ಬೆಂಗಳೂರು : ಬಿಎಂಟಿಸಿ ಸಿಬ್ಬಂದಿಯ ಸಂಬಳ ವಿತರಣೆ ಮಾಡುವ ಸಲುವಾಗಿ ಸರ್ಕಾರದಿಂದ 94 ಕೋಟಿ 64 ಲಕ್ಷ ರೂಪಾಯಿ ಹಣವನ್ನು ಬಿಡುಗಡೆ ಮಾಡಲಾಗಿದೆ.
ಬಿಎಂಟಿಯಲ್ಲಿ ಕೊರೊನಾ ಕಾರಣದಿಂದಾಗಿ ಉಂಟಾದ ಸಂಕಷ್ಟದಿಂದಾಗಿ ತನ್ನ ನೌಕರರ ಡಿಸೆಂಬರ್ ಮತ್ತು ಜನವರಿ ತಿಂಗಳ ಅರ್ಧ ಸಂಬಳವನ್ನು ಮಾತ್ರ ನೀಡಲಾಗಿತ್ತು. ಇನ್ನರ್ಧ ನೀಡಲಾಗಿರಲಿಲ್ಲ. ಈ ಸಂಬಂಧ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ ಶಿಕಾರವರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಆ ಪತ್ರದಲ್ಲಿ ನೌಕರರ ಸಂಬಳಕ್ಕಾಗಿ 94 ಕೋಟಿ ರೂಪಾಯಿಯ ಹಣ ಮಂಜೂರು ಮಾಡುವಂತೆ ಕೋರಲಾಗಿತ್ತು.
ಕೊರೊನಾ ಲಾಕ್ ಡೌನ್ ಉಂಟು ಮಾಡಿದ ಆರ್ಥಿಕ ಸಮಸ್ಯೆಯಿಂದ ಇನ್ನು ಹೊರ ಬಾರದ ಬಿಎಂಟಿಸಿಯ ಸ್ಥಿತಿಯನ್ನ ಗಮನಿಸಿದ ಸರ್ಕಾರ ನೌಕರರ ನೆರವಿಗೆ ಧಾವಿಸಿದೆ. ಅದಕ್ಕಾಗಿಯೇ ಸದ್ಯ ಹಣ ಬಿಡುಗಡೆ ಮಾಡಿ ಆದೇಶ ಹೊರಡಿಸಲಾಗಿದೆ. ಸರ್ಕಾರ ಮಂಜೂರು ಮಾಡಿರುವ ಹಣದಿಂದಲೇ ಸಿಬ್ಬಂದಿಗೆ ಉಳಿದ ಸಂಬಳವನ್ನು ನೀಡಲಾಗುತ್ತದೆ ಎನ್ನಲಾಗಿದೆ.
 Laxmi News 24×7
Laxmi News 24×7
				 
						
					