ವಿಜಯಪುರ: ಸಿಂದಗಿ ಪಟ್ಟಣದ ವಿರಕ್ತಮಠದ ಪೀಠಾಧಿಕಾರಿಗಳಾಗಿದ್ದ ಸಿದ್ದಲಿಂಗ ಸ್ವಾಮೀಜಿ (58) ಭಾನುವಾರ ಬೆಳಿಗ್ಗೆ ಲಿಂಗ್ಯೆಕ್ಯರಾದರು.
ಸುದೀರ್ಘ ಪರಂಪರೆ ಹೊಂದಿದ ವಿರಕ್ತಮಠದ 18 ನೇ ಪೀಠಾಧಿಕಾರಿಗಳಾಗಿದ್ದರು. 1985 ರಲ್ಲಿ ಶ್ರೀಗಳ ಪಟ್ಟಾಧಿಕಾರ ಅದ್ದೂರಿಯಾಗಿ ನಡೆದಿತ್ತು. ತಪಸ್ವಿಗಳು, ಮಾತೃಹೃದಯಿಗಳಾಗಿದ್ದರು.
ಈ ಭಾಗದಲ್ಲಿ ಅಪಾರ ಭಕ್ತರು ಶ್ರೀಮಠದ ಶಿಷ್ಯರಾಗಿದ್ದಾರೆ. ಶ್ರೀಗಳ ಅಂತ್ಯಕ್ರಿಯೆ ಭಾನುವಾರ ಸಂಜೆ ಶ್ರೀಮಠದ ಆವರಣದಲ್ಲಿ ವಿರಕ್ತ ಸಂಪ್ರದಾಯದಂತೆ ನೆರವೇರಲಿದೆ.