Breaking News

Uncategorized

ರೇಣುಕಾ ಯಲ್ಲಮ್ಮದೇವಿ ಸೇರಿದಂತೆ ಮೂರು ದೇವಾಲಯಗಳಿಗೆ ಜುಲೈ 31ರ ತನಕ ಭಕ್ತರ ಪ್ರವೇಶ ನಿಷೇಧಿಸಲಾಗಿದೆ. ಕೊರೊನಾ ವೈರಸ್ ಸೋಂಕಿನ ಭೀತಿ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲಾಡಳಿತ ಈ ಆದೇಶ ನೀಡಿದೆ.

ಬೆಳಗಾವಿ, ಜೂನ್ 30 : ಸವದತ್ತಿ ರೇಣುಕಾ ಯಲ್ಲಮ್ಮದೇವಿ ಸೇರಿದಂತೆ ಮೂರು ದೇವಾಲಯಗಳಿಗೆ ಜುಲೈ 31ರ ತನಕ ಭಕ್ತರ ಪ್ರವೇಶ ನಿಷೇಧಿಸಲಾಗಿದೆ. ಕೊರೊನಾ ವೈರಸ್ ಸೋಂಕಿನ ಭೀತಿ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲಾಡಳಿತ ಈ ಆದೇಶ ನೀಡಿದೆ. ಬೆಳಗಾವಿ ಜಿಲ್ಲಾಧಿಕಾರಿ ಡಾ. ಎಸ್. ಬಿ. ಬೊಮ್ಮನಹಳ್ಳಿ ಈ ಕುರಿತು ಆದೇಶ ಹೊರಡಿಸಿದ್ದಾರೆ. ಕೊರೊನಾ ಸೋಂಕು ಹರಡುವ ಆತಂಕ ಮತ್ತು ಭಕ್ತರ ಆರೋಗ್ಯದ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಸವದತ್ತಿ …

Read More »

ಎಂ ಜಿ ಹಿರೇಮಠ ಅವರನ್ನು ಬೆಳಗಾವಿ ಜಿಲ್ಲಾಧಿಕಾರಿಯನ್ನಾಗಿ

ಬೆಳಗಾವಿ-ಬೆಳಗಾವಿ ಜಿಲ್ಲಾಧಿಕಾರಿ ಎಸ್ ಬಿ ಬೊಮ್ಮನಹಳ್ಳಿ ಅವರು  ಇಂದು  ಮಂಗಳವಾರ ಸೇವಾ ನಿವೃತ್ತಿಹೊಂದಲಿದ್ದು,ಎಂ ಜಿ ಹಿರೇಮಠ ಅವರನ್ನು ಬೆಳಗಾವಿ ಜಿಲ್ಲಾಧಿಕಾರಿಯನ್ನಾಗಿ ಬೆಳಗಾವಿ-ಬೆಳಗಾವಿ ಜಿಲ್ಲಾಧಿಕಾರಿ ಎಸ್ ಬಿ ಬೊಮ್ಮನಹಳ್ಳಿ ಅವರು ನಾಳೆ ಮಂಗಳವಾರ ಸೇವಾ ನಿವೃತ್ತಿಹೊಂದಲಿದ್ದು,ಎಂ ಜಿ ಹಿರೇಮಠ ಅವರನ್ನು ಬೆಳಗಾವಿ ಜಿಲ್ಲಾಧಿಕಾರಿಯನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂ ಜಿ ಹಿರೇಮಠ ಅವರು ಗದಗ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು ಇವರು ಮೂಲತಹ ಕೆಕೆ ಕೊಪ್ಪ ಗ್ರಾಮದವರು ಎಂದು ತಿಳಿದು ಬಂದಿದೆ. …

Read More »

ಪೆಟ್ರೋಲ್, ಡಿಸೆಲ್ ಬೆಲೆ ಏರಿಕೆ ಖಂಡಿಸಿಕಾಂಗ್ರೆಸ್ನಡೆಸಿರುವ ಪ್ರತಿಭಟನೆಗೆ ರಮೇಶ್ ಜಾರಕಿಹೊಳಿ ವ್ಯಂಗ್ಯವಾಗಿಡಿದ್ದಾರೆ.

ಬೆಳಗಾವಿ:  ಪೆಟ್ರೋಲ್, ಡಿಸೆಲ್ ಬೆಲೆ ಏರಿಕೆ ಖಂಡಿಸಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನಾಯಕರು ನಡೆಸಿರುವ ಪ್ರತಿಭಟನೆಗೆ ಸಚಿವ ರಮೇಶ್ ಜಾರಕಿಹೊಳಿ ವ್ಯಂಗ್ಯವಾಗಿಡಿದ್ದಾರೆ. ನಾವು ಬದುಕಿದ್ದೆವೆ ಎನ್ನುವುದನ್ನು ವಿರೋಧ ಪಕ್ಷಗಳು ತೋರಿಸುತ್ತಿದ್ದಾರೆ ಎಂದಿದ್ದಾರೆ. ಇಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷಗಳು ತಮ್ಮ ಕೆಲಸವನ್ನು ಮಾಡಿತ್ತಿವೆ. ನಾವು ಸಹ ಬದುಕಿದ್ದೆವೆ ಎಂಬುವುದನ್ನು ತೋರಿಸುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿ ನಾನು ಏನು ಮಾಡಿದ್ದೆನೆ ಎಂಬುವುದು ಜನರಿಗೆ ಗೊತ್ತಿದೆ ಎಂದಿದ್ದಾರೆ. ಕೇಂದ್ರ ಸರ್ಕಾರ ಶೀಘ್ರದಲ್ಲಿ ಬಡವರ …

Read More »

ಬೆಂಗಳೂರಿನಲ್ಲಿ ಕೊರೊನಾ ಕಂಟ್ರೋಲ್‍ಗೆ 2 ಟಾಸ್ಕ್ ಫೋರ್ಸ್ ರಚನೆ

ಬೆಂಗಳೂರು : ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣ ಸಂಬಂಧ ಸರ್ಕಾರ ಎರಡು ಹೊಸ ಕಾರ್ಯತಂಡಗಳನ್ನು ರಚಿಸಿ ಆದೇಶ ಹೊರಡಿಸಿದೆ. ಕೋವಿಡ್ 19 ರೋಗಿಗಳ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಮತ್ತು ಚಿಕಿತ್ಸೆ ವ್ಯವಸ್ಥೆ ಮಾಡಲು ಎರಡು ಹೊಸ ಕಾರ್ಯತಂಡವನ್ನು ರಚಿಸಿ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಆದೇಶ ಹೊರಡಿಸಿದ್ದಾರೆ. ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಜೋಡಿಸಲಾದ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಮತ್ತು ಚಿಕಿತ್ಸೆಯ ವ್ಯವಸ್ಥೆ ಮತ್ತು ಕೋವಿಡ್ ಆರೋಗ್ಯ ಕೇಂದ್ರಗಳಿಗೆ ವೈದ್ಯಕೀಯ/ಅರೆ ವೈದ್ಯಕೀಯ ಸಿಬ್ಬಂದಿ …

Read More »

ಕಳೆದ 21 ದಿನಗಳಿಂದ ಏರುಗತಿಯಲ್ಲೇ ಇದ್ದ ಪೆಟ್ರೋಲ್ ಮತ್ತು ಡೀಸೆಲ್ ದರ ಭಾನುವಾರ ಬಿಡುವು ನೀಡಿತ್ತು. ಭಾನುವಾರ ದರ ಪರಿಷ್ಕರಣೆ ಆಗದ ಕಾರಣ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ವ್ಯತ್ಯಾಸವಾಗಿರಲಿಲ್ಲ.

ನವದೆಹಲಿ: ಕಳೆದ 21 ದಿನಗಳಿಂದ ಏರುಗತಿಯಲ್ಲೇ ಇದ್ದ ಪೆಟ್ರೋಲ್ ಮತ್ತು ಡೀಸೆಲ್ ದರ ಭಾನುವಾರ ಬಿಡುವು ನೀಡಿತ್ತು. ಭಾನುವಾರ ದರ ಪರಿಷ್ಕರಣೆ ಆಗದ ಕಾರಣ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ವ್ಯತ್ಯಾಸವಾಗಿರಲಿಲ್ಲ. ಸೋಮವಾರ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ. ಪೆಟ್ರೋಲ್ ಬೆಲೆ ಲೀಟರ್ ಗೆ 5 ಪೈಸೆ ಮತ್ತು ಡೀಸೆಲ್ ಬೆಲೆ ಲೀಟರ್ ಗೆ 13 ಪೈಸೆ ಜಾಸ್ತಿಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಲೀಟರ್ಗೆ …

Read More »

ಬೇಡಿಕೆಗಳನ್ನ ಇಡೇರಿಸದಿದ್ದರೆ 42 ಸಾವಿರ ಆಶಾ ಕಾರ್ಯಕರ್ತೆಯರು ಸಾಮೂಹಿಕ ರಾಜೀನಾಮೆಗೆ ನಿರ್ಧಾರ

ಬೆಂಗಳೂರು: ಮಹಾಮಾರಿ ಕೊರೊನಾ ತನ್ನ ಅಟ್ಟಹಾಸವನ್ನು ಮುಂದುವರಿಸಿದ್ದು, ಕಳೆದ ದಿನ ಬರೋಬ್ಬರಿ 1,267 ಮಂದಿಗೆ ಸೋಂಕು ದೃಢವಾಗಿದೆ. ಈ ಕೊರೊನಾ ಸಮಯದಲ್ಲೇ ಸರ್ಕಾರದ ವಿರುದ್ಧ ಆಶಾ ಕಾರ್ಯಕರ್ತೆಯರು ಹೋರಾಟ ಮಾಡಲು ಮುಂದಾಗಿದ್ದಾರೆ. ಆಶಾ ಕಾರ್ಯಕರ್ತೆಯರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮನವಿ ಪತ್ರ ನೀಡುವ ಹೋರಾಟ ಮಾಡಲು ನಿರ್ಧರಿಸಿದ್ದಾರೆ. ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಮತ್ತು AIUTUC (ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್) ವತಿಯಿಂದ ಹೋರಾಟ …

Read More »

ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಆಶಾ ಕಾರ್ಯಕರ್ತೆಯರು ಸಹ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ.

ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ನಿಯಂತ್ರಣಕ್ಕಾಗಿ ವೈದ್ಯರು ಮತ್ತು ವೈದ್ಯಕೀಯೇತರ ಸಿಬ್ಬಂದಿ ನಿರಂತರವಾಗಿ ಶ್ರಮಿಸುತ್ತಿದ್ದು, ಇವರ ಜೊತೆಗೆ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಆಶಾ ಕಾರ್ಯಕರ್ತೆಯರು ಸಹ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ. ಆದರೆ ತಮ್ಮ ಹಲವು ಕಾಲದ ಬೇಡಿಕೆಗೆ ಸರ್ಕಾರ ಈವರೆಗೆ ಸ್ಪಂದಿಸಿಲ್ಲ ಎಂಬ ಅಳಲು ಆಶಾ ಕಾರ್ಯಕರ್ತೆಯರದ್ದಾಗಿದ್ದು, ಹೀಗಾಗಿ ಜೂನ್ 30ರ ನಾಳೆ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಒಂದೊಮ್ಮೆ ಸರ್ಕಾರ ಪ್ರತಿಭಟನೆ ಬಳಿಕವೂ ತಮ್ಮ ಬೇಡಿಕೆಗೆ …

Read More »

ಕೋವಿಡ್ 19 ವಿರುದ್ಧ ಸೆಣಸಲು ಭಾರತೀಯ ವಿಮಾ ನಿಯಂತ್ರಣ ಪ್ರಾಧಿಕಾರ (ಐಆರ್‌ಡಿಎಐ) ನಿರ್ಧರಿಸಿದೆ.

ನವದೆಹಲಿ: ಜಗತ್ತಿನ ಎಲ್ಲ ಕಡೆ ವ್ಯಾಪಕವಾಗಿ ಹರಡಿರುವ ಕೋವಿಡ್ 19 ವಿರುದ್ಧ ಸೆಣಸಲು ಭಾರತೀಯ ವಿಮಾ ನಿಯಂತ್ರಣ ಪ್ರಾಧಿಕಾರ (ಐಆರ್‌ಡಿಎಐ) ನಿರ್ಧರಿಸಿದೆ. ಅದು ಎಲ್ಲ ವಿಮಾ ಕಂಪನಿಗಳಿಗೆ ಕೋವಿಡ್ 19 ಕವಚ್‌ ವಿಮೆ ಬಿಡುಗಡೆ ಮಾಡುವುದನ್ನು ಕಡ್ಡಾಯಗೊಳಿಸಲಿದೆ. ಈ ರೀತಿಯ ವಿಮೆಗಳು 2021 ಮಾರ್ಚ್‌ 31ರವರೆಗೆ ಮೌಲ್ಯ ಹೊಂದಿರುತ್ತವೆ. ಈ ವಿಮೆಯಲ್ಲಿ ಎರಡು ರೀತಿಯಿರುತ್ತದೆ. ಮೂಲ ಭೂತವ್ಯಾಪ್ತಿ ಹೊಂದಿರುವ ಒಂದು ಕಡ್ಡಾಯ ವಿಮೆ, ಇನ್ನೊಂದು ಐಚ್ಛಿಕ ವಿಮೆ. ಕಡ್ಡಾಯ ವಿಮೆ …

Read More »

ಪತ್ನಿಯ ಸೀಮಂತ ಸಂಭ್ರಮದಲ್ಲಿ ‘ರಾಧಾರಮಣ’ ಖ್ಯಾತಿಯ ನಟ……….

ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ರಾಧಾ ರಮಣ’ ಧಾರಾವಾಹಿಯ ನಟ ಸ್ಕಂದ ಅಶೋಕ್ ತಂದೆಯಾಗುತ್ತಿದ್ದು, ತಮ್ಮ ಪತ್ನಿಯ ಸೀಮಂತ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನೆರವೇರಿಸಿದ್ದಾರೆ. ಸ್ಕಂದ ಪತ್ನಿ ಶಿಖಾ ಪ್ರಸಾದ್ ಎರಡು ತಿಂಗಳ ಹಿಂದೆಯಷ್ಟೆ ತಾವು ಗರ್ಭಿಣಿ ಎಂಬ ವಿಚಾರವನ್ನು ಇನ್‍ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದರು. ಇದೀಗ ಸ್ಕಂದ ತಮ್ಮ ಪತ್ನಿಯ ಸೀಮಂತ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನೆರೆವೇರಿಸಿದ್ದಾರೆ. ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕುಟುಂಬದರು ಮತ್ತು ಆಪ್ತರು ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಶಿಖಾ ಪ್ರಸಾದ್‍ಗೆ ಆಶೀರ್ವಾದಿಸಿದ್ದಾರೆ. …

Read More »

ನಾನು ಬಾಯ್ಸ್ ರೀತಿಯ ಹೇರ್ ಕಟ್ ಮಾಡಿಸಿದ್ದೇನೆ ಹೊರತು ಖಿನ್ನತೆ ಒಳಗಾಗಿ ಕೂದಲನ್ನು ಕತ್ತರಿಸಿಕೊಂಡಿಲ್ಲ :ಸಿಂಧು ಲೋಕನಾಥ್

ಬೆಂಗಳೂರು: ನಾನು ಬಾಯ್ಸ್ ರೀತಿಯ ಹೇರ್ ಕಟ್ ಮಾಡಿಸಿದ್ದೇನೆ ಹೊರತು ಖಿನ್ನತೆ ಒಳಗಾಗಿ ಕೂದಲನ್ನು ಕತ್ತರಿಸಿಕೊಂಡಿಲ್ಲ ಎಂದು ನಟಿ ಸಿಂಧು ಲೋಕನಾಥ್ ಅವರು ಹೇಳಿದ್ದಾರೆ. ಇತ್ತೀಚೆಗೆ ಸಿಂಧು ಲೋಕನಾಥ್ ಅವರು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಬಾಯ್ ಹೇರ್ ಕಟ್ ಮಾಡಿಸಿಕೊಂಡಿರುವ ಫೋಟೋ ಹಾಕಿ ಕೆಲ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದರು. ಇದನ್ನು ನೋಡಿದ ಕೆಲವರು ಸಿಂಧು ಖಿನ್ನತೆಗೆ ಒಳಗಾಗಿದ್ದಾರೆ. ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು. ಈಗ ಈ ವಿಚಾರವಾಗಿ …

Read More »