ಚಿಕ್ಕೋಡಿ/ಬೆಳಗಾವಿ: ಡೆಡ್ಲಿ ಕೊರೊನಾ ಮಧ್ಯೆಯೂ ಲಾಕ್‍ಡೌನ್ ನಿಯಮಗಳನ್ನು ಗಾಳಿಗೆ ತೂರಿ ಬಿಜೆಪಿ ಶಾಸಕನ ಆಪ್ತನೊಬ್ಬ ಡಿಜೆ ಹಾಕಿಕೊಂಡು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಲಜಿ ಗ್ರಾಮದಲ್ಲಿ ಕುಡಚಿ ಕ್ಷೇತ್ರದ ಬಿಜೆಪಿ ಶಾಸಕ ಪಿ.ರಾಜೀವ್ ಆಪ್ತ ಹಾಗೂ ಬಗರ ಹುಕುಂ ಸಮಿತಿ ಸದಸ್ಯ ನರಸು ತುಳಸಿಗೇರಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಸಂಜೆ 7 ನಂತರ ನಿಷೇಧಾಜ್ಞೆ ಇದ್ದರೂ ತಡರಾತ್ರಿವರೆಗೂ ಲಾಕ್‍ಡೌನ್ ನಿಯಮಗಳನ್ನ ಗಾಳಿಗೆ ತೂರಿ ಕೊರೊನಾ ನಡುವೆಯೂ ಡಿಜೆ …
Read More »ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಊಟೋಪಚಾರ ನೀಡಿ ಆರೈಕೆ ಮಾಡಿದ್ದ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಜಗಣಭೀ ಬಾಪುಲಾಲ್ ಪಟೇಲ್ ಅಜ್ಜಿ (108) ಇಂದು ನಿಧನ
ಚಿಕ್ಕೋಡಿ: ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಊಟೋಪಚಾರ ನೀಡಿ ಆರೈಕೆ ಮಾಡಿದ್ದ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಜಗಣಭೀ ಬಾಪುಲಾಲ್ ಪಟೇಲ್ ಅಜ್ಜಿ (108) ಇಂದು ನಿಧನರಾಗಿದ್ದಾರೆ. 1972ರಲ್ಲಿ ಮಹಾರಾಷ್ಟ್ರದ ಔರವಾಡ ಗ್ರಾಮದ ದೇವಸ್ಥಾನದ ಜಮೀನು ವಾದವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಕೈಗೆತ್ತಿಕೊಂಡಿದ್ದರು. ಈ ಹಿನ್ನೆಲೆ ಚಿಕ್ಕೋಡಿಯ ಕರೋಶಿ ಗ್ರಾಮದಲ್ಲಿ ಅಂಬೇಡ್ಕರ್ ಅವರು 9 ದಿನ ತಂಗಿದ್ದರು. ಈ ವೇಳೆ ಅವರಿಗೆ ಜಗಣಭೀ ಅವರೇ ಊಟೋಪಚಾರದ ವ್ಯವಸ್ಥೆಯನ್ನು ಮಾಡಿದ್ದರು. ಅಂದು ಅಂಬೇಡ್ಕರ್ ಮುನ್ನಿ …
Read More »ರಾಜ್ಯ ಪ್ರವೇಶಕ್ಕೆ ಇ-ಪಾಸ್ ನೀಡಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತ:ಗೃಹಸಚಿವ ಬಸವರಾಜ ಬೊಮ್ಮಾಯಿ
ಬೆಳಗಾವಿ, ಮೇ 30(ಕರ್ನಾಟಕ ವಾರ್ತೆ): ಮಹಾರಾಷ್ಟ್ರದಿಂದ ಆಗಮಿಸುತ್ತಿರುವ ಜನರಲ್ಲಿ ಅತೀ ಹೆಚ್ಚು ಸೋಂಕು ಕಂಡುಬಂದಿದೆ. ಇದು ಇನ್ನೂ ಹೆಚ್ಚಳವಾಗುತ್ತಿದೆ. ಆದ್ದರಿಂದ ರಾಜ್ಯ ಪ್ರವೇಶಕ್ಕೆ ಇ-ಪಾಸ್ ನೀಡಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಇ-ಪಾಸ್ ಇಲ್ಲದೇ ಬರುತ್ತಿರುವವರನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸರ್ಕಾರದ ಮಾರ್ಗಸೂಚಿ ಪ್ರಕರ ಎಲ್ಲರನ್ನೂ ತಪಾಸಣೆ ನಡೆಸಿ ಅಗತ್ಯವಿದ್ದರೆ ಕ್ವಾರಂಟೈನ್ ಮಾಡಬೇಕು ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ ಕುಗನೊಳ್ಳಿ …
Read More »ಬಾಗಲಕೋಟ ಜಿಲ್ಲೆಯಲ್ಲಿ ಮತ್ತೆ 17 ಜನ ಕೋವಿಡನಿಂದ ಗುಣಮುಖ ….
ಬಾಗಲಕೋಟ ಜಿಲ್ಲೆಯಲ್ಲಿ ಮತ್ತೆ 17 ಜನ ಕೋವಿಡನಿಂದ ಗುಣಮುಖ …. ಗುಣಮುಖರಾದವರ ಸಂಖ್ಯೆ 62ಕ್ಕೆ ಏರಿಕೆ … ಢಾಣಕಶಿರೂರ ಗ್ರಾಮದ 19 ವರ್ಷದ ಯುವತಿ ಪಿ-704, ಜಮಖಂಡಿಯ 17 ವರ್ಷದ ಓರ್ವ ಬಾಲಕ ಪಿ-894, 22 ವರ್ಷದ ಯುವಕ ಪಿ-893, ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹೊಸರಿತ್ತಿ ಗ್ರಾಮದ 32 ವರ್ಷದ ಪಿ-892 ಗುಣಮುಖರಾದವರು ಮುಧೋಳ ನ ಓರ್ವ ಸಾರಿ ಕೇಸ್ ಸೇರಿದಂತೆ 13 ಜನರಿಗೆ ತಬ್ಲಿಘಿ ಜಮಾತ ನಂಟಿನಿಂದ …
Read More »ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ ಸ್ಟೆಬಲ್ ಕುಡಿದ ಅಮಲಿನಲ್ಲಿ ತಹಸಿಲ್ದಾರ್ ಖಾಸಗಿ ಕಾರಿಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದಾನೆ.
ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಬಳಿ ಘಟನೆ ನಡೆದಿದೆ. ಕಾಗವಾಡ ತಹಶಿಲ್ದಾರರ ಪ್ರಮೀಳಾ ದೇಶಪಾಂಡೆ ಹಾಗೂ ಕಾರು ಚಾಲನೆ ಮಾಡುತ್ತಿದ್ದ ಅವರ ಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕ್ಕೋಡಿಯಿಂದ ತಮ್ಮ ಖಾಸಗಿ ವಾಹನದಲ್ಲಿ ಕರ್ತವ್ಯಕ್ಕೆ ಕಾಗವಾಡಕ್ಕೆ ಹೋಗುವಾಗ ಚಿಕ್ಕೋಡಿ ತಾಲುಕಿನ ಮಾಂಜರಿ ಗ್ರಾಮದ ಬಳಿ ಪೊಲೀಸ್ ಕಾನ್ ಸ್ಟೆಬಲ್ ಬೈಕ್ ತಹಶಿಲ್ದಾರರ ವಾಹನಕ್ಕೆ ಡಿಕ್ಕಿ ಹೊಡೆದಿದೆ . ತಹಶಿಲ್ದಾರ ಪ್ರಮೀಳಾ ದೇಶಪಾಂಡೆ ಅವರಿಗೆ ಸಣ್ಣ ಪುಟ್ಟ ಗಾಯವಾಗಿದೆ. ಪೊಲೀಸ್ …
Read More »ಚಿಕ್ಕೋಡಿ:ಮಹಾಮಾರಿ ಕೊರೊನಾ ವೈರಸ್ ಗ್ರಾಮೀಣ ಭಾಗಕ್ಕೂ ವಕ್ಕರಿಸಿದೆ.
ಬೆಳಗಾವಿ/ಚಿಕ್ಕೋಡಿ: ಮಹಾಮಾರಿ ಕೊರೊನಾ ವೈರಸ್ ಗ್ರಾಮೀಣ ಭಾಗಕ್ಕೂ ವಕ್ಕರಿಸಿದೆ. ಜಿಲ್ಲೆಯ ಕಾಗವಾಡ ತಾಲೂಕಿನ ಮೊಳವಾಡ, ಹುಕ್ಕೇರಿ ತಾಲೂಕಿನ ದೊಂಡಗಟ್ಟಿ ಹಾಗೂ ಮೊದಗಾ ಗ್ರಾಮದವರಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಮೊಳವಾಡ ಗ್ರಾಮದ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷರಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಹುಕ್ಕೇರಿ ಇಬ್ಬರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ದೊಂಡಗಟ್ಟಿ ಹಾಗೂ ಮೊದಗಾ ಗ್ರಾಮದ ತಲಾ ಒಬ್ಬ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. ಲಾಕ್‍ಡೌನ್‍ಗೂ ಮುನ್ನವೇ ಮೊಳವಾಡ ಗ್ರಾಮದ 15 ಜನರ ತಂಡ …
Read More »ಹುಕ್ಕೇರಿ ಸದಲಗಾ ಪಟ್ಟಣದಲ್ಲಿರುವ ಏಕವೀರಾ ತಾಯಿ ದೇವಸ್ಥಾನದ ಕೆರೆಯನ್ನು ದುರಸ್ತಿ
ಚಿಕ್ಕೋಡಿ – ಶಾಸಕ ಗಣೇಶ ಪ್ರಕಾಶ ಹುಕ್ಕೇರಿ ಸದಲಗಾ ಪಟ್ಟಣದಲ್ಲಿರುವ ಏಕವೀರಾ ತಾಯಿ ದೇವಸ್ಥಾನದ ಕೆರೆಯನ್ನು ದುರಸ್ತಿ ಮಾಡಿಸಿದ್ದಾರೆ. ಆ ಮಾರ್ಗವಾಗಿ ಹೋಗುವಾಗ ಹತ್ತಿರವಿರುವ ಕೆರೆ ಹಾಗೂ ಸುತ್ತಮುತ್ತಲಿನ ಪರಿಸ್ಥಿತಿಯನ್ನು ಗಮನಿಸಿದರು. ಅದು ಹೂಳು ಮತ್ತು ಪಾಚಿಯಿಂದ ತುಂಬಿರುವುದನ್ನು ಗಮನಿಸಿದ ಶಾಸಕರು ಕೂಡಲೆ ಸಂಪೂರ್ಣ ಕೆರೆಯನ್ನು ದುರಸ್ತಿ ಹಾಗೂ ಸ್ವಚ್ಛ ಮಾಡಿಸಿದರು . ಶಾಸಕರ ಈ ಕಳಕಳಿಗೆ ಏಕವೀರಾತಾಯಿ ದೇವಸ್ಥಾನದ ಕಮಿಟಿಯವರು ಕೃತಜ್ಞತೆ ಸಲ್ಲಿಸಿದರು.
Read More »:ಇಂದಿನಿಂದ ಅಂತರ್ ಜಿಲ್ಲಾ ಬಸ್ ಸಂಚಾರ ಆರಂಭ ಹಿನ್ನಲೆ
ಚಿಕ್ಕೋಡಿ :ಇಂದಿನಿಂದ ಅಂತರ್ ಜಿಲ್ಲಾ ಬಸ್ ಸಂಚಾರ ಆರಂಭ ಹಿನ್ನಲೆ ಬೆಳಿಗ್ಗೆ 7 ಗಂಟೆಯಿಂದ ಬಸ್ ಸಂಚಾರ ಆರಂಭ ಹಿನ್ನಲೆ ಇನ್ನೂ ಬಸ್ ನಿಲ್ದಾಣದತ್ತ ಸುಳಿಯದ ಪ್ರಯಾಣಿಕರು ಖಾಲಿ ಖಾಲಿ ಇರುವ ಚಿಕ್ಕೋಡಿ ನಿಲ್ದಾಣ ಸಂಜೆ 7 ಗಂಟೆವರೆಗೂ ಬಸ್ ಸಂಚಾರ. ಇನ್ನೂ ಸುಮಾರು ೩೫ ಬಸ್ ಗಳು ತಾಲೂಕಿನ ಮತ್ತು ಪಕ್ಕದ ಜಿಲ್ಲೆಗಳಿಗೆ ಸಂಚಾರ ಸಿದ್ದತೆ. ಚಿಕ್ಕೋಡಿ ವಿಭಾಗದಲ್ಲಿ ಆರು ಘಟಕಗಳಿಂದ 234 ಬಸ್‌ಗಳನ್ನು ಸಂಚಾರಕ್ಕೆ ವ್ಯವಸ್ಥೆ …
Read More »ಮಹಾರಾಷ್ಟ್ರದಿಂದ ಕಳ್ಳ ಮಾರ್ಗದ ಮೂಲಕ ಬಂದ ಮೂವರ ವಿರುದ್ಧ ಎಫ್‍ಐಆರ್
ಚಿಕ್ಕೋಡಿ: ಕಳ್ಳ ಮಾರ್ಗದಿಂದ ರಾಜ್ಯ ಪ್ರವೇಶಿಸಿದ ಮೂವರ ವಿರುದ್ಧ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಾರಾಷ್ಟ್ರದಿಂದ ಪಾಸ್ ಇಲ್ಲದೇ ಕಳ್ಳ ಮಾರ್ಗದಿಂದ ಬಂದ ಮೂವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಮಹಾರಾಷ್ಟ್ರದ ಮೀರಜ ನಗರದಿಂದ ಯಾವುದೇ ಪಾಸ್ ಇಲ್ಲದೇ ಬಂದಿದ್ದ ಆರೋಪಿಗಳನ್ನು ಹುಕ್ಕೇರಿ ಪಿಎಸ್‍ಐ ಶಿವಾನಂದ ಗುಡಗನಟ್ಟಿ ಅವರ ತಂಡ ಪತ್ತೆ ಹಚ್ಚಿದೆ. ಪತ್ನಿ ಹಾಗೂ ಮಗನನ್ನು ಕಳ್ಳ ಮಾರ್ಗದಿಂದ ಹುಕ್ಕೇರಿ ಪಟ್ಟಣದ ಕಲಾಲ್ ಗಲ್ಲಿಯ ಮನೆಗೆ …
Read More »ದುರ್ಯೋಧನ ಐಹೊಳೆ ವಿರುದ್ಧ, ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಬಿ.ಆರ್.ಸಂಗಪ್ಪಗೋಳ ಆಕ್ರೋಶ
ಚಿಕ್ಕೋಡಿ: ಸಂಕಷ್ಟದಲ್ಲಿರುವ ಜನರಿಗೆ ನೆರವಾಗಬೇಕಾಗಿರುವ ರಾಯಬಾಗ ಶಾಸಕರು ತಮ್ಮ ಕ್ಷೇತ್ರದಲಿ ಒಂದು ಊರಿಗೆ ಕೇವಲ 20 ದಿನಸಿ ಕಿಟ್ ವಿತರಣೆ ಮಾಡುತ್ತಿರುವುದು ವಿಷಾದನೀಯ ಸಂಗತಿ ಎಂದು ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಬಿ.ಆರ್.ಸಂಗಪ್ಪಗೋಳ ಆಕ್ರೋಶ ವ್ಯಕ್ತ ಪಡಿಸಿದರು. ತಾಲೂಕಿನ ಮಜಲಟ್ಟಿ ಗ್ರಾಮದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಯಬಾಗ ಶಾಸಕರ ಮೂರು ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿರುವ ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿ ಹೋಬಳಿ ಹಳ್ಳಿಗಳ ಬಡ ಮತ್ತು …
Read More »