ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಬಂಧಿತರಾಗಿರುವ ಚಿತ್ರದುರ್ಗ ಮುರುಘಾ ಮಠದ ಮುರುಘಾ ಶರಣರಿಗೆ ಪುರುಷತ್ವ ಪರೀಕ್ಷೆ ನಡೆಸಲಾಗಿದೆ. ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಪುರುಷತ್ವ ಪರೀಕ್ಷೆ ನಡೆಸಲಾಗಿದ್ದು, ಸೋಮವಾರ ನ್ಯಾಯಾಲಯದ ಮುಂದೆ ವರದಿ ಸಲ್ಲಿಕೆಯಾಗುವ ಸಾಧ್ಯತೆ ಇದೆ. ಸ್ವಾಮೀಜಿಯನ್ನು ಬಂಧಿಸಿದ ಕೂಡಲೇ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಂದರ್ಭದಲ್ಲಿ ಸಾಮಾನ್ಯ ಪರೀಕ್ಷೆಗಳನ್ನು ಮಾಡಲಾಗಿತ್ತು. ಶುಕ್ರವಾರ ಪುರುಷತ್ವ ಪರೀಕ್ಷೆ ನಡೆಸಬೇಕಿತ್ತು. ಕಾರಣಾಂತರದಿಂದ ಸಾಧ್ಯವಾಗಿರಲಿಲ್ಲ. ಶನಿವಾರ ಪುರುಷತ್ವ ಪರೀಕ್ಷೆ ನಡೆಸಲಾಗಿದೆ. ಸ್ವಾಮೀಜಿ ಪುರುಷತ್ವ ಪರೀಕ್ಷೆ ಮಾಡಲಾಗಿದ್ದು, ಉಳಿದಂತೆ ವಿಚಾರಣೆ ಮುಂದುವರೆದಿದೆ. …
Read More »ಪೊಲೀಸ್ ನೇಮಕಾತಿ ವಯೋಮಿತಿ ಹೆಚ್ಚಿಸಲು ಆಗ್ರಹ
ರಾಯಚೂರು: ಪೊಲೀಸ್ ನೇಮಕಾತಿಯಲ್ಲಿ ವಯೋಮಿತಿ ಹೆಚ್ಚಿಸಬೇಕು, ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ಅಖೀಲ ಭಾರತ ನಿರುದ್ಯೋಗ ಯುವಜನರ ಹೋರಾಟ ಸಮಿತಿ ಸದಸ್ಯರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಈ ಕುರಿತು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಒಂದೆಡೆ ಪದವೀಧರರು ಡಿಗ್ರಿಗಳನ್ನು ಪಡೆದು ಸಣ್ಣ ಪುಟ್ಟ ಕೆಲಸ ಮಾಡುವ ಪರಿಸ್ಥಿತಿ ಇದೆ. ಅಲ್ಲದೇ, ಕೋವಿಡ್ -19 ಪರಿಸ್ಥಿತಿಯಲ್ಲಿ, ಉದ್ಯೋಗ ಕಳೆದುಕೊಂಡು ಯುವಕರು ಕಂಗಾಲಾಗಿದ್ದಾರೆ. ಆದರೆ, ಸರ್ಕಾರಿ …
Read More »ಮುರುಘಾ ಶ್ರೀಗಳಿಗೆ ಮತ್ತೊಂದು ಕಂಟಕ : ಲೈಂಗಿಕ ದೌರ್ಜನ್ಯ ಮೆಡಿಕಲ್ ಟೆಸ್ಟ್ ರಿಪೋರ್ಟ್ ಬಹಿರಂಗ
ಚಿತ್ರದುರ್ಗ : ಫೋಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀಗಳಿಗೆ ಮತ್ತೊಂದು ಕಂಟಕ ಎದುರಾಗಿದ್ದು, ಲೈಂಗಿಕ ದೌರ್ಜನ್ಯ ಮೆಡಿಕಲ್ ಟೆಸ್ಟ್ ರಿಪೋರ್ಟ್ ಬಹಿರಂಗವಾಗಿದೆ. ಅಪ್ರಾಪ್ತರಿಗೆ ಲೈಂಗಿಕ ದೌರ್ಜನ್ಯ ನೀಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರನ್ನು 2 ನೇ ಅಪರ ಜಿಲ್ಲಾ ಕೋರ್ಟ್ ಎದುರು ಶುಕ್ರವಾರ ಹಾಜರುಪಡಿಸಲಾಗಿದ್ದು, ಸೆ. 5 ರವರೆಗೆ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ನಿನ್ನೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ಬೆನ್ನಲ್ಲೇ ಪೊಲೀಸರು ಜಿಲ್ಲಾಸ್ಪತ್ರೆಯಲ್ಲಿ ಶ್ರೀಗಳನ್ನು ವೈದ್ಯಕೀಯ ಟೆಸ್ಟ್ …
Read More »ಮೋದಿ ಎಲ್ಲವನ್ನೂ ಮಾರಾಟ ಮಾಡುತ್ತಿದ್ದಾರೆಯೇ ಹೊರತು ಯಾವುದನ್ನೂ ಸ್ಥಾಪಿಸುತ್ತಿಲ್ಲ: ಎಂ.ಬಿ.ಪಾಟೀಲ್
ತುಮಕೂರು,ಸೆ.03: ಪ್ರಾಥಮಿಕ ಶಾಲೆಯಿಂದ ಐಐಟಿವರೆಗೆ ಸ್ಥಾಪನೆಯಾಗಿರುವುದು ಕಾಂಗ್ರೆಸ್ ಪಕ್ಷದಿಂದಲೇ ಹೊರತು ಬಿಜೆಪಿಯಿಂದಲ್ಲ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಎಪ್ಪತ್ತು ವರ್ಷದಲ್ಲಿ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ, ಕಾಂಗ್ರೆಸ್ ಮುಂದಾಲೋಚನೆಯಿಂದಲೇ ಹಸಿರು, ಬಿಳಿ ಮತ್ತು ಹಳದಿ ಕ್ರಾಂತಿಯಾಯಿತು, ನವರತ್ನಗಳ ಮೂಲಕ ಉದ್ಯಮ ಸ್ಥಾಪಿಸಿ ಉದ್ಯೋಗ ದೊರಕಿಸಿದೆ ಎಂದರು. ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ರೈಲ್ವೆ, ಬಂದರು …
Read More »ನಾನು ಮುರುಘಾ ಮಠಕ್ಕೆ ಹೋಗಿ ಬರ್ತಿನಿ; ಗದ್ದುಗೆಯಲ್ಲಿ ದರ್ಶನ ಪಡೆಯುತ್ತೇನೆ- ಎಂ.ಬಿ ಪಾಟೀಲ್
ತುಮಕೂರು: ಸಿದ್ದಗಂಗಾ ಮಠಕ್ಕೆ ಮಾಜಿ ಸಚಿವ ಎಂ.ಬಿ.ಪಾಟೀಲ್ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ನಾನು ಮುಂದೆನೂ ಮುರುಘಾ ಮಠಕ್ಕೆ ಹೋಗ್ತೀನಿ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ಮುರುಘಾಮಠ ಬಹಳ ಐತಿಹಾಸಿಕ ಮಠ. 5 ಸಾವಿರ ವಿರಕ್ತ ಶಾಖಾ ಮಠ ಹೊಂದಿದ್ದಂತಹ ದೊಡ್ಡ ಮಠ ಇದು. ಅಲ್ಲಿ ಯಾರು ಇರ್ತಾರೆ, ಯಾರು ಇರಲ್ಲ ಅನ್ನೋದು ಮುಖ್ಯವಲ್ಲ. ನಾಳೆ ನಾನು ಚಿತ್ರದುರ್ಗಕ್ಕೆ ಹೋದರೆ …
Read More »ಮುರುಘಾ ಶ್ರೀ ಬಗ್ಗೆ ನನಗೆ ಗೌರವ ಕಡಿಮೆ ಆಗಿಲ್ಲ: ಈಶ್ವರಪ್ಪ
ಶಿವಮೊಗ್ಗ: ಮುರುಘಾ ಶ್ರೀ ಬಗ್ಗೆ ನನಗೆ ಗೌರವ ಕಡಿಮೆ ಆಗಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮುರುಘಾ ಶ್ರೀ ಬಂಧನ ವಿಚಾರವಾಗಿ ಮಾತನಾಡಿದ ಅವರು, ಮಠದ ಸ್ವಾಮಿಗಳು ಅಂದರೆ ನನಗೆ ದೇವರಿದ್ದಂತೆ. ಮುರುಘಾ ಶ್ರೀ ಬಗ್ಗೆ ನನಗೆ ಗೌರವ ಕಡಿಮೆ ಆಗಿಲ್ಲ. ತನಿಖೆ ನಡೆಯುತ್ತಿದೆ ಸತ್ಯವೋ ಸುಳ್ಳೋ ಹೊರಗೆ ಬರಲಿ. ಮಠ, ಮಂದಿರ, ಭಕ್ತಿ, ಜಾಗೃತಿ ಉಂಟು ಮಾಡುತ್ತದೆ ಎಂದಿದ್ದಾರೆ.
Read More »ದಲಿತ ಬಾಲಕಿಯರು ಬಡಿಸಿದ ಊಟವನ್ನು ಬಿಸಾಡಿ ಎಂದ ಅಡುಗೆಯವ – ಬಂಧನ
ಜೈಪುರ: ರಾಜಸ್ಥಾನದ ಉದಯಪುರ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಇಬ್ಬರು ದಲಿತ ಬಾಲಕಿಯರಿಗೆ ತಾರತಮ್ಯ ಮಾಡಿದ ಆರೋಪದ ಮೇಲೆ ಅಡುಗೆಯವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಶುಕ್ರವಾರ ಬರೋಡಿ ಪ್ರದೇಶದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಾಲ್ ರಾಮ್ ಗುರ್ಜರ್ ಎಂಬಾತ ತಯಾರಿಸಿದ ಮಧ್ಯಾಹ್ನದ ಊಟವನ್ನು ದಲಿತ ಬಾಲಕಿಯರು ಬಡಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಲಾಲ್ ರಾಮ್, ದಲಿತ ಬಾಲಕಿಯರು ಬಡಿಸಿದ ಊಟವನ್ನು ಎಸೆಯುವಂತೆ ಇತರ ವಿದ್ಯಾರ್ಥಿಗಳಿಗೆ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. …
Read More »ದಕ್ಷಿಣ ವಲಯ ಅಂತರರಾಜ್ಯ ಪರಿಷತ್ತಿನ ಸಭೆಯಲ್ಲಿ ಸಿಎಂ ಬೊಮ್ಮಾಯಿ ಭಾಗಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕೇರಳದ ತಿರುವನಂತಪುರದಲ್ಲಿ ನಡೆದ ದಕ್ಷಿಣ ವಲಯ ಅಂತರರಾಜ್ಯ ಪರಿಷತ್ತಿನ ಸಭೆಯಲ್ಲಿ ಭಾಗವಹಿಸಿದರು, ದಕ್ಷಿಣದ ಇತರ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಸಚಿವರೊಂದಿಗೆ ಸಿಎಂ ಬಸವರಾಜ್ ಬೊಮ್ಮಾಯಿಯವರು ಸೌಹಾರ್ದಯುತ ಮಾತುಕತೆ ನಡೆಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರೊಂದಿಗೆ ಔಪಚಾರಿಕ ಮಾತುಕತೆ ನಡೆಸಿದರು. ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಇನ್ನುಳಿದವರು ಈ ವೇಳೆ ಭಾಗಿಯಾಗಿದ್ಧರು.
Read More »ಮಳೆ ಹಾನಿ ಪ್ರದೇಶದ ವೀಕ್ಷಣೆ ವೇಳೆ ಮಹಿಳೆಗೆ ಗದರಿದ ಶಾಸಕ ಲಿಂಬಾವಳಿ.
ಬೆಂಗಳೂರು: ಬೆಂಗಳೂರಿನ ವಿವಿಧ ಪ್ರದೇಶಗಳ ಮಳೆ ಹಾನಿ ವೀಕ್ಷಣೆಗೆ ತೆರಳಿದ್ದ ಸಂದರ್ಭದಲ್ಲಿ ಶಾಸಕ ಅರವಿಂದ್ ಲಿಂಬಾವಳಿ ಮಹಿಳೆಗೆ ಅವಾಜ್ ಹಾಕಿದ್ದಾರೆಂಬ ಆರೋಪ ಕೇಳಿ ಬಂದಿದೆ. ಅದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಮಳೆ ಹಾನಿ ಪ್ರದೇಶದ ವೀಕ್ಷಣೆ ವೇಳೆ ಮಹಿಳೆಗೆ ಗದರಿದ ಶಾಸಕ ಲಿಂಬಾವಳಿ… ವರ್ತೂರಿನಲ್ಲಿ ಈ ಘಟನೆ ನಡೆದಿದೆ ಎನ್ನಲಾಗ್ತಿದೆ. ಸುರಿದ ಭಾರೀ ಮಳೆಯಿಂದಾಗಿ ಮಹದೇವಪುರ ಕ್ಷೇತ್ರದ ಹಲವೆಡೆ ಪ್ರವಾಹ ಉಂಟಾಗಿತ್ತು. ಪ್ರವಾಹ ಪೀಡಿತ ಪ್ರದೇಶ ಪರಿವೀಕ್ಷಣೆಗೆ …
Read More »ಮುರುಘಾ ಶರಣರ ವಿರುದ್ಧ ಪೋಕ್ಸೋ ಪ್ರಕರಣ: ಪತ್ರಕರ್ತ ಪಿ ಸಾಯಿನಾಥ್ ರಿಂದ ‘ಬಸವ ಶ್ರೀ’ ಪ್ರಶಸ್ತಿ ವಾಪಸ್!
ಬೆಂಗಳೂರು: ಆಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇರೆಗೆ ಪೋಕ್ಸೋ ಪ್ರಕರಣದಡಿ ಬಂಧನಕ್ಕೀಡಾಗಿರುವ ಮುರುಘಾ ಶರಣರ ಪ್ರಕರಣದ ಹಿನ್ನಲೆಯಲ್ಲಿ ಖ್ಯಾತ ಹಿರಿಯ ಪತ್ರಕರ್ತ ಪಿ ಸಾಯಿನಾಥ್ ಅವರು ಮುರುಘಾ ಮಠದಿಂದ ಪಡೆದಿದ್ದ ಬಸವ ಶ್ರೀ ಪ್ರಶಸ್ತಿಯನ್ನು ವಾಪಸ್ ಮಾಡಲು ನಿರ್ಧರಿಸಿದ್ದಾರೆ. ಈ ಕುರಿತು ಸ್ವತಃ ಸಾಯಿನಾಥ್ ಅವರೇ ಮಾಹಿತಿ ನೀಡಿದ್ದು, ಚಿತ್ರದುರ್ಗದ ಮುರುಘಾಮಠವು ನೀಡಿದ್ದ ಬಸವ ಶ್ರೀ ಪ್ರಶಸ್ತಿಯನ್ನು ವಾಪಸ್ ನೀಡುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ …
Read More »
Laxmi News 24×7