Breaking News

ಬೆಂಗಳೂರು

ಸಾವಿನಲ್ಲೂ ಸಾರ್ಥಕತೆ ಮೆರೆದ ನಟ ಸಂಚಾರಿ ವಿಜಯ್​ ಅಂಗಾಂಗಗಳು ಯಾರಿಗೆಲ್ಲ ಜೀವ ತುಂಬಿದೆ ಗೊತ್ತಾ?

ಬೆಂಗಳೂರು: ನಡುರಾತ್ರಿ ನಡೆದಿದ್ದ ಆಕಸ್ಮಿಕ ಅಪಘಾತದಲ್ಲಿ ಅಕಾಲಿಕವಾಗಿ ಪ್ರಾಣತೆತ್ತ ಯುವ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಅವರ ಕುಟುಂಬದವರು ಸಂಚಾರಿ ವಿಜಯ್ ಅವರ ಅಂಗಾಂಗಳನ್ನ ದಾನ ಮಾಡಲು ಒಪ್ಪಿಗೆ ಸೂಚಿಸಿದ್ದರು. ಹಾಗಾಗಿ, ಸಂಚಾರಿ ವಿಜಯ್​ ಅವರ ಅಂಗಾಂಗ ಟ್ರಾನ್ಸ್​ಪ್ಲಾಂಟೇಷನ್ ಯಶಸ್ವಿಯಾಗಿ ನಡೆದಿದೆ. ಸಂಚಾರಿ ವಿಜಯ್​ ಅವರ ಕಿಡ್ನಿ ಟ್ರಾನ್ಸ್​ಪ್ಲಾಂಟೇಷನ್ ಯಶಸ್ವಿಯಾಗಿದ್ದು ಮಹಿಳೆಯೊಬ್ಬರಿಗೆ ಕಿಡ್ನಿ ಟ್ರಾನ್ಸ್​ಪ್ಲಾಂಟೇಷನ್ ಮಾಡಲಾಗಿದೆ. 34 ವರ್ಷದ ಮಹಿಳೆಗೆ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಕಿಡ್ನಿ …

Read More »

ಖಾತಾ ನೋಂದಣಿ ಮಾಡಿಸುವವರಿಗೆ ಗುಡ್ ನ್ಯೂಸ್

ಬೆಂಗಳೂರು: ವಸತಿ ಸಮುಚ್ಚಯದ ಖಾತಾ ನೋಂದಣಿ ಸರಳೀಕರಣಗೊಳಿಸಲಾಗಿದೆ. ಸಕಾಲ ಯೋಜನೆಯಡಿ ಸೌಲಭ್ಯ ಕಲ್ಪಿಸಿ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯಲು ಸೂಚನೆ ನೀಡಲಾಗಿದೆ. ವಸತಿ ಸಮುಚ್ಚಯದಲ್ಲಿ ನಿವಾಸಿ ಖಾತಾ ನೋಂದಣಿಗೆ ಅರ್ಜಿ ಸಲ್ಲಿಸಿದರೆ ವಸತಿ ಸಮುಚ್ಚಯದ ಎಲ್ಲ ಘಟಕಗಳಿಗೂ ಮುನ್ಸಿಪಲ್ ಸಂಖ್ಯೆಯನ್ನು ಸೃಷ್ಟಿಸಲು ಒಂದೇ ಬಾರಿ ಕಡತ ಮಂಡಿಸಿ ಸಂಬಂಧಿತ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯಲು ತಿಳಿಸಲಾಗಿದೆ. ವಸತಿ ಸಮುಚ್ಚಯದ ಘಟಕಗಳ ಮಾಲೀಕರು ಖಾತೆ ನೋಂದಣಿಗೆ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಮತ್ತೊಮ್ಮೆ …

Read More »

ಕರ್ನಾಟಕ; ಕೋವಿಡ್ ಸೋಂಕಿತರ ಸಾವಿನ ಸಂಖ್ಯೆ ಇಳಿಕೆ

ಬೆಂಗಳೂರು, ಜೂನ್ 15; ಕರ್ನಾಟಕದಲ್ಲಿ ಹೊಸ ಕೋವಿಡ್ ಪ್ರಕರಣಗಳ ಜೊತೆಗೆ ಸಾವಿನ ಪ್ರಮಾಣವೂ ಇಳಿಕೆಯಾಗಿದೆ. ಸೋಮವಾರ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಪ್ರಕಾರ ರಾಜ್ಯದಲ್ಲಿನ ಮರಣ ಪ್ರಮಾಣ ಶೇ 1.75. ಲಾಕ್‌ಡೌನ್ ಘೋಷಣೆ ಬಳಿಕ ರಾಜ್ಯದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಾ ಬಂದಿತ್ತು. ಆದರೆ ಮರಣ ಪ್ರಮಾಣ ಕಡಿಮೆಯಾಗದಿರುವುದು ಚಿಂತೆಗೆ ಕಾರಣವಾಗಿತ್ತು. ಸರ್ಕಾರ ಸಹ ಜಿಲ್ಲಾಡಳಿತಕ್ಕೆ ಮರಣ ಪ್ರಮಾಣ ಕಡಿಮೆ ಮಾಡಲು ಸೂಚನೆಗಳನ್ನು ನೀಡಿತ್ತು.   ಸೋಮವಾರದ ವರದಿಯಂತೆ ರಾಜ್ಯದಲ್ಲಿ …

Read More »

ಬಿಎಸ್ ವೈ, ವಿಜಯೇಂದ್ರ ಸೇರಿ 6 ಜನರ ವಿರುದ್ಧ EDಗೆ ದೂರು: ಏನಿದು ಕೋಟಿ ಹಣ -ವಾಟ್ಸಪ್ ವಿವಾದ?

ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ಚರ್ಚೆ, ಪಕ್ಷದೊಳಗಿನ ಬಿಕ್ಕಟ್ಟು, ಕೋವಿಡ್ ನಿರ್ವಹಣೆ ನಡುವೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅಕ್ರಮ ಹಣ ವರ್ಗಾವಣೆ, ಅಧಿಕಾರು ದುರುಪಯೋಗ ಆರೋಪಕ್ಕೆ ಸಂಬಂಧಿಸಿ ಯಡಿಯೂರಪ್ಪ, ಪುತ್ರ ವಿಜಯೇಂದ್ರ ಸೇರಿ ಆರು ಜನರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಗೆ ದೂರು ನೀಡಲಾಗಿದೆ. ಟಿ.ಜೆ.ಅಬ್ರಾಹಂ ಎನ್ನುವವರು ದೂರು ನೀಡಿದ್ದು, ಪ್ರಿವೆನ್ಶನ್ ಆಫ್ ಮನಿ ಲಾಂಡರಿಂಗ್ ಆಕ್ಟ್ ಅಡಿಯಲ್ಲಿ ದೂರು ದಾಖಲಿಸಿಕೊಳ್ಳುವಂತೆ ಮನವಿ …

Read More »

ರವೀಂದ್ರ ಕಲಾಕ್ಷೇತ್ರಕ್ಕೆ ಬಂದ ವಿಜಯ್​ ಪಾರ್ಥಿವ ಶರೀರ, ಸ್ನೇಹಿತನ ತೋಟದಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ

ಬೆಂಗಳೂರು: ರಾಷ್ಟ್ರ ಪ್ರಶಸ್ತಿ ವಿಜೇತ​ ನಟ ಸಂಚಾರಿ ವಿಜಯ್​ ಅವರು ಮಂಗಳವಾರ ಮುಂಜಾನೆ 3.34ಕ್ಕೆ ಬನ್ನೇರುಘಟ್ಟ ರಸ್ತೆಯ ಅಪೊಲೋ ಆಸ್ಪತ್ರೆಯಲ್ಲಿ ನಿಧನರಾದರು. ಬೆಳಗ್ಗೆ 8ಕ್ಕೆ ರವೀಂದ್ರ ಕಲಾಕ್ಷೇತ್ರದ ಆವರಣಕ್ಕೆ ವಿಜಯ್​ ಅವರ ಪಾರ್ಥಿವ ಶರೀರವನ್ನು ತರಲಾಗಿದ್ದು, ಅಂತಿಮ ದರ್ಶನ ಪಡೆಯಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದೆ. ಇಂದು ಬೆಳಗ್ಗೆ 10.30ರ ವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಚಾರಿ ವಿಜಯ್​ರ ಅಂತಿಮ ದರ್ಶನಕ್ಕೆ ಸರ್ಕಾರದ ಕಡೆಯಿಂದಲೇ ವ್ಯವಸ್ಥೆ ಮಾಡಲಾಗಿದ್ದು, ನಂತರ ಹುಟ್ಟೂರು ಚಿಕ್ಕಮಗಳೂರಿನ ಕಡೂರು …

Read More »

ಸಂಚಾರಿ ವಿಜಯ್​ ರೀತಿಯಲ್ಲೇ ಅಪಘಾತದಲ್ಲಿ ಮೃತಪಟ್ಟ ಸ್ಯಾಂಡಲ್​ವುಡ್​ ಕಲಾವಿದರಿವರು

ನಟ ಸಂಚಾರಿ ವಿಜಯ್ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರನ್ನು ಕಳೆದುಕೊಂಡಿದ್ದು ಚಿತ್ರರಂಗಕ್ಕೆ ಬಹುದೊಡ್ಡ ನಷ್ಟವಾಗಿದೆ. ಅಂದಹಾಗೆ, ಸ್ಯಾಂಡಲ್​ವುಡ್​ನಲ್ಲಿ ಈ ಮೊದಲು ಕೂಡ ಸಾಕಷ್ಟು ಕಲಾವಿದರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರ ಬಗ್ಗೆ ಇಲ್ಲಿದೆ ಮಾಹಿತಿ. ಸೌಂದರ್ಯಾ: ಅದು 2004ರ ಏಪ್ರಿಲ್ 17. ನಟಿ ಸೌಂದರ್ಯಾ ಬೆಂಗಳೂರಿನಿಂದ ಕರೀಮ್ ನಗರಕ್ಕೆ ತೆರಳಿ, ಬಿಜೆಪಿ ಪರ ಪ್ರಚಾರ ಮಾಡುವವರಿದ್ದರು. ಅಗ್ನಿ ಏರೋಸ್ಪೋರ್ಟ್ಸ್ ಒಡೆತನದ ನಾಲ್ಕು ಆಸನಗಳ ಮಿನಿ ವಿಮಾನ ಸೆಸ್ಸಾನಾ 180ಯನ್ನು ಬೆಳಗ್ಗೆ …

Read More »

ಇಂದು ಬೆಳಗಿನ ಜಾವ 3:34ಕ್ಕೆ ಸಂಚಾರಿ ವಿಜಯ್ ಮೃತಪಟ್ಟಿದ್ದಾರೆ ಎಂದು ಅಪೋಲೋ ಆಸ್ಪತ್ರೆ ಅಧಿಕೃತವಾಗಿ ತಿಳಿಸಿದೆ.

ಬೆಂಗಳೂರು: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ, 38 ವರ್ಷದ `ಸಂಚಾರಿ ವಿಜಯ್’ ನಿಧನರಾಗಿದ್ದಾರೆ. ಇಂದು ಬೆಳಗಿನ ಜಾವ 3:34ಕ್ಕೆ ಸಂಚಾರಿ ವಿಜಯ್ ಮೃತಪಟ್ಟಿದ್ದಾರೆ ಎಂದು ಅಪೋಲೋ ಆಸ್ಪತ್ರೆ ಅಧಿಕೃತವಾಗಿ ತಿಳಿಸಿದೆ. ಶನಿವಾರ ರಾತ್ರಿ 11:45ರ ಸುಮಾರಿಗೆ ಬೆಂಗಳೂರಿನ ಜೆಪಿನಗರದ 7ನೇ ಹಂತದಲ್ಲಿ ನಡೆದ ಬೈಕ್ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡು ಕೋಮಾ ಸ್ಥಿತಿಗೆ ವಿಜಯ್ ತಲುಪಿದ್ದರು. ಜೀವನ್ಮರಣ ಹೋರಾಟ ನಡೆಸುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ. ಹೀಗಾಗಿ ವಿಜಯ್ ಅವರ ಅಂಗಾಗವನ್ನು ದಾನ …

Read More »

ಸೆಕೆಂಡ್ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ಬೆಂಗಳೂರು: ದ್ವಿತೀಯ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಉಚಿತವಾಗಿ ಜ್ಞಾನ-ವಿಜ್ಞಾನ ತರಂಗದ ಮೂಲಕ ಆನ್ಲೈನ್ ಕ್ಲಾಸ್ ಮೂಲಕ ತರಬೇತಿ ನೀಡಲಾಗುತ್ತದೆ.   ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಖಾಸಗಿ ಸಂಸ್ಥೆಯ ಸಹಯೋಗದಲ್ಲಿ ವಿನೂತನ ಕಾರ್ಯಕ್ರಮ ರೂಪಿಸಲಾಗಿದೆ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಸಿಇಟಿಗೆ ತಯಾರಾಗಲು ಯೋಜನೆ ರೂಪಿಸಲಾಗಿದೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತ ವಿಷಯದಲ್ಲಿ ತಲಾ 25 ಅಧಿವೇಷನ, ತಲಾ ಒಂದು ಪ್ರಶ್ನೆ ಪತ್ರಿಕೆ ಬಿಡಿಸುವಿಕೆ ಇರಲಿದೆ. ಇಂದಿನಿಂದ ಜ್ಞಾನ – …

Read More »

ದಿನಗೂಲಿ ನೌಕರರಿಗೆ ಗುಡ್ ನ್ಯೂಸ್: ತುಟ್ಟಿಭತ್ಯೆ, ರಜೆ ಪಡೆಯಲು ಅರ್ಹರು; ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದಿನಗೂಲಿ ನೌಕರರು ಕೂಡ ರಜೆ, ತುಟ್ಟಿಭತ್ಯೆ ಪಡೆಯಲು ಅರ್ಹರು ಎಂದು ಹೈಕೋರ್ಟ್ ತೀರ್ಪು ನೀಡಿದೆ. ದಿನಗೂಲಿ ನೌಕರರು ಕೂಡ ರಾಜ್ಯ ಸರ್ಕಾರಿ ನೌಕರರಂತೆ ಶೇಕಡ 100 ರಷ್ಟು ತುಟ್ಟಿಭತ್ಯೆ ಮತ್ತು ವರ್ಷಕ್ಕೆ 30 ದಿನ ವೇತನ ಸಹಿತ ರಜೆ ಪಡೆಯಲು ಅರ್ಹರಾಗಿರುತ್ತಾರೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ದಿನಗೂಲಿ ನೌಕರರ ಶೇಕಡ 100 ರಷ್ಟು ತುಟ್ಟಿಭತ್ಯೆ ಮತ್ತು ಗಳಿಕೆ ರಜೆಯನ್ನು ಸರ್ಕಾರ …

Read More »

ಅಣ್ಣನ ಸಾವಿಗೆ ಆತನೇ ಕಾರಣ: ದೂರು ದಾಖಲಿಸಿದ ನಟ ಸಂಚಾರಿ ವಿಜಯ್ ಸಹೋದರ!

ಬೆಂಗಳೂರು: ಅಪಘಾತಕ್ಕೊಳಗಾಗಿದ್ದ ನಟ ಸಂಚಾರಿ ವಿಜಯ್​​ ಅವರ ಮೆದುಳು ನಿಷ್ಕ್ರಿಯವಾಗಿರುದರಿಂದ ಅಂಗಾಂಗ ದಾನಕ್ಕೆ ಕುಟುಂಬ ಒಪ್ಪಿದೆ. ಕಿಡ್ನಿ, ಲಿವರ್​​, ಕಣ್ಣು ಸೇರಿ ಕೆಲ ಅಂಗಾಂಗಗಳನ್ನು ಶಸ್ತ್ರ ಚಿಕಿತ್ಸೆ ಮೂಲಕ ಪಡೆದುಕೊಂಡು ನಾಳೆ ವಿಜಯ್​ ಅವರ ಮೃತದೇಹವನ್ನು ಕುಟುಂಬಸ್ಥರಿಗೆ ಆಸ್ಪತ್ರೆಯವರು ಹಸ್ತಾಂತರಿಸಲಿದ್ದಾರೆ. ಆ ಮೂಲಕ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಾವನ್ನು ಅಪೋಲೋ ಆಸ್ಪತ್ರೆ ದೃಢಪಡಿಸಿದೆ. ಸಂಚಾರಿ ವಿಜಯ್​ ತಂದೆ-ತಾಯಿ ತೀರಿಕೊಂಡಿದ್ದಾರೆ, ಮದುವೆ ಸಹ ಇನ್ನೂ ಆಗಿರಲಿಲ್ಲ. ಒಬ್ಬ ತಮ್ಮ ಇದ್ದು …

Read More »