ವಾಷಿಂಗ್ಟನ್, ಮಾ.28-ಇಡೀ ಜಗತ್ತನ್ನೇ ನಡುಗಿಸುತ್ತಿರುವ ಕಿಲ್ಲರ್ ಕೊರೊನಾ ಸೋಂಕು ವಿವಿಧ ದೇಶಗಳ ಗಣ್ಯಾತಿಗಣ್ಯರು ಮತ್ತು ಖ್ಯಾತನಾಮರನ್ನೂ ಕಾಡುತ್ತಲೇ ಇದೆ. ವಿಶ್ವದಲ್ಲೇ ಅತಿ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗಿರುವ (1 ಲಕ್ಷಕ್ಕೂ ಹೆಚ್ಚು) ಅಮೆರಿಕದಲ್ಲಿ ಐವರು ಸಂಸದರಿಗೂ ಕೋವಿಡ್-19 ಸೋಂಕು ತಗುಲಿದೆ.
ಅಮೆರಿಕದ ಕಾಂಗ್ರೆಸ್ಸಿಗ ಮೈಕ್ ಕೆಲ್ಲಿ ಅವರಿಗೂ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ. ಈವರೆಗೆ ಐವರು ಸಂಸದರಿಗೆ ಈ ಸಾಂಕ್ರಾಮಿಕ ರೋಗ ಹಬ್ಬಿದೆ. ನಿನ್ನೆಯಷ್ಟೇ ಬ್ರಿಟನ್ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಅವರಿಗೂ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ
ಅಲ್ಲದೇ ಅವರ ಸಂಪುಟದ ಆರೋಗ್ಯ ಸಚಿವ ಮ್ಯಾಟಿ ಹಾನ್‍ಕಾಕ್ ಅವರಿಗೂ ಕೋವಿಡ್-19 ಇರುವುದು ಖಚಿತಪಟ್ಟಿದೆ. ಈಗಾಗಲೇ ಕೆನಡಾ ಪ್ರಧಾನಿ ಮತ್ತು ಅವರ ಪತ್ನಿ, ಹಾಲಿವುಡ್‍ನ ಖ್ಯಾತ ನಟರಾದ ಟಾಮ್ ಹಾಂಕ್ಸ್ ಮತ್ತು ಅವರ ಪತ್ನಿ ನಟಿ ರೀಟಾ ವಿಲ್ಸನ್, ಇಂಗ್ಲಿಷ್ ನಟ ಇದ್ರಿಬ್ ಅವರಿಗೂ ಕೊರೊನಾ ಸೋಂಕು ಕಾಟ ಕೊಟ್ಟಿದೆ.