ಹುಬ್ಬಳ್ಳಿ: ಮಹಿಳೆಯರಿಗೆ ಹೆರಿಗೆ ಅಂದರೇ ಅದು ಪುನರ್ಜನ್ಮವೇ ಸರಿ. ಇನ್ನೊಂದು ಜೀವಕ್ಕೆ ಜನ್ಮ ನೀಡುವ ತಾಯಿ ಅದೆಷ್ಟೋ ನೋವನ್ನು ಅನುಭವಿಸುತ್ತಾಳೆ. ಅಲ್ಲದೇ ತನ್ನ ಹೆರಿಗೆ ತವರು ಮನೆಯಲ್ಲಿಯೇ ಆಗಬೇಕು ಎಂಬುವಂತ ಬಯಕೆ ಪ್ರತಿಯೊಬ್ಬ ತಾಯಿಯಲ್ಲಿಯೂ ಇದ್ದೆ ಇರುತ್ತದೆ. ಆದರೆ ಹುಬ್ಬಳ್ಳಿಯಲ್ಲಿ ರಸ್ತೆ ಬದಿಯಲ್ಲಿಯೇ ತಾಯಿ ಮಗುವಿಗೆ ಜನ್ಮ ನೀಡಿದ್ದಾಳೆ. ಪಂಜಾಬ್ ಮೂಲದ ಮಹಿಳೆಯೊಬ್ಬರು ಲಾಕ್‍ಡೌನ್‍ನಿಂದ ಹುಬ್ಬಳ್ಳಿಯಲ್ಲೇ ಸಿಲುಕಿದ್ದು, ಆಸ್ಪತ್ರೆಗೂ ತೆರಳಲು ಸಾಧ್ಯವಾಗದೆ ರಸ್ತೆ ಬದಿಯಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. …
Read More »ಹುಬ್ಬಳ್ಳಿ: ಕಾರ್ಮಿಕರಿಗೆ ನೀಡುವ ಕಿಟ್ ಕಲಘಟಗಿ ಬಿಜೆಪಿ ಶಾಸಕರ ಕಚೇರಿಯಲ್ಲಿಯೇ ಉಳಿದುಕೊಂಡಿದೆ.
ಹುಬ್ಬಳ್ಳಿ: ಕಾರ್ಮಿಕರಿಗೆ ನೀಡುವ ಕಿಟ್ ಕಲಘಟಗಿ ಬಿಜೆಪಿ ಶಾಸಕರ ಕಚೇರಿಯಲ್ಲಿಯೇ ಉಳಿದುಕೊಂಡಿದೆ. ಅಲ್ಲದೆ ಕಾರ್ಮಿಕರಿಗೆ ಬಿಟ್ಟು ಶಾಸಕ ಸಿ.ಎಂ ನಿಂಬಣ್ಣವರ ಅವರು ಬಿಜೆಪಿ ಕಾರ್ಯಕರ್ತರಿಗೆ ಕಿಟ್ ಕೊಡುತ್ತಾರೆ ಎಂದು ಕಾಂಗ್ರೆಸ್ ಮುಖಂಡರು ದೂರು ಸಲ್ಲಿಸಿದ್ದಾರೆ. ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸಿ.ಎಂ ನಿಂಬಣ್ಣವರಿಂದ ಕಿಟ್ ದುರ್ಬಳಕೆ ಆರೋಪ ಕೇಳಿ ಬಂದಿದೆ. ಕಾರ್ಮಿಕ ಇಲಾಖೆ ನೀಡುವ ಕಿಟ್‍ಗಳನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಗಂಭೀರವಾಗಿ ಆರೋಪಿಸಿದ್ದಾರೆ. …
Read More »ಕಾಮಾಗಾರಿ ವೇಳೆ ಮಣ್ಣು ಕುಸಿತ – ಚರಂಡಿಯಲ್ಲಿ ಸಿಲುಕಿದ ಕಾರ್ಮಿಕ……..
ಹುಬ್ಬಳ್ಳಿ: ಒಳಚರಂಡಿ ಕಾಮಾಗಾರಿ ಮಾಡುತ್ತಿದ್ದಾಗ ಮಣ್ಣು ಕುಸಿದ ಪರಿಣಾಮ ಮಣ್ಣಿನಡಿಯಲ್ಲಿ ಕಾರ್ಮಿಕನೋರ್ವ ಸಿಲುಕಿಕೊಂಡ ಘಟನೆ ಹುಬ್ಬಳ್ಳಿಯ ಬೈಲಪ್ಪನವರ ನಗರದ ನಡೆದಿದೆ. ಕಾರ್ಮಿಕ ಯಲ್ಲಪ್ಪ ಮಣ್ಣಿನಲ್ಲಿ ಸಿಲುಕಿ ಜೀವನ್ಮರಣ ಹೋರಾಟ ನಡೆಸಿದ್ದಾರೆ. ಇಂದು ಬೆಳಗ್ಗೆ ಒಳಚರಂಡಿ ಒಳಗೆ ಇಳಿದು ಯಲ್ಲಪ್ಪ ಕೆಲಸ ಮಾಡುತ್ತಿದ್ದರು. ಈ ವೇಳೆ ಮೇಲಿಂದ ಮಣ್ಣು ಕುಸಿದು ಯಲ್ಲಪ್ಪ ಅವರ ಮೇಲೆ ಬಿದ್ದಿದೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಅವರ ರಕ್ಷಣೆಗೆ ಧಾವಿಸಿದರು. ಆದರೆ ಹೆಚ್ಚಿನ ಪ್ರಮಾಣದಲ್ಲಿ ಮಣ್ಣು …
Read More »ಹುಬ್ಬಳ್ಳಿಯಿಂದ ಉತ್ತರ ಪ್ರದೇಶದ ಬಸ್ತಿಗೆ ಇಂದು ವಿಶೇಷ ರೈಲು……..
ಹುಬ್ಬಳ್ಳಿ: ಧಾರವಾಡ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಕೆಲಸ ಮಾಡುವ ಉತ್ತರ ಪ್ರದೇಶ ಮೂಲದ ಪ್ರವಾಸಿ ಕಾರ್ಮಿಕರನ್ನು ಅವರ ರಾಜ್ಯಕ್ಕೆ ಕಳುಹಿಸಲು ಹುಬ್ಬಳ್ಳಿಯಿಂದ ಉತ್ತರ ಪ್ರದೇಶದ ಬಸ್ತಿಗೆ ಇಂದು ವಿಶೇಷ ರೈಲು ಪ್ರಯಾಣಿಸಿತು. ಶ್ರಮಿಕ ಎಕ್ಸ್‌ಪ್ರೆಸ್ ರೈಲು ಮಧ್ಯಾಹ್ನ 12 ಗಂಟೆಗೆ ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಹೊರಟಿದೆ. ಈ ರೈಲಿನ ಮೂಲಕ 1,443 ಪ್ರಯಾಣಿಕರು ತಮ್ಮ ತಮ್ಮ ತವರಿಗೆ ತೆರಳಿದರು. ಉತ್ತರ ಪ್ರದೇಶಕ್ಕೆ ಹೋಗುತ್ತಿರುವ ಎಲ್ಲ ಪ್ರವಾಸಿ ಪ್ರಯಾಣಿಕರಿಗೆ ಬೆಳಗ್ಗೆ …
Read More »ಹುಬ್ಬಳ್ಳಿಯ ಪಾರ್ಲೆ ಬಿಸ್ಕೆಟ್ ಕಂಪನಿ 53 ಸಾವಿರ ಬಿಸ್ಕೆಟ್ ಪೊಟ್ಟಣಗಳನ್ನು ದಾನವಾಗಿ ನೀಡಿದೆ.
ಹುಬ್ಬಳ್ಳಿ: ಕೊರೊನಾ ವೈರಸ್ ಹಿನ್ನೆಲೆ ಹಲವು ಕಂಪನಿಗಳು ಹಾಗೂ ಧನಿಕರು ಹಲವು ರೀತಿಯಲ್ಲಿ ಸಹಾಯ ಮಾಡುತ್ತಿದ್ದು, ಹುಬ್ಬಳ್ಳಿಯ ಪಾರ್ಲೆ ಬಿಸ್ಕೆಟ್ ಕಂಪನಿ 53 ಸಾವಿರ ಬಿಸ್ಕೆಟ್ ಪೊಟ್ಟಣಗಳನ್ನು ದಾನವಾಗಿ ನೀಡಿದೆ. ಹುಬ್ಬಳ್ಳಿಯ ಗೋಕುಲ ಕೈಗಾರಿಕಾ ಪ್ರದೇಶದಲ್ಲಿರುವ ತಯಾರಿಕಾ ಘಟಕದಲ್ಲಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಕಂಪನಿ ವತಿಯಿಂದ ಸಾಂಕೇತಿಕವಾಗಿ ಬಿಸ್ಕೆಟ್ ಪೊಟ್ಟಣ ನೀಡಲಾಯಿತು. ಒಟ್ಟು 53 ಸಾವಿರ …
Read More »ಬಸ್ ಸಂಚಾರ ಪುನರಾರಂಭಕ್ಕೆ ಹುಬ್ಬಳ್ಳಿ ಸಾರಿಗೆ ವಿಭಾಗದಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ.
ಹುಬ್ಬಳ್ಳಿ: ಬಸ್ ಸಂಚಾರ ಪುನರಾರಂಭಕ್ಕೆ ಹುಬ್ಬಳ್ಳಿ ಸಾರಿಗೆ ವಿಭಾಗದಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ. ಬಸ್ ಸಂಚಾರ ಪುನರಾರಂಭಿಸಲು ರಾಜ್ಯ ಸರ್ಕಾರದಿಂದ ನಿರ್ದೇಶನಗಳು ಬಂದ ನಂತರ ಮಾರ್ಗದರ್ಶಿ ಸೂಚನೆಗಳ ಪ್ರಕಾರ ಎಲ್ಲಾ ಸುರಕ್ಷತಾ ಕ್ರಮಗಳೊಂದಿಗೆ ಬಸ್ಸುಗಳನ್ನು ರಸ್ತೆ ಗಿಳಿಸಲು ಹುಬ್ಬಳ್ಳಿ ಸಾರಿಗೆ ವಿಭಾಗದಲ್ಲಿ ಎಲ್ಲಾ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ವಿಭಾಗದಲ್ಲಿ 2166 ಸಿಬ್ಬಂದಿಗಳಿದ್ದು ಎಲ್ಲರಿಗೂ ಕರ್ತವ್ಯಕ್ಕೆ ಸಿದ್ಧರಾಗಿರುವಂತೆ ಸೂಚಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ್ ತಿಳಿಸಿದ್ದಾರೆ. ಈಗಾಗಲೇ ಹುಬ್ಬಳ್ಳಿ ಹಳೆ ಬಸ್ ನಿಲ್ದಾಣ, …
Read More »ಶ್ರೀ ಜಗದೀಶ್ ಶೆಟ್ಟರ್ ರಾಜ್ಯ ಸಚಿವರ ನೇತೃತ್ವದಲ್ಲಿ ಆಶಾ ಕಾರ್ಯಕರ್ತರಿಗೆ ಸನ್ಮಾನ
ಹುಬ್ಬಳ್ಳಿ: ಮಾನ್ಯ ಶ್ರೀ ಜಗದೀಶ್ ಶೆಟ್ಟರ್ ರಾಜ್ಯ ಸಚಿವರ ನೇತೃತ್ವದಲ್ಲಿ ವಾರ್ಡ್ ನಂಬರ್ 47 ರಲ್ಲಿ ಬರುವ ಸುವಿಧಾ ಅನೆಕ್ಸ್ ಅಪಾರ್ಟ್ಮೆಂಟ್ಸ್ ನಲ್ಲಿ ಆಶಾ ಕಾರ್ಯಕರ್ತರಿಗೆ ಸನ್ಮಾನ ಮಾಡಲಾಯಿತು. ಮತ್ತು ಈ ಕಾರ್ಯಕ್ರಮದಲ್ಲಿ ಅಪಾರ್ಟ್ಮೆಂಟ್ಗಳಿಗೆ ಸ್ಯಾನಿಟೈಸರ್ ಸ್ಟ್ಯಾಂಡ್ ಗಳನ್ನು ವಿತರಿಸಲಾಯಿತು . ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರಾದ ಶ್ರೀ ಮಹೇಂದ್ರ ಕೌತಾಳ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ತೆಂಗಿನಕಾಯಿ ಹಾಗೂ ಹುಡಾ ಅಧ್ಯಕ್ಷರಾದ ನಾಗೇಶ್ ಕಲಬುರ್ಗಿ ಮಲ್ಲಿಕಾರ್ಜುನ್ ಸಹಕಾರ …
Read More »ಹುಬ್ಬಳ್ಳಿ:ಕೋವಿಡ್-19 ಸೋಂಕಿನಿಂದ ಗುಣಮುಖರಾದ ರೋಗಿಗಳು ರಕ್ತ ನೀಡಲು ಒಪ್ಪುತ್ತಿಲ್ಲ.
ಹುಬ್ಬಳ್ಳಿ: ರಾಜ್ಯದಲ್ಲಿ ಪ್ಲಾಸ್ಮಾ ಥೆರಪಿಗೆ ಹುಬ್ಬಳ್ಳಿಯ ವೈದ್ಯಕೀಯ ಶಿಕ್ಷಣ ಸಂಸ್ಥೆಗೆ ಐಸಿಎಂಆರ್ ನಿಂದ ಅನುಮತಿ ನೀಡಲಾಗಿದ್ದು, ಪ್ಲಾಸ್ಮಾ ಥೆರಪಿ ಚಿಕಿತ್ಸೆಗೆ ಕಿಮ್ಸ್ ವೈದ್ಯರು ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಪ್ಲಾಸ್ಮಾ ಥೆರಪಿ ಚಿಕಿತ್ಸೆಗೆ ರಕ್ತವೇ ಸಿಗುತ್ತಿಲ್ಲ. ಕೋವಿಡ್-19 ಸೋಂಕಿನಿಂದ ಗುಣಮುಖರಾದ ರೋಗಿಗಳು ರಕ್ತ ನೀಡಲು ಒಪ್ಪುತ್ತಿಲ್ಲ. ಮೊದಲು ರಕ್ತ ನೀಡಲು ಒಪ್ಪಿಕೊಂಡಿದ್ದ ಕೊರೊನಾ ಸೋಂಕಿನಿಂದ ಗುಣಮುಖರಾದವರು ಈಗ ರಕ್ತ ನೀಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಹೊರ ಜಿಲ್ಲೆಯಲ್ಲಿ ಸೋಂಕಿನಿಂದ ಗುಣಮುಖರಾದವರ ರಕ್ತಕ್ಕಾಗಿ ಕಿಮ್ಸ್ …
Read More »ಸಾರ್ವಜನಿಕವಾಗಿ ಉಗುಳಿ ಸಿಕ್ಕಿಹಾಕಿಕೊಂಡ ಕುಖ್ಯಾತ ರೌಡಿ ಸಲೀಂ……….
ಹುಬ್ಬಳ್ಳಿ: ಕಲಬುರಗಿಯಲ್ಲಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿ ಸಲೀಂ ಬಳ್ಳಾರಿಯನ್ನು ಹುಬ್ಬಳ್ಳಿ ನೇಕಾರ ನಗರದ ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರ ಕೈಗೆ ಸಿಕ್ಕಾಗಲೂ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದ ಸಲೀಂ ಬಳ್ಳಾರಿಯನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಲಬುರಗಿಯಲ್ಲಿ ಕೊಲೆ ಮಾಡಿರುವ ಸಲೀಂ ಬಳ್ಳಾರಿ ತಲೆಮರೆಸಿಕೊಂಡಿದ್ದು, ಲಾಕ್‍ಡೌನ್ ಹಿನ್ನೆಲೆಯಲ್ಲಿ ಕಲಬುರಗಿ ಪೊಲೀಸರು ಹುಡುಕುವುದನ್ನು ಸ್ಥಗಿತಗೊಳಿಸಿದ್ದರು. ಈತ ಅನೇಕ ಪ್ರಕರಣಗಳಲ್ಲಿ ಬೇಕಾಗಿರುವ ವ್ಯಕ್ತಿಯಾಗಿದ್ದ. ಕಲಬುರಗಿಯಲ್ಲಿ ಸುಪಾರಿ ಪಡೆದು ಕೊಲೆ ಮಾಡಿರುವ …
Read More »ಕಿಮ್ಸ್ ವೈದ್ಯರ ಜೊತೆ ಕೊರೊನಾ ಚಿಕಿತ್ಸೆ ಬಗ್ಗೆ ಬೊಮ್ಮಾಯಿ ಚರ್ಚೆ………
ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆಯ ವೈದ್ಯರ ನಿಯೋಗ ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರನ್ನು ಹುಬ್ಬಳ್ಳಿಯ ಗೃಹ ಕಛೇರಿಯಲ್ಲಿ ಭೇಟಿ ಮಾಡಿ, ಕೋವಿಡ್-19 ಕುರಿತು ಚರ್ಚಿಸಿದರು. ಕಿಮ್ಸ್ ಆಸ್ಪತ್ರೆ ವೈದ್ಯರ ತಂಡ ಕೊರೊನಾ ವಿರುದ್ಧ ಹೋರಾಟದಲ್ಲಿ ತೊಡಗಿಕೊಂಡಿದ್ದು, ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡಲು ಐಸಿಎಂಆರ್ ಕಿಮ್ಸ್‍ಗೆ ಅನುಮತಿ ನೀಡಿದೆ. ಹೀಗಾಗಿ ತಮ್ಮ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಮನವಿಯನ್ನು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅವರ ನೇತೃತ್ವದ ತಂಡ ಗೃಹ ಸಚಿವರಿಗೆ ಸಲ್ಲಿಸಿದೆ. ಮನವಿಯನ್ನು …
Read More »