ಬೆಂಗಳೂರು: ಲಾಕ್‍ಡೌನ್ ಮಾರ್ಗಸೂಚಿಯನ್ನು ಸರ್ಕಾರ ಮಾರ್ಪಾಡು ಮಾಡಿದ್ದು, ಮದ್ಯ ಮಾರಾಟಕ್ಕೆ ನೀಡಿದ ಅನುಮತಿಯನ್ನು ಹಿಂಪಡೆದಿದೆ. ಮಂಗಳವಾರ ರಾತ್ರಿ 8 ಗಂಟೆಯಿಂದ ಬೆಂಗಳೂರು ಲಾಕ್ ಆಗಲಿದೆ. ಈ ಸಂಬಂಧ ಸರ್ಕಾರ ಪ್ರಕಟಿಸಿದ ಮೊದಲ ಮಾರ್ಗಸೂಚಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿತ್ತು. ಬೆಳಗ್ಗೆ 10 ರಿಂದ ಸಂಜೆ 5ರವೆರೆಗೆ ಮದ್ಯದ ಮಳಿಗೆಗಳನ್ನು ತೆರೆಯಲು ಅನುಮತಿ ನೀಡಿತ್ತು. ಕೇವಲ ಪಾರ್ಸೆಲ್ ನೀಡಬೇಕೆಂದು ಮಾರ್ಗಸೂಚಿಯಲ್ಲಿ ಹೇಳಿತ್ತು.ಸರ್ಕಾರದ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಲೇ ಎಚ್ಚೆತ್ತ ಸರ್ಕಾರ …
Read More »ಬೆಂಗಳೂರು ಸೇರಿ ಯಾವ ಯಾವ ಜಿಲ್ಲೆಗಳಲ್ಲಿ ಲಾಕ್‍ಡೌನ್?
ಬೆಂಗಳೂರು: ಕೊರೊನಾ ಅಟ್ಟಹಾಸಕ್ಕೆ ಬ್ರೇಕ್ ಹಾಕುವ ಉದ್ದೇಶದಿಂದ ನಾಳೆ ರಾತ್ರಿಯಿಂದ ಒಂದು ವಾರದ ಮಟ್ಟಿಗೆ ಬೆಂಗಳೂರು ಅರ್ಧಂಬಂಧ ಲಾಕ್‍ಡೌನ್ ಆಗುತ್ತಿದೆ. ಆದರೆ ಜಿಲ್ಲೆಗಳನ್ನು ಲಾಕ್‍ಡೌನ್ ಮಾಡೋ ವಿಚಾರವಾಗಿ ಸರ್ಕಾರ ದೊಡ್ಡ ಗೊಂದಲ ಸೃಷ್ಟಿಸಿದೆ. ಹೈರಿಸ್ಕ್ ಜಿಲ್ಲೆಗಳಲ್ಲಿ ಲಾಕ್‍ಡೌನ್ ಜಾರಿ ಮಾಡೋ ಸಂಬಂಧ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಿಎಂ ಯಡಿಯೂರಪ್ಪ ಹಿಂದೇಟು ಹಾಕಿದ್ರಾ ಎನ್ನುವ ಪ್ರಶ್ನೆ ಎದ್ದಿದೆ. ಬೆಂಗಳೂರು ಲಾಕ್‍ಡೌನ್ ವಿಚಾರದಲ್ಲಿ ಖಡಕ್ ನಿರ್ಣಯ ತೆಗೆದುಕೊಂಡ ಸಿಎಂ, ಜಿಲ್ಲೆಗಳ ಹೊಣೆಯನ್ನು ಉಸ್ತುವಾರಿ …
Read More »ನಟ ದರ್ಶನ್ ಮೇಕಪ್ ಮ್ಯಾನ್ ಹೃದಯಾಘಾತದಿಂದ ಸಾವು
ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಕಪ್ ಮ್ಯಾನ್ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಸ್ವತಃ ನಟ ದರ್ಶನ್ ಅವರೇ ಟ್ವೀಟ್ ಮಾಡಿದ್ದು, ಎರಡು ದಶಕಗಳಿಂದ ನನ್ನ ಬಳಿ ಮೇಕಪ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸೀನ ಅಲಿಯಾಸ್ ಶ್ರೀನಿವಾಸ್ ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂಬುದಾಗಿ ಬರೆದುಕೊಂಡು ಸಂತಾಪ …
Read More »ಭಾರತದಲ್ಲಿ 75 ಸಾವಿರ ಕೋಟಿ ರೂ. ಹೂಡಿಕೆ ಮಾಡಲಿದೆ ಗೂಗಲ್
ಬೆಂಗಳೂರು: ಮುಂದಿನ ದಿನಗಳಲ್ಲಿ ಡಿಜಿಟಲ್ ಕ್ಷೇತ್ರದಲ್ಲಿ ಅದರಲ್ಲೂ ಭಾರತದಲ್ಲಿ ಭಾರೀ ಬೆಳವಣಿಗೆ ಆಗಲಿದೆ ಎಂಬುದನ್ನು ಊಹಿಸಿರುವ ಬಹುರಾಷ್ಟ್ರೀಯ ಕಂಪನಿಗಳು ಈಗ ದೇಶದಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಿದ್ದು, ಗೂಗಲ್ ಒಟ್ಟು 10 ಶತಕೋಟಿ ಡಾಲರ್(75 ಸಾವಿರ ಕೋಟಿ ರೂ.) ಹೂಡಿಕೆ ಮಾಡುವುದಾಗಿ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಬೆಳಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ ಬಳಿಕ ಗೂಗಲ್ ಕಂಪನಿಯ ಸಿಇಒ ಸುಂದರ್ ಪಿಚೈ 10 ಶತಕೋಟಿ ಡಾಲರ್ …
Read More »ಬೆಡ್ ನೀಡದ ಖಾಸಗಿ ಆಸ್ಪತ್ರೆಗಳ ಪರವಾನಗಿ ರದ್ದುಪಡಿಸುವಂತೆ ಸಿಎಂಗೆ ಡಿಸಿಎಂ ಸಲಹೆ
ಬೆಂಗಳೂರು: ಕೋವಿಡ್-19 ಸೋಂಕಿತರಿಗಾಗಿ ಸರಕಾರದ ವಶಕ್ಕೆ ತಮ್ಮಲ್ಲಿರುವ ಶೇ.50ರಷ್ಟು ಹಾಸಿಗೆಗಳನ್ನು ಇದುವರೆಗೂ ನೀಡದ ಖಾಸಗಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳ ಮಾನ್ಯತೆಯನ್ನು ಕೂಡಲೇ ರದ್ದು ಮಾಡಬೇಕು ಎಂದು ನಗರದ ಕೋವಿಡ್ ಕೇರ್ ಕೇಂದ್ರಗಳ ಉಸ್ತುವಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒತ್ತಾಯಿಸಿದರು. ಬೆಂಗಳೂರಿನಲ್ಲಿ ಸೋಮವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಿಲ್ಲಾಧಿಕಾರಿಗಳ ಜತೆ ಸೋಮವಾರ ನಡೆಸಿದ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಕಾಲಕ್ಕೆ …
Read More »ರಾಜ್ಯ ದ್ವಿತೀಯ ಪಿಯುಸಿ ಪರೀಕ್ಷೆಗಳ ಫಲಿತಾಂಶ ನಾಲ್ಕು ದಿನ ಮುಂಚೆಯೇ ಪ್ರಕಟ
ಬೆಂಗಳೂರು: ಮಾರ್ಚ್ 18ರ ಸುಮಾರಿಗೆ ಫಲಿತಾಂಶ ಬರಬಹುದೆಂದು ನಿರೀಕ್ಷಿಸಲಾಗಿದ್ದ ರಾಜ್ಯ ದ್ವಿತೀಯ ಪಿಯುಸಿ ಪರೀಕ್ಷೆಗಳ ಫಲಿತಾಂಶ ನಾಲ್ಕು ದಿನ ಮುಂಚೆಯೇ ಪ್ರಕಟವಾಗಲಿದೆ. ನಾಳೆ ಮಂಗಳವಾರ ಫಲಿತಾಂಶ ಪ್ರಕಟವಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಫೇಸ್ಬುಕ್ ಲೈವ್ನಲ್ಲಿ ಮಾತನಾಡಿದ ಸುರೇಶ್ ಕುಮಾರ್, ಮಂಗಳವಾರ ಬೆಳಗ್ಗೆ 11:30ಕ್ಕೆ ವಿದ್ಯಾರ್ಥಿಗಳ ಮೊಬೈಲ್ಗೆ SMS ಮೂಲಕ ರಿಸಲ್ಟ್ ತಲುಪಲಿದೆ. 12 ಗಂಟೆ ಬಳಿಕ ಇಲಾಖೆಯ ವೆಬ್ಸೈಟ್ನಲ್ಲಿ ಫಲಿತಾಂಶ ಪ್ರಕಟವಾಗುತ್ತದೆ …
Read More »ಬೆಂಗಳೂರು ಲಾಕ್‍ಡೌನ್-800 ಹೆಚ್ಚುವರಿ ಬಸ್‍ಗಳ ವ್ಯವಸ್ಥೆ
ಬೆಂಗಳೂರು: ಮಂಗಳವಾರ ರಾತ್ರಿ 8 ಗಂಟೆಯಿಂದ ರಾಜಧಾನಿ ಸಂಪೂರ್ಣ ಲಾಕ್‍ಡೌನ್ ಆಗಲಿದೆ. ಈ ಹಿನ್ನೆಲೆ ಬೆಂಗಳೂರಿನಿಂದ ಹೊರ ಹೋಗುತ್ತಿರುವ ಜನ ಅನಕೂಲಕ್ಕಾಗಿ 800 ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಇಂದು (ಸೋಮವಾರ) ಮತ್ತು ನಾಳೆ (ಮಂಗಳವಾರ) ಪ್ರತಿದಿನ 800 ಹೆಚ್ಚುವರಿ ಬಸ್ಸುಗಳನ್ನು ಅಂದರೆ ಒಟ್ಟು 1600 ಬಸ್ಸುಗಳನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಕಾರ್ಯಾಚರಣೆಗೊಳಿಸಲಾಗುತ್ತಿದೆ. ಇದಲ್ಲದೇ ಅಗತ್ಯವಿದ್ದರೆ …
Read More »ಲಾಕ್‍ಡೌನ್ ಜೊತೆಗೆ ಬೆಂಗಳೂರಿನಲ್ಲಿ ಸೀಲ್‍ಡೌನ್‍ಗೂ ಸಿದ್ಧರಾಗಿ- ಯಾವ್ಯಾವ ಏರಿಯಾ ಸೀಲ್?
ಬೆಂಗಳೂರು: ಸಿಲಿಕಾನ್ ಸಿಟಿ ಜನರು ಒಂದು ವಾರದ ಲಾಕ್‍ಡೌನ್ ಕಾಲಕ್ಕೆ ಸಜ್ಜಾಗುತ್ತಿದ್ದಾರೆ. ಈ ಮಧ್ಯೆ ಲಾಕ್‍ಡೌನ್ ಜೊತೆಗೆ ಸೀಲ್‍ಡೌನ್‍ಗೆ ಪಾಲಿಕೆ ಪ್ಲ್ಯಾನ್ ಸಿದ್ಧಗೊಳಿಸುತ್ತಿದೆ. ಹೌದು.ಕೊರೊನಾ ಹೆಚ್ಚಿರುವ ವಾರ್ಡ್‌ಗಳನ್ನು ಲಾಕ್‍ಡೌನ್ ಜೊತೆಗೆ ಸೀಲ್‍ಡೌನ್ ಮಾಡಲು ಬಿಬಿಎಂಪಿ ಪ್ಲ್ಯಾನ್ ಮಾಡಿಕೊಂಡಿದೆ. ಕಳೆದ 15 ದಿನಗಳಲ್ಲಿ ಕೊರೊನಾ ಸ್ಫೋಟಗೊಂಡ ವಾರ್ಡ್‌ಗಳಲ್ಲಿ ಟಫ್ ಸೀಲ್‍ಡೌನ್ ಜಾರಿಯಾಗುವ ಸಾಧ್ಯತೆಯಿದೆ. ಸೀಲ್‍ಡೌನ್ ಜಾರಿಯಾದರೆ ತುರ್ತು ಮತ್ತೊಂದು ಕಾರಣ ಹೇಳಿ ಓಡಾಡಲು ಸಾಧ್ಯವಿಲ್ಲ. ಭಾನುವಾರ ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ …
Read More »ಒಂದು ವಾರ ಸಚಿವ ಬಿ.ಸಿ.ಪಾಟೀಲ್ ಕ್ವಾರಂಟೈನ್
ಬೆಂಗಳೂರು: ಮಹಾಮಾರಿ ಕೊರೊನಾದಿಂದ ಈಗಾಗಲೇ ಕೆಲ ರಾಜಕೀಯ ನಾಯಕರು ಕೂಡ ಕ್ವಾರಂಟೈನ್ ಆಗಿದ್ದಾರೆ. ಇದೀಗ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಕೂಡ ಒಂದು ವಾರಗಳ ಕಾಲ ಕ್ವಾರಂಟೈನ್ ಆಗಿದ್ದಾರೆ. ಬಿ.ಸಿ.ಪಾಟೀಲ್ ಅವರ ಸಂಬಂಧಿಕರೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇವರು ಬೆಂಗಳೂರಿನ ಮಿನಿಸ್ಟರ್ ಕ್ವಾರ್ಟರ್ಸ್ ನಲ್ಲಿದ್ದರು. ಈ ಹಿನ್ನೆಲೆಯಲ್ಲಿ ಬಿ.ಸಿ.ಪಾಟೀಲ್ ಒಂದು ವಾರ ಕ್ವಾರಂಟೈನ್ ಆಗಿದ್ದಾರೆ. ಬಿ.ಸಿ.ಪಾಟೀಲ್ ಮಾತ್ರವಲ್ಲದೇ ಅವರ ಕುಟುಂಬಸ್ಥರು ಮತ್ತು ಸಿಬ್ಬಂದಿ ವರ್ಗ ಕೂಡ ಕ್ವಾರಂಟೈನ್ ಆಗಿದ್ದಾರೆ. ಈ …
Read More »ಏಳು ದಿನಗಳ ಕಾಲ ಲಾಕ್ ಡೌನ್ ಸಂಪೂರ್ಣ ವಿಭಿನ್ನ ಹಾಗೂ ಕಠಿಣವಾಗಿರುತ್ತೆ:ಬಸವರಾಜ ಬೊಮ್ಮಾಯಿ
ಬೆಂಗಳೂರು: ಲಾಕ್‍ಡೌನ್‍ನಿಂದ ಯಾರಿಗೂ ತೊಂದರೆ ಆಗಬಾರದು ಎಂಬ ಕಾರಣಕ್ಕೆ ನಾಳೆ ಮತ್ತು ನಾಡಿದ್ದು ಸಂಜೆಯವರೆಗೂ ಬೆಂಗಳೂರು ಮಂದಿಗೆ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು, ಊರಿಗೆ ಹೋಗೋರಿದ್ರೆ ಹೋಗಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಬೆಂಗಳೂರಿಗೆ ಬರೋರಿಗೆ, ಬೆಂಗಳೂರಿಂದ ಹೋಗೋರಿಗೆ ಯಾವುದೇ ಅಡ್ಡಿ ಮಾಡಲ್ಲ. ಆದರೆ ಲಾಕ್‍ಡೌನ್ ಶುರುವಾದ ನಂತರ ಓಡಾಟ ಇರಬಾರದು. ಜನ ಮನೆಯಲ್ಲೇ ಇರಬೇಕು ಎಂದು ಸಚಿವ ಅಶೋಕ್ ಸರ್ಕಾರದ ಪರವಾಗಿ ಮನವಿ ಮಾಡಿಕೊಂಡಿದ್ದಾರೆ. ನಾಳೆ ಸಂಜೆ ಹೊತ್ತಿಗೆ ಲಾಕ್‍ಡೌನ್ ಮಾರ್ಗಸೂಚಿಯನ್ನು …
Read More »