದ್ದಾರೆ.
Laxmi News 24×7