ನಿರ್ದೇಶಕ ಶಶಾಂಕ್ ತಮ್ಮ ಮುಂದಿನ ಸಿನಿಮಾ “ಲವ್ 360” ನಲ್ಲಿ ನವ ನಾಯಕ ಪ್ರವೀಣ್ ಅವರನ್ನು ತೆರೆಗೆ ತರಲಿದ್ದಾರೆ. ಈ ಚಿತ್ರಕ್ಕಾಗಿ ನಾಯಕಿಯ ಆಯ್ಕೆ ಅಂತಿಮಗೊಳಿಸಲು ನಿರ್ದೇಶಕರು ಹುಡುಕಾಟದಲ್ಲಿದ್ದಾರೆ. ಮತ್ತು, ಇತ್ತೀಚಿನ ಮಾಹಿತಿಯಂತೆ ಈ ಪಾತ್ರಕ್ಕಾಗಿ ಜನಪ್ರಿಯ ಕಿರುತೆರೆ ನಟಿ ಮೇಘಾ ಶೆಟ್ಟಿ ಅವರ ಸಂಪರ್ಕ ಮಾಡಿದ್ದಾರೆ. ಮೇಘಾ ತನ್ನ ಚೊಚ್ಚಲ ಟಿವಿ ಧಾರಾವಾಹಿ “ಜೊತೆ ಜೊತೆಯಲಿ”ಮೂಲಕ ಖ್ಯಾತರಾಗಿದ್ದಾರೆ. ಇದೀಗ ಅವರು ಗಣೇಶ್ ಅಭಿನಯದ “ತ್ರಿಬಲ್ ರೈಡಿಂಗ್” ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. …
Read More »ಟೂರಿಸ್ಟ್ ವ್ಯಾನ್ ಸುತ್ತುವರೆದ ದೈತ್ಯಾಕಾರದ 3 ಹುಲಿಗಳು
ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೋಗಳು ಹರಿದಾಡುತ್ತಿರುತ್ತವೆ. ಕೆಲವೊಂದಿಷ್ಟು ಕ್ಯೂಟ್ ವಿಡಿಯೋಗಳಾಗಿದ್ದರೆ ಇನ್ನು ಕೆಲವು ಬೆಚ್ಚಿಬೀಳಿಸುವ ಕಥೆಯನ್ನು ಹೇಳುತ್ತವೆ. ಕೆಲವು ಭಯಾನಕ ಸನ್ನಿವೇಶಗಳೂ ಸಹ ಭಾರೀ ಚರ್ಚೆಯಾಗುತ್ತವೆ. ಇದೀಗ ವೈರಲ್ ಆಗುತ್ತಿರುವ ವಿಡಿಯೋ(Viral Video) ಕೂಡಾ ಅಂಥದ್ದೇ! ವಿಡಿಯೋ ನೋಡಿದಾಕ್ಷಣ ಒಮ್ಮೆಲೆ ಭಯವಾಗುತ್ತದೆ. ಕೆಲವರು ಇಂಥಹ ಭಯಾನಕ ದೃಶ್ಯವನ್ನು ಇನ್ನೂ ನೋಡಿಲ್ಲ ಎಂದು ಹೇಳಿದ್ದರೆ ಇನ್ನೊರ್ವರು, ನಾನಲ್ಲಿದ್ದಿದ್ದರೆ ಹೃದಯ ಬಡಿತವೇ ನಿಂತೋಗ್ಬಿಟ್ತಿತ್ತೇನೋ.. ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಒಟ್ಟಿನಲ್ಲಿ ವಿಡಿಯೋ ಭಾರೀ ಸುದ್ದಿಯಲ್ಲಿರುವುದಂತೂ …
Read More »ದಕ್ಷ ಅಧಿಕಾರಿ ಅಣ್ಣಾಮಲೈ ಹಾದಿಯಲ್ಲಿ ರವಿ.ಡಿ.ಚನ್ನಣ್ಣನವರ್ ?
ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯಲ್ಲಿ ನಿಷ್ಠೆ, ಪ್ರಮಾಣಿಕ ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ ನಡೆ ತೀವ್ರ ಕೂತುಹಲ ಮೂಡಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಂತ ಚೆನ್ನಣ್ಣನವರನ್ನು ಈಚೆಗೆ ರಾಜ್ಯ ಸರ್ಕಾರ ಸಿಐಡಿ ಎಸ್ಪಿಯಾಗಿ ವರ್ಗಾವಣೆ ಮಾಡಿದೆ. ಪ್ರಸ್ತುತ ಸಿಐಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ಮಠಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆಯುತ್ತಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಮಠಯಾತ್ರೆ ಕೈಗೊಂಡಿರುವ ಅವರು, ಚಿತ್ರದುರ್ಗದ ಬಸವ ಮಾಚಿದೇವ ಸ್ವಾಮೀಜಿ, ಕಾಗಿನೆಲೆ ಪೀಠಕ್ಕೆ …
Read More »ಈ ವರ್ಷವೂ ಪಠ್ಯಕ್ರಮ ಕಡಿತ : ಕಲಿಕಾ ಅಂತರ ಇನ್ನಷ್ಟು ಹೆಚ್ಚು ಸಾಧ್ಯತೆ
ಕೊರೊನಾ ಹಿನ್ನೆಲೆಯಲ್ಲಿ ಭೌತಿಕ ತರಗತಿ ಆರಂಭ ವಿಳಂಬವಾಗುತ್ತಿರುವುದರಿಂದ ಪ್ರಸಕ್ತ ಸಾಲಿಗೂ ಶೇ.30ರಷ್ಟು ಪಠ್ಯ ಕಡಿತಕ್ಕೆ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ. 2020-21ನೇ ಸಾಲಿನಲ್ಲಿ ಕೊರೊನಾದಿಂದ ಭೌತಿಕ ತರಗತಿಗಳು ಸರಿಯಾಗಿ ನಡೆಯದೇ ಇರುವ ಹಿನ್ನೆಲೆಯಲ್ಲಿ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಶೇ.30ರಷ್ಟು ಪಠ್ಯ ಕಡಿತ ಮಾಡಿ, ಉಳಿದ ಶೇ.70ರಷ್ಟು ಪಠ್ಯದಂತೆ ತರಗತಿಗಳನ್ನು ಆನ್‌ಲೈನ್, ಆಫ್ಲೈನ್ ವ್ಯವಸ್ಥೆ ಮೂಲಕ ನಡೆಸಲಾಗಿತ್ತು ಮತ್ತು ಸದ್ಯ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಕೂಡ ಶೇ.70ರಷ್ಟು ಪಠ್ಯದಂತೆಯೇ …
Read More »ಭಾರತದ ಮೊದಲ ಕೋವಿಡ್ ರೋಗಿಯಲ್ಲಿ ಮತ್ತೊಮ್ಮೆ ಸೋಂಕು ದೃಢ
(ಕೇರಳ): ‘ಭಾರತದ ಮೊದಲ ಕೋವಿಡ್ ರೋಗಿ, ವೈದ್ಯಕೀಯ ವಿದ್ಯಾರ್ಥಿನಿಗೆ ಮತ್ತೊಮ್ಮೆ ಸೋಂಕು ತಗುಲಿದೆ’ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದರು. ‘ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ಅವರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ ಆಯಂಟಿಜನ್ ಪರೀಕ್ಷೆಯ ಫಲಿತಾಂಶವು ನೆಗೆಟಿವ್ ಬಂದಿತ್ತು’ ಎಂದು ತ್ರಿಶೂರ್‌ನ ಡಿಎಂಆರ್ ಡಾ.ಕೆ.ಜೆ ರೀನಾ ಅವರು ಮಾಹಿತಿ ನೀಡಿದರು. ‘ವಿದ್ಯಾಭ್ಯಾಸಕ್ಕೆಂದು ನವದೆಹಲಿಗೆ ತೆರಳಲು ಅವರು ಯೋಜನೆ ರೂಪಿಸಿದ್ದರು. ಇದಕ್ಕಾಗಿ ಅವರು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಟ್ಟಿದ್ದಾರೆ. ಈ ವೇಳೆ ಅವರಿಗೆ ಸೋಂಕು …
Read More »ವಿಷಪೂರಿತ ಆಹಾರ ಸೇವಿಸಿ ಮೂವರ ದುರ್ಮರಣ; ಇಬ್ಬರು ಗಂಭೀರ
ಚಿತ್ರದುರ್ಗ: ವಿಷಪೂರಿತ ಆಹಾರ ಸೇವಿಸಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿ ಮತ್ತಿಬ್ಬರು ಅಸ್ವಸ್ಥಗೊಂಡಿರುವ ಘಟನೆ ತಾಲೂಕಿನ ಇಸಾಮುದ್ರ ಗ್ರಾಮದಲ್ಲಿ ನಡೆದಿದೆ. ತಿಪ್ಪಾನಾಯ್ಕ್ (46), ಪತ್ನಿ ಸುಧಾಬಾಯಿ(43), ವೃದ್ಧೆ ಗುಂಡಿಬಾಯಿ (75) ಸಾವನ್ನಪ್ಪಿದವರು. ನಿನ್ನೆ ರಾತ್ರಿ ಮುದ್ದೆ ಸಾರು ಸೇವನೆ ಬಳಿಕ ಕುಟುಂಬಸ್ಥರು ಅಸ್ವಸ್ಥರಾಗಿದ್ದು ತಕ್ಷಣವೇ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು ಘಟನೆ ಕುರಿತು …
Read More »ಸೌಭಾಗ್ಯ ಲಕ್ಷ್ಮೀ ಶುಗರ್ಸ ನಿಂದ ಸಕ್ಕರೆ ವಿತರಣೆ ಕಾರ್ಯಕ್ರಮ
ಗೋಕಾಕ: ಸೌಭಾಗ್ಯ ಲಕ್ಷ್ಮೀ ಶುಗರ್ಸ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷ ಕೂಡ ನಾವು ರೈತ ಬಾಂಧವರಿಗೆ ತಿಳಿಸುವುದು ಏನೆಂದರೆ ಈ ವರ್ಷ ನಾವು ನಮ್ಮ ಕಾರ್ಖಾನೆಗೆ ಕಬ್ಬು ಕಳುಹಿಸಿದ ಎಲ್ಲಾ ರೈತ ಬಾಂಧವರಿಗೆ ಪ್ರತಿ ಟನ್ ಗೆ ಅರ್ಧ ಕೇಜಿಯಂತೆ ಸಕ್ಕರೆ ವಿತರಿಸುವ ಕಾರ್ಯಕ್ರಮವನ್ನಾ ಯರಗಟ್ಟಿ, ಗೋಕಾಕ, ಹಾಗೂ ಮಮದಾಪೂರ ಈ ರೀತಿ ಮೂರು ವಿಭಾಗಗಳಾಗಿ ವಿಂಗಡಿಸಿ ಈ ಮೂರು ಝೋನ್ ಗಳಲ್ಲಿ ಸಕ್ಕರೆ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದೆ. …
Read More »ಲಕ್ಕಿ ಸ್ಕೀಮ್ ಹೆಸರಿನಲ್ಲಿ ಹಳ್ಳಿ ಜನರಿಗೆ ಪಂಗನಾಮ ಹಾಕಿ ಆರೋಪಿಗಳು ಪರಾರಿ
ಯಾದಗಿರಿ: ಲಕ್ಕಿ ಸ್ಕೀಮ್ ಹೆಸರಿನಲ್ಲಿ ಹಳ್ಳಿ ಜನರಿಗೆ ಪಂಗನಾಮ ಹಾಕಿ ಆರೋಪಿಗಳು ಪರಾರಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಯಾದಗಿರಿಯ ಕೆಎಎಸ್ಎಸ್ ಎಂಟರ್ಪ್ರೈಸಸ್ ಹೆಸರಿನ ಗುಂಪೊಂದು ನಿಮಗೆ ಕಾರು ,ಬೈಕ್ ಸಿಗುತ್ತದೆ ಎಂದು ಹೇಳಿ ಹಳ್ಳಿ ಜನರನ್ನು ನಂಬಿಸಿ ಲಕ್ಕಿ ಸ್ಕೀಮ್ ಹೆಸರಲ್ಲಿ ಲಕ್ಷಾಂತರ ರೂಪಾಯಿ ಹಣ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಳೆದ ಜನವರಿ ತಿಂಗಳಲ್ಲಿ ಯಾದಗಿರಿ ನಗರದಲ್ಲಿ ಕೆಎಸ್‌ಎಸ್ ಎಂಟರ್ಪ್ರೈಸಸ್ ಆರಂಭ ಮಾಡಿಲಾಗಿತ್ತು. 8 ಕಂತುಗಳಲ್ಲಿ ಪ್ರತಿ …
Read More »ಈ ಗ್ರಾಮದ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಮನೆಯಲ್ಲಿ ರಾಶಿ ರಾಶಿ ಅನ್ನಭಾಗ್ಯ ಅಕ್ಕಿ ಮೂಟೆ!
ಗದಗ: ಬಡ ಜನರಿಗೆ ಅನುಕೂಲವಾಗಲಿ ಎಂದು ಸರ್ಕಾರ ಅನ್ನಭಾಗ್ಯ ಯೋಜನೆ ಮೂಲಕ ಪಡಿತರ ಚೀಟಿಯುಳ್ಳವರಿಗೆ ನೀಡುತ್ತಿದ್ದ ಅಕ್ಕಿ ದಾರಿ ತಪ್ಪಿ ಖದೀಮರ ಪಾಲಾಗುತ್ತಿರೋದು ಬೆಳಕಿಗೆ ಬಂದಿದೆ. ಜಿಲ್ಲೆಯ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದಲ್ಲಿ ಸೈಬರ್ ಠಾಣೆಯ ಇನ್ಸ್‌ಪೆಕ್ಟರ್ ಟಿ.ಮಹಾಂತೇಶ್ ಮತ್ತು ಅವರ ತಂಡ ಕಾರ್ಯಾಚರಣೆ ನಡೆಸಿತ್ತು. ಗ್ರಾಮದ ಬಿಜೆಪಿ ಮುಖಂಡ ಮತ್ತು ಗುತ್ತಿಗೆದಾರ ಆನಂದ್ ನಾಗರಳ್ಳಿ, ಕಾಂಗ್ರೆಸ್ ಮುಖಂಡ ಮಹಬೂಬಸಾಬ್ ಮುಂಡರಗಿ ಹಾಗೂ ಷಣ್ಮುಖಪ್ಪ ಎಂಬುವವರು ಮನೆ …
Read More »1983 ವಿಶ್ವಕಪ್ ಹೀರೋ ಯಶಪಾಲ್ ಶರ್ಮಾ ನಿಧನ
ಹೊಸದಿಲ್ಲಿ: ಟೀಂ ಇಂಡಿಯಾ ಮಾಜಿ ಆಟಗಾರ, 1983 ವಿಶ್ವಕಪ್ ವಿಜೇತ ತಂಡದ ಸದಸ್ಯ ಯಶಪಾಲ್ ಶರ್ಮಾ ಇಂದು ಹೃದಯಾಘಾತದಿಂದ ನಿಧನರಾದರು. 66 ವರ್ಷದ ಯಶಪಾಲ್ ಶರ್ಮಾ ಅವರು ನೋಯ್ಡಾದಲ್ಲಿ ವಾಸವಿದ್ದರು. ಮಂಗಳವಾರ ಬೆಳಗ್ಗೆ ತೀವ್ರ ಹೃದಯಾಘಾತದಿಂದ ಮನೆಯಲ್ಲಿಯೇ ಶರ್ಮಾ ನಿಧನರಾದರು ಎಂದು ಮೂಲಗಳು ತಿಳಿಸಿದೆ. ಯಶಪಾಲ್ ಶರ್ಮಾ 1978ರಿಂದ 1983ರವರೆಗೆ ಭಾರತದ ತಂಡದ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿದ್ದರು. 37 ಟೆಸ್ಟ್ ಪಂದ್ಯಗಳನ್ನು ಆಡಿರುವ ಶರ್ಮಾ 1,606 ರನ್‌ಗಳನ್ನು ಗಳಿಸಿದ್ದಾರೆ. …
Read More »
Laxmi News 24×7