ಬೆಳಗಾವಿ, : ನನ್ನದು ಹಾಗೂ ಸಚಿವ ಕೆ.ಎಸ್.ಈಶ್ವರಪ್ಪನವರದ್ದು ಪ್ರೀತಿ ಮತ್ತು ದ್ವೇಷದ ಸಂಬಂಧ (ಲವ್ ಆಂಡ್ ಹೇಟ್) ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ ಪ್ರಸಂಗ ನಡೆಯಿತು. ಗುರುವಾರ ವಿಧಾನಸಭೆಯಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕದ ಮೇಲಿನ ಚರ್ಚೆಯಲ್ಲಿ ಮಾತನಾಡುತ್ತಿದ್ದ ವೇಳೆ ನನ್ನದು ಈಶ್ವರಪ್ಪನವರ ಸಂಬಂಧ ವಿಶೇಷ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಕಾಗೇರಿ, ನಿಮ್ಮ ಹಾಗೂ ಈಶ್ವರಪ್ಪ ನಡುವಿನ ಸ್ನೇಹದ ಗುಟ್ಟೇನು ಎಂದು ಕಾಲೆಳೆದರು. ಈ ವೇಳೆ …
Read More »ಯಡಿಯೂರಪ್ಪ ಸಿಎಂ ಆಗಿದ್ದಾಗ ಡಿಸೆಂಬರ್‌ಗೆ ಇಳಿಯುತ್ತಾರೆ ಎಂದಿದ್ದೆ, ಈಗ ಬೊಮ್ಮಾಯಿ ಅವರು ಜನವರಿಗೆ ಇಳಿಯುತ್ತಾರೆ: ಸಿ.ಎಂ. ಇಬ್ರಾಹಿಂ
ಬೆಳಗಾವಿ: ಯಡಿಯೂರಪ್ಪ ಸಿಎಂ ಆಗಿದ್ದಾಗ ಡಿಸೆಂಬರ್‌ಗೆ ಇಳಿಯುತ್ತಾರೆ ಎಂದಿದ್ದೆ, ಈಗ ಬೊಮ್ಮಾಯಿ ಅವರು ಜನವರಿಗೆ ಇಳಿಯುತ್ತಾರೆ ಎಂದು ಹೇಳಿದ್ದೇನೆ. ನಮ್ಮ ಭವಿಷ್ಯ ಸುಳ್ಳಾಗುವುದಿಲ್ಲ ಎಂದು ಕಾಂಗ್ರೆಸ್ ಸದಸ್ಯ ಸಿ.ಎಂ. ಇಬ್ರಾಹಿಂ ಅವರು ಹೇಳಿದ್ದಾರೆ. ಸುವರ್ಣ ವಿಧಾನಸೌಧದಲ್ಲಿ ಮಾತನಾಡಿದ ಅವರು, ಈಗಾಗಲೇ ಮೇಲ್ನೋಟಕ್ಕೆ ಎರಡು ಮೂರು ಹೆಸರು ಕೇಳಿ ಬರುತ್ತಿವೆ. ಬೊಮ್ಮಾಯಿ ಅವರ ಕಾಲು ಚೆನ್ನಾಗಿತ್ತು. ಕೆಲಸ ಮಾಡಿ ಕುಂಟುವಂತಾಗಿದೆ. ಮುಂಬಯಿಗೆ 12 ಜನರನ್ನು ಕರೆದುಕೊಂಡು ಹೋಗಿ ವೀಡಿಯೋ ಮಾಡಿಕೊಂಡು …
Read More »ಕುಟುಂಬ ಸಮೇತ ದುಬೈಗೆ ಯಡಿಯೂರಪ್ಪ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕುಟುಂಬ ಸಮೇತ ದುಬೈ ಪ್ರವಾಸ ಕೈಗೊಂಡಿದ್ದು, ನಾಳೆ ದುಬೈಗೆ ತೆರಳಲಿದ್ದಾರೆ. ಮೂರು ದಿನಗಳ ಪ್ರವಾಸಕ್ಕೆ ತೆರಳಲಿರುವ ಯಡಿಯೂರಪ್ಪ ದುಬೈ ಕನ್ನಡ ಸಂಘದ ಶಾಲೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ನಿನ್ನೆ ಬೆಳಗಾವಿಯ ಸುವರ್ಣಸೌಧದಲ್ಲಿ ಯಡಿಯೂರಪ್ಪ RTPCR ಟೆಸ್ಟ್ ಮಾಡಿಸಿದ್ದಾರೆ. ಇಂದು ಸಂಜೆ ಬೆಳಗಾವಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿರುವ ಅವರು ನಾಳೆ ಕುಟುಂಬ ಸಮೇತರಾಗಿ ದುಬೈಗೆ ಪ್ರಯಾಣ ಬೆಳೆಸಲಿದ್ದಾರೆನ್ನಲಾಗಿದೆ.
Read More »ಬೀದಿಗೆ ಬಂತು ಬಾಳೆ ಬೆಳೆಗಾರರ ಬದುಕು
ಲಕ್ಷ್ಮೇಶ್ವರ: ಪ್ರಸ್ತುತ ಮಾರುಕಟ್ಟೆಯಲ್ಲಿ ಬಾಳೆಹಣ್ಣಿಗೆ ಬೇಡಿಕೆ ಇಲ್ಲದ ಕಾರಣ ಬೆಲೆ ಕುಸಿತವಾಗಿ ಬಾಳೆ ಬೆಳೆದ ರೈತರ ಬದುಕು ಬೀದಿಗೆ ಬಿದ್ದಿದೆ. ಬೆಳೆದ ಹಣ್ಣನ್ನು ತಾವೇ ಮಾರಾಟ ಮಾಡಿ ಬದುಕಿನ ಬಂಡಿ ಸಾಗಿಸುವ ಅನಿವಾರ್ಯತೆ ನಿರ್ಮಾಣವಾಗಿದೆ. ಒಣ ಬೇಸಾಯದಿಂದ ಕೈ ಸುಟ್ಟುಕೊಳ್ಳುತ್ತಿರುವ ರೈತರು ತೋಟಗಾರಿಕೆಯತ್ತ ಚಿತ್ತ ಹರಿಸಿ ಲಾಭದಾಯಕ ಬೆಳೆಗಳನ್ನು ಬೆಳೆದು ಒಂದಿಷ್ಟು ಆರ್ಥಿಕ ಸುಧಾರಣೆಯ ಯೋಜನೆ, ಕನಸುಗಳನ್ನುರೈತರು ಕಾಣುತ್ತಿದ್ದಾರೆ. ತೋಟಗಾರಿಕೆಯಲ್ಲಿ ಬಾಳೆ,ದಾಳಿಂಬೆ, ದ್ರಾಕ್ಷಿ, ಕಬ್ಬು, ಅಡಕೆ, ಮಾವು, ಚಿಕ್ಕು ಸೇರಿಕೆಲ …
Read More »ಅಪ್ರಾಪ್ತರು, ಎಸ್,ಎಸಿ, ಎಸ್.ಟಿ ಸಮುದಾಯದವರ ಮತಾಂತರ ಮಾಡುವುದಕ್ಕೆ ಶಿಕ್ಷೆ ವಿಧಿಸಲಾಗುವುದು.
ಬೆಂಗಳೂರು : ವಿಧಾನಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆಯ ಬಗ್ಗೆ ಚರ್ಚೆ ನಡೆಯುತ್ತಿದ್ದು, ವಿಧೇಯಕದ ಬಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರ (Minister Araga Gyanendra) ಮಾಹಿತಿ ನೀಡಿದ್ದಾರೆ. ಅಪ್ರಾಪ್ತರು, ಎಸ್,ಎಸಿ, ಎಸ್.ಟಿ ಸಮುದಾಯದವರ ಮತಾಂತರ ಮಾಡುವುದಕ್ಕೆ ಶಿಕ್ಷೆ ವಿಧಿಸಲಾಗುವುದು. ಬಲವಂತದ ಮತಾಂತರ ಮಾಡಿದರೆ ಶಿಕ್ಷೆ ಜೊತೆಗೆ ದಂಡ, ಬಲವಂತದ ಮತಾಂತರ ಮಾಡಿದರೆ 3 ರಿಂದ 10 ವರ್ಷ ಜೈಲು ಶಿಕ್ಷೆ, 50 ಸಾವಿರ ರೂ. ದಂಡ. ಸಾಮೂಹಿಕವಾಗಿ ಮತಾಂತರ ಮಾಡಿದರೆ …
Read More »ಬೆಳಗಾವಿಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಉದ್ಘಾಟಿಸಿದರು.
ಬೆಳಗಾವಿಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಉದ್ಘಾಟಿಸಿದರು. ಬುಧವಾರ ಸಾಯಂಕಾಲ ಬಿಮ್ಸ ಆವರಣದಲ್ಲಿ ಜಿನೊಮ್ ಸಿಕ್ವೆನ್ಸಿಂಗ್ ಲ್ಯಾಬ್, ನವಿಕೃತ ಅಡುಗೆ ಕೋಣೆ, ನವಿಕೃತ ವಿಶೇಷ ಕೊಠಡಿಗಳು, ಹೊಸ ವೈದ್ಯಕೀಯ ತುರ್ತು ನಿಗಾ ಘಟಕಗಳನ್ನು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಉದ್ಘಾಟಿಸಿದರು. ಈ ವೇಳೆ ಜಲಸಂಪನ್ಮೂಲ ಇಲಾಖೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಉತ್ತರ …
Read More »ಬೆಳಗಾವಿಯಲ್ಲಿ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರ ಗುತ್ತಿಗೆ ನೌಕರರಿಂದ ಪ್ರತಿಭಟನೆ
ಬೆಳಗಾವಿಯ ಸುವರ್ಣ ಗಾರ್ಡನ್‍ನಲ್ಲಿ ಪ್ರತಿಭಟನೆ ನಡೆಸಿದ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರ ಗುತ್ತಿಗೆ ನೌಕರರು ಸೇವಾ ಭದ್ರತೆ, ಹೊರ ಸಿಬ್ಬಂದಿಗಳ ಬಾಕಿ ವೇತನ ಮತ್ತು ಲಾಕ್‍ಡೌನ್ ಅವಧಿಯ ವೇತನ ಕೂಡಲೇ ಸಂದಾಯ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ನಮ್ಮ ಇನ್‍ನ್ಯೂಸ್ ಜೊತೆಗೆ ಮಾತನಾಡಿದ ಸಂಘದ ಮುಖಂಡ ಮರಡಿ ಎಮ್. ಚಂಬಯ್ಯನಾಯ್ಕ ಸೇವೆಯಿಂದ ಬಿಡುಗಡೆಗೊಳಿಸಲಾದ ಹಾಸ್ಟೆಲ್ ಹೊರ ಗುತ್ತಿಗೆ …
Read More »ಶೀಘ್ರವೇ ರಾಜ್ಯದಲ್ಲಿ `ಉದ್ಯೋಗ ನೀತಿ’ ಜಾರಿ – ಸಿಎಂ ಬೊಮ್ಮಾಯಿ ಘೋಷಣೆ
ಬೆಳಗಾವಿ: ರಾಜ್ಯದಲ್ಲಿ ಶೀಘ್ರದಲ್ಲೇ ಅತ್ಯಂತ ರಚನಾತ್ಮಕವಾದ `ಉದ್ಯೋಗ ನೀತಿ’ಯನ್ನು ( Udyoga Neeti ) ಜಾರಿಗೆ ತರಲಾಗುವುದು. ಈ ಮೂಲಕ ಉದ್ಯೋಗ ಸೃಷ್ಟಿಗೆ ಒತ್ತು ಕೊಡುತ್ತಿದ್ದು, ನಿರುದ್ಯೋಗ ಸಮಸ್ಯೆ ನಿವಾರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಹೇಳಿದ್ದಾರೆ. ಇಲ್ಲಿನ ಗೋಗಟೆ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ಹಮ್ಮಿಕೊಂಡಿದ್ದ `ಸರ್ವರಿಗೂ ಉದ್ಯೋಗ’ ಕಾರ್ಯಕ್ರಮ ಲೋಕಾರ್ಪಣೆ ಮತ್ತು `ಉದ್ಯೋಗ ಮೇಳ’ವನ್ನು …
Read More »ಕಾಂಗ್ರೆಸ್‍ನವರ ಕೂಸಿಗೆ ಸ್ವಲ್ಪ ಟಚಪ್ ಮಾಡಿದ್ದೇವೆ ಅಷ್ಟೇ : ಸಚಿವ ಅಶೋಕ್
ಬೆಳಗಾವಿ, ಡಿ.23- ಕಾಂಗ್ರೆಸ್ ಸರ್ಕಾರದ ಅವಧಿಯ ಕೂಸಿಗೆ ಸ್ವಲ್ಪ ಬದಲಾವಣೆ ಮಾಡಿ ಮತಾಂತರ ನಿಷೇಧ ವಿಧೇಯಕವನ್ನು ತಂದಿದ್ದೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನವರ ಕೂಸಿಗೆ ಸ್ವಲ್ಪ ಮಾರ್ಪಾಡು ಮಾಡಿ ಟಚಪ್ ಕೊಟ್ಟಿದ್ದೇವೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗಲೇ ವಿಧೇಯಕವನ್ನು ಸಿದ್ದಪಡಿಸಲಾಗಿತ್ತು. ಇದೀಗ ಕಾಂಗ್ರೆಸ್‍ನ ಬಣ್ಣ ಬಟ್ಟಬಯಲಾಗಿದೆ ಎಂದು ಟೀಕಿಸಿದರು. ಹಿಂದೂಗಳನ್ನು ಮತಾಂತರಗೊಳಿಸಲು ಷಡ್ಯಂತ್ರಗೊಳಿಸಲಾಗುತ್ತಿದೆ. ವಿದೇಶದಿಂದಲೂ ಸಾಕಷ್ಟು ಹಣ ಬರುತ್ತದೆ. ಹೀಗಾಗಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು …
Read More »ಯಾವುದೇ ಒತ್ತಡಕ್ಕೆ ಮಣಿಯದೆ ರಾಜಕಾಲುವೆ ತೆರವು : ಬೊಮ್ಮಾಯಿ
ಬೆಳಗಾವಿ, ಡಿ.23- ಬಿಬಿಎಂಪಿ ವ್ಯಾಪ್ತಿಯಲ್ಲಿನ ರಾಜಕಾಲುವೆ ಒತ್ತುವರಿ ತೆರವಿಗೆ ಯಾವುದೇ ಒತ್ತಡಕ್ಕೆ ಮಣಿಯದೆ ಮುಲ್ಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಯು.ಬಿ.ವೆಂಕಟೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 382 ಎಕರೆ 27 ಗುಂಟೆ ಜಮೀನು ಒತ್ತುವರಿಯಾಗಿದೆ. ಈ ಸಂಬಂಧ 2626 ಒತ್ತುವರಿಗಳನ್ನು ಗುರುತಿಸಲಾಗಿದೆ. ಈಗಾಗಲೇ 1912 ಒತ್ತುವರಿ ತೆರವುಗೊಳಿಸಲಾಗಿದೆ.ಒಟ್ಟು 714 ರಾಜಕಾಲುವೆ ಒತ್ತುವರಿಗಳನ್ನು ತೆರವುಗೊಳಿಸಬೇಕಿದೆ. ಈ ಸಂಬಂಧಪಟ್ಟಂತೆ ಭೂಮಾಪನ ಕಾರ್ಯ …
Read More »
Laxmi News 24×7