Breaking News

ರಾಷ್ಟ್ರೀಯ

ರೌಡಿ ಶೀಟರ್‌ ಹಬೀದ್‌ಗೆ ಗುಂಡೇಟು

ಶಿವಮೊಗ್ಗ: ಬಂಧನ ಕಾರ್ಯಾಚರಣೆ ವೇಳೆ ಪೊಲೀಸ್​ ಸಿಬ್ಬಂದಿಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ರೌಡಿಶೀಟರ್​​ ಕಾಲಿಗೆ ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್‌ ಗುಂಡು ಹಾರಿಸಿ ಸೆರೆ ಹಿಡಿದಿದ್ದಾರೆ. ಮಂಗಳವಾರ ಶಿವಮೊಗ್ಗದ ರೌಡಿಶೀಟರ್​​​​ ಕಡೆಕಲ್​​ ಹಬೀದ್​​ ಹಾಗೂ ಆತನ ಸಹಚರರು​​ ಓರ್ವ ವ್ಯಕ್ತಿಯ ಕೊಲೆಗೆ ಸಂಚು ರೂಪಿಸಿ ಹೊಂಚು ಹಾಕಿದ್ದರು. ಈ ಕುರಿತು ಮಾಹಿತಿ ಪಡೆದ ಭದ್ರಾವತಿ ಪೇಪರ್‌ಟೌನ್​ ಪೊಲೀಸ್​ ಠಾಣೆಯ ಇನ್ಸ್‌ಪೆಕ್ಟರ್ ನಾಗಮ್ಮ ತಮ್ಮ ತಂಡದೊಂದಿಗೆ ಸ್ಥಳಕ್ಕೆ ತೆರಳಿ ದಾಳಿ ನಡೆಸಿದ್ದಾರೆ. …

Read More »

ಬೆಳಗಾವಿಯ ಸೆಕೆಂಡ್ ಗೇಟ್’ನಲ್ಲಿ ಮೇಲ್ಸೇತುವೆ ಬೇಡ…

ಬೆಳಗಾವಿಯ ಸೆಕೆಂಡ್ ಗೇಟ್’ನಲ್ಲಿ ಮೇಲ್ಸೇತುವೆ ಬೇಡ… ‘ಸಹಾಯಕ್ಕಿಂತ ಸಂಕಷ್ಟ’ ಹೆಚ್ಚಾದಿತು….ಆತಂಕ ವ್ಯಕ್ತಪಡಿಸಿದ ಸ್ಥಳೀಯರು… ಬೆಳಗಾವಿಯಲ್ಲಿ ಈಗ ಮತ್ತೊಂದು ರೇಲ್ವೇ ಮೇಲ್ಸೇತುವೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಆದರೇ, ಬೆಳಗಾವಿಯ ಸೆಕೆಂಡ್ ಗೇಟ್’ನ ರಹಿವಾಸಿಗಳು ಇಕ್ಕಟ್ಟಿನ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಿಸಿದರೇ, ಸಹಾಯಕ್ಕಿಂತ ಸಂಕಷ್ಟ ಹೆಚ್ಚಾಗಿಲಿದೆ ಎನ್ನುತ್ತಿದ್ದಾರೆ. ಈ ಕುರಿತು ಇಲ್ಲಿದೆ ಒಂದು ವರದಿ. ಹೌದು, ಬೆಳಗಾವಿ ಸೆಕೆಂಡ್ ರೇಲ್ವೆ ಗೇಟ್’ನಲ್ಲಿ ಮೇಲ್ಸೇತುವೆ ನಿರ್ಮಿಸಲು ಸರ್ಕಾರ ಮುಂದಾಗಿದೆ. ಆದರೇ, ಇಲ್ಲಿನ ರಹಿವಾಸಿಗಳು ಮೇಲ್ಸೇತುವೆ ನಿರ್ಮಾಣದಿಂದ …

Read More »

ಬಾಗಲಕೋಟೆ ಎಲ್ಲೆಂದರಲ್ಲಿ ಓಡಾಡೋ ಹಾಗಿಲ್ಲ,ಈ ನಗರ ಈಗ ಹೈ ಅಲರ್ಟ್..

ಬಾಗಲಕೋಟೆ ಎಲ್ಲೆಂದರಲ್ಲಿ ಓಡಾಡೋ ಹಾಗಿಲ್ಲ, ಏನು ಬೇಕು ಅದನ್ನ ಮಾಡೋ ಹಾಗಿಲ್ಲ…ಈ ನಗರ ಈಗ ಹೈ ಅಲರ್ಟ್.. ಮಂಗಳೂರು ಕೇಸ್ ಬೆನ್ನಲ್ಲೆ ಹೈ ಅಲರ್ಟ್ ಆಗಿರೋ ಬಾಗಲಕೋಟೆ ಪೋಲಿಸ್.. ಹೈ ಡೆಪ್ನಿಷನ್ ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಬಾಗಲಕೋಟೆ ನಗರ. ಬ್ಯಾಂಕ್, ಎಟಿಎಂಗಳಿಂದ ಹಣ ರವಾನೆ ಮಾಡೋದಾದ್ರೆ ಪೋಲಿಸರು ಹೈ ಅಲರ್ಟ್ ಅಪರಾಧಿ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಬಾಗಲಕೋಟೆ, ನವನಗರ ಸೇರಿ ನಗರದಾದ್ಯಂತ 393 ಹೈಡೆಪ್ನಿಷನ್ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ದೂರದವರೆಗಿನ …

Read More »

ಗ್ರಾಮಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ: ಹೆಬ್ಬಾಳಕರ್

ಗ್ರಾಮಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎನ್ನುವ ಪರಿಕಲ್ಪನೆ ಮೇಲೆ ಕೆಲಸ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್ 7 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ ಸಚಿವರು ಬೆಳಗಾವಿ: ಗ್ರಾಮಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎನ್ನುವ ಪರಿಕಲ್ಪನೆಯ ಮೇಲೆ ಕೆಲಸ ಮಾಡುತ್ತಿದ್ದೇನೆ. ಹಾಗಾಗಿಯೇ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಚಿತ್ರಣ ವರ್ಷದಿಂದ ವರ್ಷಕ್ಕೆ ಸಾಕಷ್ಟು ಬದಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ …

Read More »

ನನಗೆ ಯಾರೂ ಜಾತಿ ನಿಂದನೆ ಮಾಡಿಲ್ಲ ಕೇಸ್ ವಾಪಸ್ ಪಡೆಯಿರಿ ಎಂದು ಮೀನು ಕದ್ದ ಆರೋಪ ಸಂಬಂಧ ಹಲ್ಲೆಗೊಳಗಾದ ಮಹಿಳೆಯು ಜಿಲ್ಲಾಧಿಕಾರಿಗಳಿಗೆ ಮನವಿ

ಉಡುಪಿ : ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪ ಸಂಬಂಧ ಮರಕ್ಕೆ ಕಟ್ಟಿ ಹಲ್ಲೆ ನಡೆಸಿರುವ ಘಟನೆ ಸಂಬಂಧ ಆರೋಪಿಗಳ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ವಾಪಸ್ ಪಡೆಯುವಂತೆ ಹಲ್ಲೆಗೊಳಗಾದ ಸಂತ್ರಸ್ತ ಮಹಿಳೆಯು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ. ತಮ್ಮ ಸಮುದಾಯದ ಜನರ ಜೊತೆ ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಹಲ್ಲೆಗೊಳಗಾದ ಮಹಿಳೆಯು, ರಾಜಿ ಮಾಡಿಕೊಂಡಿದ್ದೇವೆ. ಈ ಪ್ರಕರಣ ಹಿಂಪಡೆಯಿರಿ ಎಂದು ಉಡುಪಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಮೀನು ಕದ್ದ ಸಂಬಂಧ ಅದೇ ದಿನ …

Read More »

ರಾಜ್ಯೋತ್ಸವ ಪ್ರಶಸ್ತಿ: ಅರ್ಜಿ ಬೇಡ, ಸರ್ಕಾರದಿಂದಲೇ ಅರ್ಹರ ಆಯ್ಕೆಗೆ ಚಿಂತನೆ – ಸಚಿವ ತಂಗಡಗಿ

ಬೆಂಗಳೂರು: ರಾಜ್ಯ ಸರ್ಕಾರದಿಂದ ಕೊಡಮಾಡುವ ಪ್ರತಿಷ್ಟಿತ ರಾಜ್ಯೋತ್ಸವ ಪ್ರಶಸ್ತಿಗಳನ್ನು ಅರ್ಜಿಗಳಿಂದ ಮುಕ್ತಗೊಳಿಸಿ ಸರ್ಕಾರದಿಂದಲೇ ನೇರವಾಗಿ ಅರ್ಹ ಸಾಧಕರನ್ನು ಆಯ್ಕೆ ಮಾಡುವ ಪದ್ಧತಿಯನ್ನು ಜಾರಿಗೆ ತರಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗಂಭೀರ ಚಿಂತನೆ ನಡೆಸುತ್ತಿದೆ. “ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ” ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ‌ ಸಚಿವ‌ ಶಿವರಾಜ್ ಎಸ್.ತಂಗಡಗಿ ತಿಳಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ …

Read More »

ಯುವ ಪೀಳಿಗೆಗೆ ಅಧ್ಯಾತ್ಮದ ಅರಿವು ಮೂಡಿಸುವುದು ಅಗತ್ಯವಾಗಿದೆ.

ಅಥಣಿ :ಯುವ ಪೀಳಿಗೆಗೆ ಅಧ್ಯಾತ್ಮದ ಅರಿವು ಮೂಡಿಸುವುದು ಅಗತ್ಯವಾಗಿದೆ. ಆಧುನಿಕ ಜಂಜಾಟಗಳಲ್ಲಿ ಯುವ ಜನತೆಗೆ ಆಧ್ಯಾತ್ಮಿಕ ಅರಿವು ಮೂಡಿಸಲು ಆಶ್ರಮಗಳ ಅಗತ್ಯವಿದೆ. ಜ್ಯಾತ್ಯತೀತ ತತ್ವದ ಮೂಲಕ ಮಾನವ ಕಲ್ಯಾಣ ಮಾಡುತ್ತ ಬಂದಿರುವ ಇಂಚಗೇರಿ ಸಂಪ್ರದಾಯದ ತತ್ವಗಳು ನಾಡಿನಲ್ಲಿ ಅತ್ಯಂತ ಶ್ರೇಷ್ಠವಾಗಿವೆ.ಮಾನವ ಕಲ್ಯಾಣವನ್ನೇ ಗುರಿಯಾಗಿಸಿಕೊಂಡಿರುವ ಮಾಧವಾನಂದರ ಉಪದೇಶ, ಸಂದೇಶ ಅಥಣಿ ಜನತೆಗೆ ದೊರೆಯಲಿ ಎಂಬ ಉದ್ದೇಶದಿಂದ ಮಾಧವಾನಂದ ಪ್ರಭುಗಳ ಆಶ್ರಮ ನಿರ್ಮಾಣವಾಗುತ್ತಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ.ಈ ಭಾಗದ ಇಂಚಗೇರಿ ಸಂಪ್ರದಾಯದ ಭಕ್ತಾದಿಗಳ …

Read More »

ಜಿಮ್ಸ್ ಆಸ್ಪತ್ರೆ ಆಕ್ಸಿಜನ್ ಸಮಸ್ಯೆ ಪ್ರಕರಣಕ್ಕೆ ಟ್ವಿಸ್ಟ್

ಕಲಬುರಗಿ, ಮಾರ್ಚ್ 24: ವಿದ್ಯುತ್ ಸಮಸ್ಯೆಯಿಂದ ಆಕ್ಸಿಜನ್ (Oxygen) ಸಿಗದೇ ಜಿಮ್ಸ್ ಆಸ್ಪತ್ರೆಯಲ್ಲಿ (GIMS Hospital) ರೋಗಿಗಳು ಪರದಾಡುವಂತಾದ ಘಟನೆ ಬಗ್ಗೆ ಇದೀಗ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ (Sharanprakash Patil) ಪ್ರತಿಕ್ರಿಯಿಸಿದ್ದಾರೆ. ವೈದ್ಯಕೀಯ ಸಿಬ್ಬಂದಿ ಹ್ಯಾಂಡ್ ಪಂಪ್ ಮೂಲಕ ಆಕ್ಸಿಜನ್ ಪೂರೈಕೆ ಮಾಡುವ ವಿಡಿಯೋವನ್ನು ವೈರಲ್ ಮಾಡಿದ್ದರ ಹಿಂದೆ ಖಾಸಗಿ ಆಸ್ಪತ್ರೆಗಳ ಕೈವಾಡ ಇರಬಹುದು ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ. ನಮ್ಮ ಸರ್ಕಾರಿ ಆಸ್ಪತ್ರೆಯ ದಕ್ಷತೆಯನ್ನು ಅವರಿಗೆ (ಖಾಸಗಿ ಆಸ್ಪತ್ರೆಗಳು) ಸಹಿಸಿಕೊಳ್ಳಲಾಗುತ್ತಿಲ್ಲ. ಹೀಗಾಗಿ ವಿಡಿಯೋ ವೈರಲ್ …

Read More »

ಸಿನಿಮೀಯ ರೀತಿಯಲ್ಲಿ ರಾಬರಿ ಮಾಡಿದ್ದ ವಾಹನ ಹಿಡಿದ ಪೊಲೀಸರು..

ಸಿನಿಮೀಯ ರೀತಿಯಲ್ಲಿ ರಾಬರಿ ಮಾಡಿದ್ದ ವಾಹನ ಹಿಡಿದ ಪೊಲೀಸರು.. ಚಾಲಕನಿಗೆ ಚಾಕು ಇರಿದು ಲಾರಿ ಕಳ್ಳತನ ಮಾಡಿದ್ದ ಕಳ್ಳರು ಪರಾರಿ…ಲಾರಿ ವಶಕ್ಕೆ!! ಜೀವದ ಹಂಗು ತೊರೆದು ಸಿನಿಮೀಯ ರೀತಿಯಲ್ಲಿ ರಾಬರಿ ಮಾಡಿದ್ದ ವಾಹನವನ್ನು ಹಿಡಿಯುವುದರಲ್ಲಿ ಬಾಗಲಕೋಟೆ ಜಿಲ್ಲೆಯ ಬೀಳಗಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ಬಾಡಗಂಡಿ ಕ್ರಾಸ್ ಬಳಿ ಮದ್ಯ ರಾತ್ರಿ 2 ಗಂಟೆಗೆ ಈ ಘಟನೆ ನಡೆದಿದೆ. ಸಿನಿಮೀಯ ರೀತಿಯಲ್ಲಿ ಜೀವದ ಹಂಗು ತೊರೆದು ಚೆಸ್ ಮಾಡಿ …

Read More »

ಹನಿಟ್ರ್ಯಾಪ್ ಸದ್ದು ಮಧ್ಯೆ ಕುತೂಹಲ ಕೆರಳಿಸಿದ ಉಭಯ ನಾಯಕರ ಭೇಟಿ

ಬೆಂಗಳೂರು: ರಾಜ್ಯದಲ್ಲಿ ಹನಿಟ್ರ್ಯಾಪ್ ವಿವಾದ ಸದ್ದು ಮಾಡುತ್ತಿರುವ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ಮಲ್ಲಿಕಾರ್ಜುನ ಖರ್ಗೆ, ಅವರ ಆರೋಗ್ಯ ವಿಚಾರಿಸಿದರು. ಮೊಣಕಾಲು ನೋವಿನಿಂದ ಶೀಘ್ರವಾಗಿ ಚೇತರಿಸಿಕೊಳ್ಳುವಂತೆ ಹಾರೈಸಿದರು. ಈ ವೇಳೆ ಸಚಿವರಾದ ಪ್ರಿಯಾಂಕ್​ ಖರ್ಗೆ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಇದ್ದರು. ಹನಿಟ್ರ್ಯಾಪ್ ಕುರಿತು ಈಗಾಗಲೇ ಸದನದಲ್ಲೇ ಸಚಿವ ರಾಜಣ್ಣ ಹೇಳಿಕೆ …

Read More »