ಕೋಲಾರ: ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ವರ್ತಕರಿಂದ ಪ್ರತಿಭಟನೆಯನ್ನು ಮಾಡುತ್ತಿದ್ದು, ಪ್ರತಿಭಟನೆಯಲ್ಲಿ ಕೋವಿಡ್ ನಿಯಮಗಳು ಉಲ್ಲುಂಘನೆ ಮಾಡಿದ್ದಾರೆ. ಪ್ರತಿಭಟನೆಯಲ್ಲಿ ಸಮಾಜಿಕ ಅಂತರ ಪಾಲಿಸದೇ ನಿರ್ಲಕ್ಷತೆಯನ್ನ ವಹಿಸಿದ್ದಾರೆ.
ಮಾರುಕಟ್ಟೆಯ ಸೆಸ್ ಪಾವತಿಸುವುದಕ್ಕೆ ವಿರೋಧಿಸಿ ಪ್ರತಿಭಟನೆ ಮಾಡಿತ್ತಿದ್ದು, ಕೃಷಿ ಉತ್ಪನ್ನಗಳ ಖರೀದಿಗಾಗಿ ವರ್ತಕರು ಸಮಿತಿಗೆ ಪಾವತಿಸುವ ಸೆಸ್ ಶುಲ್ಕ ಮಾಡಿದ್ದಾರೆ. ಕೋವಿಡ್ ಸಮಸ್ಯೆ ಬಗೆಹರಿಯುವರೆಗು ಸೆಸ್ ಪಾವತಿ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಸೆಸ್ ಸಂಗ್ರಹ ನಿಲ್ಲಿಸಿದ್ದ ಎಪಿಎಂಸಿ ಕೊರೋನಾ ಮುಂದುವರೆದಿದ್ದರೂ ಇದೀಗ ಸೆಸ್ ಸಂಗ್ರಹಕ್ಕೆ ಆರೋಪ ಮಾಡಲು ಮುಂದಾಗಿದ್ದಾರೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿಲುವಿಗೆ ವರ್ತಕರ ವಿರೋಧವನ್ನು ವ್ಯಕ್ತ ಪಡಿಸಿತ್ತಿದ್ದು, ಕೃಷಿ ಉತ್ಪನ್ನ ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿ ಧರಣಿ ಮಾಡಲು ಮುಂದಾಗಿದ್ದಾರೆ.