Breaking News

ಚಿಕ್ಕೋಡಿ

ಲಾಕ್‍ಡೌನ್ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ: ಡಿಸಿಎಂ ಕಾರಜೋಳ

ಚಿಕ್ಕೋಡಿ: ಲಾಕ್‍ಡೌನ್ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ. ಶನಿವಾರ ಲಾಕ್‍ಡೌನ್ ಮಾಡುವ ವಿಚಾರ ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಡಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ ಸ್ಪಷ್ಟಪಡಿಸಿದ್ದಾರೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಅಂಬೇಡ್ಕರ್ ಭವನ ಹಾಗೂ ನೂತನ ಪ್ರವಾಸಿ ಮಂದಿರ ಉದ್ಘಾಟಿಸಿ, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನರ ಸುರಕ್ಷತೆಗಾಗಿ ಶನಿವಾರ ಹಾಗೂ ಭಾನುವಾರ ಲಾಕ್ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಮದುವೆ ಕಾರ್ಯಕ್ರಮಗಳಿಂದ ಹೆಚ್ಚಿನ ಕೊರೊನಾ ಪ್ರಕರಣ ಬಂದ ಕಾರಣ …

Read More »

KSRTC ಸಿಬ್ಬಂದಿಗೆ ವೇತನವನ್ನು ನೀಡುತ್ತೇವೆ: ಸಾರಿಗೆ ಸಚಿವ ಸವದಿ

ಚಿಕ್ಕೋಡಿ: ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗೆ ಯಾವುದೇ ಕಾರಣಕ್ಕೂ ಸಂಬಳ ನೀಡುವುದನ್ನು ನಿಲ್ಲಿಸುವುದಿಲ್ಲ ಎಂದು ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ. ಬೆಳಗಾವಿ ಜಿಲ್ಲೆ ನಿಪ್ಪಾಣಿ ಪಟ್ಟಣದಲ್ಲಿ ನೂತನ ಪ್ರವಾಸಿ ಮಂದಿರ ಹಾಗೂ ಅಂಬೇಡ್ಕರ್ ಭವನ ವಾಣಿಜ್ಯ ತೆರಿಗೆ ಇಲಾಖೆ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, 2,652 ಕೋಟಿ ನಷ್ಟವನ್ನು ಕೆ.ಎಸ್.ಆರ್.ಟಿ.ಸಿ ಅನುಭವಿಸುತ್ತಿದೆ. ಆದರೂ ಸಂಸ್ಥೆಯ 1 ಲಕ್ಷ 30 ಸಾವಿರ ಸಿಬ್ಬಂದಿಗೆ ವೇತನ ನೀಡಲಾಗುವುದು ಎಂದರು.ಪ್ರತಿ ತಿಂಗಳು …

Read More »

ಪೊಲೀಸರ ಸಮ್ಮುಖದಲ್ಲಿಯೇ ತಹಸೀಲ್ದಾರ್ ಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವುದು ಖಂಡನಾರ್ಹ.

ಚಿಕ್ಕೋಡಿ : ಬಂಗಾರಪೇಟೆ ತಹಸೀಲ್ದಾರ್ ಬಿ.ಕೆ.ಚಂದ್ರಮೌಳೇಶ್ವರ ಹತ್ಯೆ ಹಿನ್ನೆಲೆ ಕಠಿಣ ಕಾನೂನು ರೂಪಿಸುವ ಮುಖಾಂತರ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರಿಗೆ ರಕ್ಷಣೆ ನೀಡುವಂತೆ ಒತ್ತಾಯಿಸಿ    ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚಿಕ್ಕೋಡಿ ತಾಲೂಕಾ ಘಟಕದಿಂದ ಶುಕ್ರವಾರ ತಹಸೀಲ್ದಾರ ಎಸ್.ಎಸ್.ಸಂಪಗಾಂವಿ ಅವರಿಗೆ ಮನವಿ ಸಲ್ಲಿಸಿದರು. ಸರ್ವೇ ಕಾರ್ಯದಲ್ಲಿ ನಿರತರಾಗಿದ್ದಾಗ ಪೊಲೀಸರ ಸಮ್ಮುಖದಲ್ಲಿಯೇ ತಹಸೀಲ್ದಾರ್ ಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವುದು ಖಂಡನಾರ್ಹ. ರಾಜ್ಯಾದ್ಯಂತ ಸರ್ಕಾರಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವ …

Read More »

ಹುಕ್ಕೇರಿ ಪಟ್ಟಣದಲ್ಲಿ ಚಿಕನ್ ತಿಂದವರಿಗೆ ಕೊರೊನಾ ಭೀತಿ………..

ಬೆಳಗಾವಿ/ಚಿಕ್ಕೋಡಿ: ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ಆತಂಕ ಸೃಷ್ಟಿಸುತ್ತಿದೆ. ಆದರೆ ಈಗ ಚಿಕನ್ ತಿಂದವರಿಗೆ ಕೊರೊನಾ ಭೀತಿ ಶುರುವಾಗಿರುವ ಘಟನೆ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ. ಚಿಕನ್ ಮಾರಾಟ ಮಾಡುತ್ತಿದ್ದ ಕುಟುಂಬದ 58 ವರ್ಷದ ಮಹಿಳೆ ಸಾವನ್ನಪ್ಪಿದ್ದು ಕೊರೊನಾ ಆತಂಕಕ್ಕೆ ಕಾರಣವಾಗಿದೆ. ಹುಕ್ಕೇರಿ ಪಟ್ಟಣದ ಮುಖ್ಯ ಮಾರುಕಟ್ಟೆಯಲ್ಲಿ ಅಂಗಡಿ ಹೊಂದಿದ್ದ ಕುಟುಂಬದವರು ಚಿಕನ್ ವ್ಯಾಪಾರವನ್ನ ಭರ್ಜರಿಯಾಗಿ ಮಾಡುತ್ತಿದ್ದರು. ಮನೆ ಜೊತೆಗೆ ಅಂಗಡಿ ಇಟ್ಟು ಚಿಕನ್ ಮಾರಾಟ ಮಾಡುತ್ತಿದ್ದ ಕುಟುಂಬದ ಮಹಿಳೆ …

Read More »

ಗುಟ್ಕಾ ತಿಂದು ನೆಲಕ್ಕೆ ಉಗಿದವನ್ ಮುಖಕ್ಕೆ ಉಗಿದ ಕೊರೊನಾ ವಾರಿಯರ್

ಚಿಕ್ಕೋಡಿ(ಬೆಳಗಾವಿ): ಗುಡ್ಕಾ ತಿಂದು ರಸ್ತೆಗೆ ಉಗುಳಿದ ವ್ಯಕ್ತಿಗೆ ಕೊರೊನಾ ವಾರಿಯರ್ ಶಿಕ್ಷೆ ನೀಡಿದ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ನಡೆದಿದೆ. ಕೊರೊನಾ ಮಹಾಮಾರಿ ಹರಡುತ್ತಿರುವುದರಿಂದ ಜನ ಭಯಭೀತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ವ್ಯಕ್ತಿ ಗುಟ್ಕಾ ತಿಂದು ನಿಪ್ಪಾಣಿ ನಗರಸಭೆ ಎದುರು ರಸ್ತೆಗೆ ಉಗುಳಿದ್ದಾನೆ. ಇದನ್ನು ಕೊರೊನಾ ವಾರಿಯರ್ ಒಬ್ಬರು ಗಮನಿಸಿದ್ದಾರೆ. ಅಲ್ಲದೆ ಕೂಡಲೇ ಆತನಿಗೆ ಸ್ಥಳದಲ್ಲಿಯೇ ಶಿಕ್ಷೆ ನೀಡಿದ್ದಾರೆ. ವ್ಯಕ್ತಿ ಉಗಿದ ಕೂಡಲೇ ಸ್ಥಳಕ್ಕೆ ಬಂದ ಪೌರಾಯುಕ್ತ ಮಹಾವೀರ ಬೋರನ್ನವರ …

Read More »

ಕಾರ್ಯಕರ್ತರು ಪಕ್ಷ ಸಂಘಟನೆಗೆ ಹೆಚ್ಚು ಶ್ರಮವಹಿಸಬೇಕು.:ಸತೀಶ ಜಾರಕಿಹೊಳಿ

ಚಿಕ್ಕೋಡಿ : ಕಾಂಗ್ರೆಸ್ ಪಕ್ಷವೂ ಹಿಂದಿನಿಗಿಂತಲ್ಲೂ ವಿಭಿನ್ನವಾಗಿ  ಮುನ್ನಡೆಯಲಿದೆ. ಕಾರ್ಯಕರ್ತರು ಪಕ್ಷ ಸಂಘಟನೆಗೆ ಹೆಚ್ಚು ಶ್ರಮವಹಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸೋಮವಾರ ಭೇಟಿ ನೀಡಿ  ಅವರು ಮಾತನಾಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ತುಂಬಾ ಉತ್ಸಾಹಿ ಇದ್ದಾರೆ. ಪಕ್ಷವನ್ನು ಕಟ್ಟುವ ಛಲ ಅವರಲ್ಲಿದೆ. ಆದ ಕಾರಣ ಅವರೊಂದಿಗೆ ಮುನ್ನಡೆದರೆ ಮುಂದಿನ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದೆ ಬರುತ್ತದೆ ಎಂದು …

Read More »

ತುಂಗಾ ಜಲಾಶಯದ 4 ಗೇಟ್ ಓಪನ್- 2 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡುಗಡೆ

ಶಿವಮೊಗ್ಗ/ ಬೆಳಗಾವಿ: ಮಲೆನಾಡು ಹಾಗೂ ತುಂಗಾ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆ ಗಾಜನೂರು ಸಮೀಪದ ತುಂಗಾ ಜಲಾಶಯ ಈಗಾಗಲೇ ಭರ್ತಿಯಾಗಿದೆ. ಹೀಗಾಗಿ ಇಂದು 4 ಕ್ರಸ್ಟ್ ಗೇಟ್ ಮೂಲಕ 2 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡುಗಡೆ ಮಾಡಲಾಗುತ್ತಿದೆ. ತುಂಗಾ ಜಲಾಶಯ 3.25 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿದ್ದು, 100 ಮೀ. ಎತ್ತರವಿದೆ. ಮುಂಗಾರು ಆರಂಭದಲ್ಲಿಯೇ ಜಲಾಶಯ ಭರ್ತಿಯಾಗಿದ್ದು, ಜಲಾಶಯಕ್ಕೆ ಪ್ರತಿದಿನ 7 ಸಾವಿರ ಕ್ಯೂಸೆಕ್ …

Read More »

ನನ್ನ ರಾಜಕೀಯ ಜೀವನ ಇರುವವರೆಗೆ ನಾನು ಬಿಜೆಪಿ ಪಕ್ಷದಲ್ಲಿ ಇರುತ್ತೇನೆ.: ರಮೇಶ್ ಜಾರಕಿಹೊಳಿ

ಚಿಕ್ಕೋಡಿ(ಬೆಳಗಾವಿ): ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ಬಿಜೆಪಿ ಪಕ್ಷ ಬಿಡುತ್ತಾರೆ ಎಂಬ ಊಹಾಪೋಹಗಳು ಹರಿದಾಡುತ್ತಿದ್ದು, ಈ ಸುದ್ದಿಗೆ ಸ್ಪಷ್ಟನೆ ನೀಡುವ ಮೂಲಕ ಬೆಳಗಾವಿ ಸಾಹುಕಾರ ತೆರೆ ಎಳೆದಿದ್ದಾರೆ. ಚಿಕ್ಕೋಡಿ ಪಟ್ಟಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಂಘ ಪರಿವಾರದಲ್ಲಿ ನನಗೆ ಸಿಗುತ್ತಿರುವ ಆಶೀರ್ವಾದವನ್ನ ಕೆಲ ವೈರಿ ಕುತಂತ್ರಿಗಳಿಗೆ ನೋಡಲು ಆಗುತ್ತಿಲ್ಲ. ಹೀಗಾಗಿ ನನ್ನ ಬಗ್ಗೆ ಪಕ್ಷ ಬಿಡುತ್ತೇನೆ ಎಂದು ಊಹಾಪೋಹಗಳನ್ನ ಎಬ್ಬಿಸಲಾಗಿದೆ ಎಂದು ಗರಂ ಆದರು. ನನ್ನ ರಾಜಕೀಯ ಜೀವನ …

Read More »

ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ 50 ಸಾವಿರ ರೂ. ನೀಡಿದ ಬೆಳಗಾವಿ ಎಸ್‍ಪಿ…………

ಚಿಕ್ಕೋಡಿ: ಸಾಲ ಬಾದೆ ತಳಲಾರದೆ ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಬೆಳಗಾವಿ ಎಸ್‍ಪಿ ಹಣ ಸಹಾಯ ಮಾಡಿದ್ದಾರೆ. ಒಂದು ತಿಂಗಳ ಹಿಂದೆ ತಾನು ಕೊರೆಸಿದ ಕೊಳವೆ ಬಾವಿಯಲ್ಲಿ ನೀರು ಬಾರದ ಕಾರಣ ಸಾಲದ ಸುಳಿಗೆ ಸಿಲುಕಿ ಮನನೊಂದು ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತ ಕುಟುಂಬದ ಸ್ಥಿತಿ ಚಿಂತಾಜನಕವಾಗಿರುವುದನ್ನು ಕಂಡು ಅವರ ಕುಟುಂಬದ ಆಸರೆಗಾಗಿ ಹಾಗೂ ಇಬ್ಬರ ಮಕ್ಕಳ ಶಿಕ್ಷಣಕ್ಕಾಗಿ ಅನಕೂಲವಾಗಲು ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ 50 ಸಾವಿರ ಧನ …

Read More »

ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಬದಲಾವಣೆಗಾಗಿ ಸರಕಾರಕ್ಕೆ ಮನವಿ………….

ಚಿಕ್ಕೋಡಿ:  ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಬದಲಾವಣೆಗಾಗಿ ಸುಪ್ರಿಂಕೋರ್ಟ್ ನೀಡಿರುವ ಆದೇಶವನ್ನು ಅನುಷ್ಠಾನಗೊಳಿಸಲು ಸರಕಾರ ಮುಖ್ಯ ಕಾರ್ಯದರ್ಶಿಯವರಿಗೆ ಆದೇಶ ನೀಡುವಂತೆ ಒತ್ತಾಯಿಸಿ ಮಂಗಳವಾರ ಮೂಲ ಪರಿಶಿಷ್ಟ ಜಾತಿಗಳ ಒಕ್ಕೂಟದ ವತಿಯಿಂದ ಉಪವಿಭಾಗಾಧಿಕಾರಿಗಳ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು. ಲಂಬಾಣಿ(ಬಂಜಾರ), ಭೋವಿ, ಕೊರಚ ಕೊರಮ ಮುಂತಾದ ಸಮುದಾಯದ ಜನರನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ತೆಗೆಯಲು ಸುಪ್ರಿಂಕೋರ್ಟ್ ಆದೇಶ ಮಾಡಿರುತ್ತದೆ. ಆದ್ದರಿಂದ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರಿಗೆ ಸುಪ್ರಿಂಕೋರ್ಟ್ ಆದೇಶ ಅನುಷ್ಠಾನಗೊಳಿಸಲು ಸೂಚನೆ ನೀಡಬೇಕು.ಸುಪ್ರಿಂಕೋರ್ಟಿಗೆ ಅನುಪಾಲನ …

Read More »