Breaking News

ರಾಷ್ಟ್ರೀಯ

ಕರ್ನಾಟಕದ ಕೊರೋನಾ ಹಾಟ್‌ಸ್ಪಾಟ್‌ಗಳಲ್ಲಿ ಕನಿಷ್ಠ 2 ವಾರ ಲಾಕ್‍ಡೌನ್ ಮುಂದುವರಿಕೆ..

ಬೆಂಗಳೂರು : ಲಾಕ್ ಡೌನ್ ತೆರವುಗೊಳಿಸುವ ಸಂಬಂಧ ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಸರ್ಕಾರ ಹೇಳಿದೆ. ಆದರೆ, ಕೋವಿಡ್-19 ಹಾಟ್ ಸ್ಪಾಟ್ ಗಳಲ್ಲಿ ಕನಿಷ್ಠ ಎರಡು ವಾರಗಳವರೆಗೆ ವಿಸ್ತರಿಸುವ ಕಡೆಗೆ ಒಲವು ವ್ಯಕ್ತಪಡಿಸಿದೆ. ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ಮತ್ತೊಂದಿಷ್ಟು ದಿನಗಳ ಕಾಲ ಲಾಕ್ ಡೌನ್ ವಿಸ್ತರಿಸುವ ಅಗತ್ಯತೆ ಬಗ್ಗೆ ಎದುರು ನೋಡಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ರೋಗದ …

Read More »

ಪ್ರಧಾನಿ ಮೋದಿಗೆ ಸೋನಿಯಾ ಗಾಂಧಿ ಪಂಚ ಸಲಹೆ

ನವದೆಹಲಿ: ದೇಶಾದ್ಯಂತ ಹದ್ದು ಮೀರುತ್ತಿರುವ ಕೊರೊನಾ ನಿಯಂತ್ರಣಕ್ಕೆ ವಿಪಕ್ಷ ನಾಯಕರ ಸಲಹೆ ಕೇಳಿ ಪ್ರಧಾನಿ ನರೇಂದ್ರ ಮೋದಿ ಅವರು ಮೊನ್ನೆಯಷ್ಟೇ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಈ ಬೆನ್ನಲ್ಲೇ, ಇವತ್ತು ಪ್ರಧಾನಿ ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಸಂಸದರ ಶೇ.30ರಷ್ಟು ಸಂಬಳ ಕಡಿತಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೊರೊನಾ ವಿರುದ್ಧ ಹೋರಾಟದ ಆರ್ಥಿಕ ಕ್ರೋಢೀಕರಣಕ್ಕಾಗಿ ಐದು ಸಲಹೆ ನೀಡಿದ್ದಾರೆ. ಪ್ರಧಾನಿಗೆ ಸೋನಿಯಾ ‘ಪಂಚ’ ಸಲಹೆ: ಸಲಹೆ …

Read More »

ಅಧಿಕಾರಿಗಳ ದಾಳಿ – ಅಕ್ರಮವಾಗಿ ಪಡಿತರ ಸಾಗಿಸುತ್ತಿದ್ದ ಜಾಲ ಪತ್ತೆ

ಶಿವಮೊಗ್ಗ: ಕೊರೊನಾ ಭೀತಿಯಿಂದ ರಾಜ್ಯದಲ್ಲಿ ಯಾರೊಬ್ಬರೂ ಹಸಿವಿನಿಂದ ಸಾಯಬಾರದು ಎಂಬ ಕಾರಣದಿಂದ ರಾಜ್ಯ ಸರ್ಕಾರ ಕಳೆದ ಎರಡು ದಿನಗಳಿಂದ ಎರಡು ತಿಂಗಳಿನದ್ದು ಪಡಿತರ ಅಕ್ಕಿ, ಗೋಧಿ ವಿತರಿಸುತ್ತಿದೆ. ಆದರೆ ಮುಖ್ಯಮಂತ್ರಿ ತವರು ಜಿಲ್ಲೆ ಶಿವಮೊಗ್ಗದಲ್ಲಿ ಇದನ್ನೇ ಬಂಡವಾಳ ಮಾಡಿಕೊಂಡ ದಂಧೆಕೋರರು ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟಕ್ಕೆ ಯತ್ನಿಸಿ ಇದೀಗ ಸಿಕ್ಕಿಬಿದ್ದಿದ್ದಾರೆ. ಆಹಾರ ಇಲಾಖೆ ಅಧಿಕಾರಿಗಳಿಗೆ ಬಂದ ಖಚಿತ ಮಾಹಿತಿ ಮೇರೆಗೆ ನಗರದ ಹೊರ ವಲಯದ ಕಲ್ಲೂರು ಬಳಿಯ ಫಾರಂ ಹೌಸ್‍ವೊಂದರ …

Read More »

ಫುಲ್ ಸೈಲೆಂಟ್ ಆದ ಬಿಜೆಪಿ ಚಾಣಕ್ಯ-ಮುಖ್ಯ ವಾಹಿನಿಯಲ್ಲಿಲ್ಲ ಗೃಹ ಸಚಿವ ಅಮಿತ್ ಶಾ

ನವದೆಹಲಿ: ಇಡೀ ದೇಶ ಕೊರೊನಾ ಸೋಂಕಿಗೆ ತತ್ತರಿಸಿ ಹೋಗಿದೆ. ಈ ವೈರಸ್ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ದೇಶದ ಜನರನ್ನ ಉದ್ದೇಶಿಸಿ ಪ್ರಧಾನಿ ಮೋದಿ ಮೂರು ಬಾರಿ ಮಾತನಾಡಿದ್ದಾರೆ. ಆದರೆ ಗೃಹ ಸಚಿವ ಅಮಿತ್ ಶಾ ಮಾತ್ರ ಈ ನಡುವೆ ನಾಪತ್ತೆಯಾಗಿದ್ದಾರೆ. ಕೊರೊನಾ ಸೋಂಕು ದೇಶವನ್ನು ಕಿತ್ತು ತಿನ್ನುತ್ತಿದೆ. ಭಾರತ ಲಾಕ್‍ಡೌನ್ ಆದ್ರೂ ಸೋಂಕಿತರ ಪ್ರಮಾಣದಲ್ಲಿ ಇಳಿಕೆ ಕಂಡು ಬರ್ತಿಲ್ಲ. ಈ ನಡುವೆ ಲಾಕ್ …

Read More »

ಕೆಟ್ಟ ದಾಖಲೆ ಬರೆದ ‘ಮಹಾ’- 1 ಸಾವಿರ ಸೋಂಕಿತರ ಗಡಿ ದಾಟಿದ ಮೊದಲ ರಾಜ್

ಮುಂಬೈ: ಹೆಮ್ಮಾರಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಲೇ ಇದೆ. ಮಂಗಳವಾರ ರಾತ್ರಿ 7 ಗಂಟೆ ವೇಳೆ ಒಂದು ಸಾವಿರ ಸೋಂಕಿತರ ಗಡಿ ದಾಟಿದೆ. ಮಹಾರಾಷ್ಟ್ರದಲ್ಲಿ ಮಂಗಳವಾರ ಒಂದೇ ದಿನದಲ್ಲಿ 150 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,018ಕ್ಕೆ ಕಂಡಿದೆ. ದೇಶದಲ್ಲಿ ಈವರೆಗೂ ಯಾವುದೇ ರಾಜ್ಯದಲ್ಲಿಯೂ ಸೋಂಕಿತರ ಸಂಖ್ಯೆ ಒಂದು …

Read More »

ನಿಯತಿ ಫೌಂಡೇಶನ್ ಸಂಸ್ಥಾಪಕಿ ಡಾ. ಸೋನಾಲಿ ಸರ್ನೊಬತ್ ಕಾರ್ಯನಿರತ‌ ಪತ್ರಕರ್ತರಿಗೆ ಮಾಸ್ಕ್ ವಿತರಿಸಿ ಬಳಿಕ ಮಾತನಾಡಿದರು.

ಬೆಳಗಾವಿ: ಮಾಹಾಮಾರಿ ಕೊರೊನಾ ಸೋಂಕಿಗೆ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ‌. ಇಂಥಹ ಪರಿಸ್ಥಿತಿಯಲ್ಲಿಯೂ ಅಗತ್ಯ ಸೇವೆ ಸಲ್ಲಿಸುತ್ತಿರುವ ವೈದ್ಯರು, ಪತ್ರಕರ್ತರ ಕಾರ್ಯ ಶ್ಲಾಘನೀಯ ಎಂದು‌ ನಿಯತಿ ಫೌಂಡೇಶನ್ ಸಂಸ್ಥಾಪಕಿ ಡಾ. ಸೋನಾಲಿ ಸರ್ನೊಬತ್ ಬಣ್ಣಿಸಿದರು. ಇಲ್ಲಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಭಾ ಭವನದಲ್ಲಿ ನಿಯತಿ ಫೌಂಡೇಶನ್ ಹಾಗೂ ಬೆಳಗಾವಿ ಪತ್ರಕರ್ತರ ಸಂಘದ ವತಿಯಿಂದ ಕಾರ್ಯನಿರತ‌ ಪತ್ರಕರ್ತರಿಗೆ ಮಾಸ್ಕ್ ವಿತರಿಸಿ ಬಳಿಕ ಮಾತನಾಡಿದರು. ಮಾರಕ ಕೊರೊನಾ ಸೋಂಕು ಭೀತಿ …

Read More »

ರೈಲುಗಳ ಬುಕಿಂಗ್ ಅನ್ನು ಏಪ್ರಿಲ್ 30 ರವರೆಗೆ ಸ್ಥಗಿತ

ನವದೆಹಲಿ: ಹೆಮ್ಮಾರಿ ಕೊರೊನಾ ವೈರಸ್ ಭೀತಿಯಿಂದಾಗಿ ಸ್ತಬ್ಧಗೊಂಡಿದ್ದ ರೈಲು ಸೇವೆ ಸದ್ಯಕ್ಕೆ ಆರಂಭಗೊಳ್ಳುವುದಿಲ್ಲ. ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ಐಆರ್‌ಸಿಟಿಸಿ, ರೈಲುಗಳ ಬುಕಿಂಗ್ ಅನ್ನು ಏಪ್ರಿಲ್ 30 ರವರೆಗೆ ಸ್ಥಗಿತಗೊಳಿಸಲು ನಿರ್ಧರಿಸಿದೆ. ಈ ಮಧ್ಯೆ ಐಆರ್‌ಸಿಟಿಸಿ ಸದ್ಯ ಮೂರು ರೈಲುಗಳನ್ನು ಓಡಿಸಲಿದೆ. 2 ತೇಜಸ್ ರೈಲುಗಳು ಮತ್ತು 1 ಕಾಶಿ ಮಹಕಲ್ ಎಕ್ಸ್‌ಪ್ರೆಸ್‌ ರೈಲು ಸಂಚರಿಸಲಿದೆ. ತೇಜಸ್ ಎಕ್ಸ್‌ಪ್ರೆಸ್‌ ರೈಲು ಅಹಮದಾಬಾದ್ – ಮುಂಬೈ ಮಧ್ಯ ಸಂಚರಿಸಿದರೆ, …

Read More »

ಭಾರತ ಹೈಡ್ರಾಕ್ಸಿಕ್ಲೋರೊಕ್ವಿನ್ ರಫ್ತು ಮಾಡದಿದ್ದರೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ : ಟ್ರಂಪ್ ವಾರ್ನಿಂಗ್

ವಾಷಿಂಗ್ಟನ್, ಏ.7- ಡೆಡ್ಲಿ ಕೊರೊನಾ ವೈರಾಣು ದಾಳಿಯಿಂದ ಅಪಾರ ಸಾವು ಮತ್ತು ಸೋಂಕಿನಿಂದ ಕಂಗೆಟ್ಟಿರುವ ಅಮೆರಿಕಾ ಕೋವಿಡ್-19 ವೈರಾಣು ಸೋಂಕು ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುವ ಮಲೇರಿಯಾ ನಿರೋಧಕ ಔಷಧಿ ಹೈಡ್ರಾಕ್ಸಿಕ್ಲೋರೊಕ್ವಿನ್ ರಫ್ತು ಮಾಡದಿದ್ದರೆ ಭಾರತದ ವಿರುದ್ಧ ಪ್ರತೀಕಾರ ಕ್ರಮ ಕೈಗೊಳ್ಳುವುದಾಗಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ವಾಷಿಂಗ್ಟನ್‍ನಲ್ಲಿ ನಡೆದ ಕೊರೊನಾ ಟಾಸ್ಕ್‍ಫೋರ್ಸ್ ಸಭೆಯಲ್ಲಿ ಮಾತನಾಡಿ, ಟ್ರಂಪ್ ಭಾರತ ಅಮೆರಿಕಕ್ಕೆ ಔಷಧಿ ರಫ್ತು ಮಾಡುತ್ತದೆ ಎಂಬ …

Read More »

ಕೊರೊನಾ ಸೋಂಕು ಯಾವುದೇ ಜಾತಿ, ಧರ್ಮ ನೋಡಿ ಬರಲ್ಲ. ಒಂದು ಸಮುದಾಯದತ್ತ ಬೆರಳು ಮಾಡಿ ತೋರಿಸಬೇಡಿ : ಸಿ.ಎಂ.ಇಬ್ರಾಹಿಂ

ಬೆಂಗಳೂರು: ಕೊರೊನಾ ಸೋಂಕು ಯಾವುದೇ ಜಾತಿ, ಧರ್ಮ ನೋಡಿ ಬರಲ್ಲ. ಒಂದು ಸಮುದಾಯದತ್ತ ಬೆರಳು ಮಾಡಿ ತೋರಿಸಬೇಡಿ ಎಂದು ವಿಧಾ‌ನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಮನವಿ ಮಾಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಡೀ ಜಗತ್ತಿಗೆ ಮಾಹಾಮಾರಿ ಕೊರೊನಾ ಕಂಟಕವಾಗಿದೆ. ಲಾಕ್​ಡೌನ್ ಆದೇಶವನ್ನು ನಾವೆಲ್ಲರೂ ಅನುಸರಿಸುತ್ತಿದ್ದೇವೆ. ನಾವ್ಯಾರು ಮಸೀದಿ ಕಡೆ ತಲೆ ಹಾಕುತ್ತಿಲ್ಲ. ಮನೆಗಳಲ್ಲೇ ನಮಾಜ್ ಮಾಡ್ತಿದ್ದೇವೆ. ಮುಂಬರುವ ರಂಜಾನ್ ಹಬ್ಬವನ್ನೂ ನಾವು ಮನೆಯಲ್ಲೇ ಮಾಡಿಕೊಳ್ತೇವೆ. ಇದನ್ನ …

Read More »

ಎಲ್ಲಿ ಮಲಗಿದ್ದಾರೋ’ ಎಂದ ಡಿಕೆಶಿಗೆ ತಿರುಗೇಟು ನೀಡಿದ ಸಚಿವ ಈಶ್ವರಪ್ಪ

ಬೆಂಗಳೂರು,ಏ.7- ರಾಜ್ಯದ 49 ಬರಪೀಡಿತ ತಾಲ್ಲೂಕುಗಳಲ್ಲಿ ಕುಡಿಯುವ ನೀರಿಗಾಗಿ ತಾಲ್ಲೂಕಿಗೆ ತಲಾ ಒಂದು ಕೋಟಿ ರೂ ಅನುದಾನ ಒದಗಿಸಲಾಗಿದೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ‌ ಗ್ರಾಮ ಪಂಚಾಯ್ತಿಗಳಲ್ಲಿ ಕೊರೋನಾ ಟಾಸ್ಕ್ ಫೋರ್ಸ್ ರಚನೆ ಮಾಡಿದ್ದೇವೆ. ಗ್ರಾಮಗಳಲ್ಲೂ ಸಮಿತಿಗಳನ್ನು ಮಾಡಿ ಕೊರೋನಾ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ನರೇಗಾ ಯೋಜನೆಯಲ್ಲಿ ಕೇಂದ್ರದಿಂದ 1,861 ಕೋಟಿ …

Read More »