Breaking News

ಕಾಗವಾಡ

ಕಾಗವಾಡ ಸದಸ್ಯರು ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ.

 ಕಾಗವಾಡ ತಾಲೂಕಿನ ಉಗಾರ ಬುದ್ರುಕ ಗ್ರಾಮ ಪಂಚಾಯಿತಿಯ ಸದಸ್ಯರು ಪಿಡಿಒ ಇವರನ್ನು ವರ್ಗಾಯಿಸಲು ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ ಕೈಗೊಂಡಿದ್ದಾರೆ. ಉಗಾರ ಬುದ್ರುಕ ಗ್ರಾಮ ಪಂಚಾಯತಿಯ ಸದಸ್ಯರು ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ಈ ಘಟನೆ ಸಂಬAಧ ಸ್ಥಳಕ್ಕೆ ತಲುಪಿದ ತಾಲೂಕಾ ಪಂಚಾಯತಿ ಅಧಿಕಾರಿಗಳು ಸದಸ್ಯರೊಂದಿಗೆ ಚರ್ಚೆ ನಡೆಸಿ ನಿಯಂತ್ರಿಸಲು ಪ್ರಯತ್ನಿಸಿದರೂ, ಸದಸ್ಯರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರು. ಶನಿವಾರ ರಂದು ಉಗಾರ …

Read More »

ಶಿರಗುಪ್ಪಿಯಲ್ಲಿ ರಕ್ತದಾನ ಶಿಬಿರ; ಡಾ.ಅಮೋಲ ಸರಡೆ ಅವರ ಕಾರ್ಯ ಶ್ಲಾಘನೀಯ: ರಾಜು ಕಾಗೆ..

ಶಿರಗುಪ್ಪಿಯಲ್ಲಿ ರಕ್ತದಾನ ಶಿಬಿರ; ಡಾ.ಅಮೋಲ ಸರಡೆ ಅವರ ಕಾರ್ಯ ಶ್ಲಾಘನೀಯ: ರಾಜು ಕಾಗೆ.. ! ತಮ್ಮ ಹುಟ್ಟು ಹಬ್ಬವನ್ನು ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುವ ಮೂಲಕ ಆಚರಿಸುತ್ತಿರುವ ಡಾ. ಅಮೋಲ ಸರಡೆ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದ್ದು, ಅವರ ಸಮಾಜಮುಖಿ ಕಾರ್ಯಗಳು ಇದೇ ರೀತಿ ನಿರಂತರವಾಗಿರಲಿರೆAದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು

Read More »

ಗ್ರಾಮ ವಾಸ್ತವ್ಯ ಮಾಡಿ, ಮಹಿಳೆರಲ್ಲಿ ಅಪರಾಧಗಳ ಕುರುತಿ ಜಾಗೃತಿ ಮೂಡಿಸಿದ ಪಿಎಸ್‌ಐ ಗಂಗಾ ಬಿರಾದರ

ಪಿಎಸ್‌ಐ ಗಂಗಾ ಬಿರಾದರ ಗ್ರಾಮ ವಾಸ್ತವ್ಯ; ಲೆಡಿ ಸಿಂಗಮ್ ಕಾರ್ಯಕ್ಕೆ ಮೆಚ್ಚುಗೆ.! ಸಾರ್ವಜನಿಕರಿಗೆ ಕಾನೂನು ಅರಿವು..!! ಕಾಗವಾಡ ಪಿಎಸ್‌ಐ ಗಂಗಾ ಬಿರಾದರ ಅವರು ಕಾಗವಾಡ ಪೋಲಿಸ್ ಠಾಣಾ ವ್ಯಾಪ್ತಿಯ ಮಂಗಸೂಳಿ ಗ್ರಾಮಕ್ಕೆ ಸಂಜೆ ಭೇಟ್ಟಿ, ನೀಡಿ, ಗ್ರಾಮಸ್ಥರಿಗೆ ಕಾನೂನು ಅರಿವು ಮೂಡಿಸುವ ಜೊತೆಗೆ, ಗ್ರಾಮ ವಾಸ್ತವ್ಯ ಮಾಡಿ, ಮಹಿಳೆರಲ್ಲಿ ಅಪರಾಧಗಳ ಕುರುತಿ ಜಾಗೃತಿ ಮೂಡಿಸಿದರು

Read More »

ಕಾಗವಾಡ ಮತಕ್ಷೇತ್ರದಲ್ಲಿ ಶಾಸಕ ರಾಜು ಕಾಗೆ ಇವರಿಂದ ಸುಮಾರು ೪ ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿದ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ

ಕಾಗವಾಡ :ಕಾಗವಾಡ ಮತಕ್ಷೇತ್ರದ ಜೂಗುಳ, ಉಗಾರ ಬುದ್ರುಕ, ಮೋಳೆ ಗ್ರಾಮಗಳಲ್ಲಿ ಚರಂಡಿಯ ಅಶುದ್ದ ನೀರು ಸ್ವಚ್ಛಗೋಳಿಸುವ ಆನಲೈಸ್ ಚರಂಡಿ ಯೋಜನೆ ಮುಖ್ಯ ಮಂತ್ರಿಗಳ ಎಸ್.ಡಿ.ಎಮ್.ಯೋಜನೆ ಅಡಿಯಲ್ಲಿ ೨ ಕೋಟಿ ೪೩ ಲಕ್ಷ ರೂಪಾಯಿ ಮತ್ತು ಜೂಗುಳ ಕಾಗವಾಡ, ಮೋಳವಾಡ ಗ್ರಾಮದ ಶ್ರೀ ಲಕ್ಷಿö್ಮÃ ಮಂದಿರದ ರಸ್ತೆ ಅಭಿವೃದ್ದಿಗೊಳಿಸಲು ೧ ಕೋಟಿ ೬೦ ಲಕ್ಷ ಸುಮರು ೪ ಕೋಟಿ ವೆಚ್ಚದಲ್ಲಿ ಅಭಿವೃದ್ದಿ ಕಾಮಗಾರಿಗಳು ಕೈಗೊಂಡಿದ್ದು ಇದರ ಭೂಮಿ ಪೂಜೆ ಶಾಸಕ ರಾಜು …

Read More »

ನೌಕರರಿಗೆ ಅನ್ಯಾಯ, ಸರ್ಕಾರದ ವಿರುದ್ಧ ಸ್ವಪಕ್ಷ ಶಾಸಕ ರಾಜು ಕಾಗೆ ಅಪಸ್ವರ

ಬೆಂಗಳೂರು, ನವೆಂಬರ್ 15: ಶಕ್ತಿ ಯೋಜನೆಯ ಪರಿಷ್ಕರಣೆ ಮಾಡಲಾಗುತ್ತದೆ, ನಿಲ್ಲಿಸಲಾಗುತ್ತದೆ ಎಂದು ಚರ್ಚೆ ಜೋರಾಗಿತ್ತು. ಇದರ ಮಧ್ಯೆ ರಾಜ್ಯ ಸರ್ಕಾರಿ ನೌಕರರು, ಸಾರಿಗೆ ನೌಕರರಿಗೆ ಆಗುತ್ತಿರುವ ಅನ್ಯಾಯದ ಕುರಿತು ಆಡಳಿತ ಪಕ್ಷ ಕಾಂಗ್ರೆಸ್‌ನ ಶಾಸಕ ರಾಜು ಕಾಗೆ ಅವರು ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಶಕ್ತಿ ಯೋಜನೆಗೆ ಬಹಳ ಜನರು ಶಾಪ ಹಾಕುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಈ ಹಿಂದೆ ರಾಜ್ಯ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ಬಳಿಕ ಕರ್ನಾಟಕದಲ್ಲಿ ಯಾವುದೇ …

Read More »

ಕಬ್ಬಿನ ದರ ಘೋಷಿಸಿ ಕಾರ್ಖಾನೆ ಪ್ರಾರಂಭಿಸಿ’

ಕಾಗವಾಡ: ರಾಜ್ಯ ಸರ್ಕಾರ ಕಬ್ಬಿನ ಕಾರ್ಖಾನೆಗಳನ್ನು ನ.8ರ ನಂತರ ಪ್ರಾರಂಭಿಸಲು ಆದೇಶ ನೀಡಿದ್ದು, ತಾಲ್ಲೂಕಿನ ಕೆಲ ಕಾರ್ಖಾನೆಗಳು ಈಗಾಗಲೇ ಪ್ರಾರಂಭಗೊಂಡಿವೆ‌. ಕಬ್ಬಿನ ದರ ಘೋಷಣೆ ಮಾಡದೇ ಕಾರ್ಖಾನೆಗಳು ಪ್ರಾರಂಭಿಸಿಸಬಾರದೆಂದು ಆಗ್ರಹಿಸಿ ತಾಲ್ಲೂಕಿನ ಕಬ್ಬು ಬೆಳೆಗಾರ ರೈತರು ಮಂಗಳವಾರ ತಹಶೀಲ್ದಾರ್ ರಾಜೇಶ ಬುರ್ಲಿ ಮತ್ತು ಕಾಗವಾಡ ಪಿಎಸ್‌ಐ ಜಿ.ಜಿ ಬಿರಾದರ ಅವರಿಗೆ ಮನವಿ ಸಲ್ಲಿಸಿದರು.   ರೈತ ಮುಖಂಡ ಸುರೇಶ ಚೌಗುಲೆ ಮಾತನಾಡಿ, ಈ ಮೊದಲು ರಾಜ್ಯ ಸರ್ಕಾರ ನ.15 ರ …

Read More »

ಕರಾಳ ದಿನಕ್ಕೆ ಅವಕಾಶ ಇಲ್ಲ: ರಾಜೇಶ ಬುರ್ಲಿ

ಕಾಗವಾಡ: ಪ್ರತಿಯೊಬ್ಬರು ಮಾತೃಭಾಷಾಭಿಮಾನ ಹೊಂದಿರಬೇಕು. ಆದರೆ ಇತರ ಭಾಷೆಗಳನ್ನು ದ್ವೇಷಿಸಬಾರದು. ಎಲ್ಲರೂ ಸೇರಿ ಕರ್ನಾಟಕ ರಾಜೋತ್ಸವವನ್ನು ಅದ್ದೂರಿಯಾಗಿ ಆಚರಿಸೋಣ. ಕರಾಳ ದಿನಕ್ಕೆ ಅವಕಾಶ ಇಲ್ಲ‌ ಎಂದು ತಹಶೀಲ್ದಾರ್‌ ರಾಜೇಶ ಬುರ್ಲಿ ಹೇಳಿದರು. ಶುಕ್ರವಾರ ತಾಲ್ಲೂಕಿನ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಮಂಗಸೂಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸುವ ಕುರಿತು ನಡೆದ ಶಾಂತಿ ಪಾಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.   ಮರಾಠಿ ಭಾಷಿಕರೇ ಹೆಚ್ಚಾಗಿರುವ ಮಂಗಸೂಳಿ ಗ್ರಾಮದಲ್ಲಿ ಕಳೆದ ಅನೇಕ ವರ್ಷಗಳಿಂದ ನ.1 …

Read More »

ಹೆಸರಿಗಷ್ಟೇ ಹೆದ್ದಾರಿ: ಸವಾರರಿಗೆ ಕಿರಿಕಿರಿ

ಕಾಗವಾಡ: ಇಲ್ಲಿಂದ ಅಥಣಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಮುರಗುಂಡಿಯವರೆಗಿನ 40 ಕಿ.ಮೀ. ರಸ್ತೆ ಸಂಪೂರ್ಣ ಹದಗಟ್ಟಿದೆ. ರಾಷ್ಟ್ರೀಯ ಹೆದ್ದಾರಿಯಾಗಿ ಇದು ಮೇಲ್ದರ್ಜೆಗೆ ಏರಿದ್ದರೂ, ಕಿರಿದಾಗಿರುವ ಕಾರಣ ವಾಹನ ಸವಾರರು ಅಂಗೈಯಲ್ಲಿ ಜೀವ ಹಿಡಿದುಕೊಂಡು ಸಂಚರಿಸುವಂತಾಗಿದೆ. ವಿಜಯಪುರದಿಂದ ಬೆಳಗಾವಿ, ಮಹಾರಾಷ್ಟ್ರದ ಮೀರಜ್‌, ಸಾಂಗ್ಲಿ, ಕೊಲ್ಹಾಪುರಕ್ಕೆ ಜನರು ಇದೇ ಮಾರ್ಗವಾಗಿ ಸಂಚರಿಸುತ್ತಾರೆ. ವಿಶೇಷವಾಗಿ ಆಸ್ಪತ್ರೆಗೆ ತೆರಳಲು ಮತ್ತು ವ್ಯಾಪಾರಕ್ಕೆ ಹೋಗಲು ಈ ರಸ್ತೆಯೇ ಆಸರೆ. ಆದರೆ, ಹಾಳಾದ ರಸ್ತೆ ಸುಧಾರಣೆಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು …

Read More »

ಕಾಗವಾಡ: ಪಟ್ಟಣದಲ್ಲಿ ಕಳೆದೆರಡು ದಿನಗಳಿಂದಮಂಗನ ಕಾಟ

ಕಾಗವಾಡ: ಪಟ್ಟಣದಲ್ಲಿ ಕಳೆದೆರಡು ದಿನಗಳಿಂದ ಮಂಗವೊಂದು ಸಾರ್ವನಿಕರಿಗೆ ವಿಪರೀತ ಕಾಟ ನೀಡುತ್ತಿದ್ದು, ಅದರ ಕಡಿತದಿಂದ ಹಲವರು ಗಾಯಗೊಂಡಿದ್ದಾರೆ. ಮಂಗನ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹರಸಾಹಸಪಟ್ಟರೂ, ಫಲಕಾರಿಯಾಗಲಿಲ್ಲ. ಮಂಗನ ಕಾಟದಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗುತ್ತಿದ್ದು, ಕೂಡಲೇ ಅದನ್ನು ಸೆರೆಹಿಡಿಯಬೇಕೆಂದು ಸ್ಥಳೀಯರ ಆಗ್ರಹಿಸಿದರು. ರಾಯಬಾಗದಿಂದ ಮಂಗನ ಸೆರೆ ಹಿಡಿಯುವವರನ್ನು ಕರೆಸಲಾಗಿದ್ದು, ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ಅಥಣಿ ಆರ್‌ಎಫ್‌ಒ ರಾಕೇಶ ಅರ್ಜುನವಾಡ ಹೇಳಿದರು.

Read More »

ಕುಡಚಿ ಕೃಷ್ಣಾ ನದಿ ಮೇಲ್ ಸೇತುವೆ ಜಲಾವೃತ.

ಕುಡಚಿ: ಮಹಾರಾಷ್ಟ್ರದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಇಂದು ಬೆಳ್ಳಂಬೆಳಗ್ಗೆ ಕೃಷ್ಣಾ ನದಿ ವೀರ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದು. ಸೇತುವೆ ಜಲಾವೃತಗೊಂಡ ಪರಿಣಾಮ ಜಮಖಂಡಿ ಮಿರಜ್ ರಾಜ್ಯ ಹೆದ್ದಾರಿಯಲ್ಲಿ ಸಾರ್ವಜನಿಕ ಸಂಚಾರ ಬಂದ್ ಮಾಡಲಾಗಿದೆ.

Read More »