Breaking News

ಹುಬ್ಬಳ್ಳಿ

ಕೊರೊನಾ ಸೋಂಕಿತ ವ್ಯಕ್ತಿ ಬಡವರಿಗೆ ಆಹಾರ ಧಾನ್ಯ ವಿತರಿಸಿದ್ದು ಈ ವಿಚಾರ ಇದೀಗ ಆಘಾತವನ್ನುಂಟು ಮಾಡಿದೆ.

ಹುಬ್ಬಳ್ಳಿ: ಕೊರೊನಾ ಸೋಂಕಿತ ವ್ಯಕ್ತಿ ಬಡವರಿಗೆ ಆಹಾರ ಧಾನ್ಯ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸಿದ್ದು, ಈ ವಿಚಾರ ಇದೀಗ ಆಘಾತವನ್ನುಂಟು ಮಾಡಿದೆ. ಹುಬ್ಬಳ್ಳಿಯ ಮುಲ್ಲಾ ಓಣಿಯ ರೋಗಿ ನಂ.236 ತನ್ನ ಗೆಳೆಯರು, ಬಂಧುಗಳ ಜೊತೆಗೂಡಿ ಮಾ.27ರಂದು ಮುಲ್ಲಾ ಓಣಿಯ ಜನತೆಗೆ ಆಹಾರ ಧಾನ್ಯ ವಿತರಿಸಿದ್ದು, ಜನ ಆತಂಕಗೊಂಡಿದ್ದಾರೆ. ಡಾಕಪ್ಪಾ ಸರ್ಕಲ್ ನಿಂದ ಕಾಳಮ್ಮನ ಅಗಸಿಯವರೆಗೆ ವಾಸಿಸುತ್ತಿರುವ ಸಾರ್ವಜನಿಕರಿಗೆ 5 ಕೆ.ಜಿ ಅಕ್ಕಿ, 2 ಕೆ.ಜಿ ತೊಗರಿಬೇಳೆ, 1 ಕೆ.ಜಿ ಸಕ್ಕರೆ, …

Read More »

ಹುಬ್ಬಳ್ಳಿ ಕೊರೊನಾ ಸೋಂಕಿತನ ಟ್ರಾವೆಲ್ ಹಿಸ್ಟರಿ ……

ಹುಬ್ಬಳ್ಳಿ: ಹುಬ್ಬಳ್ಳಿಯ ಮುಲ್ಲಾ ಓಣಿಯ ಕೊರೊನಾ ಸೋಂಕಿತನ ಅಣ್ಣ ರೋಗಿ ನಂಬರ್-236 ಟ್ರಾವೆಲ್ ಹಿಸ್ಟರಿಯನ್ನು ಜಿಲ್ಲಾಡಳಿತ ಬಿಡುಗಡೆಗೊಳಿಸಿದ್ದು, ಸಂಪರ್ಕದಲ್ಲಿರುವವರು ಕೂಡಲೇ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಜಿಲ್ಲಾಡಳಿತ ಮನವಿ ಮಾಡಿದೆ. ಪಿ.194ನ ಅಣ್ಣ ಪಿ-236 ಇಡೀ ಹುಬ್ಬಳ್ಳಿ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕು ಸುತ್ತಾಡಿದ್ದಾನೆ. ಮಾರ್ಚ್ 23ರಂದು ವಾಹನ ಚಾಲಕನ ಸಮೇತ ಯಲ್ಲಾಪುರಕ್ಕೆ ಪ್ರಯಾಣ ಬೆಳೆಸಿ, ಅಲ್ಲಿಂದ ತನ್ನ ಫುಟ್ ವೇರ್ ಅಂಗಡಿ ಓಪನ್ ಮಾಡಿದ್ದಾನೆ. ಅಂದೇ ಭಾರತ …

Read More »

ಇನ್ಫೋಸಿಸ್ ಫೌಂಡೇಶನ್‍ನಿಂದ 220ಕ್ಕೂ ಅಧಿಕ ಕಾರ್ಮಿಕರಿಗೆ ಆಹಾರದ ಕಿಟ್

ಹುಬ್ಬಳ್ಳಿ: ಸುಧಾಮೂರ್ತಿ ಅವರ ಇನ್ಫೋಸಿಸ್ ಫೌಂಡೇಶನ್ ನೀಡಿರುವ ಆಹಾರ ಧಾನ್ಯಗಳ ಕಿಟ್‍ಗಳನ್ನು ಭಾನುವಾರ 220ಕ್ಕೂ ಹೆಚ್ಚು ಕಾರ್ಮಿಕರಿಗೆ ವಿತರಿಸಲಾಯಿತು. ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿನ ಕರ್ನಾಟಕ ರಾಜ್ಯ ಆಹಾರ ನಿಗಮ (ಕೆಎಸ್‍ಸಿಎಫ್‍ಸಿ) 8 ಗೋದಾಮುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 220ಕ್ಕೂ ಹೆಚ್ಚು ಕಾರ್ಮಿಕರು, ಲಾರಿ ಚಾಲಕರು, ಕ್ಲೀನರ್‌ಗಳಿಗೆ ಆಹಾರ ಇಲಾಖೆಯ ಜಂಟಿ ನಿರ್ದೇಶಕ ಸದಾಶಿವ ಮರ್ಜಿ, ಇಸ್ಕಾನ್‍ನ ಸಾಯಿನಾಥ್ ವಿತರಿಸಿದರು ಇನ್ಫೋಸಿಸ್ ಫೌಂಡೇಶನ್ ನೀಡಿರುವ ಆಹಾರ ಧಾನ್ಯಗಳ ಪ್ರತಿ ಕಿಟ್‍ನಲ್ಲಿ 5 ಕೆ.ಜಿ. ಅಕ್ಕಿ, …

Read More »

ಹುಬ್ಬಳ್ಳಿಯಲ್ಲಿ ಪಶು ವೈದ್ಯರ ಮಾನವೀಯತೆ; ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಗರ್ಭಿಣಿ ಹಸುವಿಗೆ ಮರುಜೀವ

ಹುಬ್ಬಳ್ಳಿ(ಏ.12): ಕೊರೋನಾ ಸೋಂಕಿನ ವಿರುದ್ಧ  ವಿಶ್ವದ ವೈದ್ಯರು ಮನುಕುಲದ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಹುಬ್ಬಳ್ಳಿಯ ಉಣಕಲ್ ಗ್ರಾಮದ ಪಶುವೈದ್ಯರು ಮೃತ್ಯುವಿನ ಬಾಗಿಲು ತಟ್ಟಿದ್ದ ಅನಾಥ ಗರ್ಭಿಣಿ ಹಸುವಿಗೆ  ಮರುಜನ್ಮ ನೀಡಿದ್ದಾರೆ. ಈ ಹೃದಯಸ್ಪರ್ಶಿ  ಘಟನೆ ಉಣಕಲ್  ಸಿದ್ದಪ್ಪಜ್ಜನ ಹೊಸಮಠದ ಆವರಣದಲ್ಲಿ ನಡೆದಿದೆ. ಉಣಕಲ್ ಕ್ರಾಸ್ ರಾಮಲಿಂಗೇಶ್ವರ ದೇವಸ್ಥಾನದ ಬಯಲಿನಲ್ಲಿ ಪರಸ್ಪರ ಬಡಿದಾಡುತ್ತ ಬಂದ ನಾಲ್ಕಾರು ಬೀಡಾಡಿ ದನಗಳು ತುಂಬು ಗರ್ಭಿಣಿ ಹಸುವೊಂದನ್ನು ಕೆಳಗೆ ಬೀಳಿಸಿದ್ದವು. ಹಸುವಿನ ಮೇಲೆ ದಾಳಿ …

Read More »

ಹುಬ್ಬಳ್ಳಿ:ನೈರುತ್ಯ ರೈಲ್ವೆಯಲ್ಲಿ 80,000 ಬೆಡ್‍ಗಳ 312 ಐಸೋಲೇಷನ್ ಬೋಗಿಗಳ ನಿರ್ಮಾಣ

ಹುಬ್ಬಳ್ಳಿ , ಏ.11- ರೈಲ್ವೆ ಇಲಾಖೆಯ 10 ದಿನದಲ್ಲಿ 80,000 ಬೆಡ್‍ಗಳ ಐಸೊಲೇಷನ್ ಬೋಗಿಗಳನ್ನು ನಿರ್ಮಾಣ ಮಾಡಿದೆ. ಹುಬ್ಬಳ್ಳಿ ನೈರುತ್ಯ ರೈಲ್ವೆ ವತಿಯಿಂದ 312 ಐಸೊಲೇಷನ್ ಬೋಗಿಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದರು. ಹುಬ್ಬಳ್ಳಿಯ ರೈಲ್ವೆ ವರ್ಕಶಾಪ್‍ನಲ್ಲಿ ನಿರ್ಮಿಸಲಾಗಿರುವ ಐಸೋಲೇಷನ್ ಬೋಗಿಗಳನ್ನು ವೀಕ್ಷಿಸಿ ನಂತರ ಮಾಧ್ಯಮ ಗೋಷ್ಠಿ ನಡೆಸಿ ಮಾತನಾಡಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಿನಂತೆ ದೇಶಾದ್ಯಂತ 20,000 …

Read More »

ಹುಬ್ಬಳ್ಳಿ:ಪೊಲೀಸರ ಮೇಲೆ ನಡೆದ ಕಲ್ಲು ತೂರಾಟ ಪೂರ್ವನಿಯೋಜಿತ ಕೃತ್ಯ ಎಂಬ ಅನುಮಾನ

ಹುಬ್ಬಳ್ಳಿ ಏ,4- ಹುಬ್ಬಳ್ಳಿಯ ಮಂಟೂರು ರಸ್ತೆಯ ಅರಳಿಕಟ್ಟಿ ಕಾಲೋನಿಯಲ್ಲಿ ಪೊಲೀಸರ ಮೇಲೆ ನಡೆದ ಕಲ್ಲು ತೂರಾಟ ಪೂರ್ವನಿಯೋಜಿತ ಕೃತ್ಯ ಎಂಬ ಅನುಮಾನ ಕಾಡುತ್ತಿದೆ.ಪೊಲೀಸರ ಕಣ್ತಪ್ಪಿಸಿ ಒಂದು ಕೋಮಿನ ಜನರು ಪ್ರಾರ್ಥನೆ ನಡೆಸಲು ಮುಂದಾಗಿದ್ದರು‌. ಆದ್ರೆ ಇದನ್ನು ‌ಪ್ರಶ್ನಿಸಲಯ ಹೋದ ಪೊಲೀಸರ ಮೇಲೆ ಆ ಸಮುದಾಯದ ಮಹಿಳೆಯರು ಹಾಗೂ ಪುರುಷರು ಏಕಾಏಕಿ ಕಲ್ಲು ತೂರಾಟ ನಡೆಸಿದ್ದಾರೆ. ಇದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪೊಲೀಸರು ಪ್ರಾರ್ಥನೆ ತಡೆಯಲು ಬರುತ್ತಾರೆ ಎಂದು ಪೂರ್ವನಿಯೋಜಿಯವಾಗಿ ಕಲ್ಲು …

Read More »

ಸುಮಾರು 135 ವರ್ಷಗಳಿಂದ ನಡೆಯುತ್ತ ಬಂದಿದ್ದ ದಾಸೋಹ ಶನಿವಾರದಿಂದ ಸ್ಥಗಿತ:ಸಿದ್ಧಾರೂಢ ಸ್ವಾಮಿ

ಹುಬ್ಬಳ್ಳಿ: ಕೋವಿಡ್ 19 ವೈರಸ್‌ ಭೀತಿಯ ಹಿನ್ನೆಲೆಯಲ್ಲಿ ಸಿದ್ಧಾರೂಢ ಸ್ವಾಮಿಗಳ ಮಠದಲ್ಲಿ ಸುಮಾರು 135 ವರ್ಷಗಳಿಂದ ನಡೆಯುತ್ತ ಬಂದಿದ್ದ ದಾಸೋಹ ಶನಿವಾರದಿಂದ ಸ್ಥಗಿತಗೊಂಡಿದೆ. ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಗಳು ದೇಶದ ಎಲ್ಲ ಕ್ಷೇತ್ರಗಳನ್ನು ಸಂಚರಿಸುತ್ತ,ಅಜ್ಞಾನ ನಿವಾರಿಸಿ ಸನ್ಮಾರ್ಗ ತೋರುತ್ತ 1877ರಲ್ಲಿ ತಮ್ಮ 41ನೇ ವಯಸ್ಸಿನಲ್ಲಿ ಹುಬ್ಬಳ್ಳಿಗೆ ಆಗಮಿಸಿದರು. ತಮ್ಮನ್ನು ಭೇಟಿ ಮಾಡಲು ಆಗಮಿಸುವ ಭಕ್ತರು ಹಸಿವಿನಿಂದ ಹೋಗಬಾರದೆಂಬ ಉದ್ದೇಶದಿಂದ ಸುಮಾರು 1885-87ರಲ್ಲಿ ಅನ್ನಸಂತರ್ಪಣೆ ಆರಂಭಿಸಿದ್ದರು. ಅಂದಿನಿಂದ ಅನ್ನಸಂತರ್ಪಣೆ ಪ್ರತಿದಿನ ನಿರಂತರವಾಗಿ …

Read More »

ಹುಬ್ಬಳ್ಳಿಯಲ್ಲಿ ಕೊರೊನಾ ಶಂಕಿತ ಟೆಕ್ಕಿ ಸಾವು……….

ಹುಬ್ಬಳ್ಳಿ: ಮಹಾರಾಷ್ಟ್ರದ ಪುಣೆಯಿಂದ ಸ್ವಗ್ರಾಮಕ್ಕೆ ಆಗಮಿಸಿದ್ದ ಎಂಜಿನಿಯರ್ ಅನುಮಾನಸ್ಪದವಾಗಿ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಧಾರವಾಡದ ದೊಡ್ಡನಾಯಕನಕೊಪ್ಪ ಬಡಾವಣೆಯ ನಿವಾಸಿ ಮೃತ ದುರ್ದೈವಿ. ಟೆಕ್ಕಿಗೆ ಕೊರೊನಾ ಸೋಂಕು ತಗುಲಿರುವ ಅನುಮಾನ ವ್ಯಕ್ತವಾಗಿದೆ. ಟೆಕ್ಕಿ ಜ್ವರ, ನೆಗಡಿ, ಕೆಮ್ಮ, ನ್ಯೂಮೋನಿಯಾ ರೋಗದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಕಿಮ್ಸ್ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಕೊರೊನಾ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ರಕ್ತ ಮಾದರಿ ಹಾಗೂ ಥ್ರೋಟ್ ಸ್ವ್ಯಾಬ್ ಅನ್ನು ಶಿವಮೊಗ್ಗಕ್ಕೆ ರವಾನೆ …

Read More »

ನಮಾಜ್‍ಗೆ ತಡೆ- ಪೊಲೀಸರ ಮೇಲೆ ಕಲ್ಲು ತೂರಾಟ

ಹುಬ್ಬಳ್ಳಿ: ನಮಾಜ್ ವಿಷಯಕ್ಕೆ ಸಂಬಂಧಿಸಿದಂತೆ ಮುಸ್ಲಿಮರು ಮತ್ತು ಪೊಲೀಸ್ ಸಿಬ್ಬಂದಿಯ ಮಧ್ಯೆ ಗಲಾಟೆ ನಡೆದಿರುವ ಘಟನೆ ಹುಬ್ಬಳ್ಳಿ ಮಂಟೂರ್ ರೋಡ್ ಹತ್ತಿರದ ಅರಳಿಕಟ್ಟಿ ಕಾಲೋನಿ ಬಳಿ ನಡೆದಿದೆ.   ಲಾಕ್‍ಡೌನ್ ಮಧ್ಯೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ನಮಾಜ್ ಮಾಡುವುದನ್ನು ನಿಲ್ಲಿಸಲಾಗಿದೆ. ಕೆಲ ಮೌಲ್ವಿಗಳೇ ನಮಾಜ್ ಮಾಡಲು ಮಸೀದಿಗೆ ಬರಬೇಡಿ ಎಂದು ಮನವಿ ಕೂಡ ಮಾಡಿದ್ದಾರೆ. ಆದರೆ ಈ ಮಧ್ಯೆಯೂ ಕೂಡ ನಮಾಜ್ ಮಾಡುವ ವಿಚಾರಕ್ಕೆ ಮುಸ್ಲಿಮರು ಮತ್ತು ಪೊಲೀಸರ …

Read More »

ಕೊರೋನಾ ಎಫೆಕ್ಟ್ : ಮಧ್ಯಂತರ ಜಾಮೀನಿನ ಮೇಲೆ 11 ಕೈದಿಗಳಿಗೆ ಬಿಡುಗಡೆ ಭಾಗ್ಯ..!

ಹುಬ್ಬಳ್ಳಿ: ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆಗೆ ಒಳಗಾದವರು ಮತ್ತು ಇಷ್ಟೇ ಅವಧಿಗೆ ಶಿಕ್ಷೆಗೆ ಒಳಗಾಗುವ ಅಪರಾಧ ಪ್ರಕರಣ ಹೊಂದಿದ್ದವರ 11 ಜನ ಕೈದಿಗಳನ್ನು ಇಲ್ಲಿನ ಉಪ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿದೆ. ಕೊರೊನೊ ಸೋಂಕು ವ್ಯಾಪಕವಾಗಿ ಹರಡುವ ಆತಂಕವಿರುವ ಕಾರಣ ಕಾರಾಗೃಹದಲ್ಲಿರುವ ಕೈದಿಗಳ ಸಂಖ್ಯೆ ಕಡಿಮೆ ಮಾಡುವ ಉದ್ದೇಶದಿಂದ ಏಳು ವರ್ಷಗಳಿಗಿಂತ ಕಡಿಮೆ ಶಿಕ್ಷೆ ಎದುರಿಸುತ್ತಿರುವ ಕೈದಿಗಳ ಪಟ್ಟಿ ಸಿದ್ಧಪಡಿಸುವಂತೆ ಎಲ್ಲ ಜೈಲುಗಳ ಮುಖ್ಯಸ್ಥರಿಗೆ ಮೇಲಧಿಕಾರಿಗಳು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಇಲ್ಲಿನ …

Read More »