ತುಮಕೂರು, ಮೇ 12: ನಗರದ ತಿಲಕ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವತಿಯರಿಬ್ಬರು ತಾವು ಪರಸ್ಪರ ಪ್ರೀತಿಸುತ್ತಿದ್ದು ಮದುವೆಯಾಗುವುದಾಗಿ ನಿರ್ಧರಿಸಿದ್ದೇವೆ ಇದಕ್ಕೆ ಅವಕಾಶ ಮಾಡಿಕೊಡಿ ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ. ತುಮಕೂರು ಮೂಲದ ಯುವತಿಯರ ಸಲಿಂಗ ಮದುವೆ ಎಲ್ಲರ ಗಮನ ಸೆಳೆದಿದೆ.
ಮದುವೆ ಮಾಡಿಕೊಳ್ಳಲು ಮನೆ ಬಿಟ್ಟು ಹೊರಬಂದವರು ಈಗ ಪೊಲೀಸರ ನೆರವು ಕೋರಿದ್ದಾರೆ.
ಈ ಇಬ್ಬರು ಯುವತಿಯರು ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು ಇಬ್ಬರೂ ತುಮಕೂರಿನಲ್ಲೇ ವಾಸಿಸುತ್ತಿದ್ದರು. ಕೆಲದಿನಗಳ ಮಟ್ಟಿಗೆ ಕಾಣೆಯಾಗಿದ್ದ ಯುವತಿಯರು ಬಳಿಕ ತುಮಕೂರಿಗೆ ಆಗಮಿಸಿ ಮದುವೆಯಾಗುವುದಾಗಿ ತೀರ್ಮಾನಿಸಿ ಪೊಲೀಸರಲ್ಲಿ ಮನವಿ ಮಾಡಿಕೊಂಡರು. ಆದರೆ ಇದಕ್ಕೆ ಪೊಲೀಸರು ನಿರಾಕರಿಸಿದರು. ಆದರೆ ಮದುವೆ ಮಾಡಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆ ಯುವತಿಯರು ಬೆದರಿಕೆ ಹಾಕಿದರು. ಆದರೆ ಒಬ್ಬಾಕೆಯ ಪೋಷಕರು ಸಮ್ಮತಿಸಿದರೆ ಮತ್ತೊಬ್ಬಾಕೆಯ ಪೋಷಕರು ವಿರೋಧಿಸಿ ಯುವತಿಯನ್ನು ಕರೆದೊಯ್ದರು.
ಮನೆ ಬಿಟ್ಟಿದ್ದ ಯುವತಿಯರು: ಕಾಲೇಜಿನಲ್ಲಿದ್ದಾಗ ಗೆಳತನವಾಗಿತು. ನಂತರ ಪ್ರೀತಿ ಅಂಕುರಿಸಿ ಮದುವೆ ಮಾಡಿಕೊಳ್ಳುವ ನಿರ್ಧಾರಕ್ಕೂ ಬಂದಿದ್ದರು.