Breaking News

ಬೆಂಗಳೂರು

ರಮೇಶ ಜಾರಕಿಹೊಳಿ  ಉಪ ಚುನಾವಣೆ ಬಿಜೆಪಿ  ಟಿಕೆಟ್ ನೀಡಬೇಕು ಎಂದು ಒತ್ತಾಯB.S.Y.ಗೆ

ಬೆಂಗಳೂರು:  ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ  ಅವರು, ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ. ಸಿಎಂ ಸರ್ಕಾರಿ ನಿವಾಸ ಕಾವೇರಿಯಲ್ಲಿ ಯಡಿಯೂರಪ್ಪರನ್ನು ಭೇಟಿಯಾದ ಜಾರಕಿಹೊಳಿ, 10 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ರಾಜರಾಜೇಶ್ವರಿ ನಗರ ವಿಧಾನಸಭೆ ಉಪ ಚುನಾವಣೆ ಬಿಜೆಪಿ  ಟಿಕೆಟ್ ಅವರನ್ನು ಮುನಿರತ್ನ ಅವರಿಗೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ ಎನ್ನಲಾಗುತ್ತಿದೆ. ಮುನಿರತ್ನಗೆ ಟಿಕೆಟ್ ಕೈ ತಪ್ಪಬಾರದು. ಈ ಕುರಿತು ಹೈಕಮಾಂಡ್ ನಾಯಕರ ಬಳಿ ಮಾತುಕತೆ …

Read More »

ಐಟಿ ಸಿಟಿ ಬೆಂಗಳೂರು.. ಟೆರರಿಸ್ಟ್​ ಸಿಟಿಯಾಗಿ ಬದಲು! ರಾಜಧಾನಿಯಲ್ಲಿ ಉಗ್ರರಿಗೆ ತರಬೇತಿ

ಬೆಂಗಳೂರು: ರಾಜಧಾನಿ ಜನರು ಬೆಚ್ಚಿಬೀಳುವಂತಹ ಅತ್ಯಂತ ಭಯಾನಕ ಸುದ್ದಿಯೊಂದು ಹೊರ ಬಿದ್ದಿದೆ. ನಗರದ ಹೊರವಲಯದಲ್ಲೇ ಐಸಿಸ್ ಉಗ್ರರ ಕ್ಯಾಂಪ್​ಗಳಿವೆಯಂತೆ. ಈ ಕ್ರಿಮಿಗಳು ಕ್ಯಾಂಪ್ ಮಾಡಿ ವಿಧ್ವಂಸಕ ಕೃತ್ಯ ಸಂಚು ರೂಪಿಸುತ್ತಿದ್ರಂತೆ. ಓಲ್ಡ್ ಮದ್ರಾಸ್ ರಸ್ತೆಯ ಸುತ್ತಮುತ್ತ ಉಗ್ರರಿಗೆ ಟ್ರೇನಿಂಗ್ ನೀಡಲಾಗುತ್ತಿದೆಯಂತೆ. ಕುರಾನ್ ಸರ್ಕಲ್ ಗ್ರೂಪ್ ಮಾಡಿ ಯುವಕರನ್ನ ಕರೆಸಿಕೊಳ್ತಿದ್ರು ನಂತರ ಅವರಿಗೆ ಟ್ರೇನಿಂಗ್ ಕೊಟ್ಟು ಉಗ್ರರನ್ನಾಗಿ ಮಾಡ್ತಿದ್ರು ಎಂಬ ಭಯಾನಕ ಸುದ್ದಿ ಬಹಿರಂಗಗೊಂಡಿದೆ. ಮೇಕಿಂಗ್ ಆಫ್ ಫ್ಯೂಚರ್ ಇಸ್ಲಾಮಿಕ್ ಸ್ಟೇಟ್: ಇಕ್ಬಾಲ್ …

Read More »

ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿ ಮೇಲೆ ಪೊಲೀಸ್ ಫೈರಿಂಗ್

ಬೆಂಗಳೂರು: ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿ ದಿನೇಶ್ ಮೇಲೆ ಗುಂಡು ಹಾರಿಸಿ ಪೊಲೀಸರು ಬಂಧಿಸಿರುವ ಘಟನೆ ಶ್ರೀರಾಮಪುರದಲ್ಲಿ ನಡೆದಿದೆ. 2 ದಿನದ ಹಿಂದೆ 4 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಲಾಗಿತ್ತು. ಕಳೆದ ಎರಡು ದಿನದಿಂದ ಉತ್ತರ ವಿಭಾಗದ ಪೊಲೀಸರು ಹುಡುಕಾಟ ನಡೆಸಿದ್ದರು. ಸದ್ಯ ಇಂದು ಬೆಳಗಿನ ಜಾವ ಶ್ರೀರಾಮಪುರ ಇನ್ಸ್ಪೆಕ್ಟರ್​ಗೆ ಆರೋಪಿ ದಿನೇಶ್ ಕಾಣಿಸಿಕೊಂಡಿದ್ದ. ಹೀಗಾಗಿ ಆರೋಪಿಯನ್ನು ಅರೆಸ್ಟ್ ಮಾಡಲು ತೆರಳಿದ್ದ ವೇಳೆ RRK ಕಲ್ಯಾಣ ಮಂಟಪದ ಬಳಿ …

Read More »

ವಿಧಾನಸಭೆ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಕೊರೊನಾ ಸೋಂಕು ದೃಢವಾಗಿದೆ.

ಬೆಂಗಳೂರು: ವಿಧಾನಸಭೆ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಕೊರೊನಾ ಸೋಂಕು ದೃಢವಾಗಿದೆ. ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಾಗೋಡು ತಿಮ್ಮಪ್ಪ ಅವರಿಗೆ ಪರೀಕ್ಷೆ ಒಳಪಡಿಸಲಾಗಿತ್ತು. ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾಗಿದ್ದರು. ವರದಿಯಲ್ಲಿ ಕೋವಿಡ್ ಪಾಸಿಟಿವ್ ಬಂದಿದೆ. ಕೂಡಲೇ ಅವರನ್ನು ಸಾಗರಿದಿಂದ ಬೆಂಗಳೂರಿಗೆ ಕರೆ ತರಲಾಗಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Read More »

ಸಿಲಿಕಾನ್ ಸಿಟಿಗೆ 300 ಐಷಾರಾಮಿ ಎಲೆಕ್ಟ್ರಿಕ್ ಬಸ್‍ಗಳು ಬರಲಿವೆ

ಬೆಂಗಳೂರು: ಬಿಎಂಟಿಸಿಯ ಬಹು ವರ್ಷಗಳ ಕನಸಿನ ಯೋಜನೆ ನನಸಾಗುತ್ತಿದೆ. ಸಿಲಿಕಾನ್ ಸಿಟಿಗೆ 300 ಐಷಾರಾಮಿ ಎಲೆಕ್ಟ್ರಿಕ್ ಬಸ್‍ಗಳು ಬರಲಿವೆ 300 ಐಷಾರಾಮಿ ಎಲೆಕ್ಟ್ರಿಕ್ ಬಸ್‍ಗಳನ್ನು ಗುತ್ತಿಗೆ ಪಡೆದು ಬಿಎಂಟಿಸಿ ಓಡಿಸಲಿದೆ. ಪ್ರಯೋಗಿಕವಾಗಿ ಬಿಎಂಟಿಸಿಯ ಡಿಪೋ ನಂಬರ್ 7ಕ್ಕೆ ಮೊದಲ ಬಸ್ ಬಂದಿದೆ. 15 ದಿನದ ಬಳಿಕ ಪ್ರಯಾಣಿಕರ ಪ್ರಯಾಣಕ್ಕೆ ಅವಕಾಶ ಸಿಗಲಿದೆ. ವಾಯು ಮಾಲಿನ್ಯ ಪ್ರಮಾಣವನ್ನು ಈ ಬಸ್‍ಗಳು ಕಡಿಮೆ ಮಾಡಲಿದ್ದು, 2 ಗಂಟೆ ಚಾರ್ಜ್ ಮಾಡಿದರೆ 120 ಕಿಲೋಮೀಟರ್ …

Read More »

ದಿಢೀರ್ ಬೆಳವಣಿಗೆ – ರಾಮುಲು ಬಳಿಯಿದ್ದ ಆರೋಗ್ಯ ಖಾತೆಗೆ ಕತ್ತರಿ?

ಬೆಂಗಳೂರು: ರಾಜ್ಯ ರಾಜಕೀಯದಲ್ಲಿನ ದಿಢೀರ್ ಬೆಳವಣಿಗೆಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಅವರ ಅಧಿಕಾರಕ್ಕೆ ಕತ್ತರಿ ಬೀಳುತ್ತಿದೆ. ಕೊರೋನಾ ಹೆಚ್ಚಳದ ನೆಪ ಹೇಳಿ ರಾಮುಲು ಅವರ ಬಳಿಯಿದ್ದ ಆರೋಗ್ಯ ಖಾತೆಯನ್ನು ಸಚಿವ ಸುಧಾಕರ್‍ಗೆ ಹೆಚ್ಚುವರಿಯಾಗಿ ನೀಡಲು ಸಿಎಂ ಯಡಿಯೂರಪ್ಪ ತೀರ್ಮಾನಿಸಿದ್ದಾರೆ. ಬೆಂಗಳೂರು: ರಾಜ್ಯ ರಾಜಕೀಯದಲ್ಲಿನ ದಿಢೀರ್ ಬೆಳವಣಿಗೆಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಅವರ ಅಧಿಕಾರಕ್ಕೆ ಕತ್ತರಿ ಬೀಳುತ್ತಿದೆ. ಕೊರೋನಾ ಹೆಚ್ಚಳದ ನೆಪ ಹೇಳಿ ರಾಮುಲು ಅವರ ಬಳಿಯಿದ್ದ ಆರೋಗ್ಯ ಖಾತೆಯನ್ನು ಸಚಿವ …

Read More »

ಕನ್ನಡ ಚಿತ್ರರಂಗದ ಹಿರಿಯ ಸಂಗೀತ ನಿರ್ದೇಶಕ ರಾಜನ್ ಸಾವನ್ನಪ್ಪಿದ್ದಾರೆ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಸಂಗೀತ ನಿರ್ದೇಶಕ ರಾಜನ್ ಸಾವನ್ನಪ್ಪಿದ್ದಾರೆ.ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ರಾಜನ್ ಕಳೆದ ರಾತ್ರಿ 10.30ಕ್ಕೆ ಹೃದಯಾಘಾತದಿಂದ ನಿಧನರಾದ್ರು. ಮೂಲತಃ ಮೈಸೂರಿನವರಾದ ರಾಜನ್ ಸಹೋದರ ನಾಗೇಂದ್ರ ಜೊತೆಗೂಡಿ ಕನ್ನಡದ ಸುಮಾರು 375ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. 1952ರಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಈ ಜೋಡಿ, ಸುಮಾರು 5 ದಶಕಗಳ ಕಾಲ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿತ್ತು. 1952ರಿಂದ 1999ರವರೆಗೆ 375ಕ್ಕೂ ಅಧಿಕ ಸಿನಿಮಾಗಳಿಗೆ …

Read More »

ವರದಕ್ಷಿಣೆ ತಂದು ಕೊಡಲಿಲ್ಲ ಎಂದು :ಪಾಪಿ ಗಂಡ ಹೆಂಡತಿಯ ಖಾಸಗಿ ಅಂಗಕ್ಕೆ ಬೆಂಕಿ ಇಟ್ಟ

ಬೆಂಗಳೂರು :  ತವರು ಮನೆಯಿಂದ ಹಣ ತಂದು ಕೊಡಲಿಲ್ಲ ಎಂಬ ಕಾರಣಕ್ಕೆ ಪಾಪಿ ಗಂಡ ಹೆಂಡತಿಯ ಖಾಸಗಿ ಅಂಗವನ್ನೇ ಸುಟ್ಟಿದ್ದಾನೆ. ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಘಟನೆ ನಡೆದಿದೆ. ಆರೋಪಿಯನ್ನು ಸೂರಜ್ ಸಿಂಗ್ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡಿರುವ 22 ವರ್ಷದ ಪತ್ನಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೂರಜ್ ಮತ್ತು ಅವರ ತಾಯಿ ಪರಾರಿಯಾಗಿದ್ದು ಪೊಲೀಸರು ಪತ್ತೆಗೆ ಬಲೆ ಬೀಸಿದ್ದಾರೆ. ಸೆಕ್ಸ್ ಮಾಡುವಾಗ ಕಾಂಡೋಮ್ ಬಳಸು ಎಂದಿದ್ದಕ್ಕೆ ಕೊಂದೆ ಬಿಟ್ಟ! ಸೂರಜ್ ಅವರು …

Read More »

ಸಾಲದ ಮೊರೆ ಹೋದ ಬಿ ಎಸ್ ವೈ ಸರ್ಕಾರ

ಬೆಂಗಳೂರು – ರಾಜ್ಯದಲ್ಲಿ ಲಾಕ್‍ಡೌನ್ ಘೋಷಣೆಯಾದ ಬಳಿಕ ಕಳೆದ ಆರು ತಿಂಗಳಿನಿಂದ ಬಹುತೇಕ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಂಡ ಪರಿಣಾಮ ಸರ್ಕಾರ ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದು, ಸಾಲದ ಮೊರೆ ಹೋಗಲು ನಿರ್ಧರಿಸಿದೆ. ಸರ್ಕಾರದ ಬೊಕ್ಕಸಕ್ಕೆ ಆದಾಯ ತರುತ್ತಿದ್ದ ಮೂಲಗಳಿಂದ ನಿರೀಕ್ಷಿತ ಪ್ರಮಾಣದ ಪರಿಣಾಮ ವರಮಾನ ಬಾರದಿರುವುದು ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೂ ತಲೆಬಿಸಿ ತಂದಿದೆ. ಆದಾಯದ ಮೂಲಗಳೆಲ್ಲ ಬರಿದಾಗಿದ್ದು, ಬೊಕ್ಕಸ ಖಾಲಿ ಖಾಲಿಯಾಗಿದೆ. ಅನಿವಾರ್ಯ ಸ್ಥಿತಿಯಲ್ಲಿರುವ ಸರ್ಕಾರ …

Read More »

ಶಿಕ್ಷಕರಿಗೆ ಮಧ್ಯಂತರ ರಜೆ ನೀಡಿದ್ದಕ್ಕೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ಷೇಪ

ಬೆಂಗಳೂರು : ರಾಜ್ಯ ಸರ್ಕಾರ, ಶಿಕ್ಷಕರಿಗೆ ಮಧ್ಯಂತರ ರಜೆ ನೀಡಿದ್ದಕ್ಕೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಎತ್ತಿಗೆ ಜ್ವರ ಬಂದರೆ ಕೋಣಕ್ಕೆ ಬರೆ ಎಂಬ ರೀತಿಯಲ್ಲಿ ಸರ್ಕಾರ ವರ್ತಿಸುತ್ತಿದೆ. ಕೊರೊನಾದ ಸಂಕಷ್ಟದ ಸಮಯದಲ್ಲಿಯೂ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಶಿಕ್ಷಕರು, ಶಾಲೆಗಳಿಗೆ ತೆರಳಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಸರ್ಕಾರಿ ಶಾಲೆ ಶಿಕ್ಷಕರು ಕೋವಿಡ್ ಕರ್ತವ್ಯ ಹಾಗೂ …

Read More »