ಕಾಗವಾಡ ತಾಲೂಕಿನ ಐನಾಪುರ ಪಟ್ಟಣದಲ್ಲಿ ರವಿವಾರ ಮತ್ತು ಸೋಮವಾರ ಮಧ್ಯರಾತ್ರಿ 13 ಮನೆಗಳ ಬೀಗ ಮುರಿದು ಸರಣಿ ಕಳ್ಳತನ ನಡೆದಿದೆ.
ಐನಾಪುರ ಪಟ್ಟಣದಲ್ಲಿ ಹೃದಯಭಾಗದಲ್ಲಿರುವ 13 ಮನೆಗಳ ಬೀಗ ಮುರಿದು ಏಕ ಕಾಲಕ್ಕೆ ಸರಣಿ ಕಳ್ಳತನ ಮಾಡಿ ಮನೆಯಲ್ಲಿಯ ಚಿನ್ನಾಭರಣ, ಬೆಳ್ಳಿ, ನಗದು ಹಣ ಹೀಗೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿದ್ದಾರೆ. ಕಳೆದ ಕನೇಕ ವರ್ಷಗಳ ಬಳಿಕ ಏಕಕಾಲಕ್ಕೆ ಈ ರೀತಿ ಸರಳಿ ಕಳ್ಳತನ ನಡೆದಿರುವ ಘಟನೆಯಿಂದ ಇಲ್ಲಿಯ ಜನರು ಭಯಭೀತಗೊಂಡಿದ್ದಾರೆ. ಗ್ರಾಮದ ಸಿದ್ದು ದಶರಥ ಜಾಧವ ಇವರ ಮನೆಯಲ್ಲಿ 7 ತೊಲಿ ಚಿನ್ನಾರಭರಣ, 10 ತೊಲಿ ಬೆಳ್ಳಿಯ ಆಭರಣ ಮತ್ತು 20 ಸಾವಿರ ನಗದು ಮತ್ತು ಬಸಪ್ಪ ಒಡಿಯರ ಇವರ ಮನೆಯಿಂದ 12 ತೊಲಿ ಚಿನ್ನಾಭರಣ, 10 ತೊಲಿ ಬೆಳ್ಳಿಯ ಆಭರಣ 10 ಸಾವಿರ ನಗದು ಸೇರಿದಂತೆ 13 ಮನೆಗಳ ಬೀಗ ಮುರಿದು ಕಳ್ಳತನ ನಡೆದಿದೆ. ಈ ಬಗ್ಗೆ ಶಾಂತಾ ಒಡೆಯರ್ ಅವರು ಮಾಹಿತಿ ನೀಡಿದ್ದು ಹೀಗೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಿಪಿಐ ಶಂಕರಗೌಡ ಬಸಗೌಡರ, ಪಿಎಸ್‍ಐ ಬಿ.ಎಂ.ರಬಕವಿ ದೌಡಾಯಿಸಿದ್ದು. ಬೆಳಗಾವಿಯಿಂದ ಶ್ವಾನದಳ ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ಕೈಗೊಂಡಿದ್ದಾರೆ. ಐನಾಪುರ ಪಟ್ಟಣದ ಮುಖ್ಯ ಭಾಗಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದು, ಕ್ಯಾಮೆರಾ ದೃಶ್ಯಾವಳಿಗಳನ್ನು ಪೆÇಲೀಸರು ಪರಿಶೀಲನೆ ನಡೆಸಿದರು. ಐನಾಪುರದಲ್ಲಿ ಏಕ ಕಾಲಕ್ಕೆ ನಡೆದಿರುವ ಈ ಸರಣಿ ಕಳ್ಳತನದಿಂದ ಐನಾಪುರ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಭಯದ ವಾತಾವರಣ ನಿರ್ಮಾಣಗೊಂಡಿದೆ. ಆದಷ್ಟು ಬೇಗನೇ ಕಳ್ಳರನ್ನು ಪತ್ತೆ ಹಚ್ಚುವಂತೆ ಇಲ್ಲಿನ ಜನ ಆಗ್ರಹಿಸಿದ್ದಾರೆ.
Laxmi News 24×7