Breaking News

ತುಮಕೂರು

ಬಿಡುವಿಲ್ಲದೆ ಕರ್ತವ್ಯ ನಿರ್ವಹಿಸಿದ್ದಕ್ಕಾಗಿ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿ ಹೋಂಗಾರ್ಡ್​​ವೊಬ್ಬರು ಸಾವನ್ನಪ್ಪಿದ ದಾರುಣ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರು: ಬಿಡುವಿಲ್ಲದೆ ಕರ್ತವ್ಯ ನಿರ್ವಹಿಸಿದ್ದಕ್ಕಾಗಿ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿ ಹೋಂಗಾರ್ಡ್​​ವೊಬ್ಬರು ಸಾವನ್ನಪ್ಪಿದ ದಾರುಣ ಘಟನೆ ತುಮಕೂರಿನಲ್ಲಿ ನಡೆದಿದೆ. ಕೊರಟಗೆರೆ ತಾಲೂಕಿನ ಗೌರಗಾನಹಳ್ಳಿಯ ಹನುಮಂತು ಮೃತರು.ಅನಾರೋಗ್ಯದ ನಡುವೆಯೂ ಗೃಹರಕ್ಷಕ ಸಿಬ್ಬಂದಿ ಹನುಮಂತು ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊರೊನಾ ಕರ್ತವ್ಯ ನಿರ್ವಹಿಸುತ್ತಿದ್ದರು. ಬಿಡುವಿಲ್ಲದ ಕೆಲಸದಿಂದ ನಿನ್ನೆ ಅವರ ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದಿದ್ದು, ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಅವರು ಮಧುಮೇಹದಿಂದ ಬಳಲುತಿದ್ದರು ಎಂದು ತಿಳಿದುಬಂದಿದೆ.ತೀರ ಬಡಕುಟುಂಬದಿಂದ …

Read More »

ತುಮಕೂರು ಜಿಲ್ಲಾಡಳಿತ ಮಹಾ ಎಡವಟ್ಟು- ವರದಿ ಬರುವ ಮುನ್ನವೇ ಶವ ಹಸ್ತಾಂತರ

ತುಮಕೂರು: ತುಮಕೂರಿನಲ್ಲಿ ಕೊರೊನಾಗೆ ಎರಡನೇ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮಹಾ ಎಡವಟ್ಟು ಮಾಡಿದ್ದು, ಸ್ಯಾಂಪಲ್ಸ್ ವರದಿ ಬರುವ ಮುನ್ನವೇ ಕುಟುಂಬಸ್ಥರಿಗೆ ಶವ ಹಸ್ತಾಂತರ ಮಾಡಿದೆ. ಇದೀಗ ವರದಿ ಪಾಸಿಟಿವ್ ಬಂದಿದ್ದು, ಗ್ರಾಮಸ್ಥರಲ್ಲಿ ಭಾರೀ ಆತಂಕ ಮನೆ ಮಾಡಿದೆ. ಏ.25 ರಂದು ಆಸ್ಪತ್ರೆಗೆ ದಾಖಲಾದ ವ್ಯಕ್ತಿ 26 ರಂದು ಮೃತಪಟ್ಟಿದ್ದ. ಏ.25, 26ರಂದು ಎರಡು ಬಾರಿ ಸ್ಯಾಂಪಲ್ಸ್ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆದರೆ ವರದಿ ಬರುವ ಮುನ್ನವೇ ಏ.26 ರಂದು …

Read More »

ಅಧಿಕಾರಿಗಳ ವಿರುದ್ಧ ಹರಿಹಾಯ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ

ತುಮಕೂರು, ಏ.28- ಕುಡಿಯುವ ನೀರಿನ ಯೋಜನೆ ಜಾರಿಗೆ ತರಲು ಟಾಸ್ಕ್ ಫೋರ್ಸ್ ಸಮಿತಿ ರಚನೆ ಮಾಡಿದ್ದು, ಸಮಿತಿಯಲ್ಲಿ ಇಲ್ಲಾ ಎಂದು ಸಬೂಬು ಹೇಳಿ ಮನ ಬಂದಂತೆ ಮಾತನಾಡಿದರೆ ಸಹಿಸುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಇಂದು ಬೆಳಗ್ಗೆ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆದ ಗ್ರಾಮಿಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲ್ಲೋಕುಗಳು ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ ಎಂದು …

Read More »

ತುಮಕೂರು ಜಿಲ್ಲೆ ಜನರಿಗೆ ಬಿಗ್ ರಿಲೀಫ್.

ತುಮಕೂರು,ಏ.17- ದೇಶಾದ್ಯಂತ ಕೋರಾನಾ ಸೋಂಕು ಎಲ್ಲೆಡೆ ಅಟ್ಟಹಾಸ ದಿಂದ ಮೆರೆಯುತ್ತಿದ್ದ ರೆ ತುಮಕೂರಿನಲ್ಲಿ ಕಳೆದ 28 ದಿನಗಳ ಹಿಂದೆ ಶಿರಾದಲ್ಲಿ ವೃದ್ದನೊಬ್ಬ ಮೃತಪಟ್ಟಿದ್ದ ಈತನ ಹಿಸ್ಟರಿ ನೋಡಿ ತುಮಕೂರು ಜಿಲ್ಲಾಡಳಿತ ಬೆಚ್ತಿಬಿದ್ದಿತ್ತು . ದೆಹಲಿಯ ಜಮಾತ್ ಹೋಗಿ ಬಂದಿದ್ದು ಹಾಗೂ ಮೂರು ಜನ ಪತ್ನಿಯರು 16 ಜನ ಮಕ್ಕಳುನ್ನು ಹೊಂದಿದ್ದ ವೃದ್ದ ಮೃತಪಟ್ಟ ನಂತರ ಅವರ ಕುಟುಂಬದವರನ್ನು ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅದರೆ ಅದೃಷ್ಟವಶಾತ್ ಅತನ ಮಗನಿಗೆ …

Read More »

ತುಮಕೂರು:ಅಗತ್ಯ ವಿಲ್ಲದೆ ಆಚೆ ಬಂದರೆ ಲಾಠಿ ಚಾರ್ಜ್…..

ತುಮಕೂರು : ಕೇಂದ್ರ ಸರ್ಕಾರವು ಲಾಕ್ ಡೌನ್ ಆದೇಶವನ್ನು ಮೇ 3ರ ರವರೆಗೆ ಮುಂದೂಡಲಾಗಿದೆ, ಹಾಗೆ ರಾಜ್ಯದ ಬಹುತೇಕ ನಗರಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಮನೆಯಿಂದ ಹೊರಗೆ ಬರದಂತೆ ಅರಿವನ್ನು ಮೂಡಿಸಲು ತುಮಕೂರಿನಲ್ಲಿ ವಿಶೇಷ ತರಬೇತಿ ಪಡೆದ ಡಿಎಆರ್ ಪೊಲೀಸರು ಕರೋನವೈರಸ್ ತಡೆಗಟ್ಟಲು ಯೋಧರಂತೆ ಕೆಲಸ ಮಾಡುತ್ತಿರುವ ಪೊಲೀಸರು, ವೈದ್ಯರು, ಪೌರ ಕಾರ್ಮಿಕರು , ವಿಶೇಷ ತರಬೇತಿ ಪಡೆದ (ಡಿ.ಎ.ಆರ್) ಪೊಲೀಸರು ಓಡಾಡುವವರಿಗೆ ಲಾಠಿ ಏಟು ಖಂಡಿತ… …

Read More »

ಲಾಕ್‍ಡೌನ್ ಉಲ್ಲಂಘಿ ಶಾಸಕ ಮಸಾಲೆ ಜಯರಾಂ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ

ತುಮಕೂರು: ಲಾಕ್‍ಡೌನ್ ಉಲ್ಲಂಘಿಸಿದ್ದಷ್ಟೇ ಅಲ್ಲದೆ ಸಾಮಾಜಿಕ ಅಂತರ ಮರೆತ ತುರುವೇಕೆರೆ ಕ್ಷೇತ್ರದ ಬಿಜೆಪಿ ಶಾಸಕ ಮಸಾಲೆ ಜಯರಾಂ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಗುಬ್ಬಿ ತಾಲೂಕಿನ ಇಡಗೂರು ಗ್ರಾಮದಲ್ಲಿ ಮಸಾಲೆ ಜಯರಾಂ ಕೇಕ್ ಕತ್ತರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಜನ್ಮದಿನ ಆಚರಿಸಿಕೊಂಡಿದ್ದಾರೆ. ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಜನರ ಗುಂಪು ಕಟ್ಟಿಕೊಂಡು, ಮಕ್ಕಳಿಗೆ ಕೇಕ್ ತಿನ್ನಿಸಿದ್ದಾರೆ. ಈ ಮೂಲಕ ಶಾಸಕರು ಲಾಕ್‍ಡೌನ್ ಉಲ್ಲಂಘಿಸಿದರೂ ಪೊಲೀಸರು ಈವರೆಗೂ ಯಾವುದೇ ಕ್ರಮ ಕೈಕೊಂಡಿಲ್ಲ ಎಂಬ ಆರೋಪ …

Read More »

ಸಿದ್ದಗಂಗಾ ಮಠದಿಂದ ಸಿಎಂ ಪರಿಹಾರ ನಿಧಿಗೆ 50 ಲಕ್ಷ ರೂ. ದೇಣಿಗೆ

ತುಮಕೂರು: ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಸಿದ್ದಗಂಗಾ ಮಠ ಹಾಗೂ ಸಿದ್ದಗಂಗಾ ವಿದ್ಯಾಸಂಸ್ಥೆ ವತಿಯಿಂದ 50 ಲಕ್ಷ ರೂ.ವನ್ನು ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ ನೀಡಲಾಗಿದೆ. ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳು ಇಂದು ಮಠದಿಂದ 25 ಲಕ್ಷ ರೂ. ಹಾಗೂ ವಿದ್ಯಾಸಂಸ್ಥೆಯಿಂದ 25ಲಕ್ಷ ರೂ. ಸೇರಿ ಒಟ್ಟು 50 ಲಕ್ಷ ರೂ.ಗಳ ಡಿಡಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಮೂಲಕ ಸಿಎಂ ಪರಿಹಾರ ನಿಧಿಗೆ ಸಲ್ಲಿಸಿದರು. ಈ …

Read More »

ಲಾಕ್‍ಡೌನ್ ನಡುವೆ ಕದ್ದು ಮುಚ್ಚಿ ಮದ್ಯದಂಗಡಿ ಓಪನ್:”………….

ತುಮಕೂರು: ಇಡೀ ದೇಶವೇ ಲಾಕ್‍ಡೌನ್ ಆಗಿ 8 ದಿನಗಳು ಕಳೆಯುತ್ತಾ ಬರುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಬಾರ್ ಮಾಲೀಕರು ರಾತ್ರಿ ವೇಳೆ ಬಾರ್‌ನ ಮೂಲಕ ಮದ್ಯ ವಿತರಣೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಜಿಲ್ಲೆಯ ತಿಮ್ಮಣ್ಣ ಗ್ರಾಮದಲ್ಲಿ ಬಾರ್ ಮಾಲೀಕನ ಜೊತೆ ಅಧಿಕಾರಿಗಳು ಕೈಜೋಡಿಸಿದ್ದಾರೆ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಬಾರ್ ಮುಂದೆ ಜಯಾಯಿಸಿದ ಗ್ರಾಮಸ್ಥರು ಬಾರ್ ಬಾಗಿಲಿಗೆ ಸೀಲ್ ಹಾಕಿದನ್ನ ವ್ಯಂಗ್ಯ ಮಾಡಿದ್ದಾರೆ. ರಾತ್ರಿ ವೇಳೆ …

Read More »

‘ನೀವು ಬೀದಿಗೆ ಬಂದರೆ ನಾನು ನಿಮ್ಮ ಜೊತೆ ಬರುತ್ತೇನೆ’ : ಕೊರೋನಾ ಜಾಗೃತಿಗೆ ಪೊಲೀಸರ ವಿಭಿನ್ನ ಪ್ರಯತ್ನ

ತುಮಕೂರು : ಭಾರತ ಲಾಕ್ಡೌನ್ ಆಗಿ ಇಂದಿಗೆ ಹೇಳು ದಿನ ಕಳೆಯುತ್ತಿದ್ದ ಆದರೆ ಜನರು ಮಾತ್ರ ಸರ್ಕಾರಗಳ ಆದೇಶವನ್ನು ಧಿಕ್ಕರಿಸಿ ಬೈಕುಗಳಲ್ಲಿ ಕಾರುಗಳಲ್ಲಿ ಮನಸೋಇಚ್ಛೆ ಓಡುತ್ತಿರುವುದು ಎಷ್ಟೇ ಮನವಿ ಮಾಡಿದರೂ ಜನರು ಮಾತ್ರ ಓಡಾಡುತ್ತಿರುವುದನ್ನು ಬಿಡುತ್ತಿಲ್ಲ ಇದರಿಂದ ಬೇಸತ್ತ ಅಧಿಕಾರಿಗಳು ಜನರಿಗೆ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿ ಹಾಗೂ ಸರ್ಕಲ್ಗಳಲ್ಲಿ ಕೊರೊನಾ ವೈರಸ್ ಬಗ್ಗೆ ಪೋಲಿಸ್ ಅದಿಕಾರಿಗಳು ಸಿಬ್ಬಂದಿಗಳು ಜನರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಬರೆಹಗಳನ್ನು ಬರೆಸುವ ಮೂಲಕ ಜನರ …

Read More »

ತುಮಕೂರಿನಲ್ಲಿ ಕೊರೊನಾಗೆ ಮೊದಲ ಸಾವು

ರಾಜ್ಯದಲ್ಲಿ ಕೊರೊನಾಗೆ 3ನೇ ಬಲಿ ತುಮಕೂರು: ಜಿಲ್ಲೆಯಲ್ಲಿ ಮೊದಲ ಕೊರೊನಾ ವೈರಸ್ ಸೋಂಕಿತರೊಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಶಿರಾ ಮೂಲದ 65 ವರ್ಷದ ವೃದ್ಧ ಎಂದು ಗುರುತಿಸಲಾಗಿದೆ. ಮೃತರಿಗೆ ಸುಮಾರು ಐದು ದಿನದಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಕೊರೊನಾ ಶಂಕಿತ ಎಂದು ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ  ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ 10.45ಕ್ಕೆ ಮೃತಪಟ್ಟಿದ್ದಾರೆ ಮೃತ ವೃದ್ಧ ಮಾರ್ಚ್ 5ಕ್ಕೆ ದೆಹಲಿಗೆ ಹೋಗಿದ್ದರು. ಮಾರ್ಚ್ 18 ರಂದು …

Read More »