Breaking News

ಶಿರಹಟ್ಟಿ ಕೆ ಡಿ ಗ್ರಾಮದ ವ್ಯಕ್ತಿ ಶವವಾಗಿ ಪತ್ತೆ

Spread the love

,

ಚಿಕ್ಕೋಡಿ: ಅನುಮಾನಾಸ್ಪದ ಸಾವು.!ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಿರಹಟ್ಟಿ ಕೆ.ಡಿ. ಗ್ರಾಮದ ಭೀಮಣ್ಣ ಕಲ್ಲಪ್ಪ ಮುನ್ನೋಳಿ ಎಂಬ ವ್ಯಕ್ತಿ ನಿನ್ನೆ ರಾತ್ರಿ ಚಿಕ್ಕೋಡಿ ತಾಲೂಕಿನ ಕಬ್ಬೂರು ಪಟ್ಟಣದ ಬಾಗೇವಾಡಿ ರಸ್ತೆ ಪಕ್ಕ ಅನುಮಾನಾಸ್ಪದ ಶವವಾಗಿ ಪತ್ತೆಯಾಗಿದ್ದಾನೆ, ಮೇಲ್ನೋಟಕ್ಕೆ ಹತ್ಯೆ ಶಂಕೆ ಇರಬಹುದೆಂದು ಊಹಿಸಬಹುದಾಗಿದೆ. ಮೂಲತಃ ಹುಕ್ಕೆರಿ ತಾಲೂಕಿನ ಶಿರಹಟ್ಟಿ ಕೆಡಿ ಗ್ರಾಮದ ಭಿಮಣ್ಣ ಮುನ್ನೋಳಿ ಚಿಕ್ಕೋಡಿ ತಾಲೂಕಿನ ಕಬ್ಬೂರ ಬಾಗೆವಾಡಿ ರಸ್ತೆ ಕಾಲುವೆ ಮೇಲೆ ಶವವಗಾಗಿ ಪತ್ತೆಯಾಗಿದ್ದು, ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೆಟಿ ನೀಡಿ ಸ್ಥಳೀಯ ಮಾಹಿತಿ ಪಡೆದು ಸಾವಿಗೆ ನಿಖರವಾದ ಮಾಹಿತಿ ಕಲೆ ಹಾಕಲು ಪೊಲಿಸರು ಜಾಲ ಬೀಸಿದ್ದಾರೆ.ಇನ್ನೂ ಕ್ರತ್ಯವನ್ನ ನೊಡಿದ ಸಾರ್ವಜನಿಕರಲ್ಲಿ ಭಯದ ವಾತಾವರಣ ಮೂಡಿದೆ.ಇನ್ನೂ ಈ ಕ್ರತ್ಯವನ್ನ ಶಿರಹಟ್ಟಿ ಕೆಡಿ ಗ್ರಾಮದಲ್ಲಿ ಮಾಡಿ ಬಾಗೇವಾಡಿ ಸಮೀಪ ವ್ಯಕ್ತಿಯನ್ನ ತಂದು ಕಿನಾಲ ಹತ್ತಿರ ಎಸೆದಿರಬಹುದೆಂದು ಹಲವೂ ಅನುಮಾಗಳಿಗೆ ಸಂಶಯಾಸ್ಪದವಾಗಿದೆ.ಸ್ಥಳಕ್ಕೆ ಚಿಕ್ಕೋಡಿ ಡಿಎಸ್ಪಿ ಸಿಪಿಐ ಆರ್ ಆರ್ ಪಾಟೀಲ ಮುಂದಿನ ತನಿಖೆ ನಡೆಸಿದ್ದಾರೆ.


Spread the love

About Laxminews 24x7

Check Also

ನಿವೃತ್ತ ಶಿಕ್ಷಕನಿಂದ 80 ಸಾವಿರ ರೂಪಾಯಿ ಮೌಲ್ಯದ ಕಲಿಕಾ ಸಾಮಗ್ರಿ ದೇಣಿಗೆ

Spread the love ಹುಕ್ಕೇರಿ : ನಿವೃತ್ತ ಶಿಕ್ಷಕನಿಂದ 80 ಸಾವಿರ ರೂಪಾಯಿ ಮೌಲ್ಯದ ಕಲಿಕಾ ಸಾಮಗ್ರಿ ದೇಣಿಗೆ ಹುಕ್ಕೇರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ