ರಾಯಚೂರು: ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿ ನಾಪತ್ತೆಯಾಗಿದ್ದ ನಾಲ್ವರ ಪೈಕಿ ಮೂವರು ಮಹಿಳೆಯರ ಶವ ಪತ್ತೆಯಾಗಿದ್ದು, 6 ವರ್ಷದ ಬಾಲಕಿ ರೋಜಾಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಆ.17 ದಿನಸಿ ತರಲು ರಾಯಚೂರು ಜಿಲ್ಲೆಯ ಕುರ್ವಕುಲಾ ಗ್ರಾಮದಿಂದ ತೆಲಂಗಾಣದ ಪಂಚದೇವಪಾಡಕ್ಕೆ ಹೋಗಿದ್ದ ನಾಲ್ವರು ಮರಳಿ ಬರುವಾಗ ತೆಪ್ಪ ಮುಗುಚಿ ನೀರು ಪಾಲಾಗಿದ್ದರು. ನಿನ್ನೆ ಇಬ್ಬರ ಮಹಿಳೆಯರ ಶವ ಪತ್ತೆಯಾಗಿದ್ದು, ಇಂದು ಬೆಳಗ್ಗೆ ಮತ್ತೊಬ್ಬ ಮಹಿಳೆ ಮೃತದೇಹ ತೊರೆತಿದೆ. ಜುರುಲಾ ಜಲಾಶಯದ ಬಳಿ …
Read More »ಶ್ರೀರಾಮನ ಬಗ್ಗೆ ಅವಹೇಳನಕಾರಿ ಪೋಸ್ಟ್ – ಆರೋಪಿ ಬಂಧನದಿಂದ ಶಾಂತವಾದ ದೇವದುರ್ಗ
ರಾಯಚೂರು: ಶ್ರೀ ರಾಮಚಂದ್ರನ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಿನ್ನೆಲೆ ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ಉಂಟಾಗಿದ್ದ ಬಿಗುವಿನ ವಾತಾವರಣ ಆರೋಪಿಯ ಬಂಧನ ಹಿನ್ನೆಲೆ ಸದ್ಯ ಶಾಂತವಾಗಿದೆ. ಜಹೀರ್ ಎಂಬ ಯುವಕ ಶ್ರೀರಾಮನ ಬಗ್ಗೆ ಅವಹೇಳನಕಾರಿ ವಾಟ್ಸಪ್ ಸ್ಟೇಟಸ್ ಹಾಕಿದ್ದ. ಇದರಿಂದ ಆಕ್ರೋಶಗೊಂಡ ನೂರಾರು ಜನ ಹಿಂದೂ ಪರ ಸಂಘಟನೆ ಕಾರ್ಯಕರ್ತರು ರಾತ್ರೋ ರಾತ್ರಿ ದೇವದುರ್ಗ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದರು. ಆರೋಪಿಯನ್ನ ಕೂಡಲೇ ಬಂಧಿಸುವಂತೆ ಆಗ್ರಹಿಸಿ ಹೆಚ್ಚು ಜನ ಸೇರಿದ್ದರಿಂದ ಬಿಗುವಿನ …
Read More »ರಸ್ತೆ ರಿಪೇರಿ ಮಾಡಿ, ಮನೆ ಪೂರ್ಣಗೊಳಿಸಿ- ಶೌರ್ಯ ಪ್ರಶಸ್ತಿ ಪಡೆದ ಬಾಲಕನ ಮನವಿ
ರಾಯಚೂರು: ಕಳೆದ ವರ್ಷ ಕೃಷ್ಣಾ ಪ್ರವಾಹಕ್ಕೆ ರಾಯಚೂರಿನ ದೇವದುರ್ಗದ ಹಿರೇರಾಯಕುಂಪಿ ಸೇತುವೆ ಮುಳುಗಡೆಯಾಗಿದ್ದಾಗ ಅಂಬುಲೆನ್ಸ್ ಗೆ ದಾರಿ ತೋರಿಸಿ ಶೌರ್ಯ ಮೆರೆದಿದ್ದ ಗ್ರಾಮದ ಬಾಲಕ ವೆಂಕಟೇಶ್‍ಗೆ ರಾಷ್ಟ್ರಮಟ್ಟದ ಶೌರ್ಯ ಪ್ರಶಸ್ತಿಯೂ ಬಂತು. ಆದರೆ ಗ್ರಾಮದ ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ಗೂಗಲ್ ಮಾರ್ಗದ ಹಿರೇರಾಯಕುಂಪಿ ಸೇತುವೆ ಎರಡು ಕಡೆ ಬಿರುಕು ಬಿಟ್ಟಿದೆ. ಸೇತುವೆ ನಿರ್ಮಾಣವಾಗಿ ಐದಾರು ವರ್ಷಗಳಷ್ಟೇ ಕಳೆದಿದ್ದರೂ ಸೇತುವೆ ಮೇಲಿನ ರಸ್ತೆ ಹದಗೆಟ್ಟಿದೆ. ಸೇತುವೆ ಬಳಿ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿವೆ. …
Read More »ಕೃಷ್ಣಾ ನದಿಯಲ್ಲಿ ನಾಪತ್ತೆಯಾದ ನಾಲ್ವರಿಗಾಗಿ ಶೋಧ ಕಾರ್ಯ ಆರಂಭ
ರಾಯಚೂರು: ಕೃಷ್ಣಾ ನದಿಯಲ್ಲಿ ನಾಪತ್ತೆಯಾಗಿರುವ ರಾಯಚೂರಿನ ಕುರ್ವಕಲಾ ನಡುಗಡ್ಡೆ ಗ್ರಾಮದ ನಾಲ್ವರಿಗಾಗಿ ಶೋಧ ಕಾರ್ಯ ಬೆಳಗ್ಗೆಯಿಂದ ಆರಂಭವಾಗಿದೆ. ತೆಲಂಗಾಣದ ಪಂಚಮಪಾಡ್ ಬಳಿ ಕೃಷ್ಣಾ ನದಿಯಲ್ಲಿ ಮುಳುಗಿದ್ದ ತೆಪ್ಪದಲ್ಲಿನ 9 ಜನರನ್ನ ಸೋಮವಾರ ರಕ್ಷಿಸಲಾಗಿತ್ತು, ಇನ್ನೂ ನಾಲ್ವರು ನಾಪತ್ತೆಯಾಗಿದ್ದಾರೆ. ಇಂದು ಬೆಳಗ್ಗೆ ಎನ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕ ದಳ ನಾಪತ್ತೆಯಾಗಿರುವ ನಾಲ್ವರ ಶೋಧಕಾರ್ಯವನ್ನು ತೆಲಂಗಾಣದ ಪಂಚಮಪಾಡ್ ಬಳಿ ಆರಂಭಿಸಿದೆ. ತೆಲಂಗಾಣದ ಪಂಚಮಪಾಡ್ ಬಳಿ ಕೃಷ್ಣಾ ನದಿಯಲ್ಲಿ ಮುಳುಗಿದ್ದ ತೆಪ್ಪದಲ್ಲಿನ 9 ಜನರನ್ನ ಸೋಮವಾರ …
Read More »ದಿನಸಿ ಖರೀದಿಗೆ ಹೋಗಿದ್ದ ನಾಲ್ವರು ಅಗತ್ಯ ವಸ್ತುಗಳನ್ನ ಖರೀದಿಸಿ ಮರಳುವಾಗ ನಾಲ್ವರು ನಾಪತ್ತೆ
ರಾಯಚೂರು: ದಿನಸಿ ತರಲು ತೆಲಂಗಾಣಕ್ಕೆ ತೆರಳಿದ್ದ ರಾಯಚೂರು ತಾಲೂಕಿನ ಕುರ್ವಕಲಾ ನಡುಗಡ್ಡೆ ಗ್ರಾಮದ 13 ಜನ ಮರಳಿ ಬರುವಾಗ ತೆಪ್ಪ ಮುಗುಚಿ ಬಿದ್ದು ನಾಲ್ವರು ನಾಪತ್ತೆಯಾಗಿದ್ದಾರೆ. ಕುರ್ವಾಕಲಾ ಗ್ರಾಮದ ಪಾರ್ವತಿ (55) ನರಸಮ್ಮ (36) ಸುಮಲತಾ (32) ಪೂಜಾ (10) ನಾಪತ್ತೆಯಾದವರು. ತೆಲಂಗಾಣದ ಪಂಚಪಾಡಕ್ಕೆ ದಿನಸಿ ಖರೀದಿಗೆ ಹೋಗಿದ್ದ ನಾಲ್ವರು ಅಗತ್ಯ ವಸ್ತುಗಳನ್ನ ಖರೀದಿಸಿ ಮರಳುವಾಗ ಘಟನೆ ನಡೆದಿದೆ. 13 ಜನರಲ್ಲಿ 9 ಜನ ಈಜಿ ದಡ ಸೇರಲು ಹರಸಾಹಸ …
Read More »ರಾಯಚೂರಿನಲ್ಲಿ ನಾಲ್ಕು ದಿನಗಳಿಂದ ಸತತ ಮಳೆ: ಮನೆ ಕುಸಿದು ಮಹಿಳೆ ಸಾವು
ರಾಯಚೂರು: ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಎಡಬಿಡದೆ ಮಳೆ ಸುರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿ ಹಲವು ರಸ್ತೆಗಳ ಸಂಪರ್ಕ ಕಡಿತಗೊಂಡಿದೆ. ಭಾರೀ ಮಳೆಯಿಂದಾಗಿ ಮನೆ ಕುಸಿದು ಮಹಿಳೆ ಸಾವನ್ನಪ್ಪಿದ್ದಾರೆ.ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ದೇವದುರ್ಗ ತಾಲೂಕಿನ ರಾಮದುರ್ಗ ಗ್ರಾಮದಲ್ಲಿ ಮಣ್ಣಿನ ಮನೆ ಕುಸಿದು ಬಿದ್ದಿದ್ದು, 32 ವರ್ಷದ ಮಹಿಳೆ ಶಕುಂತಲಾ ಸಾವನ್ನಪ್ಪಿದ್ದಾರೆ. ಮನೆಯಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾತ್ರಿ ಮನೆಯಲ್ಲಿ ಐದು ಜನ ಮಲಗಿದ್ದರು. ಈ ವೇಳೆ ಸತತ …
Read More »ಸೋಂಕಿತರಿಗೆ ಊಟ ನೀಡುವ ಸ್ಥಳದಲ್ಲಿಯೇ ಮೃತದೇಹವನ್ನ ಪ್ಯಾಕ್ ಮಾಡಿ ಇಡಲಾಗಿತ್ತು
ರಾಯಚೂರು: ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ವ್ಯಕ್ತಿಯ ಮೃತದೇಹವನ್ನ ಕೂಡಲೇ ಶವಾಗಾರಕ್ಕೆ ಸಾಗಿಸಬೇಕು. ಆದರೆ ರಾಯಚೂರಿನ ಕೋವಿಡ್ ಆಸ್ಪತ್ರೆಯಲ್ಲಿ ಸುಮಾರು ಗಂಟೆಗಳ ಕಾಲ ಸೋಂಕಿತರ ಪಕ್ಕದಲ್ಲೇ ಶವವನ್ನು ಇಡಲಾಗಿತ್ತು. ಸೋಂಕಿತರಿಗೆ ಊಟ ನೀಡುವ ಸ್ಥಳದಲ್ಲಿಯೇ ಮೃತದೇಹವನ್ನ ಪ್ಯಾಕ್ ಮಾಡಿ ಇಡಲಾಗಿತ್ತು. ಹೀಗಾಗಿ ಊಟ ತೆಗೆದುಕೊಂಡು ಹೋಗಲು, ಬರುವ ಪ್ರತಿಯೊಬ್ಬರು ಮೃತದೇಹದ ಪಕ್ಕದಲ್ಲೇ ನಿಂತುಕೊಂಡು ಊಟ ತೆಗೆದುಕೊಳ್ಳಬೇಕಾದ ಅವ್ಯವಸ್ಥೆಗೆ ಜನರನ್ನು ಹೈರಾಣಾಗಿಸಿದೆ. ಸಾಮಾಜಿಕ ಅಂತರ ಕಾಪಾಡಲು ಹೇಳುವ ವೈದ್ಯರೇ ಈ ರೀತಿಯ …
Read More »ಮುಗ್ಧರು, ಅಮಾಯಕರು ಮಧ್ಯರಾತ್ರಿ ದೊಂಬಿ ಮಾಡುವುದಿಲ್ಲ: ಡಿಸಿಎಂ ತಿರುಗೇಟು
ರಾಯಚೂರು: ಅಖಂಡ ಶ್ರೀನಿವಾಸ್ ಮನೆ ಮೇಲಿನ ದಾಳಿ ಪ್ರಕರಣದಲ್ಲಿ ಭಾಗಿಯಾಗಿದ್ದವರು ಮುಗ್ಧ ಹಾಗೂ ಅಮಾಯಕರು ಎಂಬ ಶಾಸಕ ಜಮೀರ್ ಹೇಳಿಕೆಗೆ ಡಿಸಿಎಂ ಲಕ್ಷ್ಮಣ ಸವದಿ ತಿರುಗೇಟು ನೀಡಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ಲಕ್ಷ್ಮಣ ಸವದಿ, ಒಳ್ಳೆಯವರು ಮಧ್ಯರಾತ್ರಿ ಬಂದು ದೊಂಬಿ ಮಾಡುವುದಿಲ್ಲ. ನವೀನ್ ಎಂಬಾತ ಡಿಕೆಶಿ ನಮ್ಮ ಬಾಸ್, ರಾಹುಲ್, ಪ್ರಿಯಾಂಕ ನಮ್ಮ ನಾಯಕರು ಎಂದು ಪೋಸ್ಟ್ ಹಾಕುತ್ತಿದ್ದ. ಕಾಂಗ್ರೆಸ್ ತಮ್ಮ ಹುಳುಕು ಮುಚ್ಚಿಕೊಳ್ಳಲು ನವೀನ್ ಬಿಜೆಪಿಯವನು ಎಂದು ಬಿಂಬಿಸುತ್ತಿದೆ. ಚುನಾವಣೆ …
Read More »ಬೆಂಗಳೂರು ಗಲಭೆ ರಾಜಕೀಯ ಲಾಭಕ್ಕಾಗಿ ನಡೆದಿರುವ ಘಟನೆ: ಲಕ್ಷ್ಮಣ ಸವದಿ
ರಾಯಚೂರು: ಬೆಂಗಳೂರಿನ ಕೆಜೆ ಹಳ್ಳಿ ಹಾಗೂ ಡಿಜೆ ಹಳ್ಳಿಯ ಘಟನೆ ಪೂರ್ವ ನಿಯೋಜಿತ, ಇದು ರಾಜಕೀಯ ಲಾಭಕ್ಕಾಗಿ ನಡೆದಿರುವ ಘಟನೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ರಾಯಚೂರಿನಲ್ಲಿ ಹೇಳಿದ್ದಾರೆ. ನಗರದಲ್ಲಿ ಬಿಜೆಪಿ ಜಿಲ್ಲಾ ಕಾರ್ಯಾಲಯ ಭವನಕ್ಕೆ ಭೂಮಿ ಪೂಜೆ ನೆರವೇರಿಸಿ ಬಳಿಕ ಮಾತನಾಡಿದ ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ, ಬೆಂಗಳೂರು ಗಲಭೆಗೆ ಕಾರಣವಾದ ನವೀನ್ ಅನ್ನೋ ವ್ಯಕ್ತಿ ಕಟ್ಟಾ ಕಾಂಗ್ರೆಸ್ ಬೆಂಬಲಿಗ. ನವೀನ್‍ಗೂ ಬಿಜೆಪಿಗೂ ಯಾವುದೇ …
Read More »ವಿದ್ಯುತ್ ತಗುಲಿ ತಂದೆ ಮಗ ಸಾವನ್ನಪ್ಪಿದ ದಾರುಣ ಘಟನೆ ನಿನ್ನೆ ರಾತ್ರಿ ನಡೆದಿದೆ.
ರಾಯಚೂರು: ವಿದ್ಯುತ್ ತಗುಲಿ ತಂದೆ ಮಗ ಸಾವನ್ನಪ್ಪಿದ ದಾರುಣ ಘಟನೆ ನಿನ್ನೆ ರಾತ್ರಿ ರಾಯಚೂರಿನ ದಿನ್ನಿ ಗ್ರಾಮದಲ್ಲಿ ನಡೆದಿದೆ. ಮಹೇಶ (47), ನವೀನ್ (16) ಮೃತರು. ಮನೆ ಪಕ್ಕದಲ್ಲಿದ್ದ ಮರಕ್ಕೆ ವಿದ್ಯುತ್ ವೈರ್ ತಾಕಿದೆ. ಇದೇ ಮರಕ್ಕೆ ಬಟ್ಟೆ ನೇತಾಕಲು ವೈರ್ ಕಟ್ಟಲಾಗಿತ್ತು. ಜಿಟಿ ಜಿಟಿ ಮಳೆ ಸುರಿಯುತ್ತಿರುವ ಪರಿಣಾಮ ಮರಕ್ಕೆ ವಿದ್ಯುತ್ ಪ್ರವಹಿಸಿ ತಂತಿಗೂ ಅರ್ಥಿಂಗ್ ಆಗಿದೆ. ಬಟ್ಟೆ ತೆಗೆಯಲು ಹೋದ ತಂದೆ ಶಾಕ್ ನಿಂದ ಮೃತಪಟ್ಟಿದ್ದಾನೆ. ತಂದೆ …
Read More »