ಚಿಕ್ಕೋಡಿ : ಕೇಂದ್ರದಿಂದ ಬರುವ ವಿದ್ಯುತ್ ಹಠಾತ್ತನೆ ನಿಲ್ಲಿಸಿದ ಪರಿಣಾಮವಾಗಿ ರಾಜ್ಯದಲ್ಲಿ ತೊಂದರೆ ಉಂಟಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಸೋಮವಾರ ಸಂಜೆ ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ, ದಕ್ಷಿಣ ಭಾರತಕ್ಕೆ ಕೇಂದ್ರ ಸರ್ಕಾರದಿಂದ ಬರುವ ವಿದ್ಯುತ್ ನಿಲ್ಲಿಸಿದ್ದರಿಂದ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದೆ. ಕಳೆದ ಮೂರು ದಿನಗಳಿಂದ ವಿದ್ಯುತ್ ಅಭಾವ ಕಂಡುಬಂದಿದೆ. ನೀರಿನ ಅಭಾವದಿಂದ ಕೆಲವು ಕಡೆ ವಿದ್ಯುತ್ ತಯಾರಿಕೆ ಆಗುತ್ತಿಲ್ಲ. …
Read More »ಅಥಣಿಯಲ್ಲಿ ಕಾಣೆಯಾದ ವಿದ್ಯಾರ್ಥಿಗಳು ಮಹಾರಾಷ್ಟ್ರದ ರತ್ನಗಿರಿಯಲ್ಲಿ ಪತ್ತೆ
ಚಿಕ್ಕೋಡಿ(ಬೆಳಗಾವಿ): ಶಾಲೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಮೂರು ಮಕ್ಕಳು ಕಾಣೆಯಾಗಿರುವ ಪ್ರಕರಣದಲ್ಲಿ ಮಹಾರಾಷ್ಟ್ರದ ರತ್ನಗಿರಿಯಲ್ಲಿ ಮಕ್ಕಳು ಪತ್ತೆಯಾಗಿದ್ದು, ಪೋಷಕರ ಆತಂಕ ದೂರಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ನಿವಾಸಿಯ ಮೂವರು ವಿದ್ಯಾರ್ಥಿಗಳು ಶುಕ್ರವಾರ ಸಂಜೆ ಅಥಣಿ ಪಟ್ಟಣದಲ್ಲಿ ಕಾಣೆಯಾಗಿದ್ದರು. ಶಾಲೆಗೆ ಹೋಗಿ ಬರುತ್ತೇನೆ ಎಂದು ಮಕ್ಕಳು ಮರಳಿ ಮನೆಗೆ ಬಾರದೆ ಇದ್ದಾಗ ಕುಟುಂಬಸ್ಥರು ಆತಂಕಗೊಂಡು ಅಥಣಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಕುಟುಂಬಸ್ಥರು ಶೋಧ ಕಾರ್ಯ ನಡೆಸಿದರು, ಹುಡುಕಾಟ ಸಮಯದಲ್ಲಿ …
Read More »ಕ್ಷೇತ್ರದಲ್ಲಿ ಕೆಲಸ, ಕಾರ್ಯಗಳಿಲ್ಲದೆ ಶಾಸಕರು ಖಾಲಿ ಕುಳಿತಿದ್ದೇವೆ: ರಾಜು ಕಾಗೆ ಅಸಮಾಧಾನ
ಚಿಕ್ಕೋಡಿ (ಬೆಳಗಾವಿ) : ಸರ್ಕಾರ ರಚನೆಯಾಗಿ ನಾಲ್ಕೈದು ತಿಂಗಳಾದರೂ ಇನ್ನೂ ಕ್ಷೇತ್ರಗಳಿಗೆ ಅನುದಾನ ಬಿಡುಗಡೆಯಾಗದೆ ತೊಂದರೆಯಾಗುತ್ತಿದೆ. ಹೀಗಾಗಿ ಶಾಸಕರು ಖಾಲಿ ಕುಳಿತಿದ್ದೇವೆ ಎಂದು ಶಾಸಕ ರಾಜು ಕಾಗೆ ಹೇಳಿದ್ದಾರೆ. ಬುಧವಾರ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಗ್ರಾಮದಲ್ಲಿ ತಮ್ಮ ಸ್ವಗೃಹದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ, ಕ್ಷೇತ್ರದ ಜನರು ರಸ್ತೆ, ನೀರಾವರಿ ಯೋಜನೆ, ಸಮುದಾಯ ಭವನ, ಶಾಲೆ, ಗುಡಿ-ಗುಂಡಾರಗಳನ್ನು ಕೇಳುತ್ತಿದ್ದಾರೆ. ಶಾಸಕರ ನಿಧಿಗೆ 50 ಲಕ್ಷ ರೂ ಹಾಕಿದ್ದೇವೆ ಎಂದು ಸರ್ಕಾರ …
Read More »ಚಿಕ್ಕೋಡಿ: ಹಿಮ್ಮುಖವಾಗಿ ಟ್ರ್ಯಾಕ್ಟರ್ ಚಲಾಯಿಸಿ ವಿಶಿಷ್ಟ ರೀತಿಯಲ್ಲಿ ಹರಕೆ ತೀರಿಸಿದ ಭಕ್ತ
ಚಿಕ್ಕೋಡಿ(ಬೆಳಗಾವಿ): ದೇವರಿಗೆ ಹರಕೆ ತೀರಿಸುವುದು ಎಂದರೆ ಉರುಳು ಸೇವೆ ಮಾಡುವುದು, ಪಾದಯಾತ್ರೆ ಮಾಡುವುದು, ಉಪವಾಸ, ಬರಿಗಾಲಲ್ಲಿ ಬೆಟ್ಟ ಹತ್ತುವುದನ್ನು ನೋಡಿದ್ದೇವೆ. ಆದ್ರೆ ಇಲ್ಲೋರ್ವ ಭಕ್ತ ತನ್ನ ಹರಕೆಯನ್ನು ವಿಶಿಷ್ಟವಾಗಿ ತೀರಿಸುವ ಮೂಲಕ ಗಮನ ಸೆಳೆದಿದ್ದಾನೆ. ಈ ಯುವಕ ಬರೋಬ್ಬರಿ 48 ಕಿ.ಮೀ ದೂರ ಟ್ರ್ಯಾಕ್ಟರ್ಗೆ ಟ್ರಾಲಿ ಜೋಡಿಸಿಕೊಂಡು ರಿವರ್ಸ್ ಡ್ರೈವ್ ಮಾಡಿಕೊಂಡು ಹೋಗಿ ಹರಕೆ ತೀರಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದ ನಿವಾಸಿ 25 ವರ್ಷದ ಮಹೇಶ ಅಥಣಿ …
Read More »ಚಿಕ್ಕೋಡಿಯ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ ಸರ್ವ ಸಾಧಾರಣ ಸಭೆಯಲ್ಲಿ ರೈತರು ಮತ್ತು ಆಡಳಿತ ಮಂಡಳಿ ನಡುವೆ ಮಾತಿನ ಚಕಮಕಿ
ಚಿಕ್ಕೋಡಿ (ಬೆಳಗಾವಿ) : ಇಲ್ಲಿನ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ ಸರ್ವ ಸಾಧಾರಣ ಸಭೆಯಲ್ಲಿ ಆಡಳಿತ ಮಂಡಳಿ ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆದಿರುವ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಇಂದು ನಡೆದಿದೆ. ಕಬ್ಬು ಕಟಾವು ಮಾಡಿದ 15 ದಿನದೊಳಗೆ ರೈತರ ಖಾತೆಗೆ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿದ್ದಂತೆ ಸಭೆಯಲ್ಲಿ ಇಬ್ಬರ ನಡುವೆ ವಾಗ್ವಾದ ನಡೆಯಿತು. ಇಲ್ಲಿನ ಹಳ್ಯಾಳ ಗ್ರಾಮದಲ್ಲಿ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ ಸರ್ವ …
Read More »ಕೂದಲು ಆರಿಸುವ ವಿಚಾರಕ್ಕೆ ಗಲಾಟೆ.. ಬಾಲಕನ ಕೊಂದು ಬಾವಿಗೆಸೆದ ಕಿರಾತಕರು
ಚಿಕ್ಕೋಡಿ : ಕೂದಲು ಆರಿಸುವ ವಿಚಾರಕ್ಕೆ ದುಷ್ಕರ್ಮಿಗಳು ಬಾಲಕನನ್ನು ಕೊಲೆ ಮಾಡಿ ಬಾವಿಯಲ್ಲಿ ಎಸೆದಿರುವ ಪ್ರಕರಣ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಹೊರವಲಯದ ಲಾಲ್ಯಾನಕೋಡಿಯಲ್ಲಿ ಘಟನೆ ನಡೆದಿದೆ. ಕಾಮಪ್ಪ ಕುಂಚಿಕೊರವ (17) ಕೊಲೆಗೀಡಾದ ಬಾಲಕ ಎಂದು ಗುರುತಿಸಲಾಗಿದೆ. ಮೃತ ಬಾಲಕ ಮೂಲತಃ ವಿಜಯಪುರ ಜಿಲ್ಲೆಯ ನಿವಾಸಿ, ಈತ ಕೂದಲು ಆರಿಸುತ್ತ ಹಾರೂಗೇರಿ ಪಟ್ಟಣಕ್ಕೆ ಆಗಮಿಸಿದ್ದಾನೆ. ಆಗ ಸ್ಥಳೀಯವಾಗಿ ಕೂದಲು …
Read More »ಆಂಧ್ರದಲ್ಲಿ ಸಂಭವಿಸಿದ ಅಪಘಾತದಲ್ಲಿ ಅಥಣಿಯ ಆರು ಮಂದಿ ಸಾವು; ಸ್ವಗ್ರಾಮದಲ್ಲಿ ನೆರವೇರಿತು ಅಂತ್ಯಕ್ರಿಯೆ
ಚಿಕ್ಕೋಡಿ : ಸೆಪ್ಟೆಂಬರ್ 15 ರಂದು ತಿರುಪತಿಯ ತಿಮ್ಮಪ್ಪನ ದರ್ಶನ ಮಾಡಿಕೊಂಡು ಸ್ವ ಗ್ರಾಮಕ್ಕೆ ಆಗಮಿಸುತ್ತಿದ್ದ ಅಥಣಿ ತಾಲೂಕಿನ ಬಡಚಿ ಗ್ರಾಮದ ಭಕ್ತರ ಕ್ರೂಸರ್ ವಾಹನಕ್ಕೆ ಲಾರಿ ಡಿಕ್ಕಿ ಸಂಭವಿಸಿ ಸ್ಥಳದಲ್ಲಿ ಐದು ಜನ ಮೃತಪಟ್ಟಿದ್ದರು. ಇವತ್ತು ಅವರ ಸ್ವ ಗ್ರಾಮದಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ತೆಲಂಗಾಣದ ಸೂರ್ಯಪೇಟ ಜಿಲ್ಲೆಯ ಮಟ್ಟಮ್ ಪಲ್ಲಿ, ಕಡಪ-ಚಿತ್ತೂರು ರಸ್ತೆಯಲ್ಲಿ ಅಪಘಾತ ಸಂಭವಿಸಿ ಐದು ಜನ ಸಾವು ಸಂಭವಿಸಿ 11 ಜನರಿಗೆ ಗಾಯಗಳಾಗಿತ್ತು. ಇದರಲ್ಲಿ ಮೂವರ ಸ್ಥಿತಿ …
Read More »ಬೆಳಗಾವಿ ಜಿಲ್ಲೆಯ ಕುಡಚಿಯಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ
ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿರುವ ಖಾಸಗಿ ಲಾಡ್ಜ್ ವೊಂದರಲ್ಲಿ ನಡೆಸುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ದಂಧೆಯನ್ನು ಪೊಲೀಸರು ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿ, ಯುವತಿಯರನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕುಡಚಿ ಪಟ್ಟಣದ ಲಾಡ್ಜ್ದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಪೊಲೀಸರು ಸಿಇಎನ್ ಇನ್ಸ್‌ಪೆಕ್ಟರ್ ಬಿ ಆರ್ ಗಡ್ಡೇಕರ್ ನೇತೃತ್ವದಲ್ಲಿ ದಾಳಿ ನಡೆಸಿ ಗುಜರಾತ್, ಪಶ್ಚಿಮ ಬಂಗಾಳ ಮೂಲದ ತಲಾ ಇಬ್ಬರು ಯುವತಿಯರನ್ನು …
Read More »ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದಲ್ಲಿ ನಡೆಯುತ್ತಿರುವ ಪಂಚಮಸಾಲಿ ಮೀಸಲಾತಿ ಆರನೇ ಹಂತದ ಹೋರಾಟದ ಸಮಾವೇಶದಲ್ಲಿ ಶಾಸಕ ವಿನಯ್ ಕುಲಕರ್ಣಿ ಭಾಗಿ
ಚಿಕ್ಕೋಡಿ (ಬೆಳಗಾವಿ): ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವಂತೆ ಹಾಗೂ ಕೆಲವು ಕಾನೂನು ತೊಡಕನ್ನು ಸರಿ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪಂಚಮಸಾಲಿ ಸಮಾಜದಿಂದ ಮನವಿ ಮಾಡಲಾಗಿತ್ತು. ಅಧಿವೇಶನ ಮುಗಿದ ಬಳಿಕ ಕಾನೂನು ತಜ್ಞರ ಜೊತೆ ಸಭೆ ಮಾಡಲಾಗುವುದು ಎಂದು ಸಿಎಂ ಭರವಸೆ ನೀಡಿದ್ದರು. ಆದರೆ ಇಂದು ಆ ಭರವಸೆ ಹುಸಿಯಾಗಿದೆ. ಇದರಿಂದಾಗಿ ಶ್ರೀಗಳು ನಿಪ್ಪಾಣಿಯಿಂದ ಹೋರಾಟ ಪ್ರಾರಂಭ ಮಾಡಿದ್ದಾರೆ ಎಂದು ಶಾಸಕ ವಿನಯ್ ಕುಲಕರ್ಣಿ ಹೇಳಿದರು. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದಲ್ಲಿ …
Read More »ನಿಪ್ಪಾಣಿ ತಾಲೂಕಿನ ನಂತರ ಅಥಣಿ, ಕಾಗವಾಡ, ರಾಯಬಾಗ, ಚಿಕ್ಕೋಡಿ ಕ್ಷೇತ್ರಗಳಲ್ಲೂ ಸಂಚರಿಸಿ ಮೀಸಲಾತಿಯ ಹೋರಾಟದ ಜಾಗೃತಿ
ಚಿಕ್ಕೋಡಿ: ‘ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಇಷ್ಟಲಿಂಗಪೂಜೆ ಮಾಡುವ ಮೂಲಕ ಸರ್ಕಾರದ ಗಮನ ಸಲ್ಲಿಸಿ ಮೀಸಲಾತಿಗಾಗಿ ಒತ್ತಡ ಹೇರಲಾಗುವುದು. ನಗರದಲ್ಲಿ ಸೆ.೧೦ರಂದು ಬೆಳಗಾವಿ ಜಿಲ್ಲಾ ಮಟ್ಟದ ಹೋರಾಟ ನಡೆಸಿ ಲಿಂಗಾಯತ ಸಮುದಾಯಕ್ಕೆ ೨ಎ ಮೀಸಲಾತಿ ಸಿಗಬೇಕು ಹಾಗೂ ಕೇಂದ್ರ ಸರ್ಕಾರವು ಓಬಿಸಿ ಪಟ್ಟಿಯಲ್ಲಿ ಸೇರ್ಪಡಿಸಿಕೊಳ್ಳಬೇಕೆಂದು ಒತ್ತಾಯಿಸಲಾಗುವುದು’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಪೀಠಾಧಿಪತಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಪ್ರಸಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು …
Read More »