ಕಿಕ್ಕೇರಿ: ಹೋಬಳಿಯ ಕಡಹೆಮ್ಮಿಗೆ ಗ್ರಾಮದಲ್ಲಿನ ಕುಡಿಯುವ ನೀರಿನ ಟ್ಯಾಂಕ್ ಶಿಥಿಲಗೊಂಡಿದ್ದು, ಕುಸಿಯುವ ಹಂತ ತಲುಪಿದೆ. ಹೋಬಳಿಯ ಗಡಿಯಂಚಿನ ಗ್ರಾಮವಾದ ಆನೆಗೊಳ ಗ್ರಾ.ಪಂ ವ್ಯಾಪ್ತಿಗೆ ಈ ಗ್ರಾಮ ಸೇರಿದೆ. ಗ್ರಾಮದ ಜೊತೆಗೆ ಕಡಹೆಮ್ಮಿಗೆ ಕೊಪ್ಪಲು ಗ್ರಾಮ ಹೊಂದಿಕೊಂಡಿದೆ. ಸುಮಾರು 1,480 ಜನಸಂಖ್ಯೆ ಇದೆ. ಎರಡು ಗ್ರಾಮಗಳಿಗೆ ಈ ಟ್ಯಾಂಕಿನಿಂದ ನೀರು ಸರಬರಾಜು ಆಗುತ್ತಿದೆ. ಆದರೆ, ಶುಚಿತ್ವವೂ ಇಲ್ಲ. ಟ್ಯಾಂಕ್‌ನ ಪ್ಲಾಸ್ಟರಿಂಗ್ ಕಳಚಿ ಬೀಳುತ್ತಿದೆ. ಕಬ್ಬಿಣಗಳು ಹೊರಗೆ ಕಾಣಿಸುತ್ತಿದ್ದು, ತುಕ್ಕು ಹಿಡಿಯುತ್ತಿವೆ. ಕೆಲವೆಡೆ …
Read More »ತೇಲಿ ಹೋಯ್ತು ಸೋಯಾಬೀನ್ ಬೆಳೆ; ಧಾರವಾಡದಲ್ಲಿ ಸುರಿದ ಮಳೆಗೆ ರೈತರು ಕಂಗಾಲು
ಧಾರವಾಡ: ಕಳೆದ ವರ್ಷದಿಂದ ರೈತರು ಕೊರೊನಾ ಸೋಂಕು, ಲಾಕ್ಡೌನ್ ಹೀಗೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ಈ ಬಾರಿಯ ಕೊರೊನಾ ಎರಡನೇ ಅಲೆ ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಕೊಂಡೊಯ್ಯದಂತಹ ಪರಿಸ್ಥಿತಿ ನಿರ್ಮಾಣ ಮಾಡಿದೆ. ಇದೆಲ್ಲದರ ಮಧ್ಯೆಯೇ ಈ ಬಾರಿ ಉತ್ತಮ ಮುಂಗಾರು ಇದ್ದಿದ್ದರಿಂದ ರೈತರು ಕೊಂಚ ಉತ್ಸಾಹದಿಂದ ಕೃಷಿ ಚಟುವಟಿಕೆ ಆರಂಭಿಸಿದ್ದರು. ಆದರೆ ನಿನ್ನೆ ಸುರಿದ ಮಳೆಗೆ ರೈತರ ಕನಸುಗಳೇ ಕೊಚ್ಚಿಕೊಂಡು ಹೋಗಿವೆ. ಸಾಲ ಮಾಡಿ ಬಿತ್ತನೆ ಮಾಡಿದ್ದ ರೈತರು …
Read More »ಐಎಎಸ್ ಅನ್ನು ಇವತ್ತು ಧನ ಕಾಯುವವನು ಮಾಡುತ್ತಾನೆ : ರೋಹಿಣಿ ವಿರುದ್ಧ ಎ ಮಂಜು ಕಿಡಿ
ಮೈಸೂರು : ಐಎಎಸ್ ಇವತ್ತು ಧನ ಕಾಯುವವನು ಮಾಡುತ್ತಾನೆ. ಐಎಎಸ್ ಮಾಡಿದ ಮೇಲೆ ಅಧಿಕಾರ ಹೇಗೆ ನಡೆಸುತ್ತೇವೆ ಎನ್ನುವುದು ಮುಖ್ಯ. ಧನ ಕಾಯುವವನು, ಅಡ್ಜೆಸ್ಟ್ ಮೆಂಟ್ ನಲ್ಲೂ ಐಎಎಸ್ ಮಾಡುತ್ತಾನೆ. ಇವಾಗ ಯಾರ್ ಬೇಕಾದ್ರೂ ಐಎಎಸ್ ಮಾಡ್ತರೆ. ಆದ್ರೆ ಜನರ ಸೇವೆ ಹೇಗೆ ಮಾಡುತ್ತೇವೆ ಅನ್ನೋದೇ ಮುಖ್ಯ ಎಂದು ಎ ಮಂಜು ರೋಹಿಣಿ ಸಿಂಧೂರಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಮೈಸೂರು ಮಹಾರಾಜರೇ ಸ್ವಿಮ್ಮಿಂಗ್ ಪೂಲ್ ಕಟ್ಟಲಿಲ್ಲ. ಸರ್ಕಾರಿ ಸ್ಥಳದಲ್ಲಿ ಈ …
Read More »ವಿಜಯೇಂದ್ರ ಹೈಕಮಾಂಡ್ ಭೇಟಿ ಮಾಡಲು ಇಡಿ ತನಿಖೆ ಭಯ ಕಾರಣ: ಯತ್ನಾಳ್
ವಿಜಯಪುರ: ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಹೈಕಮಾಂಡ್ ಭೇಟಿಗೆ ಇಡಿ ತನಿಖೆ ಕಾರಣ. ತಮ್ಮ ವಿರುದ್ಧ ಮಾರಿಷಸ್ ಹಣಕಾಸಿನ ಹಗರಣದ ಕುರಿತು ಮೂರು ದಿನಗಳಿಂದ ಇಡಿ ನಡೆಸುತ್ತಿರುವ ತನಿಖೆಯಿಂದ ರಕ್ಷಣೆ ಪಡೆಯಲು ವಿಜಯೇಂದ್ರ ದೆಹಲಿ ನಾಯಕರ ದುಂಬಾಲು ಬಿದ್ದಿದ್ದಾರೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ನೀಡಿದ್ದಾರೆ. ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಪುತ್ರ ಬಿ.ವೈ ವಿಜಯೇಂದ್ರ ಕೋವಿಡ್ ನಿರ್ವಹಣೆ ಬಗ್ಗೆ ಹೈಕಮಾಂಡ್ ಶಹಬ್ಬಾಶ್ …
Read More »ಹೊಸ ಐಟಿ ನಿಯಮ’ಗಳನ್ನು ಪಾಲಿಸುವಂತೆ ಕೇಂದ್ರ ಸರ್ಕಾರದಿಂದ ಟ್ವಿಟ್ಟರ್ ಗೆ ಅಂತಿಮ ಸೂಚನೆ
ನವದೆಹಲಿ : ಕೇಂದ್ರ ಸರ್ಕಾರದಿಂದ ಹೊಸ ಐಟಿ ನಿಯಮಗಳನ್ನು ರೂಪಿಸಿ, ಅಧಿಸೂಚನೆಯನ್ನು ಹೊರಡಿಸಿತ್ತು. ಅದಕ್ಕೆ ಮೇ.15ರವರೆಗೆ ಆಕ್ಷೇಪಣೆಗೆ ಕಾಲಾವಕಾಶ ಕೂಡ ನೀಡಲಾಗಿತ್ತು. ಇಂತಹ ಕಾಲಾವಕಾಶ ಮುಕ್ತಾಯಗೊಂಡ ಬಳಿಕ, ಈಗಾಗಲೇ ವಾಟ್ಸ್ ಆಪ್ ಸೇರಿದಂತೆ ಅನೇಕ ಸೋಷಿಯಲ್ ಮೀಡಿಯಾಗಳಿಗೆ ಹೊಸ ಐಟಿ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದ್ದಂತ ಕೇಂದ್ರ ಸರ್ಕಾರ, ಈಗ ಟ್ವಿಟ್ಟರ್ ಗೆ ಅಂತಿಮ ಸೂಚನೆ ನೀಡಿದೆ. ಈ ಕುರಿತಂತೆ ಕೇಂದ್ರ ಸರ್ಕಾರ ಮುಖ್ಯ ಅನುಸರಣಾ ಅಧಿಕಾರಿಯವರು ವಿವರಗಳನ್ನು ಒಳಗೊಂಡಂತ ಹೊಸ …
Read More »ಮಹಾರಾಷ್ಟ್ರದಲ್ಲಿ ಸೋಮವಾರದಿಂದ ಐದು ಹಂತಗಳಲ್ಲಿ ಅನ್ ಲಾಕ್
ಹೊಸದಿಲ್ಲಿ: ಮಹಾರಾಷ್ಟ್ರ ರಾಜ್ಯವು ನಿನ್ನೆ ತಡರಾತ್ರಿ ಹೊರಡಿಸಿರುವ ಆದೇಶದಂತೆ ಐದು ಹಂತದ ಅನ್ ಲಾಕ್ ಯೋಜನೆಯನ್ನು ಪ್ರಕಟಿಸಿದೆ. ಈ ಹಿಂದೆ ಸಚಿವರು ನಿರ್ಬಂಧಗಳನ್ನು ಸರಾಗಗೊಳಿಸುವ ಬಗ್ಗೆ ಘೋಷಣೆ ಮಾಡಿದ ಬಳಿಕ ರಾಜ್ಯ ಸರಕಾರ ಯು-ಟರ್ನ್ ಪಡೆದಿತ್ತು. ಇದೀಗ ಒಂದು ದಿನದ ನಂತರ ಈ ನಿರ್ಧಾರ ಪ್ರಕಟಿಸಿದೆ. ಹೊಸ ಮಾರ್ಗಸೂಚಿಗಳು ಸೋಮವಾರದಿಂದ ಜಾರಿಗೆ ಬರುತ್ತವೆ, ರಾಜ್ಯದ ಜಿಲ್ಲೆಗಳನ್ನು ಸಕಾರಾತ್ಮಕ ದರ(ಪಾಸಿಟಿವಿಟಿ ರೇಟ್) ಹಾಗೂ ಆಮ್ಲಜನಕದ ಹಾಸಿಗೆಯ ಲಭ್ಯತೆಯ ಆಧಾರದ ಮೇಲೆ ಐದು …
Read More »ಶಾಸಕರ ನಿಧಿಯಿಂದ ನೀಡಲಾದ ಎರಡು ರಕ್ಷಾ ಕವಚ ವಾಹನಗಳನ್ನು ಲೋಕಾರ್ಪಣೆಗೊಳಿಸಿದ ಜಡಿ ಸಿದ್ದೇಶ್ವರ ಮಠದ ಪೀಠಾಧಿಪತಿ
ಮೂಡಲಗಿ: ಕೊರೋನಾ ಸೋಂಕಿತರ ನೇರವಿನ ಹಸ್ತ ಹಾಗೂ ಅಮೂಲ್ಯ ಜೀವ ಉಳಿಸುವ ಸಂದರ್ಭದಲ್ಲಿ ಅವಶ್ಯಕವಾಗಿ ಅಂಬ್ಯುಲೆನ್ಸ್‍ಗಳ ಅಗತ್ಯವಿದೆ. ಅರಭಾಂವಿ ಕ್ಷೇತ್ರದ ಶಾಸಕರ ನಿಧಿಯಿಂದ ನೀಡಿರುವ ತುರ್ತು ಸೇವೆ ಸೋಂಕಿತರಿಗೆ ಸಹಕಾರಿಯಾಗುವದು. ಶಾಸಕ ಹಾಗೂ ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಸುಣಧೋಳಿ ಜಡಿಸಿದ್ಧೇಶ್ವರ ಮಠದ ಪೀಠಾಧಿಕಾರಿಗಳಾದ ಶ್ರೀ ಅಭಿನವ ಶಿವಾನಂದ ಸ್ವಾಮೀಜಿ ಹೇಳಿದರು. ಅವರು ಶುಕ್ರವಾರ ಪಟ್ಟಣದ ಮೇಲ್ದರ್ಜೆಗೇರಿಸಿದ ಸಮುದಾಯ ಆರೋಗ್ಯ ಕೇಂದ್ರದಲ್ಲಿ …
Read More »ಕೋವಿಡ್ ಮಾರ್ಗಸೂಚಿ ಉಲ್ಲಂಘನೆ: ಸಿಎಂ, ಸಚಿವರಿಗೆ ಬಿಸಿ ಮುಟ್ಟಿಸಿದ ಹೈಕೋರ್ಟ್
ಬೆಂಗಳೂರು: ಕೋವಿಡ್ ಮಾರ್ಗಸೂಚಿ ಉಲ್ಲಂಘನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಇನ್ನಿತರ ಸಚಿವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ರಾಜ್ಯದಲ್ಲಿ ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠವು ಶುಕ್ರವಾರ ವಿಚಾರಣೆ ನಡೆಸಿತು. ಈ ವೇಳೆ ಕೋರ್ಟ್, “ಕೋವಿಡ್ ಮಾರ್ಗಸೂಚಿ ಉಲ್ಲಂಘನೆಗೆ ಸಂಬಂಧಿಸಿದಂತೆ …
Read More »ಕೆಎಸ್‌ಆರ್‌ಟಿಸಿ ಹೆಸರು ಕರ್ನಾಟಕದಿಂದ ಕೈ ತಪ್ಪುವ ಆತಂಕ ಬೇಡ: ಡಿಸಿಎಂ ಸವದಿ
ಬೆಂಗಳೂರು:ಕೆ. ಎಸ್. ಆರ್. ಟಿ. ಸಿ. ಎಂಬ ಹೆಸರು ಕರ್ನಾಟಕದಿಂದ ಕೈತಪ್ಪಿದೆ ಎಂಬ ಆತಂಕ ಪಡಬೇಕಾಗಿಲ್ಲ. ಕೇರಳ ಸರ್ಕಾರವು ಈ ಬಗ್ಗೆ ಏನೇ ಹೇಳಿಕೆ ನೀಡಿದರೂ ನಮ್ಮ ಕರ್ನಾಟಕ ಸರ್ಕಾರವು ಸೂಕ್ತ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ರಾಜ್ಯದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುತ್ತದೆ ಎಂದು ಉಪ ಮುಖ್ಯಮಂತ್ರಿ ಶ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಕೆ. ಎಸ್. ಆರ್. ಟಿ. ಸಿ. ಎಂಬ ಹೆಸರನ್ನು ಮುಂದೆಯೂ ಕರ್ನಾಟಕವು ಬಳಸಲು ಸ್ವತಂತ್ರವಾಗಿದೆ. ಈ ಬಗ್ಗೆ …
Read More »ಮಾವುತನೊಬ್ಬನ ಅಂತ್ಯಕ್ರಿಯೆಯ ಸ್ಥಳಕ್ಕೆ ಧಾವಿಸಿದ ಗಜರಾಜ, ಕಣ್ಣೀರ ವಿದಾಯ ನೀಡಿರುವ ಹೃದಯ ವಿದ್ರಾವಕ ಘಟನೆ
ಕೊಟ್ಟಾಯಂ: ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಮಾವುತನೊಬ್ಬನ ಅಂತ್ಯಕ್ರಿಯೆಯ ಸ್ಥಳಕ್ಕೆ ಧಾವಿಸಿದ ಗಜರಾಜ, ಕಣ್ಣೀರ ವಿದಾಯ ನೀಡಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಕಳೆದ 25 ವರ್ಷಗಳಿಂದ ಈ ಆನೆಯ ಪರಿಪಾಲನೆಯನ್ನು ಮಾವುತ ದಾಮೋದರ್ ನಾಯರ್ ನೋಡಿಕೊಳ್ಳುತ್ತಿದ್ದರು. 74 ವರ್ಷದ ದಾಮೋದರ್ ಇಹಲೋಕ ತ್ಯಜಿಸಿದಾಗ ಮೂಕ ಪ್ರಾಣಿಯು ಮಾವುತನಿಗೆ ಭಾವನಾತ್ಮಕ ಅಶ್ರುತರ್ಪಣಗೈದ ವಿಡಿಯೊ ಎಂಥಹ ಕಲ್ಲು ಹೃದಯವನ್ನು ಕರಗಿಸಿಬಿಡುತ್ತದೆ. ಬ್ರಹದತ್ತನ್ ಎಂಬ ಆನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾವುತನ …
Read More »
Laxmi News 24×7