Breaking News

ರಾಷ್ಟ್ರೀಯ

ನಾನು ಸಚಿವನಾಗಲು, ಸಿಎಂ ಆಗಲು ಯಡಿಯೂರಪ್ಪ ಕಾರಣ : ಬಸವರಾಜ ಬೊಮ್ಮಾಯಿ

ಹಾವೇರಿ: ‘ನಾನು ಬಿಜೆಪಿಗೆ ಬರಲು, ಶಾಸಕನಾಗಲು, ಸಚಿವನಾಗಲು ಮತ್ತು ಮುಖ್ಯಮಂತ್ರಿಯಾಗಲು ಯಡಿಯೂರಪ್ಪ ಅವರು ಕಾರಣ’ ಎಂದು ಸಿಎಂ ಬಸವರಾಜ ಬೊಮ್ಮಾಯಿ ಶುಕ್ರವಾರ ಹೇಳಿಕೆ ನೀಡಿದ್ದಾರೆ. ಬೊಮ್ಮನಹಳ್ಳಿಯಲ್ಲಿ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿಎಂ , ‘ನಮ್ಮ ನಾಯಕ ಯಡಿಯೂರಪ್ಪ ಅವರು ಇಲ್ಲಿಗೆ ನೂರು ಬಾರಿ ಬಂದಿದ್ದಾರೆ, ಅವರು ಹಾಗೂ ಸಿಎಂ ಉದಾಸಿ ಅವರ ಚಿಂತನೆಯನ್ನು ಇಡಿ ನಾಡು ನೋಡಿದೆ. ರೈತರ ವಿಚಾರದಲ್ಲಿ ಯಡಿಯೂರಪ್ಪ ಎಂದು ರಾಜಿ‌ ಮಾಡಿಕೊಂಡಿಲ್ಲ. ಬಿಜೆಪಿ ಮಾಡಿರುವ ಯೋಜನೆಗಳು …

Read More »

ಆರ್ಯನ್​ ಭೇಟಿ ಮಾಡಿದ ಶಾರುಖ್​ ಖಾನ್ ತೆಗೆದುಕೊಂಡ್ರು ಕಠಿಣ ನಿರ್ಧಾರ; ಪರಿಣಾಮ ಯಾರ ಮೇಲೆ?

ಆರ್ಯನ್​ ಖಾನ್​ ಪ್ರಕರಣ ದಿನ ಕಳೆದಂತೆ ಜಟಿಲವಾಗುತ್ತಲೇ ಇದೆ. ಎನ್​ಸಿಬಿ ನಿತ್ಯ ಹೊಸಹೊಸ ಸಾಕ್ಷ್ಯಗಳೊಂದಿಗೆ ಕೋರ್ಟ್​ ಮುಂದೆ ಹಾಜರಿ ಹಾಕುತ್ತಿದೆ. ಆರ್ಯನ್​ಗಿಂತಲೂ ಬಲವಾಗಿ ಎನ್​ಸಿಬಿ ಪರ ವಕೀಲರು ವಾದ ಮಂಡಿಸುತ್ತಿದ್ದಾರೆ. ಶಾರುಖ್​ ಖಾನ್​ ಕಳೆದ ಅರ್ಧ ತಿಂಗಳಿಂದ ಚಿಂತೆಗೆ ಒಳಗಾಗಿದ್ದಾರೆ. ಆರ್ಯನ್​ ಖಾನ್​ ಬಂಧನದ ನಂತರದಲ್ಲಿ ಅವರು ಸಂಪೂರ್ಣವಾಗಿ ಚಿಂತೆಗೆ ಒಳಗಾಗಿದ್ದಾರೆ. ಆರ್ಯನ್​ ಖಾನ್​ ಅವರನ್ನು ಹೇಗೆ ಜೈಲಿನಿಂದ ಹೊರಗೆ ತರಬೇಕು ಎನ್ನುವ ಚಿಂತೆ ಬಿಟ್ಟೂ ಬಿಡದೇ ಕಾಡುತ್ತಿದೆ. ಅವರು ಸಾರ್ವಜನಿಕವಾಗಿ …

Read More »

ಕಲಘಟಗಿ ಸಾಂಸ್ಕೃತಿಕ ಭವನ ಕಟ್ಟಡ ನಿರ್ಮಿಸುವ ಹೆಸರಲ್ಲಿ ಮರಗಳಿಗೆ ಕೊಡಲಿ ಪೆಟ್ಟು :ಪರಿಸರ ಪ್ರೇಮಿಗಳ ವಿರೋಧ 

    ಕಲಘಟಗಿ:ತಾಲೂಕ ಸರ್ಕಾರಿ ನೌಕರರ ಸಾಂಸ್ಕೃತಿಕ ಭವನ ಕಟ್ಟಡ ನಿರ್ಮಿಸುವ ಹೆಸರನಲ್ಲಿ ಅನೇಕ ಮರಗಳ ಮಾರಣಹೋಮ ನಡೆದಿದೆ ವಿಷಯ ತಿಳಿದ ಪರಿಸರ ಪ್ರೇಮಿಗಳು ಮತ್ತು ಪಟ್ಟಣದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದಿದ್ದಾರೆ ಪಟ್ಟಣದ ಸರ್ಕಾರಿ ನೌಕರ ಭವನದ ಆವರಣದಲ್ಲಿರುವ 30 ರಿಂದ 50 ವರ್ಷದಿಂದ ಹೆಮ್ಮರವಾಗಿ ಬೆಳೆದು ಉತ್ತಮ ಗಾಳಿ, ಪರಿಸರ ನೀಡುವ ಮರಗಳಿಗೆ ಕೊಡಲಿ ಪೆಟ್ಟು ಹಾಕಿ ಕಡಿಯಲು ಹೊರಟಿರುವದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ ತಾಲ್ಲೂಕ ನೌಕರರ …

Read More »

ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ ದಲಿತ ಮುಖಂಡ ಶ್ರೀನಾಥ್ ಪೂಜಾರಿ

      ಸಿಂದಗಿಯಲ್ಲಿ ಪಾಕ್ ಧ್ವಜ ಹಾರಿಸಿದ ಆರೋಪಿಗಳಿಗೆ ಜಾಮೀನು ನೀಡಲು ಸಹಕರಿಸಿದ ಹಾಗೂ ನೂತನ ಕ್ರೀಡಾಂಗಣದಲ್ಲಿರುವ ಮಸೀದಿಯನ್ನು ಇಂದಿನ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿರುವ ರಮೇಶ್ ಭೂಸನೂರರವರು ತೆರವುಗೊಳಿಸುವಾಗ ಇಂದಿನ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಅಶೋಕ್ ಮನಗೂಳಿಯವರು ಯಾವುದೇ ರೀತಿಯ ಪ್ರತಿಭಟನೆ ಮಾಡದೇ ಮೌನ ಸಮ್ಮತಿ ಸೂಚಿಸಿರುವುದು ಮನುವಾದಿ ಮನಸ್ಥಿತಿ ತೋರುತ್ತದೆ. ಪ್ರಸ್ತುತ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಅಶೋಕ್ ಮನಗೂಳಿ ಅವರಿಗೆ ಮುಸ್ಲಿಂ ಮತ ಕೇಳಲು ನಾಚಿಕೆ ಆಗುವುದಿಲ್ಲವೇ..? RSS ಗರಡಿಯಲ್ಲಿ …

Read More »

ಡಿಸಿಸಿ ಬ್ಯಾಂಕ್ ನಿಮ್ಮಪ್ಪನ ಮನೆ ಆಸ್ತಿನಾ?

ಚಿಕ್ಕಬಳ್ಳಾಪುರ: ಡಿಸಿಸಿ ಬ್ಯಾಂಕ್ ನಿಮ್ಮ ಅಪ್ಪನ ಅಸ್ತಿನಾ..? ಹೀಗಂತ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 15 ವರ್ಷ ಆಗಿದೆ. ಈಗಲೂ ಕೆಲ ಸ್ವಾರ್ಥಿಗಳು ಡಿಸಿಸಿ ಬ್ಯಾಂಕ್ ಕೋಚಿಮುಲ್ ಕಪಿಮುಷ್ಠಿಯಲ್ಲಿ ಇಟ್ಕೊಂಡು ರಾಜಕಾರಣ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡ್ತಿದ್ದಾರೆ. ಇದಕ್ಕೆ ನಮ್ಮ ಸರ್ಕಾರ ಇರೋವರೆಗೂ ಅವಕಾಶ ಕೊಡೋದಿಲ್ಲ ಅಂತ ನೇರವಾಗಿ ಹೇಳ್ತೇನೆ ಅಂತ ಸವಾಲು ಹಾಕಿದರು …

Read More »

ಡ್ರಗ್ಸ್ ಪ್ರಕರಣದಲ್ಲಿ ಶಾರೂಕ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿ ವಜಾ

ಮುಂಬೈ, ಅಕ್ಟೋಬರ್ 20: ಕ್ರೂಸ್ ಹಡಗು ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ಸ್ಟಾರ್ ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿಯನ್ನು ಮುಂಬೈನ ವಿಶೇಷ NDPS ಕೋರ್ಟ್ ತಿರಸ್ಕರಿಸಿದೆ. ಆರ್ಯನ್ ಖಾನೆ ಜೊತೆಗೆ ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಅವರ ಜಾಮೀನು ಅರ್ಜಿಗಳನ್ನೂ ಕೋರ್ಟ್ ತಿರಸ್ಕರಿಸಿದೆ. “ಮುಂಬೈ NDPS ಕೋರ್ಟ್ ನೀಡಿದ ಆದೇಶ ಪ್ರತಿಗಾಗಿ ಅರ್ಜಿ ಸಲ್ಲಿಸಿದ್ದು, ಇಂದೇ ಹೈಕೋರ್ಟ್ ಮೊರೆ ಹೋಗಲಾಗುವುದು. ಒಂದು ವೇಳೆ ಇಂದು …

Read More »

ಮೈತ್ರಿ ಸರ್ಕಾರವನ್ನು ಅಪವಿತ್ರ ಮಾಡಿದ್ದು ಕಾಂಗ್ರೆಸ್: ಸಿಎಂ ಬಸವರಾಜ ಬೊಮ್ಮಾಯಿ

ಬೆಳಗಾವಿ: ಮೈತ್ರಿ ಸರ್ಕಾರವನ್ನು ಅಪವಿತ್ರ ಮಾಡಿದ್ದು ಕಾಂಗ್ರೆಸ್ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು. ಸಿಂದಗಿ ಉಪಚುನಾವಣೆ ಆಲಮೇಲ ಗ್ರಾಮದ ಸಮಾವೇಶದಲ್ಲಿ ಭಾಷಣ ಮಾಡಿದ ಸಿಎಂ, ಕಾಂಗ್ರೆಸ್ ಸರ್ಕಾರದ ಭಾಗ್ಯ ಯಾರ ಮನೆಗೂ ಸಹ ಬರಲಿಲ್ಲ. ಕಾಂಗ್ರೆಸ್ ಅವರು ಬಂದಿದ್ದೇ ನಮಗೆ ದೌರ್ಭಾಗ್ಯ. ಕಾಂಗ್ರೆಸ್ ಅಧಿಕಾರ ಬಿಟ್ಟು ಇರಲ್ಲ. ಅಧಿಕಾರ ಇದ್ದಾಗ ಕಾಂಗ್ರೆಸ್ ಕಬ್ಬಿನಂತೆ ಇರ್ತಾರೆ, ಅಧಿಕಾರ ಇಲ್ಲದಿದ್ದಾಗ ಹತ್ತಿಯಂತೆ ಇರ್ತಾರೆ. ಮೈತ್ರಿ ಸರ್ಕಾರವನ್ನು ಅಪವಿತ್ರ ಮಾಡಿದವರು ಕಾಂಗ್ರೆಸ್ …

Read More »

ಸೌಭಾಗ್ಯ ಲಕ್ಷ್ಮಿ ಶುಗರ್ಸ್ ನಲ್ಲಿ ಮೋದಲ್ನೆಯ ಸಕ್ಕರೆ ಉತ್ಪಾದನೆ ಪೂಜೆ ಸಲ್ಲಿಸಿದ ಶ್ರೀಮತಿ ಅಂಬಿಕಾ ಸಂತೋಷ ಜಾರಕಿಹೊಳಿ ಹಾಗೂ ಛೋಟಾ ಸಾಹುಕಾರ

      ಗೋಕಾಕ ;ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಈ ವರ್ಷದ ಸಕ್ಕರೆ ಉತ್ಪಾದನೆ ಪ್ರಾರಂಭ ವಾಗಿದೆ     ಹೌದು ಶ್ರೀ ಸಂತೋಷ್ ಜಾರಕಿಹೊಳಿ ಅವರ್ ನೇತೃತ್ವದ ಈ ಒಂದು ಕಾರ್ಖಾನೆ ಮೊನ್ನೆ ಯಷ್ಟೇ ಕಬ್ಬು ನೂರಿಸಲು ಪ್ರಾರಂಭ ಮಾಡಿತ್ತು ಇಂದು ಸಕ್ಕರೆ ಆಗಿ ಹೊರ ಹೊಮ್ಮಿದೆ .ಇಂದು ಈ ವರ್ಷದ ಮೊದಲನೆಯ ಸಕ್ಕರೆ ಉತ್ಪಾದನೆ ಯಾಗಿದ್ದು ಶ್ರೀಮತಿ ಅಂಬಿಕಾ ಸಂತೋಷ್ ಜಾರಕಿಹೊಳಿ ಹಾಗೂ ಸುಪುತ್ರ ಶ್ರೀ ಸೂರ್ಯ …

Read More »

ದೇಶಿ ತಳಿಗಳ ಅಭಿವೃದ್ಧಿಗೆ ಅಮೃತ ಸಿರಿ, ಅಮೃತ ಧಾರಾ

ಬೆಂಗಳೂರು: ಸರಕಾರವು ದೇಶಿ ಗೋ ತಳಿ ಸಂವರ್ಧನೆಗಾಗಿ ರೈತರಿಗೆ ಕಡಿಮೆ ದರದಲ್ಲಿ ಕರುಗಳನ್ನು ವಿತರಣೆ ಮಾಡಲು ನಿರ್ಧರಿಸಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಪಶು ಸಂಗೋಪನೆ ಇಲಾಖೆ ಯಿಂದ ಜಾರಿಗೊಳ್ಳುತ್ತಿರುವ ಯೋಜನೆಗೆ “ಅಮೃತ ಸಿರಿ’ ಮತ್ತು “ಅಮೃತ ಧಾರಾ’ ಎಂದು ಹೆಸರಿಡಲು ನಿರ್ಧರಿಸಲಾಗಿದೆ. ಗಂಡು ಕರು ವಿತರಣೆಗೆ ಅಮೃತ ಧಾರಾ, ಹೆಣ್ಣು ಕರು ವಿತರಣೆಗೆ ಅಮೃತ ಸಿರಿ ಎಂದು ನಾಮಕರಣ ಮಾಡಲಾಗಿದ್ದು, ದೇಶಿ ತಳಿಗಳಾದ ಮಲೆನಾಡು ಗಿಡ್ಡ, ಹಳ್ಳಿಕಾರ್‌, ಅಮೃತ …

Read More »

ಕೇರಳದಲ್ಲಿ ಮಳೆ ಆರ್ಭಟ, ಮೃತರ ಸಂಖ್ಯೆ 38ಕ್ಕೆ ಏರಿಕೆ;

ತಿರುವನಂತಪುರ: ಕೇರಳದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಮತ್ತು ಭೂಕುಸಿತ ಪರಿಣಾಮ ಮೃತರ ಸಂಖ್ಯೆ ಸೋಮವಾರ 38ಕ್ಕೆ ಏರಿದೆ. ಕೊಟ್ಟಾಯಂ ಜಿಲ್ಲೆಯ ಕೂಟ್ಟಿಕಲ್ ಪಂಚಾಯಿತಿಯ ಪ್ಲಾಪಲ್ಲಿಯಲ್ಲಿ ಭೂಕುಸಿತದ ಅವಶೇಷದಡಿಯಲ್ಲಿ ಏಳು ವರ್ಷದ ಬಾಲಕಿ ಸಹಿತ 13 ಶವಗಳು ಪತ್ತೆಯಾಗಿವೆ. ಮುಂಡಕಾಯಂನಲ್ಲಿ ಪ್ರವಾಹದ ರಭಸಕ್ಕೆ ಒಂದು ಮನೆ ಕೊಚ್ಚಿಕೊಂಡು ಹೋಗಿದೆ. ಇಡುಕ್ಕಿ ಜಿಲ್ಲೆಯ ಕೊಕ್ಕಾಯರ್ ಮತ್ತು ಪೆರುವನಂತಮ್ ಗ್ರಾಮಗಳಲ್ಲಿ ಎಂಟು ಮೃತದೇಹಗಳು ದೊರಕಿವೆ. ಈ ಮೂಲಕ ಸತ್ತವರ ಸಂಖ್ಯೆ 38ಕ್ಕೆ ಹೆಚ್ಚಳವಾಗಿದೆ. ಎರ್ನಾಕುಲಂನಲ್ಲಿ …

Read More »