ಬೆಳಗಾವಿ: ಹುಲಿ ಉಗುರುಗಳು ಮತ್ತು ಆನೆ ದಂತದಿಂದ ಮಾಡಿದ ಕಡಗಗಳನ್ನು ಮಾರುವ ಉದ್ದೇಶದಿಂದ ತಮ್ಮ ಬಳಿ ಇಟ್ಟುಕೊಂಡಿದ್ದ ಆರೋಪದ ಮೇಲೆ ವ್ಯಕ್ತಿಯನ್ನು ಅರಣ್ಯ ಸಂಚಾರಿ ದಳದವರು ಬಂಧಿಸಿದ್ದಾರೆ. ನಗರದ ಶಹಾಪುರದ ಕಾಕೇರಿ ಚೌಕ್ ನಿವಾಸಿ ಶ್ರೀರಾಮ ಅರ್ಜುನಸಾ ಬಾಕಳೆ (46) ಬಂಧಿತ. ಅವರಿಂದ 2 ಕಡಗ ಹಾಗೂ 5 ಹುಲಿ ಉಗುರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೆಳಗಾವಿ ಅರಣ್ಯ ಸಂಚಾರಿ ದಳದ ಪಿಎಸ್‌ಐ ರೋಹಿಣಿ ಪಾಟೀಲ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.ಆರೋಪಿ ವಿರುದ್ಧ …
Read More »ಕೇದನೂರು ಗ್ರಾಮದಲ್ಲಿ ಯುವಕನೊಬ್ಬ ನೇಣಿಗೆ ಶರಣಾದ ಘಟನೆ
ಬೆಳಗಾವಿ : ತಾಲ್ಲೂಕಿನ ಕೇದನೂರು ಗ್ರಾಮದಲ್ಲಿ ಯುವಕನೊಬ್ಬ ನೇಣಿಗೆ ಶರಣಾದ ಘಟನೆ ಮಂಗಳವಾರ ಬೆಳ್ಳಿಗೆ ನಡೆದಿದೆ. ಸಚಿನ ಶೆಟ್ಟು ಲೋಹಾರ (22) ಆತ್ಮಹತ್ಯೆ ಮಾಡಿಕೊಂಡ ಯುವಕ. ಕೆಲಸವಿಲ್ಲದೆ ತಿರುಗಾಡುತ್ತಿದ್ದ ಯುವಕ ಮಾನಸಿಕವಾಗಿ ಕುಗ್ಗಿದ್ದನು. ಇದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಕಾಕತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Read More »ಮುಷ್ಕರದ ನಡುವೆಯು ರಸ್ತೆಗಿಳಿದ 943 ಬಸ್‍ಗಳು
ಬೆಂಗಳೂರು, ಡಿ.14- ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಸಾರಿಗೆ ಸಂಸ್ಥೆಗಳ ನೌಕರರು ಮುಷ್ಕರ ಮುಂದುವರೆಸಿರುವ ನಡುವೆಯೇ ಹಂತ ಹಂತವಾಗಿ ಸಾರಿಗೆ ಸಂಸ್ಥೆಗಳ ಬಸ್ ಸಂಚಾರ ಆರಂಭವಾಗಿವೆ. ಮಧ್ಯಾಹ್ನ 12 ಗಂಟೆ ವೇಳೆಗೆ ರಾಜ್ಯದಲ್ಲಿ ನಾಲ್ಕು ಸಾರಿಗೆ ಸಂಸ್ಥೆಗಳಿಂದ 943 ಬಸ್‍ಗಳ ಸಂಚಾರ ಪ್ರಾರಂಭವಾಗಿತ್ತು ಎಂದು ಸಂಸ್ಥೆಗಳ ಮೂಲಗಳು ತಿಳಿಸಿವೆ. ಕೆಎಸ್‌ಆರ್‌ಟಿಸಿ 234, ಬಿಎಂಟಿಸಿ 182, ಈಶಾನ್ಯ ಕೆಎಸ್‌ಆರ್‌ಟಿಸಿ 286, ವಾಯುವ್ಯಸಾರಿಗೆ ಸಂಸ್ಥೆಯ 241 ಬಸ್‍ಗಳು ವಿವಿಧ ಸ್ಥಳಗಳಿಂದ ಸಂಚಾರ ಆರಂಭಿಸಿದ್ದವು. …
Read More »ಪೀರನವಾಡಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿಯೂ ನರೇಗಾ ಮುಂದುವರಿಸುವಂತೆ ಗ್ರಾ.ಕೂ.ಸ .ಆಗ್ರಹ
ಪೀರನವಾಡಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿಯೂ ನರೇಗಾ ಮುಂದುವರಿಸುವಂತೆ ಗ್ರಾಕೂಸ ಆಗ್ರಹ ಗ್ರಾಮ ಪಂಚಾಯತಿಗಳನ್ನು ಮೇಲ್ದರ್ಜೆಗೊಳಿಸಿರುವ ಪಟ್ಟಣ ಪಂಚಾಯತಿಗಳಲ್ಲಿಯೂ ನರೇಗಾ ಉದ್ಯೋಗ ಖಾತ್ರಿಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ವತಿಯಿಂದ ಬೆಳಗಾವಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಸೋಮವಾರ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೂರಾರು ಪದಾಧಿಕಾರಿಗಳು ನೂತನವಾಗಿ ಘೋಷಣೆ ಆಗಿರುವ ಪೀರನವಾಡಿ ಪಟ್ಟಣ ಪಂಚಾಯತಿಯಲ್ಲಿಯೂ ನರೇಗಾ ಉದ್ಯೋಗ ಖಾತ್ರಿ ಯೋಜನೆಯನ್ನು ಆರಂಭಿಸುವಂತೆ ಆಗ್ರಹಿಸಿ …
Read More »ವಾಲ್ಮೀಕಿ ಜನಾಂಗಕ್ಕೆ ಮೀಸಲಾತಿ ಹೆಚ್ಚಳಕ್ಕೆ ಸರ್ಕಾರ ಸ್ಪಂದಿಸಿ, ಉಪಸಮಿತಿ ರಚಿಸಿನನ್ನ ಅಧ್ಯಕ್ಷರನ್ನಾಗಿ ನೇಮಿಸಿದೆ’ :ಶ್ರೀರಾಮುಲು
ಬೆಂಗಳೂರು : ‘ ವಾಲ್ಮೀಕಿ ಜನಾಂಗಕ್ಕೆ ಮೀಸಲಾತಿ ಹೆಚ್ಚಳಕ್ಕೆ ಸರ್ಕಾರ ಸ್ಪಂದಿಸಿ, ಉಪಸಮಿತಿ ರಚಿಸಿದೆ. ಅದಕ್ಕೆ ನನ್ನ ಅಧ್ಯಕ್ಷರನ್ನಾಗಿ ನೇಮಿಸಿದೆ’ ಅಂತಾ ಸಚಿವ ಶ್ರೀರಾಮುಲು ಹೇಳಿದ್ದಾರೆ. ಇಲ್ಲಿನ ಕುಮಾರ ಕೃಪೆ ಗೃಹದಲ್ಲಿ ನಡೆದ ಮೂರನೇ ವಷ೯ದ ಶ್ರೀಮಹಷಿ೯ ವಾಲ್ಮೀಕಿ ಜಾತ್ರೆಯ ಪೂವ೯ಭಾವಿ ಸಭೆಯಲ್ಲಿ ಮಾತನಾಡಿದರು. ‘ವಾಲ್ಮೀಕಿ ಜನಾಂಗದವರು ಮೀಸಲಾತಿ ಹೆಚ್ಚಳದ ಬಗ್ಗೆ ಆತಂಕಕ್ಕೆ ಒಳಗಾಗಬಾರದು. ಸಮುದಾಯದ ಬೇಡಿಕೆಗೆ ನಾವೆಲ್ಲರೂ ಒಟ್ಟಾಗಿ ಶುಭ ಸುದ್ದಿಯನ್ನು ತಿಳಿಸುತ್ತೇವೆ. ಈಗಾಗಲೇ ಈ ವಿಚಾರದಲ್ಲಿ ನಾವು …
Read More »ಕೊಲೆ ಆರೋಪಿಯನ್ನೇ ಮುಗಿಸಲು ಸ್ಕೆಚ್ ಹಾಕಿದ್ರಾ ಮಾಜಿ ಸಚಿವರ ತಂಡ?
ಹುಬ್ಬಳ್ಳಿ: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದ ಸಿಬಿಐ ತನಿಖೆ ಮುಂದುವರಿದಿದೆ. ತನಿಖೆಯಲ್ಲಿ ಬೆಚ್ಚಿಬೀಳಿಸುವ ವಿಚಾರಗಳು ಬಯಲಿಗೆ ಬರುತ್ತಿವೆ. ಕೊಲೆ ಆರೋಪದ ಮೇಲೆ ಜೈಲಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯವಾಗಿರುವ ಕೊಲೆ ಆರೋಪಿಯನ್ನೇ ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ಸಿಬಿಐ ತನಿಖೆ ವೇಳೆ ಈ ರಣರೋಚಕ ವಿಚಾರ ಬಹಿರಂಗ ಗೊಂಡಿದೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುತ್ತಿದ್ದಂತೆ ಕೊಲೆ ಆರೋಪಿ …
Read More »ಲಿಖಿತ ಭರವಸೆ ತಲುಪಿಸುವವರೆಗೂ ಮುಷ್ಕರ ಹಿಂಪಡೆಯಲ್ಲ: ಕೋಡಿಹಳ್ಳಿ ಚಂದ್ರಶೇಖರ್
ಬೆಂಗಳೂರು(ಡಿ. 14): ಸಾರಿಗೆ ನೌಕರರ ಮುಷ್ಕರ ನಾಟಕೀಯ ತಿರುವು ಪಡೆಯುತ್ತಲೇ ಇದೆ. ಇವತ್ತು ಸಾರಿಗೆ ನೌಕರರು ಸೇವೆಗೆ ಹಾಜರಾಗುತ್ತಿರುವಂತೆಯೇ ಇದೀಗ ಮುಷ್ಕರ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಮುಷ್ಕರ ಹಿಂಪಡೆಯುತ್ತೇವೆ ಎಂದು ಹೇಳಿದ್ದ ಕೋಡಿಹಳ್ಳಿ ಚಂದ್ರಶೇಖರ್ ಇದೀಗ ಹೊಸ ಷರತ್ತು ಮುಂದಿಟ್ಟಿದ್ದಾರೆ. ಸಾರಿಗೆ ನೌಕರರು ಮುಂದಿಟ್ಟಿದ್ದ 10 ಬೇಡಿಕೆಗಳ ಪೈಕಿ ಸರ್ಕಾರ ಒಂಬತ್ತನ್ನ ಈಡೇರಿಸಲು ಒಪ್ಪಿದೆ. ಆದರೆ, ಇದು ಬಾಯಿ ಮಾತಿನದ್ದಾಗದೆ ಲಿಖಿತ ರೂಪದಲ್ಲಿರಲಿ. ಸರ್ಕಾರದ ಕಡೆಯಿಂದ …
Read More »ಸಾರಿಗೆ ನೌಕರರ ಪ್ರತಿಭಟನೆ ಗೊಂದಲ, ಇಂದೂ ಕೂಡ ಪ್ರಯಾಣಿಕರ ಪರದಾಟ
ಬೆಂಗಳೂರು, ಡಿ.14- ಸಾರಿಗೆ ನೌಕರರ ಮುಷ್ಕರ ವಾಪಸ್ ಪಡೆದರೂ ನಿನ್ನೆ ರಾತ್ರಿ ಉಂಟಾದ ಗೊಂದಲ ಹಾಗೂ ಬೆಳಗ್ಗೆ ನೌಕರರ ಸಂಘಟನೆಗಳು ವಿಳಂಬವಾಗಿ ತೆಗೆದುಕೊಂಡ ನಿರ್ಧಾರದಿಂದ ಇಂದೂ ಮಧ್ಯಾಹ್ನದವರೆಗೂ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ನಾಲ್ಕು ದಿನಗಳಿಂದ ಮುಷ್ಕರ ನಡೆಸುತ್ತಿದ್ದ ಸಾರಿಗೆ ನೌಕರರು ಸರ್ಕಾರದೊಂದಿಗೆ ನಡೆಸಿದ ಮಾತುಕತೆ ಫಲ ನೀಡಿದೆ ಎಂದು ಮುಷ್ಕರ ವಾಪಸ್ ಪಡೆಯುತ್ತಿರುವುದಾಗಿ ಸಂಜೆ ಘೋಷಿಸಿದ್ದರು. ಆದರೆ, ರಾತ್ರಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ …
Read More »ಅನೈತಿಕ ಸಂಬಂಧ ; ಬೆಳಗಾವಿಯಲ್ಲಿ ಇಬ್ಬರು ಏಕಕಾಲಕ್ಕೆ ನೇಣಿಗೆ ಶರಣು
ಬೆಳಗಾವಿ : ಅನೈತಿಕ ಸಂಬಂಧ ಹೊಂದಿದ್ದವರಿಗೆ ಮನೆಯವರು ಹೇಳಿದ ಬುದ್ಧಿವಾದದಿಂದ ಬೇಸರಗೊಂಡು ಏಕಕಾಲಕ್ಕೆ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಬೆನ್ನಾಳಿ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ. ಶಿವಾಜಿ ಗಾಡಿವಡ್ಡರ್ (31), ಜಯಶ್ರೀ ಗಾಡಿವಡ್ಡರ್ (35) ಆತ್ಮಹತ್ಯೆಗೆ ಶರಣಾದವರು. ಶಿವಾಜಿ ಜೋಗ್ಯಾನಟ್ಟಿ ಸಮೀಪದಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡಿದ್ದು, ಜಯಶ್ರೀ ಎಂಬ ಮಹಿಳೆ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಇಬ್ಬರು ಅಕ್ಕಪಕ್ಕದ ಮನೆಯವರಾಗಿದ್ದು, ಅನೈತಿಕ ಸಂಬಂಧ ಹೊಂದಿದ್ದರು. ಈ ವಿಷಯ ಮನೆಯವರಿಗೆ ಗೊತ್ತಾಗಿದೆ. …
Read More »ಭ್ರಷ್ಟಾಚಾರ ನಡೆದಿರುವ ಬಗ್ಗೆ ಸರ್ವೇಯಾಗಿದ್ದು, B.S.Y.ಸರ್ಕಾರಕ್ಕೆ ಮೊದಲ ಸ್ಥಾನ: ಸತೀಶ್ ಜಾರಕಿಹೊಳಿ
ಸವದತ್ತಿ: ‘ ದೇಶದಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸರ್ವೇಯಾಗಿದ್ದು, ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರಕ್ಕೆ ಮೊದಲ ಸ್ಥಾನ ಇದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು. ಇಲ್ಲಿನ ಒಡೆಯರ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಾಗೂ ಗ್ರಾಮ ಪಂಚಾಯಿತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ‘ ಪಕ್ಷವೆಂದ್ರೆ ಗುಂಪುಗಾರಿಕೆ ಎನ್ನುವುದು ಸಹಜ. ಸವದತ್ತಿ ಅಷ್ಟೇ ಅಲ್ಲ, ನಮ್ಮ ಪಕ್ಷದಲ್ಲಿಯೂ ಇದೆ, ಎಲ್ಲ ಪಕ್ಷದಲ್ಲಿಯೂ …
Read More »
Laxmi News 24×7