ಹುಬ್ಬಳ್ಳಿ: ಕಲಘಟಗಿ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಆತ್ಮಾವಲೋಕನ ಮಾಡಿಕೊಳ್ಳಲು ನನಗೆ ಸ್ವಲ್ಪ ಸಮಯ ಬೇಕಿತ್ತು. ಹೀಗಾಗಿ ಎರಡು ವರ್ಷ ಬಂದಿರಲಿಲ್ಲ. ಆದರೆ ಈ ಕ್ಷೇತ್ರದ ಜನರನ್ನು ಯಾವತ್ತೂ ಮರೆತಿಲ್ಲ. ಮರೆಯೋದು ಇಲ್ಲ ಎಂದು ಮಾಜಿ ಸಚಿವ ಸಂತೋಷ ಲಾಡ್ ಹೇಳಿದರು. ತಾಲೂಕಿನ ಮಡಕಿಹೊನ್ನಿಹಳ್ಳಿಯ ತಮ್ಮ ಅಮೃತ ನಿವಾಸದಲ್ಲಿ ನಡೆದ ಕಾರ್ಯಕರ್ತ ಸಭೆ ಬಳಿಕ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಪಕ್ಷವನ್ನು ಮತ್ತಷ್ಟು ಸಂಘಟಿಸಿ ಈ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ. …
Read More »ಕಿಮ್ಸ್ ಸಂಸ್ಥೆಯನ್ನು ನಾಡಿಗೆ ಸಂಜೀವಿನಿಯಾಗುವಂತೆ ಮಾದರಿಯಾಗಿ ರೂಪಿಸಿದ್ದಾರೆ: ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ: ಕೋವಿಡ್ ಸಂದರ್ಭದಲ್ಲಿ ಕಿಮ್ಸ್ ನ ಎಲ್ಲಾ ವೈದ್ಯರು ರೋಗಿಗಳ ಬಗೆಗೆ ಬಹಳ ಮುತುವರ್ಜಿ ವಹಿಸಿ ಸೇವೆ ಸಲ್ಲಿಸುತ್ತಿದ್ದಾರೆ. ಗಂಭೀರ ಪ್ರಕರಣಗಳನ್ನು ಸಹ ದಾಖಲಿಸಿಕೊಂಡು ಚಿಕಿತ್ಸೆ ನೀಡಿ ಗುಣಪಡಿಸುವ ಮೂಲಕ ವೈದ್ಯಕೀಯ ವೃತ್ತಿ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಹ್ಲಾದ್ ಜೋಶಿ ಹೇಳಿದರು. ನಗರದ ಸರ್ಕ್ಯೂಟ್ ಹೌಸಿನಲ್ಲಿ ಇಂದು ಬೆಳಗಾವಿಯ ಏಕಸ್ ಇನ್ಫ್ರಾ ಮತ್ತು ಏಕಸ್ ಫೌಂಡೇಶನ್ ಕೋವಿಡ್-19 ರೋಗಿಗಳ …
Read More »ವಾಣಿಜ್ಯನಗರಿಯಲ್ಲಿ ಮುಂದುವರೆದ ಗಾಂಜಾ ಘಾಟು: ಮತ್ತಿಬ್ಬರು ಅಂದರ್
ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಪೊಲೀಸರು ಗಾಂಜಾ ಪ್ರಕರಣಗಳನ್ನು ಬೆನ್ನಟ್ಟುತ್ತಿದ್ದು, ಬಗೆದಷ್ಟು ಪ್ರಕರಣಗಳು ಪತ್ತೆಯಾಗುತ್ತಿವೆ. ಕಳೆದ ಮೂರ್ನಾಲ್ಕು ದಿನಗಳಲ್ಲಿ ಮೂರು ಪ್ರಕರಣಗಳನ್ನು ಪೊಲೀಸರು ಭೇಧಿಸಿದ್ದು, ಇಂದು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ನಗರದ ನೂರ್ ಅಹ್ಮದ್ ಹಾಗೂ ಅಕ್ಷಯ ವೇರ್ಣೆಕರ ಬಂಧಿತ ಆರೋಪಿಗಳು. ನಗರದಲ್ಲಿ ನಡೆಯುತ್ತಿರುವ ಗಾಂಜಾ ಹಾವಳಿಯ ಜಾಡು ಹಿಡಿದು ಹೊರಟಿರುವ ಪೊಲೀಸರಿಗೆ ಬಗೆದಷ್ಟು ಪ್ರಕರಣಗಳು ಪತ್ತೆಯಾಗುತ್ತಿದ್ದು, ಉಪನಗರ ಠಾಣೆ ಪೊಲೀಸರು ಇಂದು ಮತ್ತಿಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ ಗಾಂಜಾ ಹಾಗೂ ಸಾಗಾಟಕ್ಕೆ …
Read More »ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಿದ ಪತ್ನಿ
ಧಾರವಾಡ: ಪತ್ನಿಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಿರುವ ಘಟನೆ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ನಡೆದಿದೆ ಪೀರಸಾಬ್ ನದಾಫ (38) ಪತ್ನಿ ಹಾಗೂ ಆಕೆಯ ಪ್ರಿಯಕರನಿಂದ ಕೊಲೆಯಾದವನು. ಕಳೆದ ಮೂರು ವರ್ಷಗಳಿಂದ ಪೀರಸಾಬ್ ನದಾಫ ಪತ್ನಿ ಪರ್ವಿನ್ ಬಾನುಗೆ ಸೋಮಯ್ಯ ಪೂಜಾರ ಜೊತೆ ಅನೈತಿಕ ಸಂಬಂಧ ಇತ್ತು. ಇದೇ ವಿಷಯವಾಗಿ ಪತಿ ಪೀರಸಾಬ್ ಹಾಗೂ ಪತ್ನಿ ಪರ್ವಿನ್ ಬಾನು ನಡುವೆ ಆಗಾಗ ಜಗಳ ನಡೆಯುತ್ತಲೇ ಇತ್ತು …
Read More »ಸಂಕಷ್ಟದಲ್ಲಿ ಪಾರ್ಶ್ವವಾಯು ಪೀಡಿತ ಉಪನ್ಯಾಸಕರ ಕುಟುಂಬ
ಧಾರವಾಡ: ಪಾರ್ಶ್ವವಾಯು ಪೀಡಿತ ಉಪನ್ಯಾಸಕರೊಬ್ಬರ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದ್ದು, ಸರ್ಕಾರ ಸಹಾಯಕ್ಕೆ ಮುಂದಾಗಬೇಕೆಂದು ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ. ಧಾರವಾಡದ ನಿಸರ್ಗ ಲೇಔಟ್ ನಲ್ಲಿರುವ ಮಹಾದೇವ್ ಮಾಳಗಿ ಕಳೆದ 5 ವರ್ಷಗಳಿಂದ ಹಾಸಿಗೆ ಹಿಡಿದಿದ್ದಾರೆ. 1999ರಲ್ಲಿ ಕೆಇಎಸ್ ಪರೀಕ್ಷೆಯಲ್ಲಿ ಪಾಸಾದ ನಂತರ ಶಿಕ್ಷಣ ಇಲಾಖೆಯಲ್ಲಿ 15 ವರ್ಷ ಸರ್ವಿಸ್ ಮಾಡಿದ್ದಾರೆ. ಬಿಇಓ ಆಗಿ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಮಹಾದೇವ್ ಮಾಳಗಿ ಅವರು ಹಿರಿಯ ಉಪನ್ಯಾಸಕರಾಗಿ ಬೆಳಗಾವಿ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದಾಗ ಪಾರ್ಶ್ವವಾಯುಗೆ …
Read More »ರೌಡಿಸಂಗೆ ಹುಬ್ಬಳ್ಳಿ ಜನರ ತತ್ತರ
ಹುಬ್ಬಳ್ಳಿ- ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಅರುಣ ಹಚಡದ ಎಂಬುವರ ಮೇಲೆ ರೌಡಿಗಳನ್ನು ಕರೆದುಕೊಂಡು ಮಾರಕಾಸ್ತ್ರಗಳಿಂದ ಮನೆಗೆ ಬಂದು ಆವಾಜ್ ಹಾಕುವ ದ್ರಶ್ಯಗಳು ಸಿಸಿ ಟಿವಿಯಲ್ಲಿ ದೃಶ್ಯಗಳು ಕಂಡು ಬಂದಿವೆ. ಇನ್ನು ಇದರ ಬಗ್ಗೆ ಸಂಬಂದಿಸಿದ ಹಾಗೆ ಕಮರಿಪೇಟ್ ಪೊಲೀಸ್ ಠಾಣೆಗೆ ದೂರನ್ನು ಕೊಡಲು ಹೋದ್ರು ಕೂಡಾ, ಪೊಲೀಸರು ಕ್ಯಾರೇ ಎನ್ನುತ್ತಿಲ್ಲ ಎಂದು ಸಂತ್ರಸ್ತ ಅರುಣ್ ಮಾಧ್ಯಮದವರ ಮುಂದೆ ತಮಗೆ ಆಗುವ ಅನ್ಯಾಯದ ಬಗ್ಗೆ ಹೇಳಿದರು. ಯಲ್ಲಪ್ಪ ಬದ್ದಿ ಹಾಗೂ ಅವನ ಸಹಚರರು …
Read More »ಕಳ್ಳತನ ಮಾಡಲು ಹೋಗಿ ಅಪಾರ್ಟ್‍ಮೆಂಟ್‍ನಿಂದ ಬಿದ್ದ ಘಟನೆ ವಿದ್ಯಾನಗರದ ಚನ್ನಮ್ಮ ಅಪಾರ್ಟ್‍ಮೆಂಟ್‍ನಲ್ಲಿ ನಡೆದಿದೆ.
ತಾರಿಹಾಳ ಗ್ರಾಮದ ಪುಟ್ಟರಾಜ ಕಳ್ಳತನ ಮಾಡುವ ವೇಳೆ ಮೇಲಿಂದ ಬಿದ್ದಿದ್ದಾನೆ. ಈತ ನಿನ್ನೆ ರಾತ್ರಿ ಕಂಠಪೂರ್ತಿ ಕುಡಿದು ಕಳ್ಳತನ ಮಾಡಲು ವಿದ್ಯಾನಗರದ ಚನ್ನಮ್ಮ ಅಪಾರ್ಟ್‍ಮೆಂಟ್‍ಗೆ ತೆರಳಿದ್ದ. ಆದರೆ ಕಾಲು ಜಾರಿ ಬಿದ್ದು ಗಾಯಗೊಂಡಿದ್ದಾನೆ. ತೀವ್ರವಾಗಿ ಗಾಯಗೊಂಡಿರುವ ಕಳ್ಳನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕುಡಿದ ಅಮಲಿನಲ್ಲಿ ಬಿದ್ದು, ಕಳ್ಳ ಜನರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳ ಈ ಹಿಂದೆ ಎಲ್ಲೆಲ್ಲಿ ಕಳ್ಳತನ …
Read More »ಮಳೆಯನ್ನ ಲೆಕ್ಕಿಸದೇ ಕೆಲಸ ನಿರ್ವಹಿಸಿದ ಟ್ರಾಫಿಕ್ ಪೊಲೀಸ್
ಹುಬ್ಬಳ್ಳಿ: ಮಳೆಯನ್ನ ಲೆಕ್ಕಿಸದೇ ಕೆಲಸ ನಿರ್ವಹಿಸಿದ ಟ್ರಾಫಿಕ್ ಪೊಲೀಸ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಶಂಬು ರೆಡ್ಡಿ ಮಳೆಯ ನಡುವೆ ಕರ್ತವ್ಯ ಪಾಲನೆ ಮಾಡಿದ ಟ್ರಾಫಿಕ್ ಪೊಲೀಸ್. ಹುಬ್ಬಳ್ಳಿ ನಗರದ ಚಿಟಗುಪ್ಪಿ ಆಸ್ಪತ್ರೆಯ ಸರ್ಕಲ್ ನಲ್ಲಿ ಕಾರ್ ಮತ್ತು ಟಿಪ್ಪರ್ ನಡುವೆ ಅಪಘಾತ ಉಂಟಾಗಿದ್ದರಿಂದ ಸ್ಥಳದಲ್ಲಿ ಟ್ರಾಫಿಕ್ ಆಗಿತ್ತು. ಜೋರು ಮಳೆ ಸುರಿಯುತ್ತಿದ್ದರೂ ಶಂಬು ರೆಡ್ಡಿ ಟ್ರಾಫಿಕ್ ಕ್ಲಿಯರ್ ಮಾಡುವ ಮೂಲಕ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.
Read More »ಗಣೇಶ ವಿರ್ಸಜನೆ ವೇಳೆ ಹುಬ್ಬಳ್ಳಿಯಲ್ಲಿ ಡಬಲ್ ಮರ್ಡರ್
ಹುಬ್ಬಳ್ಳಿ: ಹಳೇ ವೈಷಮ್ಯದ ವಿಚಾರವಾಗಿ ಸ್ನೇಹಿತರ ಮಧ್ಯೆ ಮಾರಾಮಾರಿ ನಡೆದು, ಇಬ್ಬರು ಕೊಲೆಯಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಗಣೇಶ ವಿರ್ಸಜನೆ ವೇಳೆಯೇ ಡಬಲ್ ಮರ್ಡರ್ ನಡೆದಿರುವ ಪರಿಣಾಮ ಹುಬ್ಬಳ್ಳಿ ಜನರು ಬೆಚ್ಚಿ ಬಿದ್ದಿದ್ದಾರೆ ಹುಬ್ಬಳ್ಳಿಯ ಗೋಪನಕೊಪ್ಪ ಬಳಿ ಘಟನೆ ನಡೆದಿದ್ದು, ಹಳೇ ಸ್ನೇಹಿತರಾಗಿದ್ದ ವಡ್ಡರ ಓಣಿಯ ಮಂಜುನಾಥ ಕಬ್ಬಿನ್ ಹಾಗೂ ನಿಯಾಜ್ ಜೋರಮ್ಮನವರ ಕೊಲೆಯಾದ ವ್ಯಕ್ತಿಗಳು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇನ್ನಿಬ್ಬರಿಗೆ ಗಂಭೀರವಾದ ಗಾಯಗಳಾಗಿವೆ. ಕೊಲೆಗೆ ಹಳೇ ವೈಷಮ್ಯವೇ ಕಾರಣ ಎನ್ನಲಾಗಿದ್ದು, …
Read More »ಭಾರತ ಸಮೀಕ್ಷೆಯಲ್ಲಿ ಮೂರನೇ ಸ್ವಚ್ಛ ನಗರ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮತ್ತೊಂದು ಗರಿಯನ್ನು ಮುಡಿಗೇರಿಸಿಕೊಂಡಿದೆ. ಸ್ವಚ್ಛ ಭಾರತ ಸಮೀಕ್ಷೆಯಲ್ಲಿ ಮೂರನೇ ಸ್ವಚ್ಛ ನಗರ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಕೇಂದ್ರ ಸರ್ಕಾರ ನಡೆಸುವ ಸ್ವಚ್ಛ ಭಾರತ ಸರ್ವೇಕ್ಷಣೆಯಲ್ಲಿ (ಸಮೀಕ್ಷೆಯಲ್ಲಿ) ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಮೂರನೇ ಸ್ಥಾನ ಬಂದಿದೆ. ಗಣೇಶ ಚತುರ್ಥಿಯ ಮೊದಲ ದಿನ ಕೇಂದ್ರ ಸರ್ಕಾರ ಪ್ರಕಟಿಸಿರುವ ಸ್ವಚ್ಛತಾ ವರದಿಯಲ್ಲಿ ಮೈಸೂರಿಗೆ ಮೊದಲ ಸ್ಥಾನ, ತುಮಕೂರಿಗೆ …
Read More »