ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಗಡಿ ಜಿಲ್ಲೆ ಬೆಳಗಾವಿಯ ನದಿಗಳು ತುಂಬಿ ಹರಿಯುತ್ತಿದ್ದು. ಮತ್ತೆ ಪ್ರವಾಹಭೀತಿ ಎದುರಾಗಿದೆ. ಅಷ್ಟೇ ಅಲ್ಲದೇ ರಾಜ್ಯದ ಎರಡನೇ ಅತೀ ದೊಡ್ಡ ಜಲಪಾತ ಎಂದು ಕರೆಯುವ ಗೋಕಾಕ್ ಫಾಲ್ಸ್ ಮತ್ತು ಗೋಡಚಿನಮಲ್ಕಿ ಫಾಲ್ಸ ಕೂಡ ನಯನಮನೋಹರವಾಗಿ ಹರಿಯುತ್ತಿದೆ. ಮತ್ತು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.
ಹೌದು 180ಅಡಿಯಷ್ಟು ಎತ್ತರದಿಂದ ನೀರು ಧುಮ್ಮುಕ್ಕಿ ಬೀಳುತ್ತಿರುವ ಗೋಕಾಕ ಜಲಪಾತ ಈಗ ನೋಡುವುದೇ ಕಣ್ಣಿಗೆ ಹಬ್ಬ. ಮಳೆಗಾಲದ ಜೂನ್ ತಿಂಗಳಿಂದ ಡಿಸೆಂಬರ್ ವರೆಗೆ ಬೋರ್ಗರೆಯುತ್ತಾ ಹರಿಯುವ ಈ ಜಲಪಾತ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ಈ ಜಲಪಾತ ಅಮೇರಿಕಾದ ನಯಾಗರ ಜಲಪಾತವನ್ನ ಹೋಲುತ್ತಿರುವುದರಿಂದ ಇದನ್ನ ಭಾರತದ ನಯಾಗರವೆಂದು ಕರೆಯುತ್ತಾರೆ.
*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??
ಇನ್ನು ಗೋಕಾ ತಾಲೂಕಿನ ಮತ್ತೊಂದು ಜಲಪಾತ ಗೋಡಚಿನಮಲ್ಕಿ ಮಾಕರ್ಂಡಯ್ಯ ನದಿಯ ಕಲ್ಲಿನ ಮೇಲೆ ದಟ್ಟ ಕೆಂಪು ಕಂದು ಬಣ್ಣದ ನೀರು ವಿಶಾಲವಾದ ಜಾಗದಲ್ಲಿ ಅಬ್ಬರವಿಲ್ಲದೇ ದುಮ್ಮಿಕ್ಕುವ ಪರಿ ಜಲಪಾತದ ಸೊಬಗನ್ನ ಇಮ್ಮಡಿಗೊಳಿಸುತ್ತದೆ. ಒಂದು ರೀತಿಯಲ್ಲಿ ಹಾಲಿನ ರೀತಿಯಲ್ಲಿ ಹರಿಯುವ ನದಿಯ ಪಕ್ಕದಲ್ಲಿ ಪ್ರವಾಸಿಗರು ಕುಳಿತು ಸೆಲ್ಪಿ ತೆಗೆಸಿಕೊಂಡು ಆನಂದಿಸುತ್ತಾರೆ, ಮತ್ತೊಂದು ಕಡೆ ಈ ಜಲಪಾತವನ್ನ ನೋಡಿದ ಪ್ರತಿಯೊಬ್ಬರೂ ಅಬ್ಬಾ ಅಂತಾ ಹೇಳುವುದರಲ್ಲಿ ಸಂದೇಹವೇ ಇಲ್ಲ.
ಒಟ್ಟಾರೆ ಮಹಾರಾಷ್ಟ್ರದ ಪಶ್ಚಿಮಘಟ್ಟದಲ್ಲಿ ಭಾರಿ ಮಳೆ ಆಗುತ್ತಿರುವ ಹಿನ್ನೆಲೆ ಈ ಎರಡೂ ಜಲಪಾತಗಳು ತುಂಬಿ ಹರಿಯುತ್ತಿವೆ. ಅಷ್ಟೇ ಅಲ್ಲದೇ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ. ಆದ್ರೆ ಪ್ರವಾಹದ ಭೀತಿ ಹಿನ್ನೆಲೆ ಪ್ರವಾಸಿಗರು ಎಚ್ಚರಿಕೆಯಿಂದ ಇಲ್ಲಿಗೆ ಆಗಮಿಸಿ ಫಾಲ್ಸನ ಸೌಂದರ್ಯವನ್ನು ಸವಿಯುವ ಅವಶ್ಯಕತೆಯಿದೆ.