ಕೋಲಾರ, ಮಾರ್ಚ್”ರಾಜ್ಯದಲ್ಲಿ ಉಂಟಾಗಿರುವ ಅಶಾಂತಿಯ ವಾತಾವರಣ ಮತ್ತು ಎಲ್ಲ ಅಹಿತಕರ ಘಟನೆಗಳಿಗೆ ಪ್ರತಿಪಕ್ಷ ನಾಯಕಸಿದ್ದರಾಮಯ್ಯಅವರೇ ಮೂಲ ಕಾರಣ” ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಆರೋಪಿಸಿದರು. ಭಾನುವಾರ ಕೋಲಾರದಲ್ಲಿ ಮಾತನಾಡಿದ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. “ಧಾರ್ಮಿಕ ಸ್ಥಳಗಳಲ್ಲಿ, ಜಾತ್ರೆಗಳಲ್ಲಿ ಒಂದು ಧರ್ಮದ ಜನರಿಗೆ ವ್ಯಾಪಾರ ಮಾಡಲು ಬಿಡುತ್ತಿಲ್ಲ, ಹಿಜಾಬ್, ಕೇಸರಿ ಶಾಲು ಅಂತ ಹೇಳಿ ಶಾಲೆ ಕಾಲೇಜುಗಳಲ್ಲಿ ಸಂಘರ್ಷ ಉಂಟು ಮಾಡಲಾಯಿತು. ಇದೆಲ್ಲಕ್ಕೂ …
Read More »ರಸ್ತೆ ದಾಟುತ್ತಿದ್ದ ಬಾಲಕನ ದೇಹ ರಸ್ತೆಯಲ್ಲೇ ಛಿದ್ರ; ಉದ್ರಿಕ್ತ ಜನರಿಂದ ಟಿಪ್ಪರ್ಗೆ ಬೆಂಕಿ..
ಕಲಬುರಗಿ: ರಸ್ತೆ ದಾಟುತ್ತಿದ್ದ ಬಾಲಕನಿಗೆ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿ ಹೊಡೆದು ಆತನ ದೇಹ ರಸ್ತೆಯಲ್ಲೇ ಛಿದ್ರಗೊಂಡಿದ್ದು, ಉದ್ರಿಕ್ತ ಜನರು ಟಿಪ್ಪರ್ಗೆ ಬೆಂಕಿ ಇಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಲಬುರಗಿ ನಗರದ ಹೀರಾಪುರ ಬಡಾವಣೆಯ ಫ್ಲೈಓವರ್ ಬಳಿ ಈ ಅವಘಡ ಸಂಭವಿಸಿದೆ. ಮನೀಷ್ ಮಲ್ಲಿಕಾರ್ಜುನ (10) ಸಾವಿಗೀಡಾದ ಬಾಲಕ. ಈತ ಇಂದು ಪಾಲಕರ ಜತೆ ರಸ್ತೆ ದಾಟುತ್ತಿದ್ದಾಗ ಮುಂದೆ ಓಡಿದ್ದ. ಅದೇ ಸಮಯಕ್ಕೆ ಮೇಲ್ಸೇತುವೆಯಿಂದ ವೇಗವಾಗಿ ಬರುತ್ತಿದ್ದು ಟಿಪ್ಪರ್ ಡಿಕ್ಕಿ ಹೊಡೆದಿದ್ದು, …
Read More »ರಾಜ್ಯಕ್ಕೆ ರಾಜಕೀಯ ಚಾಣಕ್ಯ ಅಮಿತ್ ಶಾ ಎಂಟ್ರಿ.. ಏಕೆ?
ಕೇಂದ್ರ ಗೃಹ ಸಚಿವ, ರಾಜಕೀಯ ಚಾಣಾಕ್ಷ ಅಮಿತ್ ಶಾ ಕರ್ನಾಟಕಕ್ಕೆ ಎಂಟ್ರಿ ಕೊಡಲಿದ್ದಾರೆ. ತುಮಕೂರಿನ ಪ್ರಸಿದ್ದ ಪುಣ್ಯ ಕ್ಷೇತ್ರ ಸಿದ್ದಗಂಗಾ ಮಠಕ್ಕೆ ಆಗಮಿಸಲಿರುವ ಅವರು ಪರಮಪೂಜ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳ ಜಯಂತೋತ್ಸವದ ಹಿನ್ನೆಲೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ. ಸಿದ್ದಗಂಗಾ ಮಠ… ತ್ರಿವಿಧ ದಾಸೋಹದಿಂದ ಪ್ರಸಿದ್ದಿ ಪಡೆದ ಕ್ಷೇತ್ರ. ಇಂತಹ ಕ್ಷೇತ್ರದ ಮಠಾಧಿಪತಿಗಳಾಗಿದ್ದ ನಡೆದಾಡುವ ದೇವರು ಡಾ. ಶ್ರೀಶಿವಕುಮಾರ ಮಹಾಸ್ವಾಮಿಗಳ 115 ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವ ಏಪ್ರಿಲ್ 1 …
Read More »ಮಗು ರಕ್ಷಿಸಿದ ಶ್ವಾನ-ಟಾಪ್ 10 ಸುದ್ದಿಗಳ ಕ್ವಿಕ್ರೌಂಡಪ್
ನಾಳೆಯಿಂದ SSLC ಪರೀಕ್ಷೆ ಆರಂಭ ನಾಳೆಯಿಂದದ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಲಿದೆ. ನಾಳೆಯಿಂದ ಏಪ್ರಿಲ್ 11ರವರೆಗೆ ಪರೀಕ್ಷೆ ನಡೆಯಲಿದೆ ಎಂದು ಕರ್ನಾಟಕ ಪರೀಕ್ಷಾ ಮಂಡಳಿ ಮಾಹಿತಿ ನೀಡಿದೆ. ಮಾರ್ಚ್ 28 ಕ್ಕೆ ಪ್ರಥಮ ಭಾಷೆ, ಮಾರ್ಚ್ 30ಕ್ಕೆ ದ್ವಿತೀಯ ಭಾಷೆ, ಏಪ್ರಿಲ್ 4ರಂದು ಗಣಿತ, 6ಕ್ಕೆ ಸಮಾಜ ವಿಜ್ಞಾನ, 8ಕ್ಕೆ ತೃತೀಯ ಭಾಷೆ ಮತ್ತು 11 ರಂದು ವಿಜ್ಞಾನ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಬರೆಯುವ ಮಕ್ಕಳಿಗೆ ಮಾಸ್ಕ್ ಕಡ್ಡಾಯವಿಲ್ಲ …
Read More »RRR ಸಿನಿಮಾದಲ್ಲಿ ತಾಂತ್ರಿಕ ದೋಷ – ಚಿತ್ರಮಂದಿರದ ಗಾಜು ಪುಡಿ ಪುಡಿ
ದಾವಣಗೆರೆ: ತ್ರಿಬಲ್ ಆರ್ ಸಿನಿಮಾ ಭಾರತದಾತ್ಯಂತ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಆದರೆ ದಾವಣಗೆರೆಯಲ್ಲಿ ಸಿನಿಮಾ ಪ್ರದರ್ಶನದ ವೇಳೆ ತಾಂತ್ರಿಕ ದೋಷ ಕಂಡುಬಂದು ಅಭಿಮಾನಿಗಳು ಗಲಾಟೆ ಮಾಡಿದ್ದಾರೆ. ಈ ಹಿನ್ನೆಲೆ ಇಡೀ ಚಿತ್ರಮಂದಿರದ ಗಾಜನ್ನು ಪುಡಿ-ಪುಡಿ ಮಾಡಿರುವ ಘಟನೆ ಶುಕ್ರವಾರ(ನಿನ್ನೆ) ರಾತ್ರಿ ಜಗಳೂರಿನ ಭಾರತ ಚಿತ್ರಮಂದಿರದಲ್ಲಿ ನಡೆದಿದೆ. ಜಗಳೂರು ತಾಲೂಕಿನ ಭಾರತ ಚಿತ್ರಮಂದಿರದಲ್ಲಿ ಕಳೆದ ದಿನ ಬೆಳಗ್ಗೆಯಿಂದ ಮೂರ್ನಾಲ್ಕು ಶೋ ತ್ರಿಬಲ್ ಆರ್ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಂಡಿತ್ತು. ಕಳೆದ ದಿನ ಮೂರನೇ ಶೋ …
Read More »ಗ್ರಾಮಕ್ಕೆ ಬಸ್ ಬಿಡಿ: ಸಿಎಂ ಕಾರು ತಡೆದು ಮನವಿ ಪತ್ರ ಕೊಟ್ಟ ವಿದ್ಯಾರ್ಥಿನಿಯರು
ಹಾವೇರಿ: ಸಿಎಂ ಬಸವರಾಜ ಬೊಮ್ಮಾಯಿ ಅವರು ಹೋಗುತ್ತಿದ್ದ ಕಾರ್ ತಡೆದು ನಮ್ಮ ಗ್ರಾಮಕ್ಕೆ ಬಸ್ ಬಿಡುವಂತೆ ಶಾಲಾ ವಿದ್ಯಾರ್ಥಿನಿಯರು ಮನವಿ ಮಾಡಿರುವ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ತಿಮ್ಮಾಪುರ ಗ್ರಾಮಕ್ಕೆ ಬೊಮ್ಮಾಯಿ ಅವರು ಶನಿವಾರ(ಇಂದು) ಆಗಮಿಸಿದ್ದರು. ಈ ವೇಳೆ ಬೊಮ್ಮಾಯಿ ಅವರು ಗ್ರಾಮದ ಮಲಿಯಮ್ಮದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ದೇವಿಯ ಆಶೀರ್ವಾದ ಪಡೆದುಕೊಂಡಿದ್ದಾರೆ. ದೇವಿಯ ದರ್ಶನ ಪಡೆದ ನಂತರ ಗ್ರಾಮದಲ್ಲಿ …
Read More »ಪಾವಗಡ ಬಸ್ ಅಪಘಾತ: ಬೆಡ್ ನೀಡದೇ ಮಗನನ್ನು ಕೊಂದ್ರು.. ಒಬ್ಬನೇ ಮಗನ ಕಳೆದುಕೊಂಡ ಪೋಷಕರ ಆಕ್ರಂದನ
ಬೆಂಗಳೂರು: ಇತ್ತೀಚೆಗೆ ತುಮಕೂರು ಜಿಲ್ಲೆಯ ಪಾವಗಡಲ್ಲಿ ಸಂಭವಿಸಿದ್ದ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಮಹೇಂದ್ರ(19) ಇಂದು ಕೊನೆಯುಸಿರೆಳೆದಿದ್ದಾನೆ. ಇತ್ತ ಒಬ್ಬನೇ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಆಸ್ಪತ್ರೆಗಳಲ್ಲಿ ಸರಿಯಾದ ಸಮಯಕ್ಕೆ ಬೆಡ್ ನೀಡದೇ ನಮ್ಮ ಮಗನನ್ನು ಸಾಯಿಸಿಬಿಟ್ಟರು ಎಂದು ಮೃತ ಯುವಕನ ತಂದೆ ಆಕ್ರೋಶ ವ್ಯಕ್ತಪಡಿಸಿದರು. ವಿಕ್ಟೋರಿಯಾ ಆಸ್ಪತ್ರೆ ಶವಾಗಾರದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಯುವಕನ ತಂದೆ ಶ್ರೀನಿವಾಸ್, ಅಪಘಾತ ಸಂಭವಿಸಿದ ದಿನ ನಿಮ್ಹಾನ್ಸ್ನಲ್ಲಿ ಬೆಡ್ ಕೊಟ್ಟಿದ್ದರೆ ನನ್ನ …
Read More »IPL 2022: ಚೆನ್ನೈ-ಕೋಲ್ಕತ್ತಾ ಹಣಾಹಣಿ: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಕೆಕೆಆರ್
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ 15ನೇ ಆವೃತ್ತಿಗೆ ವಿದ್ಯುಕ್ತವಾಗಿ ಚಾಲನೆ ಸಿಕ್ಕಿದೆ. ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರನ್ನರ್ ಅಪ್ ತಂಡ ಕೋಲ್ಕತ್ತಾ ನೈಟ್ ಮುಖಾಮುಖಿಯಾಗಿವೆ. ಟಾಸ್ ಗೆದ್ದಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಬೌಲಿಂಗ್ ಆಯ್ದುಕೊಂಡಿದೆ. ಮುಂಬೈನ ವಾಖೆಂಡೆ ಮೈದಾನದಲ್ಲಿ ಪಂದ್ಯ ಆರಂಭಗೊಂಡಿದೆ. ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿರುವ ಶ್ರೇಯಸ್ ಅಯ್ಯರ್ ಕೋಲ್ಕತ್ತಾ ನೈಟ್ ರೈಡರ್ಸ್ ಮುನ್ನಡೆಸುತ್ತಿದ್ದು, ಆಲ್ರೌಂಡರ್ ರವೀಂದ್ರ ಜಡೇಜಾ …
Read More »ವಾರ್ಷಿಕ ಪರೀಕ್ಷೆ’ಯಲ್ಲೂ ‘ಪುನೀತ್ ರಾಜ್ ಕುಮಾರ್’ ಕುರಿತ ಪಾಠ, ಪ್ರಶ್ನೆ: ಅಪ್ಪು ಬಗ್ಗೆ ಏನೆಲ್ಲಾ ಪ್ರಶ್ನೆಗಳನ್ನು ಕೇಳಲಾಗಿತ್ತು ಗೊತ್ತಾ.? |
ಬೆಂಗಳೂರು: ಈಗಾಗಲೇ ಪುನೀತ್ ರಾಜ್ ಕುಮಾರ್ ( Actor Puneet Rajkumar ) ಹೆಸರನ್ನು ಅವರ ನಿಧನಾನಂತ್ರ ಅಮರವಾಗಿಸುವ ನಿಟ್ಟಿನಲ್ಲಿ, ವೃತ್ತ, ರಸ್ತೆಗಳಿಗೆ ಅವರ ಹೆಸರಿನ್ನು ಇಡಲಾಗಿದೆ. ಇದಲ್ಲದೇ ಉಪಗ್ರಹಕ್ಕೂ ಅವರ ಹೆಸರಿನ್ನು ಇಡಲಾಗಿತ್ತು. ಈ ಬಳಿಕ, ಈಗ 4ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿಯೂ ( Annual Exam ) ಅಪ್ಪು ಬಗ್ಗೆ ಪ್ರಶ್ನೆಯನ್ನು ಕೇಳಲಾಗಿದೆ. ಹೌದು.. ಬೆಂಗಳೂರಿನ ವಿಜಯನಗರ ಬಳಿಯ ಆರ್ ಪಿ ಸಿ ಲೇಔಟ್ ನಲ್ಲಿರುವಂತ ದಿ …
Read More »ಮಾಜಿ ಶಾಸಕರಿಗೆ ಒಂದು ಅವಧಿಗೆ ಮಾತ್ರ ಪಿಂಚಣಿ: ಪಂಜಾಬ್ ಸಿಎಂ ಮಾನ್ ಮಹತ್ವದ ಆದೇಶ
ಚಂಡೀಗಢ: ಪಂಜಾಬ್ ಮಾಜಿ ಶಾಸಕರು ಇನ್ನುಮುಂದೆ ಒಂದು ಅವಧಿಗೆ ಮಾತ್ರ ಪಿಂಚಣಿ ಪಡೆಯಲಿದ್ದಾರೆ ಮತ್ತು ಅವರು ಸೇವೆ ಸಲ್ಲಿಸಿದ ಪ್ರತಿ ಅವಧಿಗೆ ಪಿಂಚಣಿ ಪಡೆಯುವ ಅಭ್ಯಾಸವನ್ನು ತೆಗೆದುಹಾಕಲಾಗುವುದು ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಶುಕ್ರವಾರ ಹೇಳಿದ್ದಾರೆ. “ಪಂಜಾಬ್‌ನ ಮಾಜಿ ಶಾಸಕರು, ಅವರು ಎರಡು ಬಾರಿ, ಐದು ಬಾರಿ ಅಥವಾ ಹತ್ತು ಬಾರಿ ಗೆದ್ದಿದ್ದರೂ ಅವರು ಇನ್ನುಮುಂದೆ ಒಂದು ಅವಧಿಗೆ ಮಾತ್ರ ಪಿಂಚಣಿ ಪಡೆಯುತ್ತಾರೆ” ಎಂದು ವೀಡಿಯೊ ಸಂದೇಶದಲ್ಲಿ …
Read More »
Laxmi News 24×7