Breaking News

ರಾಜ್ಯ

1,38,000 ಮೌಲ್ಯದ 12 ಕದ್ದ ಬ್ಯಾಟರಿಗಳನ್ನು ವಶಪಡಿಸಿಕೊಂಡ ಹಾರೂಗೇರಿ ಪೊಲೀಸರು

ಬೆಳಗಾವಿ ಜಿಲ್ಲೆಯ ಹಾರೂಗೇರಿ ಪೊಲೀಸರು ವಾಹನ ತಪಾಸಣೆ ನಡೆಸಿ 1,38,000 ಮೌಲ್ಯದ 12 ಕದ್ದ ಬ್ಯಾಟರಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ರಾಯಬಾಗ ತಾಲೂಕಿನ ಹಾರೂಗೇರಿ ಪೊಲೀಸರು ಹಾರೂಗೇರಿ ಕ್ರಾಸನಲ್ಲಿ ಮಹಾರಾಷ್ಟ್ರದ ಟಾಟಾ ಎಸ್ ವಾಹನವನ್ನು (ಸಂಖ್ಯೆ ಎಂಎಚ್13ಎಎನ್ 5310) ಅಡ್ಡಗಟ್ಟಿ ಆ ವಾಹನದಲ್ಲಿ 12 ಬ್ಯಾಟರಿಗಳು ಪತ್ತೆಯಾಗಿವೆ. ವಾಹನದಲ್ಲಿದ್ದ ಇಬ್ಬರನ್ನು ವಿಚಾರಣೆಗೆ ಒಳಪಡಿಸಿದಾಗ ಅವರು ಇತರ ಮೂವರೊಂದಿಗೆ ಸೇರಿ ಬ್ಯಾಟರಿ ಕದ್ದಿರುವುದಾಗಿ ಒಪ್ಪಿಕೊಂಡಿದ್ದಾರೆ. ಹಾಗಾಗಿ ಅವರನ್ನು ಬಂಧಿಸಿ …

Read More »

ಮುಂಬೈ ಛಾಬ್ರಾ ಹೌಸ್ ಮತ್ತೊಮ್ಮೆ ಉಗ್ರರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ

ಮುಂಬೈ(ಮಹಾರಾಷ್ಟ್ರ): ಮುಂಬೈನ ಕೊಲಾಬಾದಲ್ಲಿರುವ ಛಾಬ್ರಾ ಹೌಸ್ ಮತ್ತೊಮ್ಮೆ ಉಗ್ರರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ. ಏಕೆಂದರೆ ತನಿಖಾಧಿಕಾರಿಗಳು ಪುಣೆಯಲ್ಲಿ ಬಂಧಿತ ಉಗ್ರರೊಂದಿಗೆ ಕೊಲಾಬಾದಲ್ಲಿರುವ ತಾಜ್ ಹೋಟೆಲ್ ಬಳಿಯ ಛಾಬ್ರಾ ಹೌಸ್ ಫೋಟೋಗಳನ್ನು ಪತ್ತೆ ಮಾಡಿದ್ದಾರೆ. ಬಂಧಿತ ಉಗ್ರರು ಮುಂಬೈಗೆ ಬಂದು ಛಾಬ್ರಾ ಹೌಸ್ ಮೇಲೆ ದಾಳಿ ನಡೆಸಬಹುದು ಎಂದು ಶಂಕಿಸಲಾಗಿದೆ. ಹೀಗಾಗಿ ಮುಂಬೈ ಪೊಲೀಸರು ಕೊಲಾಬಾದಲ್ಲಿರುವ ಛಾಬ್ರಾ ಹೌಸ್ ಸುತ್ತಮುತ್ತಲಿನ ಪ್ರದೇಶದಲ್ಲಿ ಭಯೋತ್ಪಾದನಾ ನಿಗ್ರಹ ದಳದ ನೆರವಿನೊಂದಿಗೆ ಭದ್ರತೆ ಹೆಚ್ಚಿಸಿದ್ದಾರೆ. ಛಾಬ್ರಾ …

Read More »

ಕಾಂಗ್ರೆಸ್ ಹೈಕಮಾಂಡ್ ಆಗಸ್ಟ್ 2 ರಂದು ದೆಹಲಿಯಲ್ಲಿ ರಾಜ್ಯದ ಕಾಂಗ್ರೆಸ್​ ನಾಯಕರೊಂದಿಗೆ ಸಭೆ

ಬೆಂಗಳೂರು: ಕೆಲವು ದಿನಗಳಿಂದ ರಾಜ್ಯ ಕಾಂಗ್ರೆಸ್​ನಲ್ಲಿ ಉಂಟಾಗಿರುವ ಭಿನ್ನಮತ ಶಮನಗೊಳಿಸಲು ಕಾಂಗ್ರೆಸ್ ಹೈಕಮಾಂಡ್ ಆಗಸ್ಟ್ 2 ರಂದು ದೆಹಲಿಯಲ್ಲಿ ಪಕ್ಷದ ನಾಯಕರೊಂದಿಗೆ ಎರಡು ಸಭೆಗಳನ್ನು ಕರೆದಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಕಾಂಗ್ರೆಸ್ ಮೂಲಗಳ ಪ್ರಕಾರ, ಪಕ್ಷದ ಹೈಕಮಾಂಡ್ ಮತ್ತು ಕರ್ನಾಟಕ ಕಾಂಗ್ರೆಸ್​ ಉನ್ನತ ನಾಯಕರ ನಡುವೆ ಮೊದಲ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, …

Read More »

ಕ. ಸಾ.ಪ.​ ವತಿಯಿಂದ ನೀಡಲಾಗುವ ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್​ 2018, 2019, 2020, 2021, 2022 ಹಾಗೂ 2023ನೇ ಸಾಲಿನ ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ದಲಿತ ಸಾಹಿತ್ಯದಲ್ಲಿ ಗಣನೀಯ ಸಾಧನೆ ಮಾಡಿದ ಸಾಹಿತ್ಯ ಸಾಧಕರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಕಳೆದ 6 ವರ್ಷಗಳಿಂದ ಈ ಪ್ರಶಸ್ತಿಯನ್ನು ಪ್ರದಾನ ಮಾಡದಿರುವುದರಿಂದ ಈ ಬಾರಿ 6 ಮಂದಿ ಸಾಧಕರಿಗೆ ಡಾ. ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ …

Read More »

ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ B.J.P. ಪೂರ್ವಸಿದ್ಧತಾ ಸಭೆ

ಬೆಂಗಳೂರು : ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಶನಿವಾರ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪೂರ್ವಸಿದ್ಧತಾ ಸಭೆ ನಡೆಯಿತು. ಸಭೆಯ ನೇತೃತ್ವವನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಲೋಕಸಭಾ ಚುನಾವಣಾ ಉಸ್ತುವಾರಿ ವಿನೋದ್ ತಾವ್ಡೆ ವಹಿಸಿಕೊಂಡಿದ್ದರು. ಬೆಂಗಳೂರಿನ 3 ಲೋಕಸಭೆ ಕ್ಷೇತ್ರಗಳ ಸಿದ್ಧತೆ, ಪಕ್ಷ ಸಂಘಟನೆ ಮತ್ತು ಮೋದಿ ಸರ್ಕಾರದ ಸಾಧನೆಯನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಸಲಹೆ, ಸೂಚನೆಗಳನ್ನು ನೀಡಲಾಯಿತು. ಬಳಿಕ ಮಾತನಾಡಿದ ವಿನೋದ್ ತಾವ್ಡೆ, “ಲೋಕಸಭಾ ಚುನಾವಣೆಗೆ ಸಿದ್ಧತೆ …

Read More »

ಭಾರತದ ವಿರುದ್ಧ ನಡೆದ 2ನೇ ಏಕದಿನ ಪಂದ್ಯದಲ್ಲಿ ವಿಂಡೀಸ್​ ತಂಡ 6 ವಿಕೆಟ್​ಗಳ ಗೆಲುವು

ಬಾರ್ಬಡೋಸ್​: ತವರಿನಲ್ಲಿ ನಡೆಯುವ ಏಕದಿನ ಕ್ರಿಕೆಟ್ ವಿಶ್ವಕಪ್​ಗೆ ಇನ್ನೂ ಪ್ರಯೋಗ ನಡೆಸುತ್ತಿರುವ ಭಾರತ ತಂಡ, ವೆಸ್ಟ್ ಇಂಡೀಸ್​ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದೆ. ನಾಯಕ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿಗೆ ವಿಶ್ರಾಂತಿ ನೀಡಿದ ಪಂದ್ಯದಲ್ಲಿ ಭಾರತದ ಕಳಪೆ ಬ್ಯಾಟಿಂಗ್​ನಿಂದಾಗಿ ವಿಂಡೀಸ್​ 6 ವಿಕೆಟ್​ಗಳ ಗೆಲುವು ಸಾಧಿಸಿತು. ಈ ಮೂಲಕ ಭಾರತದ ವಿರುದ್ಧ 2019ರ ಬಳಿಕ ಮೊದಲ, ತವರಿನಲ್ಲಿ 6 ವರ್ಷಗಳ ನಂತರ ಪ್ರಥಮ ಗೆಲುವು ದಾಖಲಿಸಿದೆ. ಮೊದಲು …

Read More »

ನ್ನಭಾಗ್ಯದಡಿ ಈವರೆಗೆ 3.29 ಕೋಟಿ ಫಲಾನುಭವಿಗಳಿಗೆ ಹಣ ಜಮೆ:C.M.

ಬೆಂಗಳೂರು : ಕಾಂಗ್ರೆಸ್‌ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊರತೆ ಹಿನ್ನೆಲೆಯಲ್ಲಿ ಫಲಾನುಭವಿಗಳ ಖಾತೆಗೆ ನಗದು ಜಮಾವಣೆ ಪ್ರಕ್ರಿಯೆ ಆರಂಭವಾಗಿ ತಿಂಗಳಾಗುತ್ತಿದೆ. ಇನ್ನೂ ಸುಮಾರು 1 ಕೋಟಿಗೂ ಹೆಚ್ಚು ಫಲಾನುಭವಿಗಳ ಖಾತೆಗೆ ನಗದು ಜಮೆ ಬಾಕಿ ಉಳಿದುಕೊಂಡಿದೆ. ಅನ್ನಭಾಗ್ಯ ಯೋಜನೆಯಡಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 5 ಕೆ.ಜಿ ಅಕ್ಕಿ ವಿತರಿಸಲು ಯೋಜಿಸಿತ್ತು.‌ ರಾಜ್ಯದ ಅಂತ್ಯೋದಯ ಅನ್ನ ಯೋಜನೆ ಹಾಗೂ ಆದ್ಯತಾ ಪಡಿತರದಾರರಿಗೆ ಐದು ಕೆ.ಜಿ ಉಚಿತ ಅಕ್ಕಿ ನೀಡಲು ನಿರ್ಧರಿಸಿತ್ತು. ಆದರೆ, …

Read More »

ಅಬ್ಬರದ ಮಳೆಗೆ 130 ಮನೆಗಳಿಗೆ ಹಾನಿ

ಹಾವೇರಿ: ಜಿಲ್ಲೆಯಲ್ಲಿ ಕಳೆದ ಏಳು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ. ಶನಿವಾರ ಮಳೆರಾಯ ಸ್ವಲ್ಪ ಬಿಡುವು ನೀಡಿದ್ದಾನೆ. ಈ ಮಧ್ಯೆ ಕಳೆದು ಏಳು ದಿನಗಳಲ್ಲಿ ಸರಾಸರಿ ವಾಡಿಕೆ ಮಳೆ 33.4 ಮಿಮೀ ಮಳೆಯಾಗಬೇಕಿತ್ತು. ಆದರೆ, ಸುಮಾರು 108 ಮಿಮೀ ಮಳೆಯಾಗಿದೆ. ಒಟ್ಟಾರೆಯಾಗಿ ಮೇ, ಜೂನ್, ಜುಲೈ ತಿಂಗಳಲ್ಲಿ ಹಾವೇರಿ ಜಿಲ್ಲೆಯಲ್ಲಿ ಸುಮಾರು 1130 ಮನೆಗಳಿಗೆ ಹಾನಿಯಾಗಿದೆ. ಇದರಲ್ಲಿ 989 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು 14 ಮನೆಗಳು ಸಂಪೂರ್ಣವಾಗಿ ನೆಲಕಚ್ಚಿವೆ. ಹಾವೇರಿ ನಗರದಲ್ಲಿ ಎರಡು …

Read More »

ಮಗು ನಾಪತ್ತೆ ಪ್ರಕರಣ: ಕಟ್ಟಿದ ಗೋಣಿಚೀಲದಲ್ಲಿ ಶವ ಪತ್ತೆ

ಎರ್ನಾಕುಲಂ: ಆಲುವಾದಲ್ಲಿ ನಾಪತ್ತೆಯಾಗಿದ್ದ ಆರು ವರ್ಷದ ಬಾಲಕಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆಲುವಾ ಮಾರುಕಟ್ಟೆ ಬಳಿ ದೊರೆತ ಕಟ್ಟಿದ ಗೋಣಿಚೀಲ ವೊಂದರಲ್ಲಿ ಬಾಲಕಿಯ ಮೃತ ದೇಹ ಪತ್ತೆಯಾಗಿದೆ. ಬಾಲಕಿಯನ್ನು ಅಪಹರಿಸಿದ್ದ ಬಿಹಾರ ಮೂಲದ ಅಸ್ಫಾಕ್ ಆಲಂ ಎಂಬಾತ ಸಿಕ್ಕಿಬಿದ್ದಿದ್ದು, ಬಾಲಕಿಗಾಗಿ ವ್ಯಾಪಕ ಶೋಧ ನಡೆಸಿದಾಗ ಶವ ಪತ್ತೆಯಾಗಿದೆ. 21 ಗಂಟೆ ಶೋಧ ಕಾರ್ಯಾಚರಣೆ: ಮಗುವನ್ನು ಜಾಕೀರ್​ಗೆ ಒಪ್ಪಿಸಿರುವುದಾಗಿ ಆರೋಪಿ ಅಸ್ಫಾಕ್ ಆಲಂ ಬೆಳಗ್ಗೆ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಆಲುವಾ ಮೇಲ್ಸೇತುವೆಯ ಕೆಳಗೆ ನಿನ್ನೆ …

Read More »

ಭಾರತದಲ್ಲಿವೆ 3 ಸಾವಿರಕ್ಕೂ ಹೆಚ್ಚು ಹುಲಿಗಳು.. ಮೊದಲ ಸ್ಥಾನದಲ್ಲಿ ಮಧ್ಯಪ್ರದೇಶ , ಕರ್ನಾಟಕಕ್ಕೆ ಎರಡನೇ ಸ್ಥಾನದ ಪಟ್ಟ!

ನವದೆಹಲಿ: ಕೇಂದ್ರ ಸರ್ಕಾರ ಶನಿವಾರ ಹುಲಿ ಗಣತಿ ಅಂಕಿ – ಅಂಶ ಬಿಡುಗಡೆ ಮಾಡಿದೆ. ಮಧ್ಯಪ್ರದೇಶವು ಹುಲಿ ಸಂಖ್ಯೆಯ ವಿಷಯದಲ್ಲಿ ಸರ್ವೋಚ್ಚ ಆಳ್ವಿಕೆಯನ್ನು ಮುಂದುವರೆಸಿದೆ. 785 ಹುಲಿಗಳೊಂದಿಗೆ ದೇಶದ ಅಗ್ರ ರಾಜ್ಯವಾಗಿ ಮುಂದುವರೆದಿದೆ. ಭಾರತದಲ್ಲಿವೆ 3 ಸಾವಿರಕ್ಕೂ ಹೆಚ್ಚು ಹುಲಿಗಳುಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಹುಲಿ ಗಣತಿ 2022 ರ ರಾಜ್ಯವಾರು ಅಂಕಿ- ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ. ಅಂಕಿ – ಅಂಶಗಳ ಪ್ರಕಾರ, ಭಾರತದಲ್ಲಿ 3167 ಹುಲಿಗಳಿವೆ. 563 ಹುಲಿಗಳನ್ನು …

Read More »