ಜ. 26ರಂದು ಬಂದು ನೋಡಬೇಕು. ಈ ಕ್ಷೇತ್ರದಲ್ಲಿ ಎಲ್ಲಾ ದೇವರುಗಳು ಕೂಡ ಗಣರಾಜ್ಯೋತ್ಸವವನ್ನು ಆಚರಿಸುತ್ತಿವೆ. ಎಲ್ಲಾ ದೇವರುಗಳನ್ನು ರಾಷ್ಟ್ರಧ್ವಜದ ಬಣ್ಣ, ಬಣ್ಣದ ಬಟ್ಟೆಗಳಿಂದ ಅಲಂಕರಿಸಲಾಗುತ್ತದೆ
ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ದೇವರುಗಳು ಗಣರಾಜ್ಯೋತ್ಸವವನ್ನು ಆಚರಿಸುತ್ತಿವೆ. ಕ್ಷೇತ್ರದ ಮಹಾಗುರು ಗುರುಶಾಂತೇಶ್ವರನಿಗೆ ದೇಶಭಕ್ತಿಯ ವಿಚಾರವನ್ನು ತುಂಬಬೇಕೆನ್ನುವ ಸದಾಶಯ ಇಲ್ಲಿಯ ಸಾಕ್ಷಿ ಗಣಪತಿಗೂ ಕೂಡ ದೇಶ ಭಕ್ತರಾಗಿ ಎನ್ನುವ ಸಂದೇಶ ಸಾರುವ ಸದಿಚ್ಛೆ. ಕ್ಷೇತ್ರದ ಮಹಾಗುರು ಜಗದ್ಗುರು ರೇಣುಕಾಚಾರ್ಯರಿಗೆ ಕೂಡ ನೀವೆಲ್ಲ ದೇಶ ಪ್ರೇಮವನ್ನು ಮೈಗೂಡಿಸಿಕೊಳ್ಳಿ ಎನ್ನುವ ಸಂದೇಶ ಸಾರುವ ತವಕ.
ಕ್ಷೇತ್ರದ ಮಹಾಮಾತೆ ಅನ್ನಪೂರ್ಣೇಶ್ವರಿ ಮಕ್ಕಳೇ ನೀವು ದೇಶಭಕ್ತರಾಗಬೇಕು, ದೇಶದಲ್ಲಿ ಎಲ್ಲರೂ ಕೂಡ ಸಾಮರಸ್ಯದಿಂದ ಬದುಕಬೇಕೆಂಬ ಸದಾಶಯ ಸಾರುವ ಮಮತೆಯ ವಾಣಿ. ಕ್ಷೇತ್ರಪಾಲಕ ಕಾಲಭೈರವ ದೇಶದ್ರೋಹಿಗಳಾಗಬೇಡಿ, ದೇಶಭಕ್ತರಾಗಿ ಎಂದು ಹೇಳುವ ಅಪರೂಪದ ಕ್ಷಣ. ಕ್ಷೇತ್ರದಲ್ಲಿರುವ ಮಹಾನಂದಿ, ಶಂಕರ ಶಿವಾಚಾರ್ಯರ, ವಿರುಪಾಕ್ಷ ಶಿವಾಚಾರ್ಯರ ಮೂರ್ತಿ, ನಾಗ ಲಿಂಗೇಶ್ವರ, ಕರಿಯಮ್ಮ ಮಾತೆಯ, ಸರಸ್ವತಿಯ, ಆದಿಶಕ್ತಿಯ ಎಲ್ಲರಿಗೂ ಕೂಡ ದೇಶದ ಅಭಿಮಾನಿಗಳಾಗಿ, ಪ್ರಜೆಗಳು ನೆಮ್ಮದಿಯಿಂದ ಬದುಕಿ ಎನ್ನುವ ಸಂದೇಶ ಸಾರುವ ಅಪರೂಪದ ಕ್ಷಣ ಇಲ್ಲಿ ನೋಡಲು ಸಿಗುತ್ತದೆ.
ಜ. 26ರಂದು ಬಂದು ನೋಡಬೇಕು. ಈ ಕ್ಷೇತ್ರದಲ್ಲಿ ಎಲ್ಲಾ ದೇವರುಗಳು ಕೂಡ ಗಣರಾಜ್ಯೋತ್ಸವವನ್ನು ಆಚರಿಸುತ್ತಿವೆ. ಎಲ್ಲಾ ದೇವರುಗಳನ್ನು ರಾಷ್ಟ್ರಧ್ವಜದ ಬಣ್ಣ, ಬಣ್ಣದ ಬಟ್ಟೆಗಳಿಂದ ಅಲಂಕರಿಸಲಾಗುತ್ತದೆ.
ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಸಾರ್ವಜನಿಕರಿಗೆ ದೇಶದ, ನಾಡಿನ ವಿಚಾರವನ್ನು ತುಂಬವ ಕೆಲಸ ಮಠ, ಮಂದಿರ, ಗುಡಿ ಮಾಡಿದರೆ ಅವರಲ್ಲಿ ಇನ್ನೂ ಹೆಚ್ಚಿನ ಪ್ರೇರೇಪಣೆ ಸಿಗುತ್ತದೆ ಎನ್ನುವ ಸದುದ್ದೇಶದಿಂದ ಆಗಸ್ಟ್ 15, ನವೆಂಬರ್ 1 ಹಾಗೂ ಜನವರಿ 26ರ ರಾಷ್ಟ್ರೀಯ ಹಬ್ಬಗಳಲ್ಲಿ ಇಂತಹ ಒಂದು ಅಪರೂಪದ ವಾತಾವರಣವನ್ನು ಶ್ರೀಮಠ ನಿರ್ಮಾಣ ಮಾಡುತ್ತ ಬಂದಿದೆ. ದೇಹಾಭಿಮಾನಕ್ಕಿಂತ ದೇಶಾಭಿಮಾನ ದೊಡ್ಡದು. ಎಲ್ಲರೂ ದೇಶವನ್ನು ಪ್ರೀತಿಸೋಣ ದೇಶವನ್ನು ಗೌರವಿಸೋಣ ಎನ್ನುವ ಸಂದೇಶ ಸಾರುವುದೇ ಇದರ ಉದ್ದೇಶ ಎನ್ನುತ್ತಾರೆ.
ಕ್ಷೇತ್ರದ ಪಂಡಿತರಾದ ಸಂಪತ್ ಕುಮಾರ್ ಶಾಸ್ತ್ರಿಗಳ ನೇತೃತ್ವದಲ್ಲಿ ಎಲ್ಲಾ ವೇದವಟುಗಳು ಈ ಒಂದು ಕಾರ್ಯವನ್ನು ಮಾಡಿ ದೇಶಪ್ರೇಮವನ್ನು ತೋರ್ಪಡಿಸಿರುವುದು ವಿಶೇಷ.