Breaking News

,ಕಬ್ಬು ತುಂಬಿದ ಟ್ರ‍್ಯಾಕ್ಟರಗಳ ಪ್ರವೇಶಕ್ಕೆ ಸಮಯ ನಿಗದಿ ಮಾಡಿರುವ ಎಸಿ ಸಂತೋಷ ಕಾಮಗೌಡರ

Spread the love

ದ್ಯ ಕಬ್ಬು ನುರಿಸುವ ಹಂಗಾಮು ಪ್ರಾರಂಭವಾಗಿದೆ.ಇದರಿಂದಾಗಿ ಟ್ರ‍್ಯಾಕ್ಟರಗಳು ಲೋಡಾಗಿ ಕಬ್ಬನ್ನು ತುಂಬಿಕೊಂಡು ಹೋಗುತ್ತಿರುವದರಿಂದ ಇದು ಜನರ ಪ್ರಾಣಕ್ಕೆ ಕುತ್ತು ತರಬಹುದು .ಇದನ್ನು ತಪ್ಪಿಸಲು‌‌ ಚಿಕ್ಕೋಡಿ ಎಸಿ ಸಂತೋಷ ಕಾಮಗೌಡರ ಹೊಸ ಪ್ಲ್ಯಾನಯೊಂದನ್ನು ಹಾಕಿದ್ದಾರೆ…ಅದೇನೂ ಅಂತೀರಾ ಹಾಗಾದರೆ ಈ ವರದಿಯನ್ನು ನೋಡಿ…

ಚಿಕ್ಕೋಡಿ ಉಪವಿಭಾಗದಲ್ಲಿ ಅತಿ ಹೆಚ್ಚಾಗಿ ಕಬ್ಬನ್ನು ಬೆಳೆಯುತ್ತಾರೆ. ಈಗಾಗಲೇ ಕೆಲ ದಿನಗಳ ಹಿಂದೆ ಕೆಲ‌ ಸಕ್ಕರೆ ಕರ‍್ಖಾನೆಗಳು ಪ್ರಾರಂಭವಾಗಿವೆ. ಸಕ್ಕರೆ ಕರ‍್ಖಾನೆಗಳು ಮರುಪ್ರಾರಂಭ ಅಗುತ್ತಿದ್ದಂತೆ ಎಲ್ಲ ಕಡೆಗಳಲ್ಲೂ ಸಹ ಕಬ್ಬು ತುಂಬಿದ ಲಾರಿ ಹಾಗೂ ಟ್ರಾಕ್ಟರಗಳೆ ಕಾಣಸಿಗುತ್ತೆ. ಅತಿಯಾದ ಕಬ್ಬು ಹೇರುವಿಕೆ ಟ್ರಾಕ್ಟರ್ ಚಾಲಕರ ಹಾಗೂ ರಸ್ತೆಯ ಮೇಲೆ ಸಂಚರಿಸುವ ಜನರಿಗೆ ‌ಪ್ರಾಣ ಕಂಟಕವಾಗುವ ಲಕ್ಷಣಗಳು ಗೋಚರಿಸುತ್ತಿವೆ.

ಚಿಕ್ಕೋಡಿ ಪಟ್ಟಣದಲ್ಲಿ ಅಂತಹ ದೃಶ್ಯಗಳು ರ‍್ವೆ ಸಮಾನ್ಯವಾಗಿಬಿಟ್ಟಿವೆ. ಟ್ರಾಕ್ಟರ್ ಚಾಲಕರು ಅಗತ್ಯಕ್ಕಿಂತ ಹೆಚ್ಚಾಗಿ ಕಬ್ಬನ್ನು ತುಂಬಿಕೊಂಡು ನಗರದೊಳಗೆ ಪ್ರವೇಶ ಮಾಡುತ್ತಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ  ತುಂಬಿದ ಕಬ್ಬಿನ ಟ್ರೇಲರಗಳನ್ನು ಎಳೆಯಲಾಗದೆ ಟ್ರ‍್ಯಾಕ್ಟರುಗಳು ರ‍್ಕಸ್ ಮಾಡ್ತಿರೋ ದೃಶ್ಯಗಳು ಕಾಮನ್ ಆಗಿಬಿಟ್ಟಿವೆ.

ಜನರ ಜೀವಕ್ಕೆ ಸಂಚಕಾರ ತರುವ ಚಾಲಕರ ಹುಚ್ಚಾಟದ ವಿರುದ್ದ ತಾಲೂಕು ಆಡಳಿತ ಕ್ರಮಕ್ಕೆ ಮುಂದಾಗಿದ್ದು ಓವರ್ ಲೋಡ್ ಮಾಡಿಕೊಂಡು ಬರುವ ಚಾಲಕರಿಗೆ ವರ‍್ನಿಂಗ್ ನೀಡಲಾಗಿದೆ.

ಚಿಕ್ಕೋಡಿ ಎಸಿ ಸಂತೋಷ್ ಕಾಮಗೌಡರ ಅವರು ರೈತರಿಗೆ ಹಾಗೂ ಟ್ರಾಕ್ಟರ್ ಚಾಲಕರಿಗೆ ಮನವಿಯೊಂದಿಗೆ ಎಚ್ಚರಿಕೆ ನೀಡಿದ್ದಾರೆ. ಓವರ್ ಲೋಡ್ ಹಾಕಿಕೊಂಡು ಸಿಟಿಯ ಒಳಗೆ ಅತಿಯಾಗಿ ಜನ ಓಡಾಡುವ ಸಮಯದಲ್ಲಿ ಟ್ರಾಕ್ಟರಗಳನ್ನು ತರಬಾರದು. ಮುಂಜಾನೆ ೯ ಗಂಟೆಯಿಂದ ೧೧ ಗಂಟೆಯವರಗೂ ಹಾಗೂ ಸಂಜೆ ೫ ರಿಂದ ರಾತ್ರಿ ೯ ರ ವರೆಗೂ ಸಹ ಓವರ್ ಲೋಡೆಡ್ ಟ್ರಾಕ್ಟರ ಗಳನ್ನು ಪಟ್ಟಣದ ಒಳಗೆ ತರಬಾರದು ಅಂತ ಮನವಿ ಮಾಡಿದ್ದಾರೆ. ಅಲ್ಲದೆ ನಿಯಮ ಮೀರಿ ಯಾರಾದ್ರೂ ನಡೆದುಕೊಂಡರೆ ಅಂತವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದರ ಜತೆಗೆ ದಂಡವಿಧಿಸುವ ಎಚ್ಚರಿಕೆ ನೀಡಿದ್ದಾರೆ..


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ