ಬೆಳಗಾವಿ: ಕಳೆದ ಅಗಸ್ಟ್ 8 ರಂದು ಕೆ.ಎಸ್.ಆರ್.ಪಿ 2 ನೇ ಪಡೆ ಮಚ್ಚೆ ಮೈದಾನದಲ್ಲಿ ನಾಗರೀಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಯ ಸಹಿಷ್ಣುತೆ ಪರೀಕ್ಷೆ, ದೇಹದಾರ್ಡ್ಯತೆ ಪರೀಕ್ಷೆಯಲ್ಲಿ ಅಕ್ರಮ ಎಸಗುತ್ತಿದ್ದ ಆರೋಪಿಗಳಿಬ್ಬರನ್ನು ಪೊಲೀಸ್ ರು ವಶಕ್ಕೆ ಪಡೆದಿದ್ದಾರೆ.
ಚಿಕ್ಕೋಡಿ ತಾಲ್ಲೂಕಿನ ಜಾಗನೂರದ ಬಾಳೇಶ ಸನ್ನಪ್ಪ ದುರದುಂಡಿ ಹಾಗೂ ಮೂಡಲಗಿ ತಾಲ್ಲೂಕು ಕುಲಗೋಡದ ಉಮೇಶ ಎನ್ ಬಂಧಿತ ಆರೋಪಿಗಳು, ಅಭ್ಯರ್ಥಿ ಬಾಳೇಶ ಎತ್ತರ ಕಡಿಮೆ ಇರೊದರಿಂದ ತನ್ನ ತಲೆಯ ಮೇಲ್ಬಾದಲ್ಲಿ ಥರ್ಮಾಕೋಲ್ ದ 3 ತುಣುಕುಗಳು ಹಾಗೂ ಅದರ ಮೇಲೆ ಕೂದಲಿನ ವಿಗ್ ಹಾಕಿಕೊಂಡು ನೇಮಕಾತಿ ವೇಳೆ ಮೋಸ ಮಾಡಲು ಯತ್ನಿಸಿದಾಗ ಪೊಲೀಸ್ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಮಾರ್ಕೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.