Breaking News

ಚಿಕ್ಕೋಡಿ

ಜಾಗನೂರಿನ ಆರೋಪಿಯನ್ನು ಚಿಕ್ಕೋಡಿ ಪೊಲೀಸರು ಬಂಧಿಸಿದ್ದಾರೆ

ಚಿಕ್ಕೋಡಿ ಉಪವಿಭಾಗವೂ ಸೇರಿ ಹಲವೆಡೆ ಬೈಕ್ ಕಳ್ಳತನ ಮಾಡಿದ ಜಾಗನೂರಿನ ಆರೋಪಿಯನ್ನು ಚಿಕ್ಕೋಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 5 ಬೈಕ್ ವಶಪಡಿಸಿಕೊಂಡಿದ್ದಾರೆ. ಚಿಕ್ಕೋಡಿ, ಮಹಾಲಿಂಗಪುರ, ಉಳ್ಳಾಗಡ್ಡಿ ಖಾನಾಪುರ, ಅಂಕಲಗಿ, ಹುಕ್ಕೇರಿ ಕಡೆ ಬೈಕ್ ಕಳ್ಳತನ ಮಾಡಿದ ಆರೋಪದ ಮೇಲೆ ಚಿಕ್ಕೋಡಿ ತಾಲೂಕು ಜಾಗನೂರು ಗ್ರಾಮದ ರವಿ ಮಾರುತಿ ಗಣಾಚಾರ ಎಂಬ ಯುವಕನನ್ನು ಚಿಕ್ಕೋಡಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತನಿಂದ 1.15 ಲಕ್ಷ ರೂ ಮೌಲ್ಯದ 5 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಪಿಎಸ್‍ಐ …

Read More »

ಮೀನುಗಾರರ ಬಲೆಗೆ ಸಿಕ್ಕಿ ಬಿದ್ದ ಮೊಸಳೆ ಮರಿ; ಅರಣ್ಯಾಧಿಕಾರಿಗಳಿಗೆ ಹಸ್ತಾಂತರ

ಚಿಕ್ಕೋಡಿ: ಮೀನುಗಾರರರು ಹಾಕಿದ್ದ ಬಲೆಗೆ ಸಿಕ್ಕಿದ್ದ ಮೋಸಳೆಮರಿಯನ್ನು ರಕ್ಷಿಸಿದ ಮೀನುಗಾರರು ಅದನ್ನು ಇಲಾಖಾ ಅಧಿಕಾರಿಗಳಿಗೆ ಹಸ್ತಾಂತರ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದಲ್ಲಿ ನಡೆದಿದೆ. ಮೀನು ಹಿಡಿಯುವ ಸಲುವಾಗಿ ಮೀನುಗಾರರು ನಿನ್ನೆ ಸಂಜೆ ದೂಧಗಂಗಾ ನದಿಗೆ ಬಲೆ ಹಾಕಿಬಂದಿದ್ದರು. ಇಂದು ಬೆಳಗ್ಗೆ ಹೋಗಿ ನೋಡಿದರೆ ಬಲೆಯಲ್ಲಿ ಮೊಸಳೆ ಸಿಕ್ಕಿಹಾಕಿಕೊಂಡಿದೆ. ಇದನ್ನು ಕಂಡ ಮೀನುಗಾರರಿಗೆ ಅಚ್ಚರಿ, ಭಯ ಎರಡೂ ಆಗಿದೆ, ಅದ್ಯ ಆ ಮೊಸಳೆ ಮರಿಯನ್ನು ಅರಣ್ಯ …

Read More »

ಗಂಡನನ್ನೇ ಕೊಂದು ಹೂತು ಹಾಕಿದ ಪತ್ನಿ

ಚಿಕ್ಕೋಡಿ: ಅಕ್ರಮ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದ ಗಂಡನನ್ನೇ ಹೆಂಡತಿ ಕೊಲೆ ಮಾಡಿ ಹೂತು ಹಾಕಿದ ಘಟನೆ ನಿಪ್ಪಾಣಿ ತಾಲೂಕಿನ ಹಂಚನಾಳ ಗ್ರಾಮದಲ್ಲಿ ತಡವಾಗಿ ಪತ್ತೆಯಾಗಿದೆ. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕಾಗಲ್‌ ತಾಲೂಕಿನ ನೇರ್ಲೆ ಗ್ರಾಮದ ಸಚಿನ ಸದಾಶಿವ ಭೋಪಳೆ(35) ಕೊಲೆಯಾದ ವ್ಯಕ್ತಿ. ಕೊಲೆ ಮಾಡಿದ ಪತ್ನಿ ಅನಿತಾ ಭೋಪಳೆ(33) ಸಹಚರ ಸಹೋದರ ಹಂಚಿನಾಳ ಗ್ರಾಮದ ಕೃಷ್ಣಾತ್‌ ರಾಜಾರಾಮ ಘಾಟಗೆ(26) ಹಾಗೂ ಪತ್ನಿಯ ಸಹೋದರಿ ಕಾಗಲ್‌ ತಾಲೂಕಿನ ಸಿದ್ಧನೇರ್ಲಿ ಗ್ರಾಮದ ವನಿತಾ …

Read More »

ಪತಿ ಕೊಂದು ಎಮ್ಮೆ ಸತ್ತಿದೆ ಅಂತ ಹೂತು ಹಾಕಿದ್ದ ಕೇಸ್; ನಾಲ್ವರು ಆರೋಪಿಗಳ ಬಂಧನ

ಚಿಕ್ಕೋಡಿ: ಪತಿಯನ್ನು ಕೊಂದು ಎಮ್ಮೆ ಸತ್ತಿದೆ ಅಂತಾ ಹೊಲದಲ್ಲಿ ಹೂತು ಹಾಕಿದ್ದ ಆರೋಪದ ಮೇಲೆ ಪತ್ನಿ ಸೇರಿದಂತೆ ಆಕೆಯ ಸಂಬಂಧಿಕರನ್ನು ನಿಪ್ಪಾಣಿ ಪೊಲೀಸರು ಬಂಧಿಸಿದ್ದಾರೆ. ಮೃತ ಸಚಿನ್ ಪತ್ನಿ ಅನಿತಾ, ಕೃಷ್ಣಾ ಅಲಿಯಾಸ್ ಪಿಂಟು ರಾಜಾರಾಮ್ ಘಾಟಗೆ (26), ವನಿತಾ ಚವ್ಹಾಣ್​(29), ಗಣೇಶ ರೇಡೇಕರ(21),ಬಂಧಿತ ಆರೋಪಿಗಳು. ಅನಿತಾ ತಮ್ಮ ಪತಿಯನ್ನು ಹತ್ಯೆ ಮಾಡಿ ಸಹೋದರ, ಸಹೋದರಿಯ ಸಹಾಯದಿಂದ ಹೊಲದಲ್ಲಿ ಜೆಸಿಬಿಯಲ್ಲಿ ಗುಂಡಿತೋಡಿಸಿದ್ದ ಜಾಗದಲ್ಲಿ ಹೂತು ಪರಾರಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. …

Read More »

ನೀರಾವರಿ ಯೋಜನೆಗಳ ಶೀಘ್ರ ಜಾರಿಗೆ ಮನವಿ

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯಲ್ಲಿ 11 ಏತ ನೀರಾವರಿ ಯೋಜನೆ ಜಾರಿಗೆ ಕರ್ನಾಟಕ ನೀರಾವರಿ ನಿಗಮ ಅನುಮತಿ ನೀಡಿದೆ. ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರ ವಿಶೇಷ ಪ್ರಯತ್ನದಿಂದ ಯೋಜನೆಗಳು ಶೀಘ್ರ ಅನುಷ್ಠಾನವಾದರೆ ಇದೊಂದು ಇತಿಹಾಸ ಎಂದು ಹಿರಿಯ ಮುಖಂಡ ಬಿ.ಆರ್‌.ಸಂಗಪ್ಪಗೋಳ ಹೇಳಿದರು. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯ 11 ಏತ ನೀರಾವರಿ ಯೋಜನೆಯಿಂದ ಎರಡು ಲಕ್ಷ ಎಕರೆಗೂ ಅಧಿ ಕ ಜಮೀನಿಗೆ ನೀರಾವರಿ ಸೌಲಭ್ಯ ಸಿಗಲಿದೆ. …

Read More »

ಸಕಲ ಗೌರವಗಳೊಂದಿಗೆ 18 ತಿಂಗಳ ಹಿಂದೆಯಷ್ಟೆ ಸೇನೆ ಸೇರಿದ್ದ ಯೋಧನ ಅಂತ್ಯಕ್ರಿಯೆ

ಚಿಕ್ಕೋಡಿ(ಬೆಳಗಾವಿ): ಕಳೆದ ಮೂರು ದಿನದ ಹಿಂದೆ ದೆಹಲಿಯಲ್ಲಿ ಸಾವನ್ನಪ್ಪಿರುವ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಯೋಧ ಅನೀಲ್ ಶಿವಾಜಿ ಶಿಂಗಾಯಿ(23) ಅವರ ಅಂತ್ಯಕ್ರಿಯೆ ಸಕಲ ಗೌರವಗಳೊಂದಿಗೆ ಸ್ವಗ್ರಾಮದಲ್ಲಿ ಭಾನುವಾರ ಸಂಜೆ ನಡೆಯಿತು. ಕಳೆದ 18 ತಿಂಗಳ ಹಿಂದೆಯಷ್ಟೆ ಸೈನಿಕ ಸೇವೆಗೆ ಸೇರಿದ್ದರು. ದೆಹಲಿಯಲ್ಲಿನ ರಾಜಪುಟಾನ ರಿಫಾಯಿಲ್ ದಲ್ಲಿ ತರಬೇತಿ ಮುಗಿಸಿದ್ದರು. ನಂತರ ಕಳೆದ ಮಾರ್ಚ್‍ನಲ್ಲಿ ಕರೋಶಿ ಗ್ರಾಮಕ್ಕೆ ಆಗಮಿಸಿದ್ದರು. ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳ …

Read More »

ಚಿಕ್ಕೋಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳಿಗೆ ರಮೇಶ ಜಾರಕಿಹೊಳಿ ಹೇಳಿಕೆ

ಪೀರನವಾಡಿ ಸಂಗೋಳ್ಳಿ ರಾಯಣ್ಣ ಪ್ರತಿಮೆ ವಿವಾದ ‌ವಿಚಾರ ಲಾಠಿ ಚಾರ್ಜ ಕುರಿತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿಕೆ ಚಿಕ್ಕೋಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳಿಗೆ ರಮೇಶ ಜಾರಕಿಹೊಳಿ ಹೇಳಿಕೆ ಘಟನೆ ಬಗ್ಗೆ ಪೂರ್ಣ ಪ್ರಮಾಣದ ಮಾಹಿತಿ ಇಲ್ಲ ಈ ಬಗ್ಗೆ ಡಿಸಿ, ಎಸ್ ಪಿ ಅವರ ಜೊತೆ ಮಾತನಾಡಿ ಕ್ರಮ ಕೈಗೊಳ್ಳುತ್ತೆವೆ ಕಾನೂನು ರೀತಿ ಕ್ರಮ ಕೈ ಗೊಳ್ಳಲು ಸೂಚನೆ ನೀಡುತ್ತೆನೆ ರಾಯಣ್ಣ ಅಭಿಮಾನಿಗಳ ಮೇಲೆ …

Read More »

ಜಿಲ್ಲಾಡಳಿತ ಅಪಮಾನ ಮಾಡಿದೆ. ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಮರು ಸ್ಥಾಪನೆ ಮಾಡಬೇಕು.

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಪೀರಣವಾಡಿ ಗ್ರಾಮದಲ್ಲಿನ ಸಂಗೋಳಿ ರಾಯಣ್ಣ ಪ್ರತಿಮೆ ತೆರವುಗೊಳಿಸಿರುವುದನ್ನು ಖಂಡಿಸಿ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಸಂಗೋಳಿ ರಾಯಣ್ಣ ವೃತ್ತದಲ್ಲಿ ಕನ್ನಡಪರ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಇದೇ ವೇಳೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಮರು ಸ್ಥಾಪನೆಗೆ ಆಗ್ರಹಿಸಲಾಯಿತು. ಸಂಕೇಶ್ವರ ಪಟ್ಟಣದ ಬೀರದೇವರ ದೇವಸ್ಥಾನದಿಂದ ಸಂಗೋಳಿ ರಾಯಣ್ಣ ವೃತ್ತದವರೆಗೆ ರಾಯಣ್ಣ ಅಭಿಮಾನಿಗಳು ಪಾದಯಾತ್ರೆ ನಡೆಸಿ ಪ್ರತಿಭಟನೆ ನಡೆಸಿದರು. ಸ್ವಾತಂತ್ರ್ಯ ದಿನಾಚರಣೆ ದಿನದಂದು ಪೀರಣವಾಡಿಯಲ್ಲಿ ರಾಯಣ್ಣ …

Read More »

2020-21 ರಲ್ಲಿ ನಡೆಯುವ ಪಂಚಾಯತಿ ಚುನಾವಣೆ ವಾರ್ಡಗಳ ಮೀಸಲಾತಿ ಪಟ್ಟಿ

ಚಿಕ್ಕೋಡಿ: ತಾಲೂಕಿನ ಹಿರೇಕೋಡಿ ಗ್ರಾಮ ಪಂಚಾಯತಿಗೆ 2020-21 ರಲ್ಲಿ ನಡೆಯುವ ಪಂಚಾಯತಿ ಚುನಾವಣೆ ವಾರ್ಡಗಳ ಮೀಸಲಾತಿ ಪಟ್ಟಿ ಯಾದಿಯ ಸರ್ಕಾರ ಅಧಿಕೃತ ಪ್ರಕಟಿಸುವ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿರುವುದು ಹಲವು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂದು ಗ್ರಾ. ಪಂ. ಮಾಜಿ ಸದಸ್ಯ ವಿಕ್ರಮ ಬಣಗೆ ಆರೋಪಿಸಿದ್ದಾರೆ. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ಪಟ್ಟಿ  ಸರ್ಕಾರ ಪ್ರಕಟಿಸುವ 20 ದಿನಗಳ ಮೊದಲೇ ಸಾಮಾಜಿಕ ಜಾಲತಾಣದಲ್ಲಿ ಹರದಾಡಿರುವ …

Read More »

ಗ್ರಾಮಚುನಾವಣೆ ವಾರ್ಡಗಳ ಮೀಸಲಾತಿ ಪಟ್ಟಿ ಯಾದಿಯ ಸರ್ಕಾರ ಅಧಿಕೃತ

ಚಿಕ್ಕೋಡಿ: ತಾಲೂಕಿನ ಹಿರೇಕೋಡಿ ಗ್ರಾಮ ಪಂಚಾಯತಿಗೆ 2020-21 ರಲ್ಲಿ ನಡೆಯುವ ಪಂಚಾಯತಿ ಚುನಾವಣೆ ವಾರ್ಡಗಳ ಮೀಸಲಾತಿ ಪಟ್ಟಿ ಯಾದಿಯ ಸರ್ಕಾರ ಅಧಿಕೃತ ಪ್ರಕಟಿಸುವ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿರುವುದು ಹಲವು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂದು ಗ್ರಾ. ಪಂ. ಮಾಜಿ ಸದಸ್ಯ ವಿಕ್ರಮ ಬಣಗೆ ಆರೋಪಿಸಿದ್ದಾರೆ. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ಪಟ್ಟಿ  ಸರ್ಕಾರ ಪ್ರಕಟಿಸುವ 20 ದಿನಗಳ ಮೊದಲೇ ಸಾಮಾಜಿಕ ಜಾಲತಾಣದಲ್ಲಿ ಹರದಾಡಿರುವ ಪಟ್ಟಿ …

Read More »