Breaking News

ಸತತ ಮಳೆಯ ಅಬ್ಬರ ಹಲಸಿ ಗ್ರಾಮದಲ್ಲಿಯೂ ಎರಡು ಮನೆಗಳ ಗೋಡೆಗಳು ಬಿದ್ದಿವೆ.

Spread the love

ಸತತ ಮಳೆಯ ಅಬ್ಬರಕ್ಕೆ ಖಾನಾಪೂರ ತಾಲೂಕಿನ ಮನೆಗಳು, ಮನೆಗಳ ಗೋಡೆಗಳು ಬೀಳುವ ವರದಿಗಳು ಸಂಭವಿಸುತ್ತಲ್ಲೇ ಇದ್ದು ಐತಿಹಾಸಿಕ ಹಲಸಿ ಗ್ರಾಮದಲ್ಲಿಯೂ ಎರಡು ಮನೆಗಳ ಗೋಡೆಗಳು ಬಿದ್ದಿವೆ.

ಹಲಸಿ ಗ್ರಾಮದ ಜಹೂರ ಅಬ್ಬಾಸಿ ಮತ್ತು ಚನ್ನಬಸವರಾಜ ಡಿಗ್ಗಿಮಠ ಎಂಬವರಿಗೆ ಸೇರಿದ ಎರಡು ಮನೆ ಗೋಡೆಗಳು ಹಿಂಬದಿಯಿಂದ ಬಂದಿದ್ದು, ಅದೃಷ್ಟವಶ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಈ ಎರಡು ಮನೆಗಳ ಗೋಡೆಗಳು ಸತತ ಮಳೆಯಿಂದ ನೆನೆದು, ಉಳಿದ ಮನೆಯೂ ಕೂಡಾ ಅಪಾಯಕಾರಿ ಸ್ಥಿತಿಯಲ್ಲಿವೆ. ಇದನ್ನು ಗಮನಿಸಿದ ಹಲಸಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಂತೋಷ ಹಂಜಿ ಅವರು ಅಲ್ಲಿಂದ ಕುಟುಂಬಸ್ಥರಿಗೆ ಬೇರೆ ಕಡೆ ವ್ಯವಸ್ಥೆ ಮಾಡಿದ್ದಾರೆ.

ಅಷ್ಟೇ ಅಲ್ಲದೇ ಸೂಕ್ತ ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ