ಬೆಂಗಳೂರು: ಈ ಜಾಕೆಟ್ ಹಾಕಿಕೊಂಡಾಗ, ನಿಮ್ಮ ಮೇಲೆ ಬೆಂಕಿಯ ಮಳೆಯೇ ಸುರಿದರೂ ನೀವು ಒಳಗೆ “ಕೂಲ್’ ಆಗಿರ್ತೀರಾ. ಒಂದೇ ಒಂದು ಗಾಯ ಕೂಡ ಆಗುವುದಿಲ್ಲ! ವೀರಾ ಎಂಬ ಕಂಪನಿಯು ಈ ವಿನೂ ತನ ಜೀವರಕ್ಷಕ ಜಾಕೆಟ್ ಅಭಿವೃದ್ಧಿಪಡಿಸಿದೆ.
ಇದನ್ನು ಧರಿಸಿದರೆ, ನೀವು -200 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿರಲಿ ಅಥವಾ 1000 ಡಿಗ್ರಿ ಸೆಲ್ಸಿಯಸ್ ಇರಲಿ ನಿಮ್ಮ ದೇಹದ ತಾಪಮಾನದಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಇದರ ಹೆಸರು “ಟಾರ್ಡಿಗ್ರೇಡ್ ಜಾಕೆಟ್’.
ಅತಿ ಎತ್ತರದ ಪ್ರದೇಶದಲ್ಲಿ ವಾಸಿಸುವವರಿಗೆ ಅಥವಾ ಹವಾಮಾನದಲ್ಲಿ ತುಂಬಾ ವೈಪ ರೀತ್ಯ ಗಳಿರುವ ಜಾಗಗಳಿಗೆ ತೆರಳುವವರಿಗೆ ಇದು ಹೇಳಿಮಾಡಿಸಿದ್ದಾಗಿದೆ. “ಈಗಿರುವ ಜಾಕೆಟ್‌ಗಳು ತುಂಬಾ ಭಾರ ಅಂದರೆ ಕನಿಷ್ಠ 2-3 ಕೆಜಿ ಇರುತ್ತವೆ. ಈ ಜಾಕೆಟ್ ತೂಕ ಬರೀ 900 ಗ್ರಾಂ ಆಗಿದ್ದು, ಪರ್ವತಾರೋ ಹಿಗಳಿಗೆ ಧರಿಸಲು ತುಂಬಾ ಆರಾಮ ದಾಯಕವೂ ಆಗಿರಲಿದೆ.
ಗಡಿಗಳಲ್ಲಿ ಹಾಗೂ ಅತಿ ಎತ್ತರದ ಪ್ರದೇಶಗಳಲ್ಲಿ ನಮ್ಮ ಸೈನಿಕರು ಇರುತ್ತಾರೆ. ಅಂತಹ ವರಿಗೆ ಇದು ಅನುಕೂಲ ಆಗಲಿದೆ. 6 ತಿಂಗಳ ಹಿಂದಷ್ಟೇ ಇದನ್ನು ಅಭಿವೃದ್ಧಿಪಡಿಸಿದ್ದು, ಎಲ್ಲ ರೀತಿಯ ಪರೀಕ್ಷೆಗಳು ಪೂರ್ಣಗೊಂಡಿವೆ. ಭಾರತೀಯ ನೌಕಾಸೇನೆಗೆ ಇದನ್ನು ಪೂರೈಸುತ್ತಿದ್ದು, ಈ ಸಂಬಂಧ ಒಡಂಡಿಕೆಯೂ ಆಗಿದೆ’ ಎಂದು ವೀರಾ ಕಂಪನಿಯ ಮಾರುಕಟ್ಟೆ ಅಧಿಕಾರಿ ಸುಕೃತ್ ತಿಳಿಸಿದರು.