ಹಾವೇರಿ:ಕೋವಿಡ್-19 ಪಾಸಿಟಿವ್ ಇರುವ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕಳುಹಿಸಲು ಒಪ್ಪದ ಪತಿ ಆರೋಗ್ಯ ಸಿಬ್ಬಂದಿಯೊಂದಿಗೆ ರಂಪಾಟ ಮಾಡಿದ ಘಟನೆ ಗುರುವಾರ ತಾಲೂಕಿನ ಕನವಳ್ಳಿಯಲ್ಲಿ ನಡೆದಿದೆ.
ಕೋವಿಡ್ 19 ಪಾಸಿಟಿವ್ ವರದಿ ಬಂದಾಗ ಗರ್ಭಿಣಿಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲು ಆಂಬ್ಯುಲೆನ್ಸ್ ಸಿಬ್ಬಂದಿ ಕನವಳ್ಳಿಯ ಮನೆಗೆ ಹೋದಾಗ ಪತ್ನಿಯೊಂದಿಗೆ ಪತಿಯೂ ಆಂಬ್ಯುಲೆನ್ಸ್ ಏರಲು ಯತ್ನಿಸಿದ್ದಾನೆ. ಪ್ರೀತಿಯ ಪತ್ನಿಯನ್ನು ಒಬ್ಬಳೇ ಇರಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾನೆ.
ಸ್ಥಳೀಯರು, ಸಿಬ್ಬಂದಿ ಮನವೊಲಿಸಿ ಆಂಬ್ಯುಲೆನ್ಸ್ ಹತ್ತುವುದನ್ನು ತಡೆದಿದ್ದಾರೆ. ಆಗ ಪತಿ ಬೈಕ್‌ನೊಂದಿಗೆ ಆಂಬ್ಯುಲೆನ್ಸ್ ಹಿಂಬಾಲಿಸಿ ಆಸ್ಪತ್ರೆಯವರೆಗೂ ಬಂದಿದ್ದಾನೆ.
ಸೋಂಕಿತೆಯನ್ನು ಆಸ್ಪತ್ರೆಗೆ ದಾಖಲಿಸುವಾಗ ಅಲ್ಲಿಯೂ ಪತಿ ಆಸ್ಪತ್ರೆ ಒಳಗೆ ಹೋಗಲು ಯತ್ನಿಸಿದ್ದಾನೆ.
ಆಗ ಪೊಲೀಸರು ಅವನನ್ನು ಬೆದರಿಸಿ, ನಗರದ ಹೊರವಲಯದಲ್ಲಿರುವ ವಸತಿ ನಿಲಯದ ಕ್ವಾರಂಟೈನ್ ಕೇಂದ್ರಕ್ಕೆ ಕರೆದೊಯ್ದಿದ್ದಾರೆ.⊄