ಪಕ್ಷದೊಳಗೆ ಯಾರನ್ನೂ ಬೈಯ್ಯದಂತೆ ಸೂಚನೆ; ಬ್ರಾಹ್ಮಣರನ್ನ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿಸಲು ಮನವಿ”
ಬೆಂಗಳೂರು : ಪಕ್ಷದೊಳಗೆ ಯಾರನ್ನು ಬೈಯದಂತೆ ಬಿಜೆಪಿ ಪಕ್ಷದ ಹೈ ಕಮಾಂಡ್ ಸೂಚನೆ ನೀಡಿದೆ. ಹೀಗಾಗಿ ಇನ್ಮುಂದೆ ಕಾಂಗ್ರೆಸ್ ಪಕ್ಷದವರನ್ನ ಮಾತ್ರ ಬೈತೀನಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಇದು ಪಕ್ಷದ ಬೆಳವಣಿಗೆ ಹಾಗೂ ವೈಯಕ್ತಿಕ ಬೆಳವಣಿಗೆಗೂ ಒಳ್ಳೆಯದು.
ಯಡಿಯೂರಪ್ಪ ಅವರು ರಾಜಕೀಯದಿಂದ ದೂರಾಗಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೆ ಸಂದರ್ಭದಲ್ಲಿ ಹೇಳಿದರು.
ಇಂದು ನಗರದ ಜಗನ್ನಾಥ ಭವನದಲ್ಲಿ ಮಾತಾನಾಡಿದ ಅವರು,ಬಿಎಸ್ ವೈಮುಂದೆ ಮುಖ್ಯಮಂತ್ರಿ ಆಗುವುದಿಲ್ಲ. ಅವರು ಪಾರ್ಲಿಮೆಂಟರಿ ಬೋರ್ಡ್ ಸದಸ್ಯರಾಗಿದ್ದಾರೆ, ಎನ್ನುವ ಮೂಲಕ ಯಡಿಯೂರಪ್ಪ ಮೇಲೆ ಮೃದು ಧೋರಣೆ ತೋರಿದ್ದಾರೆ.
ಬ್ರಾಹ್ಮಣರನ್ನ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿಸಲು ಮನವಿ :
ನಾನಂತು ಬ್ರಾಹ್ಮಣರನ್ನ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿಸಲು ಹೇಳಿದ್ದೇನೆ. ಪಾಪ ಅವರು 2% ಮಾತ್ರ ಇದ್ದಾರೆಎಂದಿದ್ದಾರೆಯತ್ನಾಳ್.ಬ್ರಾಹ್ಮಣರನ್ನ ಅಲ್ಪಸಂಖ್ಯಾತ ಗುಂಪಿಗೆ ಸೇರಿಸಿದರೆ ವಿರೋಧ ಕೇಳಿ ಬರುವುದಿಲ್ಲವೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಯತ್ನಾಳ್ ,ಜೈನ, ಬೌದ್ಧ ಎಲ್ಲರೂ ಹಿಂದೂಗಳೇ. ಅವರು ಈಗ ಅಲ್ಪಸಂಖ್ಯಾತರಾಗಿಲ್ವಾ.? ಹಿಂದೂ ಧರ್ಮದ ರಕ್ಷಣೆಗೆ ಹುಟ್ಟಿದ್ದೇ ಸಿಖ್ ಧರ್ಮ,ಜೈನ, ಬೌದ್ಧ ಧರ್ಮ ಕೂಡ ಹಿಂದೂ ಧರ್ಮದ್ದೇ ಎಂದು ಹೇಳಿದರು.
ಅರುಣ್ ಸಿಂಗ್ -ಯತ್ನಾಳ್ ರಹಸ್ಯ ಮಾತುಕತೆ :
ರಾಜಕೀಯದಲ್ಲಿ ತಪ್ಪು ಕಲ್ಪನೆ ಆಗಿರುತ್ತೆ, ಯಾರೋ ಹೇಳಿರ್ತಾರೆ ಯತ್ನಾಳ್ ಏನೂ ಇಲ್ಲ ಅಂತ. ಆದರೆ ಅವರಿಗೆ ಈಗ ಯತ್ನಾಳ್ ಬಗ್ಗೆ ಗೊತ್ತಾಗಿದೆ. ಅರುಣ್ ಸಿಂಗ್ ದೊಡ್ಡ ತನ ತೋರಿದ್ದಾರೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಮ್ಮ ಜಿಲ್ಲಾ ಅಧ್ಯಕ್ಷರ ಮೂಲಕ ಕರೆ ಮಾಡಿಸಿದ್ರು. ಯತ್ನಾಳ್ ಬಗ್ಗೆ ಇದ್ದ ತಪ್ಪು ಕಲ್ಪನೆ ತಿಳಿಯಾಗಿದೆ ಎಂದರು.
ಕೋರ್ ಕಮಿಟಿ ಸದಸ್ಯ ಆಗಬೇಕು ಅಂತ ನಾನು ಅರ್ಜಿ ಹಾಕಿಲ್ಲ.ಇವೆಲ್ಲಾ ರಾಜಕಾರಣದಲ್ಲಿ ಇದ್ದದ್ದೇ. ತಪ್ಪು ಕಲ್ಪನೆಯನ್ನು ಸರಿ ಮಾಡಿಕೊಂಡು ಮುಂದೆ ನಡೆಯಬೇಕಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಸಾಬ್ರು ಓಟ್ ಪಡೆದು ಗೆಲ್ತಾರಾ? :
ರಾಹುಲ್ ಗಾಂಧಿ ಭಾರತ್ ಜೋಡೋ ಮಾಡಿ ಪಕ್ಷ ಎಲ್ಲೆಡೆ ಸೋಲಿಸ್ತಿದ್ದಾರೆ. ಸತೀಶ್ ಜಾರಕಿಹೊಳಿ ಕೊನೆ ಮೊಳೆ ಹೊಡೆಯುವ ಕೆಲಸ ಮಾಡಿದ್ದಾರೆ. ಹಿಂದೂಗಳ ಬಗ್ಗೆ ಅಸಹ್ಯವಾಗಿ ಮಾತನಾಡಿದ್ದಾರೆ. ಹಿಂದೂಗಳ ಬಗ್ಗೆ ಮಾತನಾಡೋದು ಕಾಂಗ್ರೆಸ್ ಗೆ ಫ್ಯಾಷನ್ ಆಗಿದೆ. ವಾಲ್ಮೀಕಿ ಜನಾಂಗದ ವ್ಯಕ್ತಿ ಹಿಂದುತ್ವದ ಬಗ್ಗೆ ಮಾತನಾಡಿರೋದು ದುರಂತ. ಜನ ಇವರಿಗೆ ಬುದ್ದಿ ಕಲಿಸ್ತಾರೆ. ಮುಂದೆ ನೋಡೋಣ ಹಿಂದೂ ಜನರ ಓಟ್ ಇಲ್ಲದೆ ಹೇಗೆ ಗೆಲ್ತಾರೆ ಅಂತ ಹೇಳಿದರು. ಮುಸ್ಲಿಮರ ಮತ ಪಡೆದು ಗೆಲ್ತಾರಾ ನೋಡೋಣ ಎಂದು ಸವಾಲು ಹಾಕಿದರು.