Breaking News

ಬೆಂಗಳೂರು

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಕಾಂಗ್ರೆಸ್ ಪಟ್ಟಿ ರಾತ್ರೋ ರಾತ್ರಿ ಬಿಡುಗಡೆ, ಇಲ್ಲಿದೆ ಅಭ್ಯರ್ಥಿ ಗಳ ಡೀಟೇಲ್ಸ್

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ವಾರ್ಡ್ ನಂ 1– ಇಕ್ರಾ ಮುಲ್ಲಾ IQra mulla ವಾರ್ಡ್ ನಂ 2– ಮುಜಮ್ಮಿಲ್ಲ್ ಡೋಣಿ Mujammil doni ವಾರ್ಡ್ ನಂ– 3 ಜ್ಯೋತಿ ಕಡೋಲ್ಕರ್ Jyoti kadolkar ವಾರ್ಡ್ 4–ಲಕ್ಷ್ಮಣ ಬುರುಡ Laxman burud ವಾರ್ಡ್ ನಂ 5 ಅಫ್ರೋಜ್ ಮುಲ್ಲಾ Afroz mulla ವಾರ್ಡ್ ನಂ 6 ಮಹ್ಮದ ರಸೂಲ ಪೀರಜಾದೆ Mohmed rasool peerzade ವಾರ್ಡ್ ನಂ 7 ಗುಂಡು ಕುಕ್ಕಡೆ …

Read More »

ನೀವು ಯುವತಿ ಜತೆ ನಗ್ನವಾಗಿರುವ ವಿಡಿಯೋ ನನ್ನ ಬಳಿ ಇದೆ’ ಎಂದು ಬಿಜೆಪಿ ಮುಖಂಡನಿಗೆ ಬ್ಲ್ಯಾಕ್​ಮೇಲ್​ ಮಾಡಿದ ಅಪರಿಚಿತ

ಬೆಂಗಳೂರು: ‘ನೀವು ಯುವತಿ ಜತೆ ನಗ್ನವಾಗಿರುವ ವಿಡಿಯೋ ನನ್ನ ಬಳಿ ಇದೆ’ ಎಂದು ಬಿಜೆಪಿ ಮುಖಂಡನಿಗೆ ಅಪರಿಚಿತನೊಬ್ಬ ಬ್ಲ್ಯಾಕ್​ಮೇಲ್​ ಮಾಡಿದ್ದು, ಸುಮಾರು 30 ಸಾವಿರ ರೂಪಾಯಿ ವಸೂಲಿ ಕೂಡ ಮಾಡಿಕೊಂಡಿದ್ದಾನೆ. ಅಪರಿಚಿತ ವ್ಯಕ್ತಿಯ ಬೆದರಿಕೆ ಕರೆ ಕುರಿತು ಬಿಜೆಪಿ ಮುಖಂಡ ಪೊಲೀಸರಿಗೆ ದೂರು ನೀಡಿದ್ದಾರೆ. ಬಿಜೆಪಿ ಮುಖಂಡ ಚಿ.ನಾ. ರಾಮು ಇಂಥದ್ದೊಂದು ಬೆದರಿಕೆ ಕರೆಗೆ ಒಳಗಾಗಿದ್ದಾರೆ. ಕೇಂದ್ರ ಸರ್ಕಾರದ ಸಾಮಾಜಿಕ ಸಬಲೀಕರಣ ಇಲಾಖೆ ಅಧೀನದ ಅಂಬೇಡ್ಕರ್ ಫೌಂಡೇಷನ್​ ನಿರ್ದೇಶಕ ಆಗಿರುವ …

Read More »

ನಿನ್ನೆ ಡಿಕೆ ಶಿವಕುಮಾರ್ ಭೇಟಿ ನಂತರ ದೆಹಲಿಗೆ ಹಾರಿದ್ದ ಜಮೀರ್ ಇಂದು ಮಧ್ಯಾಹ್ನ 4 ಗಂಟೆ ವಿಮಾನದಲ್ಲಿ ವಾಪಸ್ ಆಗಲಿದ್ದಾರೆ.

ನಿನ್ನೆ ಡಿಕೆ ಶಿವಕುಮಾರ್ ಭೇಟಿ ನಂತರ ದೆಹಲಿಗೆ ಹಾರಿದ್ದ ಜಮೀರ್ ಇಂದು ಮಧ್ಯಾಹ್ನ 4 ಗಂಟೆ ವಿಮಾನದಲ್ಲಿ ವಾಪಸ್ ಆಗಲಿದ್ದಾರೆ. ಬೆಂಗಳೂರು: ಇಂದು ಸಂಜೆ ನಾನು ಬೆಂಗಳೂರಿಗೆ ವಾಪಸಾಗುತ್ತೇನೆ ಎಂದು ಟಿವಿ9ಗೆ ಶಾಸಕ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ. ನಾನು ಖಾಸಗಿ ಕೆಲಸದ ನಿಮಿತ್ತ ದೆಹಲಿಗೆ ಹೋಗಿದ್ದೆ. ದೆಹಲಿಯಲ್ಲಿ ಯಾವ ವಕೀಲರನ್ನೂ ಭೇಟಿಯಾಗಿಲ್ಲ. ಇಂದು ಸಂಜೆ‌ ಬೆಂಗಳೂರಿಗೆ ವಾಪಸ್ ಆಗುತ್ತಿದ್ದೇನೆ. ಶನಿವಾರ, ಭಾನುವಾರ ಯಾವ ED ಕಚೇರಿ ತೆರೆದಿರುತ್ತೆ ಹೇಳಿ. …

Read More »

ದೆಹಲಿಗೆ ಹೋದ್ರೂ ಸಿಗದ ‘ಆನಂದ’; ಇನ್ನೂ 3 ದಿನ ಆನಂದ್ ಸಿಂಗ್ ಮೌನ..!

ಬೆಂಗಳೂರು: ದೇವರ ಪೂಜೆ, ರಾಜಕೀಯ ವೈರಾಗ್ಯ, ಸಿಎಂ ಸಂಧಾನ, ದೆಹಲಿ ಭೇಟಿ.. ಇಷ್ಟೆಲ್ಲಾ ಸರ್ಕಸ್ ನಡೆದ್ರೂ ಆನಂದ್​ ಸಿಂಗ್​​​​ಗೆ ಮಾತ್ರ ಆನಂದವಾಗಿರೋ ಖಾತೆ ಇನ್ನೂ ಸಿಕ್ಕಿಲ್ಲ. ಹೀಗಾಗಿ ಆನಂದ್​ ಸಿಂಗ್​​​​​ ನಡೆ ಏನಾಗಿರಬಹುದು ಅನ್ನೋ ಆತಂಕ ಸಿಎಂಗೆ ಕಾಡ್ತಿದೆ. ಇದೇ ಕಾರಣಕ್ಕೆ ಸಿಎಂ ಬೊಮ್ಮಾಯಿ, ಆನಂದ್​​ ಸಿಂಗ್​​​ಗೆ 3 ದಿನ ಸುಮ್ಮನಿರುವಂತೆ ಸೂಚಿಸಿದ್ದಾರೆ. ಹಾಗಾದ್ರೆ 3 ದಿನದ ನಂತ್ರ ಏನಾಗುತ್ತೆ ಅನ್ನೋದೇ ಸದ್ಯದ ಕುತೂಹಲ. ದೆಹಲಿಗೆ ಹೋದ್ರೂ ಆನಂದ್​​ ಸಿಂಗ್​​​​​​​​ಗೆ …

Read More »

ನೀನು ನನ್ನ ಲವ್ವರ್ ನಂತಿಲ್ಲ, ಬೇರೆ ಮದ್ವೆ ಆಗು’ ಎಂದು ಟಾರ್ಚರ್ -ಪತಿ ವಿರುದ್ಧ ಠಾಣೆ ಮೆಟ್ಟಿಲೇರಿದ ಪತ್ನಿ

ಬೆಂಗಳೂರು: ‘ಪ್ಲೀಸ್​ ನನಗೆ ನೀನಂದ್ರೆ ಇಷ್ಟ ಇಲ್ಲ, ನಿನಗೆ ನಾನೇ ನಿಂತು ಇನ್ನೊಂದು ಮದುವೆ ಮಾಡ್ತೀನಿ, ಬೇರೆ ಮದುವೆಯಾಗಿ ಆರಾಮಾಗಿರು.. ನನ್ನ ಬಿಟ್ಟು ಬಿಡು’ ಈ ಮಾತುಗಳನ್ನ ಕೇಳಿದ್ರೆ ನೀವು ಯಾರೋ ಒಬ್ಬ ಪ್ರೇಮಿ ತನ್ನ ಪ್ರಿಯಕರನಿಗೋ, ಪ್ರಿಯಕರ ಪ್ರಿಯತಮೆಗೋ ಹೇಳ್ತಿರಬಹುದು ಎಂದೆನಿಸಬಹುದು. ಆದರೆ ಈ ಮಾತುಗಳನ್ನು ಸ್ವತಃ ಗಂಡನಾದವ ತನ್ನ ಹೆಂಡತಿಗೆ ಹೇಳ್ತಿದ್ದಾನಂದ್ರೆ ನೀವು ನಂಬಲೇಬೇಕು! ಹೌದು ಮದುವೆಯಾದ ಗಂಡನಿಂದಲೇ ಇನ್ನೊಂದು ಮದುವೆಯಾಗುವಂತೆ ಪತ್ನಿಗೆ ಟಾರ್ಚರ್ ನೀಡ್ತಿರುವ ಘಟನೆ …

Read More »

ಪ್ರಿಯತಮೆಗಾಗಿ 15,000ಕ್ಕೆ ‘ಲವ್ ಸುಪಾರಿ’! ಪೊಲೀಸರ ಗುಂಡೇಟು ತಿಂದ ರೌಡಿ ಕಥೆಯ ರಹಸ್ಯ

ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿರುವ ಪೊಲೀಸರು ಕುಖ್ಯಾತ ರೌಡಿಶೀಟರ್​ ಅವಿನಾಶ ಅಲಿಯಾಸ್ ರೆಬೆಲ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಆರೋಪಿ ಅವಿನಾಶ್ ಸಂಜಯನಗರ ಠಾಣೆ ರೌಡಿಶೀಟರ್ ಆಗಿದ್ದು, ವ್ಯಕ್ತಿಯೊರ್ವರನ್ನು ಕೊಲ್ಲಲು 15000 ಸಾವಿರ ರೂಪಾಯಿ ಸುಪಾರಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಎನ್ನಲಾಗಿದೆ. ಈ ಹಿಂದೆ ಮುನಿರಾಜು ಎಂಬವರ ಮೇಲೆ ಹಾಡಹಗಲೇ ಅವಿನಾಶ್​​ ಹಲ್ಲೆ ಮಾಡಿ ಎಸ್ಕೇಪ್​ ಆಗಿದ್ದ. ಈ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್‌ …

Read More »

ಬದುಕಿರುವ ಯೋಧನ ಮನೆಗೆ ಹೋಗಿ ಕೇಂದ್ರ ಸಚಿವರು ಸಾಂತ್ವನ ಹೇಳಿರುವುದು ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಇಲ್ಲ ಎಂಬುದಕ್ಕೆ ಮತ್ತೊಂದು ಸಾಕ್ಷಿ: ಡಿ.ಕೆ. ಶಿವಕುಮಾರ್‌

ಬೆಂಗಳೂರು: ಬದುಕಿರುವ ಯೋಧನ ಮನೆಗೆ ಹೋಗಿ ಕೇಂದ್ರ ಸಚಿವರು ಸಾಂತ್ವನ ಹೇಳಿರುವುದು ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಇಲ್ಲ ಎಂಬುದಕ್ಕೆ ಮತ್ತೊಂದು ಸಾಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಟೀಕಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಂದ್ರ ಸಚಿವ ನಾರಾಯಣ ಸ್ವಾಮಿ ಅವರಿಗೆ ಅಧಿಕಾರ ಸಿಕ್ಕಿದೆ, ಆ ಬಗ್ಗೆ ನಮ್ಮ ತಕರಾರಿಲ್ಲ. ಅವರು ಬದುಕಿರುವ ಯೋಧನ ಮನೆಗೆ ಹೋಗಿ ಸಾಂತ್ವನ ಹೇಳಿರುವ ಸುದ್ದಿ ಕೇಳಿದೆ. ಜಿಲ್ಲಾಧಿಕಾರಿಗಳು, ತಹಶೀಲ್ದಾರರು, …

Read More »

ಇಂದು ರಾಜ್ಯಾದ್ಯಂತ ಸರ್ಕಾರಿ ಶಾಲಾ ಶಿಕ್ಷಕರ ಹುದ್ದೆಯ ಅರ್ಹತೆಗಾಗಿ ನಡೆಸುವ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯು (ಕೆ-ಟಿಇಟಿ) ನಡೆಯಲಿದೆ.

ಬೆಂಗಳೂರು : ಇಂದು ರಾಜ್ಯಾದ್ಯಂತ ಸರ್ಕಾರಿ ಶಾಲಾ ಶಿಕ್ಷಕರ ಹುದ್ದೆಯ ಅರ್ಹತೆಗಾಗಿ ನಡೆಸುವ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯು (ಕೆ-ಟಿಇಟಿ) ನಡೆಯಲಿದೆ. ವೀಕೆಂಡ್ ಕರ್ಪ್ಯೂ ಇರುವ ಜಿಲ್ಲೆಗಳು ಸೇರಿದಂತೆ ರಾಜ್ಯದ ಎಲ್ಲ ಕಡೆಗಳಲ್ಲೂ ಪರೀಕ್ಷೆ ನಡೆಯಲಿದೆ ಎಂದು ಶಿಕ್ಷಣ ಇಲಾಖೆಯ ಕೇಂದ್ರೀಯ ದಾಖಲಾತಿ ಘಟಕ ತಿಳಿಸಿದೆ.   BIG NEWS : ರಾಜ್ಯದಲ್ಲಿ 1 ರಿಂದ 8 ನೇ ತರಗತಿ ಆರಂಭದ ಕುರಿತಂತೆ ಶಿಕ್ಷಣ ಸಚಿವ ನಾಗೇಶ್ ಮಹತ್ವದ ಮಾಹಿತಿ …

Read More »

ತಿಹಾರ್, ಹಿಂಡಲಗಾ ಜೈಲಿನಿಂದ ಹೊರಬಂದವರೇ ಕಾಂಗ್ರೆಸ್ ಪಕ್ಷಕ್ಕೆ ಶ್ರೇಷ್ಠರು: ಬಿಜೆಪಿ ಟೀಕೆ

ಬೆಂಗಳೂರು: ಯೋಗೇಶ್ ಗೌಡ ಕೊಲೆ ಪ್ರಕರಣದ ಆರೋಪಿ ಮಾಜಿ ಸಚಿವ ವಿನಯ್ ಕುಲಕರ್ಣಿ ಇಂದು ಹಿಂಡಲಗಾ ಜೈಲಿನಿಂದ ಜಾಮೀನಿನ ಮೇಲೆ ಹೊರಬಂದರು. ವಿನಯ್ ಕುಲಕರ್ಣಿ ಜೈಲಿನಿಂದ ಹೊರಬರುತ್ತಿದ್ದಂತೆ ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಿಹಿ ತಿನ್ನಿಸಿ ಸ್ವಾಗತಿಸಿದ್ದಾರೆ. ಇದಕ್ಕೆ ಬಿಜೆಪಿ ಟೀಕೆ ಮಾಡಿದೆ. ಕಾಂಗ್ರೆಸ್ ಪಕ್ಷ ನೈತಿಕವಾಗಿ ಅಧಃಪತನ ಕಂಡಿದೆ ಎಂಬುದನ್ನು ಸೂಚಿಸಲು ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಕೊಲೆ ಆರೋಪಿ ಜಾಮೀನು ಪಡೆದು ಜೈಲಿನಿಂದ ಹೊರ ಬಂದರೆ ಯುದ್ಧ ಗೆದ್ದು …

Read More »

ಹಬ್ಬದ ಪ್ರಯುಕ್ತ ನಂದಿನಿ ಉತ್ಪನ್ನಗಳ ಮೇಲೆ ಶೇಕಡಾ 10 ರಿಯಾಯ್ತಿ

ಬೆಂಗಳೂರು, – ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ತನ್ನ ಗ್ರಾಹಕರಿಗೆ ಕೆಎಂಎಫ್ ಸಿಹಿ ಸುದ್ದಿ ನೀಡಿದ್ದು, ಸಿಹಿ ಉತ್ಪನ್ನಗಳ ಮೇಲೆ ಶೇಕಡಾ 10ರಷ್ಟು ರಿಯಾಯ್ತಿ ನೀಡಿದೆ. ಆ.19ರಿಂದ 15 ದಿನ ಗಳ ಕಾಲ ರಾಜ್ಯಾದ್ಯಾಂತ ನಂದಿನಿ ಉತ್ಸವಕ್ಕೆ ಚಾಲನೆ ನೀಡಿರುವ ಕೆಎಂಎಫ್ ಸಿಹಿ ಉತ್ಪನ್ನಗಳ ಮೇಲೆ ರಿಯಾಯ್ತಿ ನೀಡಿದೆ. ಅಲ್ಲದೆ ಮಧುಮೇಹಿಗಳು ಮತ್ತು ಆಹಾರ ಕಾಳಜಿ ಇರುವರ ಅನುಕೂಲಕ್ಕಾಗಿ ಹೊಸದಾಗಿ ಸಿಹಿ ತಿನಿಸುಗಳನ್ನು ಬಿಡುಗಡೆ ಮಾಡಿದೆ ಎಂದು ಎಂದು ಕೆ ಎಂಎಫ್ ವ್ಯವಸ್ಥಾಪಕ …

Read More »