Breaking News

ಬೆಂಗಳೂರು

ಡಿಸೆಂಬರ್‌ನೊಳಗೆ 56 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ

ಬೆಂಗಳೂರು: ಡಿಸೆಂಬರ್‌ನೊಳಗೆ 56 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರ, ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಇದೇ ವೇಳೆ ನವೆಂಬರ್‌ 26ರೊಳಗೆ ಮೀಸಲಾತಿ ಒದಗಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ವಿಭಾಗೀಯ ಪೀಠ ಸೂಚನೆ ನೀಡಿದೆ. ಡಿಸೆಂಬರ್‌ 30ರೊಳಗೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ಆದೇಶ ನೀಡಿದೆ. ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನವೆಂಬರ್‌ 26 ರೊಳಗೆ ಮೀಸಲಾತಿ ಅಧಿಸೂಚನೆ ಹೊರಡಿಸುತ್ತೇವೆ ಹೈಕೋರ್ಟ್‌ಗೆ ರಾಜ್ಯ ಸರ್ಕಾರದ ಪರವಾಗಿ ಹಾಜರಿದ್ದ …

Read More »

ರಾಜ್ಯ ವಕ್ಫ್ ಮಂಡಳಿಗೆ ಪ್ರಥಮ ಬಾರಿಗೆ ಬಿಜೆಪಿ ಅಭ್ಯರ್ಥಿ ಆಯ್ಕೆ

ಬೆಂಗಳೂರು: ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರಾಗಿ ಇದೇ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿಯಾದ ಮಹಮದ್ ಷಫಿ ಸಾ-ಆದಿ ಆಯ್ಕೆಯಾಗಿದ್ದು, ಅವರನ್ನು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಸ್ವಾಗತಿಸಿ ಅಭಿನಂದಿಸಿದ್ದಾರೆ.   ಬುಧವಾರ ಕರ್ನಾಟಕ ವಕ್ಫ್ ಮಂಡಳಿಗೆ ಭೇಟಿ ನೀಡಿ ರಾಜ್ಯ ವಕ್ಫ್ ಮಂಡಳಿ ನೂತನ ಅಧ್ಯಕ್ಷರಾಗಿ ಚುನಾಯಿತರಾದ ಮಹಮದ್ ಷಫಿ ಸಾ-ಆದಿಯವರನ್ನು ಅಭಿನಂದಿಸಿ ಮಾತನಾಡಿದ ಅವರು, ಯಾವುದೇ ಸಮುದಾಯ ಮೊದಲು ಶೈಕ್ಷಣಿಕವಾಗಿ ಅಭಿವೃದ್ಧಿಯಾದರೆ ಮಾತ್ರ ಸರ್ವಾಂಗೀಣ …

Read More »

ಉಚಿತ ಬಾಲಕಿಯರ ಹಾಸ್ಟೆಲ್‌ಗೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ಬೆಂಗಳೂರು:ಎಸ್‌ಆರ್‌ಎನ್‌ಜಿ ಸಂಪನಪ್ಪ ಚಾರಿಟೀಸ್(SRNG Sampanappa Charities) ಬೆಂಗಳೂರಿನಲ್ಲಿರುವ ತಮ್ಮ ಉಚಿತ ಬಾಲಕಿಯರ ಹಾಸ್ಟೆಲ್‌ಗೆ ( free girls hostel) ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ.ಹಾಸ್ಟೆಲ್ ಗಿರಿನಗರ 2 ನೇ ಹಂತದಲ್ಲಿದೆ . ಇದು 55% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಮತ್ತು ನಗರದ ವಿವಿಧ ಕಾಲೇಜುಗಳಲ್ಲಿ ಡಿಪ್ಲೊಮಾ,(diploma) ಪದವಿ ಅಥವಾ ಸ್ನಾತಕೋತ್ತರ ಕೋರ್ಸ್‌ಗಳನ್ನು ಮುಂದುವರಿಸಲು ಬಯಸುವ ಹುಡುಗಿಯರಿಂದ ಅರ್ಜಿಗಳನ್ನು ಸ್ವೀಕರಿಸುತ್ತದೆ.   ಅರ್ಜಿಗಳನ್ನು ನವೆಂಬರ್ 23 ರಿಂದ ಡಿಸೆಂಬರ್ 15 ರವರೆಗೆ ರಜಾದಿನಗಳನ್ನು …

Read More »

ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ: ವರ್ಗಾವಣೆ ನೀತಿಯಲ್ಲಿ ಮಾರ್ಪಾಡು ಮಾಡಿ ಆದೇಶ ಹೊರಡಿಸಿದ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraja Bommai) ಅವರ ಕಚೇರಿಗೆ ವರ್ಗಾವಣೆ ಸರ್ಕಾರಿ ಅಧಿಕಾರಿಗಳು ವರ್ಗಾವಣೆ ಕೋರಿ ಹೆಚ್ಚಿನ ಸಂಖ್ಯೆಯಲ್ಲಿ ಮನವಿ ಸಲ್ಲಿಸುತ್ತಿರುವುದು ಖುದ್ದು ಸಿಎಂಗೆ ದೊಡ್ಡ ತಲೆ ನೋವು ಆಗಿದೆ.   ಈ ನಡುವೆ ವರ್ಗಾವಣೆ ನೀತಿಯ ಪ್ರಕಾರ (transfer policy) ಎಲ್ಲಾ ವೃಂದದ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ವರ್ಗಾವಣೆ ಅವಧಿ ಮುಗಿದಿರುವುದರಿಂದ ಕಡತಗಳನ್ನು ಮುಖ್ಯಮಂತ್ರಿಗಳ ಅನುಮೋದನೆಗೆ ಸಲ್ಲಿಸಲಾಗುತ್ತಿದೆ (Chief Minister for approval.). …

Read More »

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ಗೆ ಚುನಾವಣೆ ನಡೆಸಲು ಸಂಘಗಳ ಜಿಲ್ಲಾ ನೊಂದಣಾಧಿಕಾರಿ ಆದೇಶ

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ( karnataka chalanachitra vanijya mandali ) ಚುನಾವಣೆಯನ್ನು ( Election ) ಕೂಡಲೇ ನಡೆಸುವಂತೆ, ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು ಆದೇಶಿಸಿದ್ದಾರೆ. ‘ ಈ ಕುರಿತಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿರುವಂತ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಂಸ್ಥೆಯ ಸಮಿತಿಗೆ ಅವಧಿ ಮುಗಿದು ಈಗಾಗಲೇ ವರ್ಷಗಟ್ಟಲೇ ಗತಿಸಿದರೂ ಸಹ ಚುನಾವಣೆಗೆ ಸಂಸ್ಥೆಯಿಂದ ಕ್ರಮವಿಟ್ಟಿರುವುದಿಲ್ಲ. ಚುನಾವಣೆಯನ್ನು ಇಲಾಖೆಯ …

Read More »

ಪುನೀತ್ ರಾಜಕುಮಾರ್ ಗೆ ‘ಭಾರತ ರತ್ನ’ ನೀಡಲು ಶರತ್ ಕುಮಾರ್ ಒತ್ತಾಯ

ಬೆಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ‘ಭಾರತ ರತ್ನ’ ಪ್ರಶಸ್ತಿ ನೀಡಬೇಕು ಎಂದು ನಟ ಶರತ್ ಕುಮಾರ್ ಹೇಳಿದ್ದಾರೆ. ‘ಪುನೀತ ನಮನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ಸರ್ಕಾರ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿದೆ. ಇದಕ್ಕಾಗಿ ರಾಜ್ಯ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ. ಪುನೀತ್ ಅವರಿಗೆ ದೇಶದ ಅತ್ಯುನ್ನತ ಪ್ರಶಸ್ತಿಯಾದ ‘ಭಾರತ ರತ್ನ’ ನೀಡಬೇಕು ಎಂದು ಹೇಳಿದ್ದಾರೆ. ಅಪ್ಪು ನಿಧನದ ಸುದ್ದಿ ಕೇಳಿ ದೇವರನ್ನು ಕ್ಷಮಿಸಲಾಗಲಿಲ್ಲ. …

Read More »

ಲಖನ್ ಜಾರಕಿಹೊಳಿಗೂ ಲಾಟರಿ, ವಲಸಿಗರಿಗೆ ಬಿಜೆಪಿ ಮಣೆ: ಪರಿಷತ್ ಚುನಾವಣೆ ಅಂತಿಮ ಪಟ್ಟಿ ದೆಹಲಿಗೆ ರವಾನೆ

ಬೆಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಆಡಳಿತಾರೂಢ ಬಿಜೆಪಿ ಪಣತೊಟ್ಟಿದ್ದು, ಬಿಕ್ಕಟ್ಟು ಶಮನ, ಪ್ರಾತಿನಿಧ್ಯ ಸರಿದೂಗಿಸಲೆಂದು ರಾಜೀಸೂತ್ರ ಕಂಡುಕೊಂಡಿದೆ. ತೀವ್ರ ಪೈಪೋಟಿ ಏರ್ಪಟ್ಟಿದ್ದ ಜಿಲ್ಲೆಗಳ ಮುಖಂಡರೊಂದಿಗೆ ಪಕ್ಷದ ರಾಜ್ಯ ನಾಯಕರು ನಿರಂತರ ಚರ್ಚೆ ನಡೆಸಿ ಮನವೊಲಿಸಲು ಪ್ರಯತ್ನಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಸಾಥ್ ನೀಡಿದ್ದಾರೆ. ಆದರೂ ಒಮ್ಮತ ಮೂಡದ 1-2 ಕ್ಷೇತ್ರಗಳಿಗೆ ಒಂದಕ್ಕಿಂತ ಹೆಚ್ಚು ಹೆಸರು ಸೇರಿಸಿ, ವರಿಷ್ಠರ ವಿವೇಚನೆಗೆ ಬಿಡಲು ನಿರ್ಧರಿಸಿದರು. ಜತೆಗೆ ಅಂತಿಮಪಟ್ಟಿಯನ್ನು ಸೋಮವಾರ ರಾತ್ರಿ …

Read More »

ನಾದಬ್ರಹ್ಮ’ ಡಾ. ಹಂಸಲೇಖ ಅವರು ನೀಡಿರುವ ಹೇಳಿಕೆಗೆ ನಟ ಜಗ್ಗೇಶ್​​ ಪ್ರತಿಕ್ರಿಯೆ

: ಬೆಂಗಳೂರು:​​ ಉಡುಪಿಯ ಪೇಜಾವರ ಶ್ರೀಗಳ ಬಗ್ಗೆ ‘ನಾದಬ್ರಹ್ಮ’ ಡಾ. ಹಂಸಲೇಖ ಅವರು ನೀಡಿರುವ ಹೇಳಿಕೆಗೆ ನಟ ಜಗ್ಗೇಶ್​​ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಟ್ವೀಟ್​​ ಮಾಡಿರುವ ಜಗ್ಗೇಶ್​​, ಮಾತು ಬಲ್ಲವನಿಗೆ ಚಪ್ಪಾಳೆ ಮೃಷ್ಟಾನ್ನದಂತೆ ಆದರು ಆ ಮಾತು ಹೊಟ್ಟೆತುಂಬಿಸದು. ಮಾತು ಕೆಟ್ಟರೆ ಆ ಮೃಷ್ಟಾನ್ನವೇ ವಿಷವಾಗಿ ಅಜೀರ್ಣ ಆಗುವುದು. ಸಾಮಾಜಿಕ ಕ್ಷೇತ್ರ ಹಗ್ಗದ ಮೇಲಿನ ನಡಿಗೆ! ಪಡೆವುದು ಸುಲಭ ಕಳೆದುಕೊಳ್ಳಲು ಕ್ಷಣ ಸಾಕು ಎಂದು ಬರೆದುಕೊಳ್ಳುವ ಮೂಲಕ ಮಾರ್ಮಿಕವಾಗಿ …

Read More »

ನಟ ಪುನೀತ್‌ಗೆ ಅವಮಾನ : ಸಾರಿ ಕೇಳಿದ ನಿರ್ದೇಶಕ ಪ್ರೇಮ್‌, ಒಪ್ಪದ ಅಪ್ಪು ಪ್ರೇಮಿಗಳು

ಬೆಂಗಳೂರು: ಇತ್ತೀಚಿಗೆ ನಟಿ ರಕ್ಷಿತಾ ಅವರ ತಮ್ಮ ನಾಯಕ ನಟನಾಗಿ ಅಭಿನಯ ಮಾಡುತ್ತಿರುವ ಸಿನಿಮಾವೊಂದರ ಸಂಭ್ರಮದ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆಯಲ್ಲಿ ಅಲ್ಲಿದ್ದ ನಟಿ ರಕ್ಷಿತಾ , ನಟಿ ರಚಿತರಾಮ್‌, ಆಂಕರ್‌ ಅಕುಲ್‌ ಬಾಲಾಜಿ ಮಾಡಿರುವ ಯಡವಟ್ಟು ಈಗ ವಿವಾದಕ್ಕೆ ಕಾರಣವಾಗಿದೆ. ಹೌದು, ಚಿತ್ರತಂಡದವರಿಂದ ಇದೇ ವೇಳೇ ನಟ ಪುನೀತ್‌ ಅವರಿಗೆ ಶ್ರದ್ದಾಂಜಲಿಯನ್ನು ಅರ್ಪಿಸಿದರು ಅರ್ಪಿಸಿದರು. ಬಳಿಕ ಕಾರ್ಯಕ್ರಮದಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರ ಭಾವಚಿತ್ರದ ಎದುರು ಶಾಪೆಂನ್‌ ಬಾಟಲ್‌ ಒಪನ್‌ …

Read More »

ಅಪ್ಪು ನಿಧನದ ಸುದ್ದಿ ಶಿವಣ್ಣನಿಗೆ ಹೇಗಾಯ್ತು ಗೊತ್ತಾ..? ಆ ಕರಾಳ ಕ್ಷಣದ ಬಗ್ಗೆ ಮಾತಾಡಿದ್ದಾರೆ..!

ಬೆಂಗಳೂರು: . ಒಂದು ಕಡೆ ಭಜರಂಗಿ 2 ಭರ್ಜರಿಯಾಗಿ ಓಡ್ತಾ ಇತ್ತು.. ಆ ಸಂತೋಷ ಖುಷಿಯಲ್ಲಿ ಅಭಿಮಾನಿಗಳು ತೇಲ್ತಾ ಇದ್ರು. ಅಭಿಮಾನಿಗಳ ನಡುವೆಯೇ ಶಿವಣ್ಣ ಕೂಡ ಕೂತು ಎಂಜಾಯ್ ಮಾಡ್ತಾ ಇದ್ರು. ಆ ಖುಷಿಯ ನಡುವೆ ಬರ ಸಿಡಿಲು ಬಡಿದಂತೆ ಆದದ್ದು ಅಪ್ಪು ಇನ್ನಿಲ್ಲ ಅನ್ನೋ ಸುದ್ದಿ. ಹೌದು, ಸಿನಿಮಾ ನೋಡುತ್ತಿದ್ದ ಎಲ್ಲರಿಗೂ ಒಂದು ಕ್ಷಣ ದಿಗ್ಬ್ರಮೆಯುಂಟು ಮಾಡಿತ್ತು. ಸುಮಾರು 11 ಗಂಟೆಗೆ ಅಪ್ಪು ಆಸ್ಪತ್ರೆ ಸೇರಿದ್ರು. ಅದಾಗಲೇ ಇಲ್ಲ …

Read More »