ಬೆಂಗಳೂರು : ರಾಜ್ಯದಲ್ಲಿ ಭಾನುವಾರ 5,938 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, 68 ಮಂದಿ ಸಾವನ್ನಪ್ಪಿದ್ದಾರೆ. 4,996 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
ರಾಜ್ಯದಲ್ಲಿ ಈವರೆಗಿನ ಒಟ್ಟು ಸೋಂಕಿತರ ಸಂಖ್ಯೆ 2.77 ಲಕ್ಷಕ್ಕೆ ಏರಿಕೆಯಾದರೆ, ಸಾವನ್ನಪ್ಪಿದವರ ಸಂಖ್ಯೆ 4,683 ತಲುಪಿದೆ. ಇದೇ ವೇಳೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 1.89 ಲಕ್ಷಕ್ಕೇರಿದೆ. ಉಳಿದ 83,551 ಮಂದಿ ಸಕ್ರಿಯ ಸೋಂಕಿತರಿಗೆ ನಾನಾ ಆಸ್ಪತ್ರೆಗಳು, ಕೋವಿಡ್ ನಿಗಾ ಕೇಂದ್ರ ಮತ್ತು ಗೃಹ ಆರೈಕೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಆರೋಗ್ಯ ಗಂಭೀರ ಸ್ಥಿತಿಯಲ್ಲಿರುವ 787 ಮಂದಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ವರದಿಯಲ್ಲಿ ತಿಳಿಸಲಾಗಿದೆ.
ಇಂದಿನ (ಭಾನುವಾರ) ಕರ್ನಾಟಕದ ಕೊರೋನಾ ಅಂಕಿ-ಅಂಶ ಇಲ್ಲಿದೆ…
ಶನಿವಾರ ಗಣೇಶ ಚತುರ್ಥಿ ದಿನ ಕೂಡ ರಾಜ್ಯದಲ್ಲಿ ಒಟ್ಟು 7330 ಮಂದಿಗೆ ಸೋಂಕು ದೃಢಪಟ್ಟು 93 ಮಂದಿ ಸೋಂಕಿತರು ಮೃತಪಟ್ಟಿದ್ದರು. 7,626 ಮಂದಿ ಗುಣಮುಖರ ಬಿಡುಗಡೆ ಮಾಡಲಾಗಿತ್ತು. ಗಣೇಶ ಹಬ್ಬದ ರಜೆ ಹಾಗೂ ಮೈಸೂರಿನಲ್ಲಿ ವೈದ್ಯರ ಪ್ರತಿಭಟನೆ ಹಿನ್ನೆಲೆಯಲ್ಲಿ ಭಾನುವಾರ ಕೋವಿಡ್ ಪರೀಕ್ಷೆ ಕಡಿಮೆಯಾದ ಹಿನ್ನೆಲೆಯಲ್ಲಿ ಸೋಂಕು ಹಾಗೂ ಸಾವಿನ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಭಾನುವಾರ ಒಟ್ಟು 40,848 ಪರೀಕ್ಷೆ ಮಾತ್ರ ನಡೆಸಲಾಗಿದೆ.
ಜಿಲ್ಲಾವಾರು ಪ್ರಕರಣಗಳು:
ಭಾನುವಾರ ಬೆಂಗಳೂರಿಲ್ಲಿ 2126 ಮಂದಿಗೆ ಸೋಂಕು ದೃಢಪಟ್ಟಿದೆ. ಉಳಿದಂತೆ ಬಳ್ಳಾರಿ 406, ದಾವಣಗೆರೆ 265, ಕೊಪ್ಪಳ 256, ಶಿವಮೊಗ್ಗ 246, ಕಲಬುರಗಿ 203, ಹಾಸನ 196, ಧಾರವಾಡ 194, ದಕ್ಷಿಣ ಕನ್ನಡ 193, ಗದಗ 182, ಹಾವೇರಿ 150, ಬಾಗಲಕೋಟೆ 139, ಬೆಳಗಾವಿ 136, ವಿಜಯಪುರ 134, ಚಿಕ್ಕಮಗಳೂರು 126, ಉಡುಪಿ 117, ತುಮಕೂರು 112, ಉತ್ತರ ಕನ್ನಡ 108, ಮೈಸೂರು 92, ಚಿಕ್ಕಬಳ್ಳಾಪುರ, ರಾಯಚೂರು ತಲಾ 81, ಯಾದಗಿರಿ 73, ಚಿತ್ರದುರ್ಗ 71, ಮಂಡ್ಯ 51, ಕೋಲಾರ 47, ರಾಮನಗರ 42, ಬೀದರ್ 38, ಬೆಂಗಳೂರು ಗ್ರಾಮಾಂತರ 35, ಚಾಮರಾಜನಗರ 23 ಮತ್ತು ಕೊಡಗು ಜಿಲ್ಲೆಗಳಲ್ಲಿ 15 ಮಂದಿಗೆ ಸೋಂಕು ದೃಢಪಟ್ಟಿದೆ.
ಸಾವು ಎಲ್ಲಿ ಎಷ್ಟು:
ಕಳೆದ ಕೆಲ ತಿಂಗಳಿಗೆ ಹೋಲಿಸಿದರೆ ಭಾನುವಾರ ಬೆಂಗಳೂರಿನಲ್ಲಿ ಅತಿ ಕಡಿಮೆ ಸಾವಿನ ಸಂಖ್ಯೆಯ ವರದಿಯಾಗಿದ್ದು ಐದು ಮಂದಿ ಸಾವನ್ನಪ್ಪಿದ್ದಾರೆ. ಬಳ್ಳಾರಿಯಲ್ಲಿ ಅತಿ ಹೆಚ್ಚು 7 ಮಂದಿ ಸಾವನ್ನಪ್ಪಿದ್ದಾರೆ, ದಕ್ಷಿಣ ಕನ್ನಡ, ಕೊಪ್ಪಳ, ತುಮಕೂರಿನಲ್ಲಿ ತಲಾ 5, ವಿಜಯಪುರ, ಶಿವಮೊಗ್ಗ, ಹಾವೇರಿಯಲ್ಲಿ ತಲಾ 4, ಚಿತ್ರದುರ್ಗ, ಧಾರವಾಡ, ಹಾಸನ ತಲಾ ತಲಾ 3, ಬೆಳಗಾವಿ, ಚಿಕ್ಕಬಳ್ಳಾಪುರ, ದಾವಣಗೆರೆ, ಕಲಬುರಗಿ, ಕೋಲಾರ, ಮಂಡ್ಯ, ರಾಯಚೂರು, ಉಡುಪಿ ತಲಾ 2, ಬಾಗಲಕೋಟೆ, ಚಾಮರಾಜನಗರ, ಉತ್ತರ ಕನ್ನಡ ಮತ್ತು ಯಾದಗಿರಿಯಲ್ಲಿ ತಲಾ ಒಂದು ಸಾವು ಸಂಭವಿಸಿದೆ. ಈ ಪೈಕಿ ಒಂಬತ್ತು ಪ್ರಕರಣಗಳಲ್ಲಿ ಸೋಂಕಿನ ಸಂಪರ್ಕ ಪತ್ತೆಯಾಗಿಲ್ಲ. ಉಳಿದ ಪ್ರಕರಣಗಳು ಐಎಲ್‌ಐ, ಸಾರಿ ಮತ್ತು ಇತರೆ ಪೂರ್ವ ಕಾಯಿಲೆಗಳ ಹಿನ್ನೆಲೆಯಿಂದ ಕೂಡಿವೆ.