ಇಂತಹ ಅತ್ಯುತ್ತಮ ಶಾಲಾ ಸೌಲಭ್ಯವನ್ನು ನಾನು ಎಲ್ಲಿಯೂ ನೋಡಿಲ್ಲ ಮತ್ತು ಇದಕ್ಕೆ ಪ್ರತಿಯಾಗಿ ಯಾವುದೇ ಶುಲ್ಕವನ್ನು ನಿರೀಕ್ಷಿಸದೆ. ಈ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ತಿಳಿದು ಹೆಮ್ಮೆಪಡುತ್ತೇನೆ ಮಹೇಶ ಫೌಂಡೇಶನ್ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಬೆಳಗಾವಿಯ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಹೇಮೇಂದ್ರ ಪೋರವಾಲ್ ಅವರು ಹೇಳಿದರು.
ಮಹೇಶ ಫೌಂಡೇಶನ್‍ನಲ್ಲಿ ಸೌಲಭ್ಯ ವಂಚಿತ ಮಕ್ಕಳಿಗಾಗಿ ನಿರ್ಮಿಸಲಾದ ಹೊಸ ಕೌಶಲ್ಯ ಆಧಾರಿತ ತರಗತಿಯ ಉದ್ಘಾಟನಾ ಸಮಾರಂಭ ಮತ್ತು ಬಿಸಿಸಿಐ ಆಡಳಿತ ಮಂಡಳಿ ಸಭೆಯನ್ನು ಆಯೋಜಿಸಲಾಗಿತ್ತು. ಈ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಹೇಮೇಂದ್ರ ಪೋರವಾಲ್ ಅವರು ಚಿಕ್ಕ ಮನೆಯಲ್ಲಿದ್ದಾಗಿನಿಂದ ನಾನು ಮಹೇಶ ಫೌಂಡೇಶನ್ನೊಂದಿಗೆ ಇದ್ದೇನೆ ಮತ್ತು ಸೌಲಭ್ಯವಂಚಿ ತಮಕ್ಕಳನ್ನು ಉನ್ನತೀಕರಿಸಲು ಪಡೆದಿರುವ ಸಂಪನ್ಮೂಲಗಳ ಪರಿಪೂರ್ಣ ಬಳಕೆಯನ್ನು ನೋಡಿ ನನಗೆ ಸಂತೋಷವಾಗಿದೆ. ಮಹೇಶ ಫೌಂಡೇಶನ್ ಕಳೆದ 14 ವರ್ಷಗಳಿಂದ ಎಚ್‍ಐವಿ ಪೀಡಿತ ಮಕ್ಕಳು ಮತ್ತು ಸೌಲಭ್ಯ ವಂಚಿತ ಸಮುದಾಯದ ಮಕ್ಕಳಿಗೆ ಉಚಿತ ಶಿಕ್ಷಣದ ಜೊತೆಗೆ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿದೆ.ಮಹೇಶ ಫೌಂಡೇಶನ್ ಉತ್ಕರ್ಷ ಶಾಲೆ ಮತ್ತು ಕಲಿಕಾ ಕೇಂದ್ರವನ್ನು 2018ರಲ್ಲಿ ಪ್ರಾರಂಭಿಸಲಾಯಿತು ಮತ್ತು ಪ್ರಸ್ತುತ 275ಕ್ಕೂ ಹೆಚ್ಚಿನ ಸೌಲಭ್ಯ ವಂಚಿತ ಮಕ್ಕಳಿಗೆ ಉಚಿತ ಕೌಶಲ್ಯ ಆಧಾರಿತ ಶಿಕ್ಷಣವನ್ನು ಒದಗಿಸುತ್ತದೆ. ಪಠ್ಯಕ್ರಮದ ಭಾಗವಾಗಿ, ಉತ್ಕರ್ಷ ಕೇಂದ್ರವು ಮಕ್ಕಳಲ್ಲಿ ಕೌಶಲ್ಯಗಳನ್ನು ಹೆಚ್ಚಿಸಲು ಕಲೆ ಮತ್ತು ಕರ ಕುಶಲ ವಿಷಯಗಳನ್ನು ಅಳವಡಿಸಿಕೊಂಡಿದೆ. ಇದಕ್ಕಾಗಿ, ಮಹೇಶ ಫೌಂಡೇಶನ್ ಕೌಶಲ್ಯ-ಆಧಾರಿತ ತರಗತಿಯನ್ನು ಸ್ಥಾಪಿಸಿದೆ ಹಾಗೂ ಈ ತರಗತಿಯನ್ನು ಇಂದು ಉದ್ಘಾಟಿಸಲಾಗಿದೆ. ಈ ತರಗತಿಯುಪ್ರತಿದಿನ 600ಕ್ಕೂ ಹೆಚ್ಚಿನ ಮಕ್ಕಳಿಗೆ ಪ್ರಯೋಜನವನ್ನು ನೀಡುತ್ತದೆ. ಇದು ಉತ್ಕರ್ಷ ಕಲಿಕಾ ಕೇಂದ್ರದ ಮಕ್ಕಳೊಂದಿಗೆ ಹತ್ತಿರದ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಸೌಲಭ್ಯ ವಂಚಿತ ಮಕ್ಕಳಿಗೆ ವಿವಿಧ ಕೌಶಲ್ಯಗಳನ್ನು ಕಲಿಸುತ್ತದೆ. ಇನ್ನು ನಮ್ಮ ಬೆಳಗಾವಿ ಚೇಂಬರ್ ಆಪ್ ಕಾಮರ್ಸ ಮತ್ತು ಇಂಡಸ್ಟ್ರೀಸ್ ಬೆಳಗಾವಿಯ ವ್ಯಾಪಾರ ಮತ್ತು ಕೈಗಾರಿಕಾ ಸಮುದಾಯಗಳಿಗೆ ಸೇವೆ ಸಲ್ಲಿಸುತ್ತಿರುವ ಪ್ರಮುಖ ಸಂಸ್ಥೆಯಾಗಿದೆ. ನಮ್ಮ ಸದಸ್ಯರು ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.