ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಭೀತಿ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿಯೇ ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ರಾಜ್ಯದ ಬಹುತೇಕ ಕಡೆ ಕೋವಿಡ್ ಲಸಿಕೆಯ ಅಭಾವವಿದೆ. ರಾಜ್ಯಗಳಿಗೆ ಅಗತ್ಯ ಪ್ರಮಾಣದ ಲಸಿಕೆ ಒದಗಿಸುವುದು ಕೇಂದ್ರದ ಜವಬ್ಧಾರಿ. ಆದರೆ ಕೇಂದ್ರ ಲಸಿಕೆ ಪೂರೈಸುವಲ್ಲಿ ವಿಫಲವಾಗಿದೆ ಎಂದು ಕೇಂದ್ರದ ವಿರುದ್ಧ ಗುಡುಗಿದ್ದಾರೆ.
ಲಸಿಕಾ ಅಭಿಯಾನದ ಬಗ್ಗೆ ಹಾದಿ ಬೀದಿಯಲ್ಲಿ ಫೋಟೋ ಹಾಕಿಕೊಂಡು ಪೋಸ್ ಕೊಡುವ ಪ್ರಧಾನಿಯವರಿಗೆ ಲಸಿಕೆ ಪೂರೈಸುವುದು ತಮ್ಮ ಹೊಣೆಗಾರಿಕೆ ಎಂಬ ಜ್ಞಾನ ಇಲ್ಲವೆ? ಎಂದು ಪ್ರಧಾನಿ ಮೋದಿಯನ್ನು ಟ್ವೀಟ್ ಮಾಡುವ ಮೂಲಕ ಪ್ರಶ್ನೆ ಮಾಡಿದ್ದಾರೆ.
ಇನ್ನು ರಾಜ್ಯದಲ್ಲಿ ಕೋವಿಡ್ ಆತಂಕ ಹೆಚ್ಚಾಗುತ್ತಿದ್ದು, ಗಡಿ ಪ್ರದೇಶದ ಸೇರಿದಂತೆ ರಾಜ್ಯಕ್ಕೆ ಪ್ರವೇಶ ಮಾಡುವವರ ಮೇಲೆ ನಿಗಾ ಇಟ್ಟು ಪರೀಕ್ಷೆ ಮಾಡಲಾಗುತ್ತಿದೆ. ಇನ್ನು ಕೆಲವು ಕಡೆ ಕೋವಿಡ್ ನೆಗೆಟಿವ್ ವರದಿ ಇಲ್ಲದೆ ಬಂದರೆ ಅಂತವರ ಪ್ರವೇಶಕ್ಕೆ ನಿರ್ಬಂಧ ಹೇರಲಾಗುತ್ತಿದೆ.
ರಾಜ್ಯದ ಬಹುತೇಕ ಕಡೆ ಕೋವಿಡ್ ಲಸಿಕೆಯ ಅಭಾವವಿದೆ.
ರಾಜ್ಯಗಳಿಗೆ ಅಗತ್ಯ ಪ್ರಮಾಣದ ಲಸಿಕೆ ಒದಗಿಸುವುದು ಕೇಂದ್ರದ ಜವಬ್ಧಾರಿ.
ಆದರೆ ಕೇಂದ್ರ ಲಸಿಕೆ ಪೂರೈಸುವಲ್ಲಿ ವಿಫಲವಾಗಿದೆ.
ಲಸಿಕಾ ಅಭಿಯಾನದ ಬಗ್ಗೆ ಹಾದಿ ಬೀದಿಯಲ್ಲಿ ಫೋಟೋ ಹಾಕಿಕೊಂಡು ಪೋಸ್ ಕೊಡುವ ಪ್ರಧಾನಿಯವರಿಗೆ ಲಸಿಕೆ ಪೂರೈಸುವುದು ತಮ್ಮ ಹೊಣೆಗಾರಿಕೆ ಎಂಬ ಜ್ಞಾನ ಇಲ್ಲವೆ??
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) August 3, 2021