Breaking News

ನಂಗೆ ಕಾಲಲ್ಲೆಲ್ಲ ಏನೋ ಒಂಥರಾ ಫೀಲಿಂಗ್​.’ ಎಂದು ಹೇಳ್ತಾ ಇರೋ ಮಹಿಳೆಯ ಕೇಸ್ ಈಗ ವೈದ್ಯಲೋಕದ ಅಚ್ಚರಿ!

Spread the love

ಬ್ರೂಸೆಲ್ಲಸ್​: ವೈದ್ಯಲೋಕದ ಅಚ್ಚರಿಗಳ ಪೈಕಿ ಇದೂ ಒಂದು. ಬೆಲ್ಜಿಯಂನ ಪ್ರಜೆಯಾದ ಆಕೆ ವಿವಾಹಿತ ಮಹಿಳೆ. ಫಾರ್ಮಸಿಯೊಂದರಲ್ಲಿ ಉದ್ಯೋಗಿ. ಮಾದಕ ವ್ಯಸನ ಅಥವಾ ಮದ್ಯಪಾನ ಮುಂತಾದ ಯಾವುದೇ ದುರಭ್ಯಾಸಗಳಿಲ್ಲ. ಆದರೂ ಆಕೆಯ ಭಾವನೆ ಮತ್ತು ನಡವಳಿಕೆಯೇ ವಿಚಿತ್ರವಾದುದು!

ಈ ಮಹಿಳೆಗೆ 54 ವರ್ಷ ವಯಸ್ಸು. ಅದೊಂದು ದಿನ ಆಕೆಯ ಸಹೋದರ ಸದ್ದಿಲ್ಲದೆ ಆಕೆಯ ಬಳಿ ಬಂದು ನಿಂತ. ಆಕೆಯ ನಡವಳಿಕೆ ಕಂಡು ಬೆಚ್ಚಿಬಿದ್ದ! ಆಕೆ ನಿಂತಲ್ಲೇ ಕಾಲು ಕೆರೆಯುತ್ತ, ಕತ್ತು ಮೇಲೆ ಕೆಳಗೆ ಮಾಡುತ್ತ ವಿಚಿತ್ರ ಸದ್ದು ಹೊರಡಿಸುತ್ತಿದ್ದಳು. ಸ್ವಲ್ಪ ಸುಧಾರಿಸಿದ ಕೂಡಲೆ ಆಕೆಯನ್ನು ಆತ ಸಮೀಪದ ಆಸ್ಪತ್ರೆಗೆ ಕರೆದೊಯ್ದ. ಅಲ್ಲಿ ಡಾಕ್ಟರ್ ಆರೋಗ್ಯ ತಪಾಸಣೆ ನಡೆಸಿದರು.

ಸ್ಮಾರ್ಟ್​ಫೋನ್ ಕಳೆದುಕೊಂಡವರ ತುರ್ತು ಗಮನಕ್ಕೆ.

ಬಳಿಕ ಸಮಾಲೋಚನೆ ಸಮಯದಲ್ಲಿ ಆಕೆ ಡಾಕ್ಟರ್ ಬಳಿ ಹೇಳಿದ್ದಿಷ್ಟು- ನಾನು ಮನುಷ್ಯ ಜೀವಿ ಅಂತ ಅನ್ನಿಸ್ತಾ ಇಲ್ಲ.

ನಾನು ಕೋಳಿ. ಅದಕ್ಕೆ ಕೋಳಿ ತರ ಕೂಗ್ತೇನೆ. ಕೋಳಿಗಳ ಕಾಲುಗಳಲ್ಲಿನ ನಡುಕದಂತೆಯೇ ನನ್ನ ಕಾಲುಗಳೂ ನಡುಗುತ್ತವೆ. ಅದೊಂಥರಾ ಫೀಲಿಂಗ್​.. ಎಂದು ಭಯಾನಕ ಅನುಭವವನ್ನು ಬಿಚ್ಚಿಟ್ಟಳು ಮಹಿಳೆ. ಅದುವರೆಗೂ ಆಕೆ ಈ ವರ್ತನೆಯನ್ನು ಬೇರೆಯವರಿಂದ ಮುಚ್ಚಿಟ್ಟಿದ್ದಳು!

ಇದ್ದಕ್ಕಿದ್ದಂತೆ ಉಂಟಾಗು ಈ ವರ್ತನೆ ಮನಸ್ಸಿಗೆ ಸಂಬಂಧಿಸಿದ್ದು ಎಂಬುದು ವೈದ್ಯಲೋಕದ ಅಭಿಮತ. ಇದನ್ನು ಝೂವಾಂತ್ರೋಪಿ ಎನ್ನುತ್ತಾರೆ. ಕೋಳಿ ರೀತಿ ವರ್ತಿಸಿದ ಬಳಿಕ ಮಹಿಳೆ ಮೂರ್ಛೆ ಹೋಗುತ್ತಾಳೆ. ಕೆಯು ಲೆಯುವೆನ್​ ಸಂಶೋಧಕರು ಈ ಕೇಸ್​ನ ಅಧ್ಯಯನ ನಡೆಸಿದ್ದು, ಮಿದುಳಿನ ಸಮಸ್ಯೆಯೂ ಆಗಿರಬಹುದು ಎಂದು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ಅಧ್ಯಯನ ವರದಿ Tijdschrift voor Psychiatrie journal ನಲ್ಲಿ ಪ್ರಕಟವಾಗಿದೆ. (ಏಜೆನ್ಸೀಸ್​)

ಆಗಸ್ಟ್​ 31ರ ನಂತರ ಲೋನ್​ ಮೊರಟೋರಿಯಂ ಅಗತ್ಯವಿಲ್ಲ ಎನ್ನುತ್ತಿದ್ದಾರೆ ಬ್ಯಾಂಕರ್​​ಗಳು


Spread the love

About Laxminews 24x7

Check Also

ಮಹಿಳೆಯರನ್ನು ನಿಂದಿಸುವುದೇ ಬಿಜೆಪಿಗರ ಕೆಲಸ: ಸಚಿವೆ ಹೆಬ್ಬಾಳಕರ

Spread the love ಮಹಿಳೆಯರನ್ನು ನಿಂದಿಸುವುದೇ ಬಿಜೆಪಿಗರ ಕೆಲಸ: ಸಚಿವೆ ಹೆಬ್ಬಾಳಕರ ಎಂಎಲ್ಸಿ ರವಿಕುಮಾರ್ ವಿರುದ್ಧ ಲಕ್ಷ್ಮೀ ಹೆಬ್ಬಾಳಕರ್ ವಾಗ್ದಾಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ