ಮೊಳಕಾಲ್ಮುರು: ಬಸ್ ಹಾಗೂ ಕ್ರೂಸರ್ ಮಧ್ಯೆ ಮೊಳಕಾಲ್ಮುರು ತಾಲ್ಲೂಕಿನ ಬಿಜಿ ಕೆರೆ ಬಳಿ ಭಾನುವಾರ ಬೆಳಿಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ಐದು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಿಮ್ಮಣ್ಣ(40) ಪತ್ನಿ ರತ್ನಮ್ಮ(38) ಸೋಮನಮರಡಿ ಗ್ರಾಮದ ದುರುಗಪ್ಪ(16), ಗಜಲಿ ಗ್ರಾಮದ ಮಹೇಶ (19) ಹಾಗು 55 ವರ್ಷದ ಓರ್ವ ವ್ಯಕ್ತಿ ಎಂದು ತಿಳಿದು ಬಂದಿದೆ. ಮೃತರು ರಾಯಚೂರು ಜಿಲ್ಲೆ ದೆವದುರ್ಗ ತಾಲೂಕಿನ ಹುಣಸೂರು ಗ್ರಾಮದವರಾಗಿದ್ದಾರೆ ಎನ್ನಲಾಗುತ್ತಿದೆ. ಗಾಯಾಳುಗಳನ್ನು ಬಳ್ಳಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬಸ್ …
Read More »ಅನೈತಿಕ ಸಂಬಂಧ ವಿರೋಧ ಹಿನ್ನಲೆ ವಿಷ ಸೇವಿಸಿ, ಅಪ್ರಾಪ್ತೆ ಸಾವು ಯುವಕನ ಸ್ಥಿತಿ ಚಿಂತಾಜನಕ
ರಾಯಚೂರು : ರಾಯಚೂರಿನ ಲಿಂಗಸುಗೂರು ತಾಲೂಕಿನ ಪೈದೊಡ್ಡಿಯಲ್ಲಿ ಅನೈತಿಕ ಸಂಬಂಧಕ್ಕೆ ವಿರೋಧ ಹಿನ್ನೆಲೆ ಪ್ರೇಮಿಗಳಿಬ್ಬರು ಆತ್ಮಹತ್ಯೆ ಯತ್ನಿಸಿದ್ದು,ಅಪ್ರಾಪ್ತೆ ಸ್ಥಳದಲ್ಲಿ ಸಾವನ್ನಪ್ಪಿದ್ದಾಳೆ,ಯುವಕನ ಸ್ಥಿತಿ ಗಂಭೀರವಾಗಿದೆ. 17 ವರ್ಷದ ಅಪ್ರಾಪ್ತೆ ವಿಷಸೇವನೆಯಿಂದ ಸಾವನ್ನಪ್ಪಿದ್ದಾಳೆ.ಯರಜಂತಿ ಗ್ರಾಮದ ನರಸಪ್ಪನ ಸ್ಥಿತಿ ಗಂಭೀರವಾಗಿದೆ.ಇಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.ನರಸಪ್ಪನಿಗೆ ಮದುವೆಯಾಗಿ ಎರಡು ಮಕ್ಕಳಿವೆ. ಅಪ್ರಾಪ್ತೆಯೊಂದಿಗಿನ ಪ್ರೇಮ ಸಂಬಂಧಕ್ಕೆ ಮನೆಯಲ್ಲಿ ವಿರೋಧ ಹಿನ್ನಲೆ ವಿಷ ಸೇವನೆ ಮಾಡಿದ್ದಾರೆ. ಈ ಹಿಂದೆ ಅಪ್ರಾಪ್ತೆಯನ್ನ ಯುವಕನಿಂದ ದೂರ ಮಾಡಿ ಬಾಲಮಂದಿರದಲ್ಲಿ ಇರಿಸಲಾಗಿತ್ತು. …
Read More »ಮಂತ್ರಾಲಯದಲ್ಲಿ ತೆಪ್ಪೋತ್ಸವ ಸಂಭ್ರಮ
ರಾಯಚೂರು: ಗುರುರಾಯರ ಸನ್ನಿಧಿ ಮಂತ್ರಾಲಯದಲ್ಲಿ ಇಂದು ತುಂಗಾರತಿ ಸಂಭ್ರಮ ಮನೆ ಮಾಡಿತ್ತು. ಕಾರ್ತಿಕ ಪೂರ್ಣಮೆ ಹಿನ್ನೆಲೆ ತುಂಗಭದ್ರಾ ನದಿಯಲ್ಲಿ ತೆಪ್ಪೋತ್ಸವ ನೆರವೇರಿಸಲಾಯಿತು. ಉತ್ಸವಮೂರ್ತಿ ಪ್ರಹ್ಲಾದ ರಾಜರಿಗೆ ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ತುಂಗಭದ್ರಾ ನದಿಯಲ್ಲಿ ಪ್ರಹ್ಲಾದರಾಜರ ತೆಪ್ಪೋತ್ಸವ ಜರುಗಿತು. ಕಾರ್ತಿಕ ಪೂರ್ಣಮೆ ಹಿನ್ನೆಲೆ ನದಿ ದಡದಲ್ಲಿ ಭಕ್ತರಿಂದ ದೀಪೋತ್ಸವ ನಡೆದಿದೆ. ಈ ವರ್ಷ ತುಂಗಭದ್ರಾ ನದಿಯಲ್ಲೆ ಪುಷ್ಕರ ಇರುವುದರಿಂದ ಸಹಸ್ರಾರು ಸಂಖ್ಯೆಯಲ್ಲಿ …
Read More »ಸಾರಿಗೆ ಬಸ್ಸಿನಲ್ಲಿ ಕೊವಿಡ್ ನಿಯಮಪಾಲನೆ ಇಲ್ಲದ ಹಿನ್ನೆಲೆಯಲ್ಲಿ ಪ್ರಯಾಣಿಕರ ಆಕ್ರೋಶ
ರಾಯಚೂರು: ಸಾರಿಗೆ ಬಸ್ಸಿನಲ್ಲಿ ಕೊವಿಡ್ ನಿಯಮಪಾಲನೆ ಇಲ್ಲದ ಹಿನ್ನೆಲೆಯಲ್ಲಿ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಮಂತ್ರಾಲಯ ಬಸ್ ನಿಲ್ದಾಣದಲ್ಲಿ ನಡೆದಿದೆ. ತುಂಗಭದ್ರಾ ಪುಷ್ಕರ ಹಿನ್ನೆಲೆಯಲ್ಲಿ ಭಕ್ತರು ಮಂತ್ರಾಲಯಕ್ಕೆ ಬಂದಿದ್ದರು. ಆದರೆ ಇವರು ರಾಯಚೂರು- ಬೆಂಗಳೂರು ಮಾರ್ಗದ ಸ್ಲೀಪರ್ ಬಸ್ಸಿನಲ್ಲಿ ಪ್ರಯಾಣಿಸಲು ನಿರಾಕರಿಸಿದ್ದಾರೆ. ಅಲ್ಲದೆ ಸಾರಿಗೆ ಸಿಬ್ಬಂದಿಯೊಂದಿಗೆ ಪ್ರಯಾಣಿಕರ ಮಾತಿನ ಚಕಮಕಿ ನಡೆಸಿದ್ದಾರೆ. ಬಸ್ಸಿನಲ್ಲಿ ಸ್ವಚ್ಛತೆಯಿಲ್ಲ, ಸೀಟುಗಳು ಹಾಳಾಗಿರುವುದರಿಂದ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.
Read More »ಮಸ್ಕಿ ಅಖಾಡ ಹೇಗಿದೆ? ಗೆಲವು ಯಾರಿಗೆ?
ರಾಯಚೂರು: ಮಸ್ಕಿ ಉಪಚುನಾವಣೆ ದಿನಾಂಕ ಇನ್ನೂ ಪ್ರಕಟವಾಗಿಲ್ಲ, ಆದರೆ ಕ್ಷೇತ್ರದಲ್ಲಿ ಸಂಭಾವ್ಯ ಅಭ್ಯರ್ಥಿಗಳು ಹಾಗೂ ಪಕ್ಷದ ಕಾರ್ಯಕರ್ತರು ಚುನಾವಣೆಯ ತುಂಬು ಉತ್ಸಾಹದಲ್ಲಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿಗೆ ಉಪಚುನಾವಣೆ ಜಿದ್ದಾಜಿದ್ದಿನ ಕಣವಾಗಿದ್ದು ಜೆಡಿಎಸ್ ಸದ್ಯಕ್ಕೆ ತಟಸ್ಥವಾಗಿದೆ. ಸಮಾವೇಶಗಳ ಮೂಲಕ ಕಾರ್ಯಕರ್ತರ ಸಂಘಟನೆಯ ಜೊತೆ ತಳಮಟ್ಟದಿಂದಲೂ ಪಕ್ಷ ಬಲಪಡಿಸಿಕೊಳ್ಳಲು ಕಾಂಗ್ರೆಸ್ ಬಿಜೆಪಿ ಮುಂದಾಗಿವೆ. ಕಳೆದ ಬಾರಿಯ ಚುನಾವಣೆಯಲ್ಲಿದ್ದ ಪ್ರಬಲ ಅಭ್ಯರ್ಥಿಗಳೇ ಈ ಬಾರಿಯೂ ಮುಖಾಮುಖಿಯಾಗುತ್ತಿದ್ದಾರೆ. ಆದರೆ ಪಕ್ಷಗಳು ಮಾತ್ರ ಅದಲು ಬದಲು ಆಗಿರುವುದರಿಂದ …
Read More »ಬಿಜೆಪಿ ತೊರೆದು ಕಾಡಾ ಮಾಜಿ ಅಧ್ಯಕ್ಷ ಆರ್.ಬಸನಗೌಡ ತುರ್ವಿಹಾಳ ಕಾಂಗ್ರೆಸ್‍ಗೆ ಸೇರ್ಪಡೆಯಾದರು.
ಮಸ್ಕಿ: ರಾಯಚೂರು ಜಿಲ್ಲೆಯ ಮಸ್ಕಿ ತುಂಗಭದ್ರಾ ಕಾಡಾ ಮಾಜಿ ಅಧ್ಯಕ್ಷ ಆರ್.ಬಸನಗೌಡ ತುರ್ವಿಹಾಳ ಅವರು ಬಿಜೆಪಿ ತೊರೆದು ಸಾವಿರಾರು ಬೆಂಬಲಿಗರ ಜೊತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿ ಹೊಳಿ ಹಾಗೂ ಹಲವು ಮುಖಂಡರ ನೇತೃತ್ವದಲ್ಲಿ ಕಾಂಗ್ರೆಸ್‍ಗೆ ಸೇರ್ಪಡೆಯಾದರು. ಪಟ್ಟಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸೇರ್ಪಡೆ ಮತ್ತು ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಆರ್.ಬಸನಗೌಡ ತುರ್ವಿಹಾಳ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ …
Read More »ಮಸ್ಕಿಯಲ್ಲಿ ಕಾಂಗ್ರೆಸ್ ಗೆಲುವು:ಸತೀಶ್ ಜಾರಕಿಹೊಳಿ
ರಾಯಚೂರು: ಮಸ್ಕಿಯಲ್ಲಿ ಆಯೋಜಿಸಿರುವ ಕಾಂಗ್ರೆಸ್ ಸಮಾವೇಶ ಹಾಗೂ ಆರ್.ಬಸನಗೌಡ ಅವರ ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಭಾಗವಹಿಸಲು ಬಂದಿರುವ ಮುಖಂಡರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡುವ ಮೂಲಕ ವೇದಿಕೆಗೆ ಕರೆತರಲಾಯಿತು. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ, ಈಶ್ವರ ಖಂಡ್ರೆ ಹಾಗೂ ಜಿಲ್ಲೆಯ ಮುಖಂಡರು ಭಾಗವಹಿಸಿದ್ದಾರೆ. ಮಸ್ಕಿ: ಪಕ್ಷದ ಗೆಲುವಿಗಾಗಿ ನೀವು ತೋರಿರುವ ಬೆಂಬಲ, ಪ್ರೀತಿ, ಉತ್ಸಾಹ, …
Read More »ಗುಲ್ಬರ್ಗ ವಿಶ್ವವಿದ್ಯಾಲಯದ ಈ ಸಾಲಿನ ಗೌರವ ಡಾಕ್ಟರೇಟ್‍ಗೆ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರನ್ನು ಆಯ್ಕೆ
ರಾಯಚೂರು: ಗುಲ್ಬರ್ಗ ವಿಶ್ವವಿದ್ಯಾಲಯದ ಈ ಸಾಲಿನ ಗೌರವ ಡಾಕ್ಟರೇಟ್‍ಗೆ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರನ್ನು ಆಯ್ಕೆ ಮಾಡಲಾಗಿದೆ. ಸುಬುಧೇಂದ್ರ ತೀರ್ಥರ ಸಾಮಾಜಿಕ ಸೇವೆ, ಪಾಂಡಿತ್ಯ ಸೇರಿದಂತೆ ವಿವಿಧ ಸೇವಾ ಕಾರ್ಯಗಳನ್ನು ಗುರುತಿಸಿ ಡಾಕ್ಟರೇಟ್ ಗೆ ಆಯ್ಕೆ ಮಾಡಲಾಗಿದೆ. ನವೆಂಬರ್ 20ರಂದು ನಡೆಯಲಿರುವ ವಿವಿಯ 38ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು. ಧಾರ್ಮಿಕತೆ ಜೊತೆಗೆ ಸಾಮಾಜಿಕ ಕಾರ್ಯ ಗುರುತಿಸಿ ಗೌರವ ಡಾಕ್ಟರೇಟ್ ನೀಡಲು …
Read More »ಕಾಲೇಜಿನಲ್ಲಿ ಒಬ್ಬಳೇ ವಿದ್ಯಾರ್ಥಿನಿ ಆಗಮಿಸಿದ್ದಳು: ಪಾಠ ಮಾಡಿದ ಶಿಕ್ಷಕ
ರಾಯಚೂರು : ಇಂದಿನಿಂದ ರಾಜ್ಯದಲ್ಲಿ ಕಾಲೇಜುಗಳು ಮತ್ತೆ ತೆರೆದಿವೆ. ಆದರೆ ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸಿಲ್ಲ. ಕಾಲೇಜುಗಳು ಆರಂಭವಾದರೂ ವಿದ್ಯಾರ್ಥಿಗಳು ಕ್ಲಾಸ್ ಬಂದಿಲ್ಲ. ರಾಯಚೂರಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಬ್ಬಳೇ ವಿದ್ಯಾರ್ಥಿನಿ ಆಗಮಿಸಿದ್ದು, ಆಕೆಗೆ ಉಪನ್ಯಾಸಕರು ಪಾಠ ಮಾಡಿದ್ದಾರೆ. ಒಬ್ಬ ಬಿ.ಕಾಂ. ವಿದ್ಯಾರ್ಥಿನಿಗೆ ಶಿಕ್ಷಕರು ಪಾಠ ಮಾಡಿದ್ದಾರೆ. ಮಾಸ್ಕ್ ಹಾಕಿಕೊಂಡು ಕುಳಿತ ವಿದ್ಯಾರ್ಥಿನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಉಪನ್ಯಾಸಕರು ಸಹ ಮಾಸ್ಕ್ ಹಾಕಿಕೊಂಡು ಕೋವಿಡ್ ನಿಯಮ ಪಾಲಿಸಿ ಬೋಧನೆ ಮಾಡಿದ್ದಾರೆ. ಈ ಕಾಲೇಜಿನಲ್ಲಿ …
Read More »ಪಚುನಾವಣೆ ಘೋಷಣೆಗೂ ಮುನ್ನವೇ ಮಸ್ಕಿ ಕ್ಷೇತ್ರಕ್ಕೆ ರಾಜ್ಯ ಸರ್ಕಾರ ಭರ್ಜರಿ ಗಿಫ್ಟ್
ರಾಯಚೂರು: ಉಪಚುನಾವಣೆ ಘೋಷಣೆಗೂ ಮುನ್ನವೇ ಮಸ್ಕಿ ಕ್ಷೇತ್ರಕ್ಕೆ ರಾಜ್ಯ ಸರ್ಕಾರ ಭರ್ಜರಿ ಗಿಫ್ಟ್ ನೀಡಿದೆ. ನೆನೆಗುದಿಗೆ ಬಿದ್ದಿರುವ ಕ್ಷೇತ್ರದ ಯೋಜನೆಗಳಿಗೆ ಅನುದಾನ ಬಿಡುಗಡೆಯಾಗಿದ್ದು, ಒಟ್ಟು 110 ಕೋಟಿ ರೂಪಾಯಿಯ ಯೋಜನೆಗಳಿಗೆ ಮಂಜೂರು ಮಾಡಲಾಗಿದೆ. ಮಸ್ಕಿ ನಾಲಾ ಯೋಜನೆಯ ಕಾಲುವೆ ಅಧುನೀಕರಣ, ನೀರಾವರಿ ಇಲಾಖೆಯ ರಸ್ತೆಗಳು, ಲೋಕೊಪಯೋಗಿ ಇಲಾಖೆ, ಬಿಆರ್ ಜಿಎಫ್ ಯೋಜನೆಯಲ್ಲಿ ಅನುದಾನ ನಿಡಲಾಗಿದೆ. ಅನುದಾನ ಬಿಡುಗಡೆಯ ಬಗ್ಗೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮಾಹಿತಿ ನೀಡಿದ್ದಾರೆ. ಈ ಮೂಲಕ …
Read More »