ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಕರೋನ ಲಸಿಕೆಯನ್ನು ಇಂದು ಬೆಳಗ್ಗೆ ತೆಗೆದುಕೊಂಡಿದ್ದಾರೆ. ಏಮ್ಸ್ ನಲ್ಲಿ COVID-19 ಲಸಿಕೆಯ ನನ್ನ ಮೊದಲ ಡೋಸ್ ತೆಗೆದುಕೊಂಡೆ ಅಂತ ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದು, ಇದೇ ವೇಳೆ ಅವರು COVID-19 ನ ಜಾಗತಿಕ ಹೋರಾಟವನ್ನು ಬಲಪಡಿಸಲು ನಮ್ಮ ವೈದ್ಯರು ಮತ್ತು ವಿಜ್ಞಾನಿಗಳು ಕ್ಷಿಪ್ರ ಸಮಯದಲ್ಲಿ ಹೇಗೆ ಕೆಲಸ ಮಾಡಿದ್ದಾರೆ ಎಂಬುದು ಗಮನಾರ್ಹವಾಗವಿದೆ. ಲಸಿಕೆ ಯನ್ನು ತೆಗೆದುಕೊಳ್ಳಲು ಅರ್ಹರಾದ ಎಲ್ಲರಿಗೂ ನಾನು ಮನವಿ ಮಾಡಿ. ಒಟ್ಟಿಗೆ, ನಾವು …
Read More »ಗೋಕಾಕ: ಜಿಲ್ಲಾ ಮಟ್ಟದ ದೇಹದಾಢ್ರ್ಯದ ಸ್ಪರ್ಧೆಯಲ್ಲಿ ಖಾನಾಪೂರದ ರಾಜು ಗಾವಡೆ ಮಿಸ್ಟರ್ ಬಾಡಿ ಲೈನ್ 2021 ಚಾಂಪಿಯನ್ ಆಪ್ ಚಾಂಪಿಯನ್ ಆಗಿ ಬಹುಮಾನ ಪಡೆಯುತ್ತಿರುವುದು.
ಗೋಕಾಕ: ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಗೋಕಾಕ ತಾಲೂಕಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ ಶನಿವಾರದಂದು ಆಯೋಜಿಸಿದ್ದ 5ನೇ ಜಿಲ್ಲಾ ಮಟ್ಟದ (ಬೆಳಗಾವಿ ನಗರ ಹೊರತು ಪಡಿಸಿ) ದೇಹದಾಢ್ರ್ಯದ ಸ್ಪರ್ಧೆಯಲ್ಲಿ ಖಾನಾಪೂರದ ರಾಜು ಗಾವಡೆ ಮಿಸ್ಟರ್ ಬಾಡಿ ಲೈನ್ 2021 ಚಾಂಪಿಯನ್ ಆಪ್ ಚಾಂಪಿಯನ್ ಆಗಿ ಆಯ್ಕೆಯಾಗಿದ್ದಾರೆ. ಬೆಳಗಾವಿ ಗ್ರಾಮೀಣದ ರನ್ನರ್ ಆಫ್ ಆಗಿ ಸುನೀಲ ಬಾತಖಾಂಡೆ, ಖಾನಾಪೂರದ ಬೇಸ್ಟ್ ಫೋಜರ್ ಪ್ರಶಸ್ತಿಯನ್ನು ಸಂದೀಪ ಅಂಗಡಿ ಪಡೆದಿದ್ದಾರೆ. ತಾಲೂಕಾ ಮಟ್ಟದ ದೇಹದಾಢ್ರ್ಯದ ಸ್ಪರ್ಧೆಯಲ್ಲಿ …
Read More »ರಾಜ್ಯ ಹೆದ್ದಾರಿ ಕಾಮಗಾರಿ
ಗೋಕಾಕ: ಲೋಕೋಪಯೋಗಿ ಇಲಾಖೆಯು 2021-22 ನೇ ಸಾಲಿನಲ್ಲಿ 3500 ಕೋಟಿ ರೂ ವೆಚ್ಚದಲ್ಲಿ ರಾಜ್ಯ ಹೆದ್ದಾರಿ ಕಾಮಗಾರಿಯನ್ನು ಅಭಿವೃದ್ಧಿ ಪಡಿಸಲು ಡಿಪಿಆರ್ ಸಿದ್ದಪಡಿಸಲು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ತಿಳಿಸಿದರು. ನಗರದಲ್ಲಿ ರವಿವಾರದಂದು ಜಲಸಂಪನ್ಮೂಲ ಸಚಿವರೊಂದಿಗೆ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ, ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಅವರಿಂದ ಈಗಾಗಲೇ ಈ ಪ್ರಸ್ತಾವನೆಯ ಅನುಮೋದನೆ ಪಡೆಯಲಾಗಿದ್ದು, …
Read More »ಗೋಕಾಕ: ಇಲ್ಲಿಯ ಎನ್‍ಇಎಸ್ ಶಾಲಾ ಆವರಣದಲ್ಲಿ ಜರುಗಿದ 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಶಾಸಕ ಸತೀಶ ಜಾರಕಿಹೊಳಿ ಮಾತನಾಡಿದರು.
ಗೋಕಾಕ: ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಮುಖಾಂತರ ಕಲೆ, ಸಾಹಿತ್ಯದ ಜೊತೆಗೆ ಕೃಷಿ, ಉದ್ದಿಮೆಗಳ ಬಗ್ಗೆಯೂ ಪ್ರಾಮುಖ್ಯತೆ ನೀಡಬೇಕು ಎಂದು ಯಮಕನಮರಡಿ ಶಾಸಕರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ ಹೇಳಿದರು. ಅವರು ಶನಿವಾರದಂದು ಸಂಜೆ ಇಲ್ಲಿಯ ಎನ್‍ಇಎಸ್ ಶಾಲಾ ಆವರಣದಲ್ಲಿ ಜರುಗಿದ 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಖಂಡ ಗೋಕಾಕದ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ಕೃಷ್ಣಮೂರ್ತಿ ಪುರಾಣಿಕ, ಬಸವರಾಜ ಕಟ್ಟೀಮನಿ ಕಾಲದಿಂದಲೂ …
Read More »ಗೋಕಾಕ: ಸಚಿವರ ಕಛೇರಿಯಲ್ಲಿ ಕೊಣ್ಣೂರ ಪುರಸಭೆಯ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಅನುದಾನವನ್ನು ಸಚಿವ ರಮೇಶ ಜಾರಕಿಹೊಳಿ ವಿತರಿಸಿದರು.
ಗೋಕಾಕ : ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಿರಿ ಎಂದು ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಅವರು ತಮ್ಮ ಕಛೇರಿಯಲ್ಲಿ ತಾಲೂಕಿನ ಕೊಣ್ಣೂರ ಪುರಸಭೆಯ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಅನುದಾನ ವಿತರಿಸಿ ಮಾತನಾಡಿದರು. ಸನ್ 2019-20 ಮತ್ತು 2020-21 ರ ಸಾಲಿನ ಎಸ್.ಎಫ್.ಸಿ ಅನುದಾನ ಶೇ 24.10% ರ ಯೋಜನೆಯಡಿಯಲ್ಲಿ ರೂ 2.42 ಲಕ್ಷಗಳ ಅನುದಾನದಲ್ಲಿ 5 ಫಲಾನುಭವಿಗಳಿಗೆ ಪರಿಶಿಷ್ಟ ಜಾತಿ ವರ್ಗದ ಬಿ.ಇ …
Read More »ಸಿಹಿ ಕೊಟ್ಟು ಶುಭ ಕೋರಿದ ಬಾಲಚಂದ್ರ ಜಾರಕಿಹೊಳಿ
ಬೆಂಗಳೂರು. ಕೆಎಂಎಫ್ ಅಧ್ಯಕ್ಷ ಹಾಗೂ ಗೋಕಾಕ ತಾಲುಕಿನ ಅರಭಾವಿ ವಿಧಾನಸಭಾ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹುಟ್ಟು ಹಬ್ಬದ ನಿಮಿತ್ತ ಶುಭ ಕೋರಿದರು. ಕೆಎಂಎಫ್ನ ಸಿಹಿ ಪದಾರ್ಥಗಳನ್ನು ತಿನ್ನಿಸುವ ಮೂಲಕ ಬಾಲಚಂದ್ರ ಜಾರಕಿಜೊಳಿ ಅವರು ಸಿಎಂ ಯಡಿಯೂರಪ್ಪ ಅವರಿಗೆ ಶತಾಯುಷಿ ಆಗಲೆಂದು ಹಾರೈಸಿದರು.
Read More »ಜಲ ವಿವಾದ ಇತ್ಯರ್ಥ. 26 ರಂದು ಉನ್ನತ ಮಟ್ಟದ ಸಭೆ
ಬೆಂಗಳೂರು. ಕರ್ನಾಟಕ ರಾಜ್ಯದ ನೀರಾವರಿ ಯೋಜನೆಗಳ ಕಾಮಗಾರಿಗಳ ಪ್ರಗತಿ ಪರಿಶೀಲನೆ, ಅಂತರ ರಾಜ್ಯ ಜಲವಿವಾದಗಳು, ಸರ್ವೋಚ್ಚ ನ್ಯಾಯಾಲಯದಲ್ಲಿರುವ ದಾವೆಗಳ ಕುರಿತಂತೆ ಉನ್ನತ ಮಟ್ಟದ ಸಭೆ ನಾಳೆ (ಫೆ.26) ಬೆಳಿಗ್ಗೆ ೧೧ ಕ್ಕೆ ವಿಧಾನ ಸೌಧದ ಸಮಿತಿ ಕೊಠಡಿಯಲ್ಲಿ ನಡೆಯಲಿದೆ. ಈ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆಯನ್ನು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ವಹಿಸವರು. ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದ …
Read More »ಗೋಕಾಕ: ನಗರದ ಶೂನ್ಯ ಸಂಪಾದನ ಮಠದ ಬಿಸಿಎ ಕಾಲೇಜಿನಲ್ಲಿ 16ನೇ ಶರಣ ಸಂಸ್ಕೃತಿ ಉತ್ಸವ
ಗೋಕಾಕ: ನಗರದ ಶೂನ್ಯ ಸಂಪಾದನ ಮಠದಿಂದ ಕಾಯಕಯೋಗಿ ಲಿಂಗೈಕ್ಯ ಬಸವ ಮಹಾಸ್ವಾಮಿಜಿಗಳವರ 16ನೇ ಪುಣ್ಯಸ್ಮರಣೋತ್ಸವ ಹಾಗೂ 16ನೇ ಶರಣ ಸಂಸ್ಕೃತಿ ಉತ್ಸವ ಸಮಾರಂಭವು ಮಾ-1 ರಿಂದ 4ರವರೆಗೆ ಅತೀ ವಿಜೃಂಭನೆಯಿಂದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಜರುಗಲಿದೆ ಎಂದು ಶರಣ ಸಂಸ್ಕೃತಿ ಉತ್ಸವ ಸಮಿತಿಯ ಕಾರ್ಯದರ್ಶಿ ವಿವೇಕ ಜತ್ತಿ ಹೇಳಿದರು. ಅವರು ಶುಕ್ರವಾರದಂದು ನಗರದ ಶೂನ್ಯ ಸಂಪಾದನ ಮಠದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠದ ಬಿಸಿಎ ಕಾಲೇಜಿನಲ್ಲಿ 16ನೇ ಶರಣ ಸಂಸ್ಕೃತಿ …
Read More »ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಜಿಲ್ಲಾ ಪ್ರವಾಸ.!
ಗೋಕಾಕ್: ಜಲ ಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಫೆ.೨೭ ರಿಂದ ಮಾ.೨ ರ ವರಗೆ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಫೆ.೨೭ ರಂದು ೧೦ ಗಂಟೆಗೆ ನಗರದ ಎನ್‌ಇಎಸ್ ಶಾಲಾ ಆವರಣದಲ್ಲಿ ನಡೆಯಲಿರುವ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು, ಸಂಜೆ ನಗರದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಫೆ.೨೮ ರಂದು ಗೋಕಾಕ ತಾಲೂಕಿನ ಜಮನಾಳ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನದ ಹತ್ತಿರ ಆಣೆಕಟ್ಟು ಸ್ಥಳ …
Read More »ಕ್ರಿಕೆಟ್ ಬೆಟ್ಟಿಂಗ್ ಗೃಹ ಮಂತ್ರಿ ಕಿವಿಗೂ ಬಿತ್ತು
ಬೆಳಗಾವಿ. ಕ್ರಿಕೆಟ್ ಬೆಟ್ಟಿಂಗ್ ಅಷ್ಟೇ ಅಲ್ಲ ಹವಾಲಾ ಮತ್ತಿತರ ದಂಧೆಗಳಿಗೆ ಕಡಿವಾಣ ಹಾಕಲು ಪೊಲೀಸರು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಈ ದಂಗೆಯನ್ನು ಮಟ್ಟ ಹಾಕಲು ಕೇವಲ ಜಿಲ್ಲಾ ಪೊಲೀಸರು ಅಷ್ಟೇ ಅಲ್ಲ ಬೆಳಗಾವಿ ನಗರ ಪೊಲೀಸರು ತಯಾರಾಗಿ ಕುಳಿತಿದ್ದಾರೆ. ಗಮನಿಸಬೇಕಾದ ಸಂಗತಿ ಎಂದರೆ, ಬೆಟ್ಟಿಂಗ್ ದಂಧೆ ಸಮಗ್ರ ಮಾಹಿತಿ ಈಗ ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಿವಿಗೂ ಬಿದ್ದಿದೆ. ಹೀಗಾಗಿ ಈ ಪ್ರಕರಣ ತಾರ್ಕಿಕ ಅಂತ್ಯ ಕಾಣುವುದರಲ್ಲಿ ಎರಡು …
Read More »