ನವದೆಹಲಿ: ದೇಶದಲ್ಲಿ ಮತ್ತೆ ಕಠಿಣ ಲಾಕ್‍ಡೌನ್ ಜಾರಿಯಾಗುತ್ತಾ? ಲಾಕ್‍ಡೌನ್ ಸಡಿಲದ ಬಳಿಕ ಕೊರೊನಾ ಆರ್ಭಟ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಪ್ರಶ್ನೆ ಎದ್ದಿದೆ.
ಜೂನ್ ಮತ್ತು ಜುಲೈ ತಿಂಗಳಲ್ಲಿ ಕೊರೋನಾ ಸೋಂಕಿನ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಏಮ್ಸ್ ವೈದ್ಯ, ಕೊರೋನಾ ಟಾಸ್ಕ್ ಫೋರ್ಸ್‍ನ ಪ್ರಮುಖ ಡಾ.ರಂದೀಪ್ ಗುಲೇರಿಯಾ ಎಚ್ಚರಿಕೆ ನೀಡಿದ್ದಾರೆ.
ರೆಡ್ ಝೋನ್, ಹಾಟ್‍ಸ್ಪಾಟ್‍ಗಳ ಕಡೆ ಹೆಚ್ಚು ಗಮನ ನೀಡಬೇಕು. ಇಟಲಿ, ಅಮೆರಿಕದಂತೆ ಆಗಬಾರದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಬುಧವಾರ ಒಂದೇ ದಿನ 3,561 ಮಂದಿಗೆ ಕೊರೊನಾ ಬಂದಿದ್ದು, 89 ಮಂದಿ ಬಲಿಯಾಗಿದ್ದಾರೆ.
ಈವರೆಗೆ ಕೊರೋನಾ ಸೋಂಕಿತರ ಸಂಖ್ಯೆ 54 ಸಾವಿರ ದಾಟಿದೆ. ಕೊರೋನಾ ಸಾವಿನ ಸಂಖ್ಯೆ 1,790 ಆಗಿದೆ. ದೆಹಲಿಯಲ್ಲಿ ಪೇದೆಯೊಬ್ರು ಬಲಿಯಾಗಿದ್ದಾರೆ. ಒಟ್ಟು 487 ಪೊಲೀಸರಿಗೆ ಸೋಂಕು ತಗುಲಿದೆ. ದೆಹಲಿಯಲ್ಲಿ 106 ವರ್ಷದ ವೃದ್ಧೆ ಕೊರೋನಾ ಸಾವಿನಿಂದ ಬಚಾವ್ ಆಗಿದ್ದಾರೆ. ಒಟ್ಟು 16,048 ಮಂದಿ ಗುಣಮುಖರಾಗಿದ್ದರೆ.
ದೇಶದಲ್ಲಿ ಕೊರೋನಾ ಓಟ:
3 ರಿಂದ 100 ಮಂದಿಗೆ 14 ದಿನದಲ್ಲಿ ಸೋಂಕು ತಗಲಿದರೆ 100 ರಿಂದ ಸಾವಿರ ಮಂದಿಗೂ 14 ದಿನದಲ್ಲಿ ಸೋಂಕು ಬಂದಿದೆ. 16 ದಿನದಲ್ಲಿ 1 ಸಾವಿರದಿಂದ 10 ಸಾವಿರ ಪ್ರಕರಣಕ್ಕೆ ಹೋಗಿದೆ. 10 ಸಾವಿರದಿಂದ 40 ಸಾವಿರ ಪ್ರಕರಣ 23 ದಿನದಲ್ಲಿ ದಾಖಲಾದರೆ 40 ಸಾವಿರದಿಂದ 50 ಸಾವಿರ ಪ್ರಕರಣ ಕೇವಲ 4 ದಿನದಲ್ಲೇ ದಾಖಲಾಗಿದೆ. ಅದರೆ 4 ದಿನದಲ್ಲೇ 10 ಸಾವಿರ ಪ್ರಕರಣ ಬಂದಿದೆ.